ಸರಕಾರಿ ಯೋಜನೆ

Govt land encroachment clearance : ಸರಕಾರಿ ಜಮೀನು ಒತ್ತುವರಿ ತೆರವು ಆರಂಭ : ರೈತರಿಗೆ ಸಿಗಲಿದೆ ವಿನಾಯಿತಿ

WhatsApp Group Join Now
Telegram Group Join Now

Govt land encroachment clearance

ಸರಕಾರಿ ಜಮೀನು ಒತ್ತುವರಿ ಹಾಗೂ ಕಬಳಿಕೆ ತೆರವಿಗೆ ರಾಜ್ಯ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಮಾರ್ಚ್ ನಂತರ ತೆರವು ಕಾರ್ಯ ಆರಂಭವಾಲಿದೆ…

ಒತ್ತುವರಿ ಹಾಗೂ ಕಬಳಿಕೆ ಆಗಿರುವ ಸರಕಾರಿ ಜಮೀನು, ರಸ್ತೆ, ಕೆರೆ-ಕುಂಟೆಯ೦ತಹ ಜಲಮೂಲಗಳ ಒತ್ತುವರಿ ತೆರವಿಗೆ ರಾಜ್ಯ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಇದೇ ಮಾರ್ಚ್ ನಂತರ ಕಂದಾಯ ಅಧಿಕಾರಿಗಳಿಂದ ಇಂತಹ ಅಕ್ರಮಗಳ ತೆರವು ಕಾರ್ಯ ನಡೆಯಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಭೂಮಿಯ ಮಾಹಿತಿ ಅಪ್‌ಡೇಟ್ ಮಾಡಲು ಕಂದಾಯ ಅಧಿಕಾರಿಗಳಿಗೆ ಕಳೆದ ಡಿಸೆಂಬರ್ ತನಕ ಅವಕಾಶ ನೀಡಲಾಗಿತ್ತು. ಏತನ್ಮಧ್ಯೆ ರೈತರಿಗೆ ಪರಿಹಾರ ವಿತರಣೆ ಹಾಗೂ ಚುನಾವಣಾ ಕೆಲಸ ಬಂದಿದ್ದರಿAದ ಈ ಕಾರ್ಯ ನಿಧಾನವಾಗಿದ್ದು; ಇದೀಗ ಬೀಟ್ ಆ್ಯಪ್ ಸಿದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

ರಸ್ತೆ, ಕಾಲುದಾರಿ ತೆರವಿಗೆ ಮೊದಲ ಆದ್ಯತೆ

ರಾಜ್ಯದ ಎಲ್ಲಾ ಭಾಗಗಳಲ್ಲೂ ಸರಕಾರಿ ಜಮೀನುಗಳ ಕಬಳಿಕೆ ನಿರಂತರವಾಗಿ ನಡೆದು ಬಂದಿದೆ. ಈ ಪೈಕಿ ಸರಕಾರಿ ರಸ್ತೆ, ದಾರಿಗಳು ಒತ್ತುವರಿಯಾಗಿರುವ ಪ್ರಕರಣಗಳು ವ್ಯಾಪಕವಾಗಿವೆ. ದಾರಿ, ರಸ್ತೆ ಒತ್ತುವರಿ ವಿಚಾರವಾಗಿಯೇ ರಾಜ್ಯಾದ್ಯಂತ ಬಹಳಷ್ಟು ದೂರುಗಳು ದಾಖಲಾಗುತ್ತಿವೆ.

ಸರಕಾರಿ ರಸ್ತೆ, ರೂಢಿಗತ ಕಾಲುದಾರಿ (ನಕಾಶೆ ರಸ್ತೆ), ಗುಂಡು ತೋಪು ಹಾಗೂ ಸಣ್ಣಪುಟ್ಟ ಜಲಮೂಲಗಳಾದ ಕುಂಟೆಗಳ ಒತ್ತುವರಿಯನ್ನು ತೆರವುಗೊಳಿಸಲು ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಕಂದಾಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ತೆರವು ಕಾರ್ಯ ಹೇಗೆ ನಡೆಯಲಿದೆ?

ಎಲ್ಲ ಸರಕಾರಿ ಭೂಮಿಯ ಡೇಟಾ ಬೇಸ್ ಸಿದ್ಧಪಡಿಸಿದ್ದು; ಸರಕಾರಿ ಜಮೀನುಗಳ ಸ್ಥಳ, ವಿಸ್ತೀರ್ಣ, ಆಕಾರ್ ಬಂದ್ ಸಿದ್ಧಪಡಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಕಂದಾಯ ಅಧಿಕಾರಿಗಳು ಈ ಆ್ಯಪ್ ಬಳಸಿಕೊಂಡು ಸರಕಾರಿ ಜಾಗಗಳ ನಕ್ಷೆ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಈ ಕಾರ್ಯಕ್ಕೆ ಕಂದಾಯ ಅಧಿಕಾರಿಗಳಿಗೆ ಮಾರ್ಚ್ ಅಂತ್ಯದವರೆಗೆ ಗಡುವು ನೀಡಲಾಗಿದೆ.

ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಲೆಕ್ಕಿಗರು (VA) ಹಾಗೂ ರೆವಿನ್ಯೂ ಇನ್ಸ್ಪೆಕ್ಟರ್ (RI) ತಮ್ಮ ಕಾರ್ಯ ವ್ಯಾಪ್ತಿಯ ಸರಕಾರಿ ಜಾಗಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಸ್ತುಸ್ಥಿತಿಯನ್ನು ಬೀಟ್ ಆ್ಯಪ್ (beat app) ಮೂಲಕ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಒತ್ತುವರಿ ಅಥವಾ ಕಬಳಿಕೆ ಸಾಬೀತಾದ ಜಮೀನುಗಳನ್ನು ಸ್ಥಳೀಯ ತಹಸೀಲ್ದಾರರು ಮುಂದಿನ 15 ದಿನದೊಳಗೇ ತೆರವುಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ರೈತರಿಗೆ ಸಿಗಲಿದೆ ವಿನಾಯಿತಿ (Exemption for farmers)

ಈ ತೆರವು ಕಾರ್ಯದಲ್ಲಿ ರೈತರಿಗೆ ಹಾಗೂ ಒತ್ತುವರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ವಿನಾಯಿತಿ ಸಿಗಲಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ಸಣ್ಣ ರೈತರು ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಸಕ್ರಮಕ್ಕಾಗಿ ಫಾರಂ 57 ಅಥವಾ ಬೇರೆ ರೂಪದಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತಹ ಭೂಮಿಯನ್ನು ತೆರವು ಮಾಡಿಸುವುದಿಲ್ಲ.

ಇನ್ನು ಒತ್ತುವರಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರೂ ಕೂಡ ಅಂತಹ ಒತ್ತುವರಿ ತೆರವು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಸರಕಾರಿ ಜಮೀನಿನನಲ್ಲಿ ಸಾಗುವಳು ಮಾಡುತ್ತ ಬಂದಿರುವ ಸಣ್ಣ ರೈತರು ಹಾಗೂ ಮನೆ ನಿರ್ಮಾಣ ಮಾಡಿಕೊಂಡಿರುವ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

Govt land encroachment clearance

ಇದನ್ನೂ ಓದಿ: ಹೈನುಗಾರಿಕೆ 10 ಲಕ್ಷದ ವರೆಗೂ ಮೇಲಾದಾರ ಮುಕ್ತ ಸಾಲ. ಈ ಲೋನ್ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!