ಸರಕಾರಿ ಯೋಜನೆ

Bele Vime: ಈ ರೈತರಿಗೆ ₹1.33 ಕೋಟಿ ಬೆಳೆ ವಿಮೆ ಪರಿಹಾರ ವಿತರಣೆ

WhatsApp Group Join Now
Telegram Group Join Now

2022-23ನೇ ಸಾಲಿನ ಮುಂಗಾರು ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಈ ರೈತರಿಗೆ ₹1.33 ಕೋಟಿ ವಿಮಾ ಪರಿಹಾರ ಪಾವತಿಯಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ಕಳೆದ ವರ್ಷದ ವಿಮೆ ನೋಂದಣಿ ಮಾಡಿಸಿದ್ದ ರೈತರ ಪೈಕಿ 566 ಫಲಾನುಭವಿಗಳಿಗೆ ವಿಮಾ ಪರಿಹಾರ ಪಾವತಿಯಾಗಿದೆ.

ಮೆಕ್ಕೆಜೋಳ ಬೆಳೆಗೆ ₹38.116 ಲಕ್ಷ ರೂಪಾಯಿ, ಹತ್ತಿಗೆ ₹77.31 ಲಕ್ಷ,  ಶೇಂಗಾ ಬೆಳೆಗೆ ₹2.68 ಲಕ್ಷ, ಈರುಳ್ಳಿ ಬೆಳೆಗೆ ₹15.14 ಲಕ್ಷ ಪರಿಹಾರ ಪಾವತಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಅವರು ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆವಿಮೆ: ಅಡಿಕೆ ಹೆಕ್ಟೇರ್‌ಗೆ ₹1,28,000 ವಿಮಾ ಪರಿಹಾರ

ಪ್ರಸಕ್ತ 2023-24ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಅನೇಕ ಬೆಲೆಗಳ ನೋಂದಣಿಗೆ ಸರ್ಕಾರ ಅನುಮೋದನೆ ನೀಡಿದೆ.

ಮೆಕ್ಕೆಜೋಳ, ಹತ್ತಿ, ಜೋಳ, ಸೂರ್ಯಕಾಂತಿ ಬೆಳೆಗಳಿಗೆ ವಿಮೆ ನೋಂದಣಿ ಮಾಡಿಸಲು ಜುಲೈ 31, ಭತ್ತ, ರಾಗಿ, ಸಜ್ಜಿ ಬೆಳೆಗಳ ನೋಂದಣಿಗೆ 16-8-2023 ಕೊನೆಯ ದಿನವಾಗಿರುತ್ತದೆ.

ರೈತರು ಬೆಳೆ ವಿಮೆ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೃಷಿ ಇಲಾಖೆಯ ಪ್ರಕಟಣೆಯಲ್ಲಿ ಕೋರಲಾಗಿದೆ. ಈಗಾಗಲೇ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮಾ ಕಂಪೆನಿ ಆದ್ಯತೆ ಮೇರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಸ್ತುತ ಬೆಳೆ ವಿಮೆ ಅರ್ಜಿಯನ್ನು ರೈತರು ಕಾಲಮಿತಿಯಲ್ಲಿ ತುಂಬಬೇಕು.

ಜುಲೈ 27ಕ್ಕೆ ಸಣ್ಣ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ | ನಿಮ್ಮೂರಿನ ಯಾರಿಗೆಲ್ಲ ಹಣ ಸಿಗುತ್ತೆ ಈಗಲೇ ಚೆಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!