ಸರಕಾರಿ ಯೋಜನೆಸಾಲ ಯೋಜನೆ

Bhu Odetana Yojane : ಈ ಯೋಜನೆಯಡಿ ಜಮೀನು ಖರೀದಿಗೆ ರಾಜ್ಯ ಸರಕಾರವೇ ಕೊಡುತ್ತೆ ಸಹಾಯಧನ ಮತ್ತು ಸಾಲ | ಡಿಸೆಂಬರ್ 15ರೊಳಗೆ ಅರ್ಜಿ ಹಾಕಿ

WhatsApp Group Join Now
Telegram Group Join Now

ಸ್ವಂತ ಜಮೀನಿಲ್ಲದ ಮಹಿಳೆಯರಿಗೆ ಈ ಯೋಜನೆಯಡಿ ಭೂಮಿ ಖರೀದಿಸಲು ಸರಕಾರವೇ 20-25 ಲಕ್ಷ ರೂಪಾಯಿ ಸಾಲ ಮತ್ತು ಸಬ್ಸಿಡಿ ಕೊಡುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ….

Bhu Odetana Yojane : 2023-2024ನೇ ಸಾಲಿನ ‘ಭೂ ಒಡೆತನ ಯೋಜನೆ’ಯಡಿ (Land Purchase Scheme) ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಸಹಾಯಧನದಲ್ಲಿ ಜಮೀನು ಖರೀದಿಸಲು ಅರ್ಜಿ ಆಹ್ವಾನಿಸಿದೆ. ಈ ಸೌಲಭ್ಯ ಪಡೆಯಲು ಇದೇ ನವೆಂಬರ್ 29, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಇದೀಗ ಸರಕಾರ ಮತ್ತೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಿದ್ದು; ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಸಿ ಸಹಾಯಧನ (Subsidy) ಮತ್ತು ಸಾಲ (Loan) ಪಡೆಯಬಹುದಾಗಿದೆ.

ಏನಿದು ಭೂ ಒಡೆಯನ ಯೋಜನೆ? : ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಒಡೆಯರನ್ನಾಗಿ ಮಾಡುವ ಸದುದ್ದೇಶದಿಂದ ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಅರ್ಹ ಫಲಾನುಭವಿಗಳು ತಮ್ಮ ವಾಸಸ್ಧಳದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ 2 ಎಕರೆ ಖುಷ್ಕಿ, 1 ಎಕರೆ ನೀರಾವರಿ, ಅರ್ಧ ಎಕರೆ ಭಾಗಾಯ್ತು ಜಮೀನು ಖರೀದಿಸಿ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರ ಹೆಸರಿನಲ್ಲಿ ಸರಕಾರವೇ ನೋಂದಾಯಿಸಿ ಕೊಡುತ್ತದೆ.

ಇದನ್ನೂ ಓದಿ: Loan and subsidy schemes for women : ಮಹಿಳೆಯರಿಗಾಗಿಯೇ ಇರುವ ಸಾಲ ಮತ್ತು ಸಬ್ಸಿಡಿ ಯೋಜನೆಗಳು: ಕೂಡಲೇ ಅರ್ಜಿ ಸಲ್ಲಿಸಿ

ಯಾವ ಜಿಲ್ಲೆಯಲ್ಲಿ ಎಷ್ಟು ಸಾಲ? : ಈ ಯೋಜನೆಯಡಿ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು 25 ಲಕ್ಷ ರೂಪಾಯಿಗಳು ಮತ್ತು ಉಳಿದ 26 ಜಿಲ್ಲೆಗಳಲ್ಲಿ ಘಟಕ ವೆಚ್ಚವನ್ನು 20 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ಸಹಾಯಧ (ಸಬ್ಸಿಡಿ) ಎಷ್ಟು ಸಿಗಲಿದೆ? : ಒಟ್ಟು ಘಟಕ ವೆಚ್ಚದಲ್ಲಿ ಶೇ.50 ರಷ್ಟು ಸಹಾಯಧನ ಮತ್ತು ಶೇ.50 ರಷ್ಟು ಅವಧಿ ಸಾಲವಾಗಿರುತ್ತದೆ. ಅಂದರೆ 25 ಲಕ್ಷ ರೂಪಾಯಿ ಘಟಕ ವೆಚ್ಚಕ್ಕೆ 12 ಲಕ್ಷ 50 ಸಾವಿರ ರೂಪಾಯಿ ಹಾಗೂ 20 ಲಕ್ಷದ ಘಟಕ ವೆಚ್ಚಕ್ಕೆ 10 ಲಕ್ಷ ರೂಪಾಯಿ ಹಣ ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನಿಗೆ ದಾರಿ ಪಡೆಯುವ ಸುಲಭ ದಾರಿ ಇಲ್ಲಿದೆ | ಕಠಿಣ ಸಮಸ್ಯೆಗೆ ಸುಲಭ ಪರಿಹಾರ | Land way tahasildar legal solution

ಸಾಲ ಮರುಪಾವತಿ ಹೇಗೆ? : ಸಬ್ಸಿಡಿ ಹೊರತುಪಡಿಸಿ ಉಳಿಕೆ 50%ರಷ್ಟು ಹಣ ಅವಧಿ ಸಾಲವಾಗಿದ್ದು; ಈ ಸಾಲವನ್ನು ವಿವಿಧ ನಿಗಮಗಳ ಮೂಲಕ ಭರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ.6ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಸಾಲ ಮತ್ತು ಬಡ್ಡಿಯನ್ನು 10 ವರ್ಷಗಳ ಅವಧಿಯಲ್ಲಿ ವಾರ್ಷಿಕ ಸಮ ಕಂತುಗಳಲ್ಲಿ ಮರುಪಾವತಿ ಮಾಡಬೇಕು.

