ಸರಕಾರಿ ಯೋಜನೆ

Bagar hukum Government land legal : ರೈತರು ಉಳುಮೆ ಮಾಡುತ್ತಿರುವ ಸರಕಾರಿ ಜಮೀನು ಸಕ್ರಮ | ಸಣ್ಣ ರೈತರಿಗೆ ಬಂಪರ್ ಗಿಫ್ಟ್

WhatsApp Group Join Now
Telegram Group Join Now

ಸರಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರಿಗೆ ಆಯಾ ರೈತರ ಹೆಸರಿಗೆ ಸರಕಾರ ಹಕ್ಕುಪತ್ರ ವಿತರಣೆಗೆ ಮುಂದಾಗಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…

Bagar hukum Government land legal : ಸಣ್ಣ ರೈತರಿಗೆ ಸರಕಾರ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ. ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಶೀಘ್ರವೇ ಸಾಗುವಳಿ ಹಕ್ಕುಪತ್ರ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಅಂದರೆ ಬಗರ್ ಹುಕುಂ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ (ಹಕ್ಕುಪತ್ರ) ವಿತರಿಸುವ ಮೂಲಕ ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡಲಿದ್ದು; ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Drought Relief : ರೈತರು ಸುಸೂತ್ರ ಬರ ಪರಿಹಾರ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ…

ಯಾವೆಲ್ಲ ಜಮೀನಿಗೆ ಹಕ್ಕು ಪತ್ರ ಸಿಗಲಿದೆ? : 1980ರ ದಶಕಕ್ಕಿಂತ ಮುಂಚೆ ಭೂ ರಹಿತ ರೈತರ ಜೀವನೋಪಾಯಕ್ಕೆ ಎರಡು ಎಕರೆ ದರ್ಖಾಸು ಮಂಜೂರು ಮಾಡುವ ಕಾನೂನು ಮಾಡಲಾಗಿದ್ದು; ಅಂದಿನಿAದಲೇ ವ್ಯಾಪಕವಾಗಿ ಕಾನೂನು ದುರ್ಬಳಕೆಯಾಗಿ ನಾನಾ ರೀತಿಯ ಸರಕಾರಿ ಭೂಮಿ ಒತ್ತುವರಿಯಾಗಿದೆ. ಇದನ್ನೆಲ್ಲ ಗುರುತಿಸಿ ಹಕ್ಕುಪತ್ರ ನೀಡುವುದು ಈ ತನಕ ಸರಕಾರಕ್ಕೆ ದೊಡ್ಡ ಸವಾಲಾಗಿತ್ತು. ಇದು ಗಂಭೀರ ಸಮಸ್ಯೆಯಾಗಿಯೂ ಪರಿಣಮಿಸಿತ್ತು. ಈ ಜಟಿಲ ಸಮಸ್ಯೆಗೆ ಪರಿಹಾರ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿರುವುದು ವಿಶೇಷ.

ಮಿಸಲು ಅರಣ್ಯ, ಕಿರು ಅರಣ್ಯ, ಸಾಮಾಜಿಕ ಅರಣ್ಯ, ಕಂದಾಯ, ಜಾನುವಾರು ಮುಫತ್ತು, ಹುಲ್ಲುಬನ್ನಿ, ಗೋಮಾಳ, ಕಾಫಿಕಾನು, ಇನಾಂ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಸಿಗಲಿದೆ. ‘ಅನಧಿಕೃತ ಸಾಗುವಳಿಗಳನ್ನು ಸಕ್ರಮಗೊಳಿಸುವಂತೆ ಕೋರಿ ಸಲ್ಲಿಸಿರುವ 9.90 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. 15 ವರ್ಷಗಳಿಂದ ಸಾಗುವಳಿ ಮಾಡಿರುವುದನ್ನು ಖಾತರಿಪಡಿಸಿಕೊಂಡ ಬಳಿಕವೇ ಮಂಜೂರಾತಿ ಆದೇಶ ನೀಡಲಾಗುವುದು’ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಹೊಸದಾಗಿ ಅರ್ಜಿ ಸಲ್ಲಿಸಬೇಕೇ? : ಈಗಾಗಲೇ ರೈತರು ತಾವು ಸಾಗುವಳಿ ಮಾಡುತ್ತಿರುವ ಸರಕಾರಿ ಭೂಮಿ ಹಕ್ಕುದಾರಿಕೆ ನೀಡುವ ಸಲುವಾಗಿಯೇ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ ನಮೂನೆ 50 (1991ರಲ್ಲಿ), ನಮೂನೆ 53 (1999ರಲ್ಲಿ) ಹಾಗೂ ನಮೂನೆ 57ರಲ್ಲಿ (2018ರಲ್ಲಿ) ಅರ್ಜಿ ಸ್ವೀಕರಿಸಲಾಗಿದೆ.

