ಕೃಷಿಸರಕಾರಿ ಯೋಜನೆ

Bara Parihara : ರೈತರಿಗೆ ಬರ ಪರಿಹಾರ ಜಮೆ ಮುಂದೂಡಿಕೆ : ಎಲ್ಲ ರೈತರಿಗೂ ಹಣ ಸಿಗೋದು ಕಷ್ಟ!

WhatsApp Group Join Now
Telegram Group Join Now

ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಎದುರಾಗಿದ್ದು; ರೈತರ ಖಾತೆಗೆ ಬರ ಪರಿಹಾರದ ಹಣ ಪಾವತಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ…

ರೈತರ ಖಾತೆಗೆ ಬರ ಪರಿಹಾರ ಪಾವತಿಗೆ ಸಂಕಷ್ಟ ಎದುರಾಗಿದೆ. ಕೇಂದ್ರ ಸರಕಾರದ ನೆರವು ಅವಲಂಬಿಸದೇ ರಾಜ್ಯ ಸರಕಾರವೇ ಮೊದಲ ಹಂತದ ತಾತ್ಕಾಲಿಕ ಪರಿಹಾರವಾಗಿ 2,000 ರೂಪಾಯಿ ವಿತರಣೆ ಮಾಡುವುದಾಗಿ ಸರಕಾರ ಘೋಷಿಸಿ ಹತ್ತಿರತ್ತಿರ ಒಂದು ತಿಂಗಳಾಗುತ್ತ ಬಂತು. 15 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ, ಒಂದು ವಾರದಲ್ಲಿ ವರ್ಗಾವಣೆ ಆಗಲಿದೆ ಎಂದು ಸರಕಾರ ಭರವಸೆಗಳನ್ನು ನೀಡುತ್ತ ಬಂದಿದೆ.

ಈಚೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೈತರಿಗೆ ಮೊದಲು ಪ್ರಾಯೋಗಿಕ ಪರಿಹಾರ ವಿತರಣೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಆ ಪ್ರಕಾರ ಚಳ್ಳಕೆರೆ ತಾಲ್ಲೂಕಿನ ರೈತರಿಗೆ ಪರಿಹಾರ ಹಣ ವರ್ಗಾವಣೆ ಮಾಡಿದ್ದು; ಸ್ವತಃ ಸರಕಾರವೇ ಪೇಚಿಗೆ ಸಿಲುಕುವಂತಹ ತಾಂತ್ರಿಕ ದೋಷ ಪತ್ತೆಯಾಗಿದೆ. ಹೀಗಾಗಿ ಬರ ಪರಿಹಾರದ ಹಣ ರೈತರ ಕೈ ಸೇರಲು ಮತ್ತಷ್ಟು ದಿನ ಹಿಡಿಯಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲ ರೈತರಿಗೂ ಪರಿಹಾರ ಸಿಗೋದು ಕಷ್ಟ!

ಚಳ್ಳಕೆರೆ ತಾಲ್ಲೂಕಿನ ರೈತರ ಬ್ಯಾಂಕ್ ಖಾತೆಗೆ 2,000 ರೂಪಾಯಿ ಪ್ರಾಯೋಗಿಕವಾಗಿ ಜಮಾ ಮಾಡಿದ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಪತ್ತೆಯಾಗಿದೆ. ತತ್ಪರಿಣಾಮ ಸಾವಿರಾರು ರೈತರು ಮೊದಲ ಕಂತಿನ ಪರಿಹಾರದಿಂದ ವಂಚಿತರಾಗಿದ್ದಾರೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾದ ಎಲ್ಲ ರೈತರಿಗೂ ಪರಿಹಾರ ಹಣ ಜಮೆ ಆಗಿಲ್ಲ.

ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಎದುರಾಗಿದ್ದು; ಇದೀಗ ಕಂದಾಯ ಇಲಾಖೆಗೆ ಅರ್ಹ ರೈತರ ಖಾತೆಗೆ ಬರ ಪರಿಹಾರದ ಹಣ ಪಾವತಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸಿ, ಆದಷ್ಟು ಬೇಗ ಪರಿಹಾರ ವಿತರಿಸಲು ಸಾಧ್ಯವಿರುವ ಪರ್ಯಾಯ ಮಾರ್ಗದ ಬಗ್ಗೆ ಗಂಭೀರ ಪ್ರಯತ್ನ ನಡೆದಿದೆ ಎಂದು ಕಂದಾಯ ಇಲಾಖೆ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

ಫ್ರೂಟ್ಸ್ ತಂತ್ರಾಂಶದಲ್ಲಿ ದೋಷ

ಯಾವುದೇ ಸರಕಾರಿ ಯೋಜನೆಗಳ ಹಣ ಪಾವತಿಗೆ Parihara ತಂತ್ರಾಂಶದ ಬದಲು ಪ್ರೊಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ರೈತರ ವಿವರವನ್ನು ಬಳಕೆ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಹಣ ಜಮೆ ಮಾಡಲಾಗುತ್ತದೆ. ಅದರಂತೆ ಬರ ಪರಿಹಾರಕ್ಕೂ ಪ್ರೊಟ್ಸ್ ನೋಂದಣಿಯನ್ನೇ ಆಧಾರವಾಗಿಟ್ಟುಕೊಂಡು ಪಾವತಿಗೆ ಮುಂದಾಗಿದೆ.

ಪ್ರೊಟ್ಸ್ ತಂತ್ರಾಂಶದಲ್ಲಿ ರೈತರ ಆಧಾರ್ ನಂಬರ್ ಜತೆಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯನ್ನೇ ಹಣ ಜಮೆಗೆ ಬಳಸುವುದರಿಂದ ಅಕ್ರಮಕ್ಕೆ ಸಾಧ್ಯವಿಲ್ಲ. ಹೀಗಾಗಿ ರೈತರು ಬರ ಪರಿಹಾರವನ್ನು ಪಡೆಯಲು ಕೃಷಿ ಇಲಾಖೆಯ FID ನಂಬರ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಆ ಪ್ರಕಾರ ಬಹುತೇಕ ರೈತರು ಪ್ರೊಟ್ಸ್ ತಂತ್ರಾಂಶದಲ್ಲಿ ನೋಂದಣಿ ಕೂಡ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: farmers Loan waiver : ಸಾಲ ಮನ್ನಾ ಬದಲು ರೈತರಿಗೆ ನೇರ ಪರಿಹಾರ | ಸರಕಾರದ ಹೊಸ ಯೋಜನೆ

ಪರಿಹಾರ ಪಾವತಿಗೆ ತಾಂತ್ರಿಕ ಸಮಸ್ಯೆ ಏನು?

ಪ್ರೊಟ್ಸ್ ತಂತ್ರಾಂಶದಲ್ಲಿಯೇ ಎದುರಾಗಿರುವ ತಾಂತ್ರಿಕ ದೋಷ ಸರಿಪಡಿಸದೇ ಹೋದರೆ ಅನೇಕ ರೈತರು ಬರ ಪರಿಹಾರದಿಂದ ವಂಚಿತರಾಗಲಿದ್ದಾರೆ. ಏಕೆಂದರೆ ಇಲ್ಲಿ ನೋಂದಣಿಯಾದ ಒಂದೇ ಸರ್ವೆ ನಂಬರ್, ಒಂದೇ ಆರ್​ಟಿಸಿಯಲ್ಲಿ ಹಲವು ರೈತರ ಹೆಸರುಗಳಿವೆ. ಬೇರೆ ಬೇರೆ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಜೋಡಿಸಿದ್ದರೂ ಕೂಡ ಒಂದೇ ಕುಟುಂಬದ ಸದಸ್ಯರು ಬೇರೆಯಾದ ನಂತರ ಅವರವರ ಹೆಸರಿಗೆ ಹಿಸ್ಸೆಯಾದ ಜಮೀನಿನ ಮಾಲೀಕತ್ವ ವಿಂಗಡಣೆಯಾಗಿಲ್ಲ. ಕೆಲವು ಕಡೆಗೆ ತೀರಿಹೋದ ಮನೆ ಯಜಮಾನನ ಹೆಸರು ಸಹ ಪಹಣಿಯಲ್ಲಿದೆ.

