ಉದ್ಯೋಗ

ಪದವಿಧರರಿಗೆ ಇಲ್ಲಿದೆ ವಾರ್ಷಿಕ 5 ಲಕ್ಷ ರೂಪಾಯಿ ಸಂಬಳದ ಉದ್ಯೋಗ | ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023 | Bank of Baroda Recruitment 2023

WhatsApp Group Join Now
Telegram Group Join Now

ಬ್ಯಾಂಕ್ ಆಫ್ ಬರೋಡಾ 500 ಸ್ವಾಧೀನಾಧಿಕಾರಿ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ವಯೋಮಿತಿ, ಸಂಬಳ, ನೇಮಕಾತಿ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಲಿಂಕ್ ಇತ್ಯಾದಿ ಮಾಹಿತಿ ಇಲ್ಲಿದೆ…

ದೇಶದ ರಾಷ್ಟ್ರೀಕೃತ  ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) 500 ಸ್ವಾಧೀನಾಧಿಕಾರಿ  (Acquisition Officers) ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಮೆಟ್ರೋ ನಗರಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿ, ಮೆಟ್ರೋ ಹೊರತಾದ ನಗರಗಳಲ್ಲಿ 4 ಲಕ್ಷ ರೂಪಾಯಿ ಸಂಬಳದ ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 14 ಮಾರ್ಚ್ 2023ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣ ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆಯ ಲಿಂಕ್ ಅನ್ನು ಈ ಲೇಖನದ ಕೊನೆಯಲ್ಲಿ ಕೊಡಲಾಗಿದೆ.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಹುದ್ದೆಗಳ ವಿವರ

ದೇಶಾದ್ಯಂತ ಒಟ್ಟು 500 ಸ್ವಾಧೀನಾಧಿಕಾರಿ (Acquisition Officers) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. 500 ಸ್ವಾಧೀನಾಧಿಕಾರಿ ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 75, ಎಸ್‌ಟಿ ಅಭ್ಯರ್ಥಿಗಳಿಗೆ 37, ಒಬಿಸಿ ಅಭ್ಯರ್ಥಿಗಳಿಗೆ 135, ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ 50 ಹುದ್ದೆಗಳನ್ನು ಹಾಗೂ ಉಳಿದ 203 ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಕರ್ನಾಟಕದ ಬೆಂಗಳೂರಿನಲ್ಲಿ 25, ಮಂಗಳೂರಿನಲ್ಲಿ 8 ಸ್ವಾಧೀನಾಧಿಕಾರಿ ಹುದ್ದೆಗಳಿವೆ.

ವಿದ್ಯಾರ್ಹತೆ ಏನು?

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ವಿದ್ಯಾರ್ಹತೆಯ ಜೊತೆಗೆ ರಾಷ್ಟ್ರೀಕೃತ  ಬ್ಯಾಂಕ್, ಖಾಸಗಿ ಬ್ಯಾಂಕ್, ವಿದೇಶಿ ಬ್ಯಾಂಕ್, ಬ್ರೊಕಿಂಗ್ ಸಂಸ್ಥೆ, ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಹೀಗೆ ಯಾವುದಾದರು ಒಂದರಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು. ಸ್ಥಳೀಯ ಭಾಷೆ, ಮಾರುಕಟ್ಟೆ ಮತ್ತು ಗ್ರಾಹಕರಲ್ಲಿ ಒಡನಾಡುವ ಪರಿಜ್ಞಾನ ಅಗತ್ಯವಾಗಿ ಬೇಕು.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

ವಯೋಮಿತಿ: ಫೆಬ್ರವರಿ 01, 2023ಕ್ಕೆ ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ 28 ವರ್ಷ ವಯೋಮಿತಿ ಹೊಂದಿರಬೇಕು. ಎಸ್‌ಸಿ, ಎಸ್‌ಟಿ, ಓಬಿಸಿ, ಮಾಜಿ ಸೈನಿಕ, ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಸಂಬಳ: ಮೊದಲೇ ಹೇಳಿದಂತೆ ಸ್ವಾಧೀನಾಧಿಕಾರಿ ಹುದ್ದೆಗಳಿಗೆ ಮೆಟ್ರೋ ನಗರಗಳಲ್ಲಿ ವಾರ್ಷಿಕ 5 ಲಕ್ಷ ರೂಪಾಯಿ, ಮೆಟ್ರೋ ಹೊರತಾದ ನಗರಗಳಲ್ಲಿ 4 ಲಕ್ಷ ರೂಪಾಯಿ ಸಂಬಳ ನೀಡಲಾಗುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆಯಲ್ಲಿ ಹೇಳಲಾಗಿದೆ. ಸಂಬಳದ ಹೊರತಾಗಿ ಇನ್ನಿತರ ಭತ್ಯೆಗಳು ಕೂಡ ಇರುತ್ತವೆ.

ಇದನ್ನೂ ಓದಿ: ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ನೇಮಕ ಹೇಗೆ?

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಮೊದಲಿಗೆ ಅವರಿಗೆ 100 ಅಂಕಗಳ ಆನ್‌ಲೈನ್ ಟೆಸ್ಟ್ ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಬಹುದಾದ ಈ ಪರೀಕ್ಷೆಯ ಸಮಯ 90 ನಿಮಿಷಗಳು. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಗುಂಪು ಚರ್ಚೆ ಅಥವಾ ಸಂದರ್ಶನ ನಡೆಸಲಾಗುತ್ತದೆ. ಆನ್‌ಲೈನ್ ಪರೀಕ್ಷೆಯನ್ನು ರಾಜ್ಯದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ.

ಅರ್ಜಿ ಶುಲ್ಕ: ಎಸ್‌ಸಿ, ಎಸ್‌ಟಿ, ವಿಕಲಚೇತನರು, ಮಹಿಳೆಯರಿಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದ್ದು; GEN/ OBC/EWS ಅಭ್ಯರ್ಥಿಗಳು 600 ರೂಪಾಯಿ ಶುಲ್ಕ ಪಾವತಿಸಬೇಕಿದೆ.

ಇದನ್ನೂ ಓದಿ: 3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಕೆ ದಿನಾಂಕ: ಅರ್ಜಿ ಸಲ್ಲಿಕೆ ಕಳೆದ ಫೆಬ್ರವರಿ 22, 2023ರಿಂದ ಆರಂಭವಾಗಿದ್ದು; ಮಾರ್ಚ್ 14, 2023 ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಯ ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾ ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ https://www.bankofbaroda.in/ಗೆ ಭೇಟಿ ನೀಡಿ ಅಥವಾ ಕೆಳಗೆ ನೀಡಿರುವ ನೇರ ಲಿಂಕ್‌ನಿ0ದಲೂ ನೀವು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಲಿಂಕ್: https://smepaisa.bankofbaroda.co.in/BOBHRM2023/

ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಆಫ್ ಬರೋಡಾ (BOB) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಡಿ…

ಬ್ಯಾಂಕ್ ಆಫ್ ಬರೋಡಾ (BOB) ಸ್ವಾಧೀನಾಧಿಕಾರಿ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!