57ರ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಅವಧಿ ಈಚೆಗೆ ಇದೇ ವರ್ಷ (2023) ಕಳೆದ ಏಪ್ರಿಲ್‌ಗೆ ಅಂತ್ಯವಾಗಿದೆ. 1991ರಿಂದ ನಮೂನೆ 50, 53 ಹಾಗೂ 57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಕ್ರಮ ಸಾಗುವಳಿ ರೈತರಿಗೆ ಇದೀಗ ಡಿಜಿಟಲ್ ಹಕ್ಕುಪತ್ರ ವಿತರಣೆ ಸಿಗಲಿದೆ. ರೈತರು ಇದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕಿಲ್ಲ.

ಇದನ್ನೂ ಓದಿ: ಹಸು ಖರೀದಿಗೆ ₹58,500 ರೂಪಾಯಿ ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ… subsidy for purchase of cow

ಸಮಕ್ರಮಕ್ಕೆ ಅನುಸರಿಸುವ ಮಾನದಂಡಗಳೇನು?

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಕ್ರಮ ನಿಯಮದಡಿ ಹಕ್ಕುಪತ್ರ ವಿತರಣೆಗೆ ಏನೆಲ್ಲ ಮಾನದಂಡಗಳನ್ನು ಅನುಸರಿಸಲಾಗುವುದು ಎಂಬುವುದರ ಬಗ್ಗೆ ಕಂದಾಯ ಸಚಿವರು ಮಾಹಿತಿ ನೀಡಿದ್ದು; ಈ ಕೆಳಕಂಡ ಮಾನದಂಡಗಳ ಆಧಾರದಲ್ಲಿ ಡಿಜಿಟಲ್ ಹಕ್ಕುಪತ್ರ ವಿತರಣೆ ಮಾಡಲಾಗುವುದು…

  • ಇದಕ್ಕಾಗಿ ರಾಜ್ಯದ ಒಟ್ಟು 190 ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚಿಸಬೇಕಿದೆ. ಡಿಸೆಂಬರ್ 1ರೊಳಗೆ ಎಲ್ಲ ತಾಲ್ಲೂಕುಗಳ ಸಮಿತಿ ಸದಸ್ಯರ ನೇಮಕಕ್ಕೆ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
  • ಅರ್ಜಿಗಳ ವಿಲೇವಾರಿಗೆ ಎಂಟು ತಿಂಗಳ ಗಡುವು ವಿಧಿಸಲಾಗುವುದು. 15 ವರ್ಷಗಳ ಉಪಗ್ರಹ ಚಿತ್ರಗಳನ್ನು ಸಮಿತಿಗಳಿಗೆ ಒದಗಿಸಲಾಗುವುದು. ಅವುಗಳ ಮೂಲಕ ಸಾಗುವಳಿ ಖಾತರಿಪಡಿಸಿಕೊ¼ಲಾಗುವುದು.
  • ಕುಟುಂಬದ ಎಲ್ಲ ಸದಸ್ಯರ ಜಮೀನಿನ ಒಟ್ಟು ವಿಸ್ತೀರ್ಣವನ್ನು ಖಾತರಿಪಡಿಸಿಕೊಂಡ ಬಳಿಕವೇ ಮಂಜೂರಾತಿ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗುವುದು.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

  • ಫಲಾನುಭವಿಗಳಿಗೆ ಕ್ರಯಪತ್ರದ ಮೂಲಕ ಜಮೀನು ನೋಂದಣಿ ಮಾಡಿಕೊಡಲಾಗುವುದು. ಜತೆಯಲ್ಲೇ ಪೋಡಿ ಪ್ರಕ್ರಿಯೆ ಪೂರ್ಣಗೊಳಿಸಿ, ನಕ್ಷೆಯನ್ನೂ ಅಂತಿಮಗೊಳಿಸಲಾಗುವುದು.
  • ನೆರೆ ಹೊರೆಯ ಜಮೀನುಗಳ ಪ್ರವೇಶಕ್ಕೆ ದಾರಿಯನ್ನೂ ಕಾಯ್ದಿರಿಸಲಾಗುವುದು. ಅಧಿಕಾರ ದುರ್ಬಳಕೆ ತಡೆಯಲು ಬಗರ್ ಹುಕುಂ ಸಮಿತಿಯ ನಿರ್ಣಯಗಳಿಗೆ ಸದಸ್ಯರ ಡಿಜಿಟಲ್ ಸಹಿ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.

Bagar hukum Government land legal

Drought relief money : ರೈತರೇ ನಿಮಗೆ ಬರ ಪರಿಹಾರ ಹಣ ಸಿಗುತ್ತೋ ಸಿಗಲ್ವೋ? ಈಗಲೇ ಮೊಬೈಲ್‌ನಲ್ಲೇ ಚೆಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!