ಅನೇಕ ಪ್ರಕರಣಗಳಲ್ಲಿ ಬೇರೆ ಬೇರೆಯಾದ ಒಂದೇ ಕುಟುಂಬದ ಅಣ್ಣ, ತಮ್ಮಂದಿರು ಜಮೀನು ಹಿಸ್ಸೆ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದು, ಎಲ್ಲರೂ ಹೆಸರು ನೋಂದಾಯಿಸಿದ್ದಾರೆ. ಆದರೆ ಒಂದು ಸರ್ವೆ ನಂಬರ್​ನ ಆರ್​ಟಿಸಿಯ ಒಬ್ಬರ ಹೆಸರಿಗೆ ಪರಿಹಾರ ಹಣ ಜಮೆಯಾದರೆ ಉಳಿದವರ ಹೆಸರು ಸ್ವಯಂ ಚಾಲಿತವಾಗಿ ಡಿಲಿಟ್ ಆಗುತ್ತವೆ. ಇದರಿಂದ ನೋಂದಣಿ ಮಾಡಿಕೊಂಡ ಎಲ್ಲ ರೈತರಿಗೂ ಪರಿಹಾರ ಹಣ ತಲುಪುವುದಿಲ್ಲ.

ಇದನ್ನೂ ಓದಿ: Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

ಪೇಚಿಗೆ ಸಿಲುಕಿದ ಸರಕಾರ

ಫ್ರೂಟ್ಸ್​ನಲ್ಲಿ ನೋಂದಣಿಯಾದ ರೈತರ ಹೆಸರುಗಳ ಜಾಡು ಹಿಡಿದು ಪ್ರತಿ ರೈತರನ್ನು ಪರಿಶೀಲಿಸಿ, ಅರ್ಹ ಮತ್ತು ಅನರ್ಹರನ್ನು ಪ್ರತ್ಯೇಕಿಸಲು ಸಾಕಷ್ಟು ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ತಂತ್ರಾAಶವನ್ನೆ ಪರಿಷ್ಕರಿಸಿ ತಾಂತ್ರಿಕ ತೊಡಕು ನಿವಾರಿಸಲು ಸಾಧ್ಯವೇ? ಎಂದು ಇಲಾಖೆ ಚಿಂತಿಸಿದ್ದು, ಅರ್ಹ ರೈತರ ನಿಖರ ದತ್ತಾಂಶಗಳನ್ನು ಸಂಗ್ರಹಿಸುವುದು ಅನಿವಾರ್ಯವಾಗಿದೆ.

ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ ಕೇವಲ 13 ತಾಲೂಕು ಹೊರತುಪಡಿಸಿ ಎಲ್ಲ ತಾಲೂಕುಗಳನ್ನೂ ‘ಬರಪೀಡಿತ’ ಎಂದು ಸರಕಾರ ಘೋಷಣೆ ಮಾಡಿದೆ. ಅಜಮಾಸು 45 ಲಕ್ಷ ರೈತರು ಬರ ಸಂತ್ರಸ್ತರಾಗಿದ್ದಾರೆ. ಇಷ್ಟೂ ರ್ಹ ರೈತರಿಗೆ ನ್ಯಾಯಯುತವಾಗಿ ಪರಿಹಾರ ಹಣ ತಲುಪಿಸಲೆಂದೇ ಫ್ರೂಟ್ಸ್​ ತಂತ್ರಾಂಶದ ಮೂಲಕ ಹಣ ವಿತರಣೆಗೆ ಮುಂದಾಗಿದೆ. ಈಗ ಅದರಲ್ಲೇ ಸಮಸ್ಯೆ ಎದುರಾಗಿರುವುದು ಸರಕಾರವನ್ನು ಪೇಚಿಗೆ ಸಿಲುಕಿಸಿದೆ.

ಇದನ್ನೂ ಓದಿ: ಸಾಲ ಪಡೆಯುವವರಿಗೆ PhonePe ಹೊಸ ಅಪ್ಡೇಟ್ | PhonePe Loan Credit score Advice

WhatsApp Group Join Now
Telegram Group Join Now

Related Posts

error: Content is protected !!