ಸರಕಾರಿ ಯೋಜನೆ

bele vime: 12.84 ಕೋಟಿ ರೂಪಾಯಿ ಬೆಳೆ ವಿಮೆ ಪಾವತಿಗೆ ಸೂಚನೆ

WhatsApp Group Join Now
Telegram Group Join Now

ಕಳೆದ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (ಸ್ಥಳೀಯ ವಿಕೋಪದಡಿ) ಮಳೆ ಬಂದು 4ರಿಂದ 10 ದಿನದೊಳಗೆ ದೂರು ದಾಖಲಿಸಿದ ಕಲಬುರಗಿ ಜಿಲ್ಲೆಯ 22,217 ರೈತರಿಗೆ ₹12.84 ಕೋಟಿ ಬೆಳೆ ವಿಮೆ ಪರಿಹಾರ ಜುಲೈ 18ರೊಳಗೆ ರೈತರಿಗೆ ಪಾವತಿಸುವಂತೆ ಯೂನಿವರ್ಸಲ್ ಸೊಂಪೊ ಜನರಲ್ ಇನ್ಶುರೆನ್ಸ್ ವಿಮಾ ಕಂಪನಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.

‘ವಿಮಾ ಕಂಪನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಒಪ್ಪಿರುವಂತೆ ವಿಮಾ ಪರಿಹಾರ ನೀಡಬೇಕು. ಸ್ಥಳೀಯ ವಿಕೋಪದಡಿ ರೈತರಿಂದ ಸ್ವೀಕೃತ ದೂರುಗಳಲ್ಲಿ 8,884 ಪ್ರಕರಣಗಳನ್ನು ವಿಮಾ ಕಂಪನಿ ತಿರಸ್ಕರಿಸಿದೆ. ಆದರೆ, ದಾಖಲಾತಿ ಪರಿಶೀಲನೆಗೆ ಸಲ್ಲಿಸಿರುವುದಿಲ್ಲ. ಒಂದು ವಾರದಲ್ಲಿ ದಾಖಲಾತಿ ಕೃಷಿ ಇಲಾಖೆಗೆ ಸಲ್ಲಿಸಿ, ಅವರಿಂದ ಪರಿಶೀಲನೆಗೊಳಪಟ್ಟ ವಿಸ್ತೃತ ವರದಿ ಸಹ ಸಲ್ಲಿಸುವಂತೆ ವಿಮಾ ಕಂಪನಿಗೆ ತಿಳಿಸಿದರು.

ಇದನ್ನೂ ಓದಿ:  ಕಡಿಮೆ ಬಡ್ಡಿಯಲ್ಲಿ ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಣೆಗೆ ಸಾಲ ಸೌಲಭ್ಯ | ಅರ್ಜಿ ಸಲ್ಲಿಕೆ ಹೇಗೆ?

ಬೆಳೆ ವಿಮೆ ಬಂದಿಲ್ಲ ಎಂದು ಜಿಲ್ಲೆಯಲ್ಲಿ ಒಟ್ಟು 1,18,924 ರೈತರು ದೂರು ನೀಡಿದ್ದಾರೆ. ಮಾರ್ಗಸೂಚಿ ಅನ್ವಯ 72 ಗಂಟೆಗಳಲ್ಲಿ ದೂರು ನೀಡಿದ 64,764 ರೈತರಿಗೆ ₹39.93 ಕೋಟಿ ಮೊತ್ತವು ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Crop Loan: 43 ಲಕ್ಷ ರೈತರಿಗೆ ಬೆಳೆಸಾಲ ಮಂಜೂರು: ಯಾರಿಗೆಲ್ಲ ಸಿಗಲಿದೆ ಸೊಸೈಟಿ ಲೋನ್?

WhatsApp Group Join Now
Telegram Group Join Now

Related Posts

error: Content is protected !!