ಯಾವ ಭೂಮಿ ಖರೀದಿ ? : ಬಹುಮುಖ್ಯವಾಗಿ ಈ ಯೋಜನೆಯಡಿ ಫಲಾನುಭವಿಗಳು ಖರೀದಿಸುವ ಜಮೀನಿನ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬಾರದು. ಎಸ್ಸಿ/ಎಸ್ಟಿ ಸಮುದಾಯ ಹೊರತುಪಡಿಸಿ ಉಳಿಕೆ ಯಾರ ಜಮೀನು ಬೇಕಾದರೂ ಖರೀದಸಲು ಅವಕಾಶವಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ಜಮೀನಿನ ದರವನ್ನು ನಿಗದಿಪಡಿಸುತ್ತದೆ.

ಇದನ್ನೂ ಓದಿ: Drought Relief : ರೈತರು ಸುಸೂತ್ರ ಬರ ಪರಿಹಾರ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ…

ಈ ಸೌಲಭ್ಯ ಪಡೆಯಲು ಯಾರು ಅರ್ಹರು? : ವಾರ್ಷಿಕ ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ ರೂಪಾಯಿ ಹೊಂದಿರುವ, ಎಸ್‌ಸಿ/ ಎಸ್ಟಿ ಸಮುದಾಯಕ್ಕೆ ಒಳಪಡುವ ಎಲ್ಲಾ ಜಾತಿ, ಉಪಜಾತಿಯ ಮಹಿಳಾ ಕಾರ್ಮಿಕರು ಈ ಯೋಜನೆಯಡಿ ಸಬ್ಸಿಡಿಯಲ್ಲಿ ಜಮೀನು ಖರೀದಿಸಲು ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ ಈ ಕೆಳಕಂಡ ನಿಗಮಗಳ ವ್ಯಾಪ್ತಿಗೊಳಪಡುವ ಎಲ್ಲ ಭೂರಹಿರ ಮಹಿಳಾ ಕಾರ್ಮಿಕರು ಅರ್ಜಿ ಸಲ್ಲಿಸಬಹುದು:

 • ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
 • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
 • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
 • ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
 • ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
 • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
 • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

ಇದನ್ನೂ ಓದಿ: Bagar hukum Government land legal : ರೈತರು ಉಳುಮೆ ಮಾಡುತ್ತಿರುವ ಸರಕಾರಿ ಜಮೀನು ಸಕ್ರಮ | ಸಣ್ಣ ರೈತರಿಗೆ ಬಂಪರ್ ಗಿಫ್ಟ್

ಏನೆಲ್ಲ ದಾಖಲೆಗಳು ಬೇಕು?

 • ಪರಿಶಿಷ್ಟ ಜಾತಿ/ಪಂಗಡದ ಜಾತಿ ಪ್ರಮಾಣಪತ್ರ
 • ಭೂ-ರಹಿತ ಮಹಿಳಾ ಕೃಷಿ ಕಾರ್ಮಿಕ ಪ್ರಮಾಣಪತ್ರ
 • ಆಧಾಯ ಪ್ರಮಾಣ ಪತ್ರ
 • ರೇಷನ್ ಕಾರ್ಡ್ ಪ್ರತಿ
 • ಬ್ಯಾಂಕ್ ಪಾಸ್ ಬುಕ್ ಪ್ರತಿ
 • ಆಧಾರ್ ಕಾರ್ಡ್ ಪ್ರತಿ

ಅರ್ಜಿ ಎಲ್ಲಿ ಸಲ್ಲಿಸಬೇಕು? : ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ ಸೇವಾ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಹಸು ಖರೀದಿಗೆ ₹58,500 ರೂಪಾಯಿ ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ… subsidy for purchase of cow

ಅರ್ಜಿ ಸಲ್ಲಿಸುವ ದಿನಾಂಕ : ನವೆ೦ಬರ್ 29, 2023ರಂದು ಮುಕ್ತಾಯವಾಗಿದ್ದ ಅರ್ಜಿ ಸಲ್ಲಿಕೆಯ ಅವಧಿಯನ್ನು ಪುನಃ ಡಿಸೆಂಬರ್ 15, 2023ರ ವರೆಗೂ ವಿಸ್ತರಿಸಲಾಗಿದೆ. ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸುವ ಮೂಲಕ 2023-24ನೇ ಸಾಲಿನ ‘ಭೂ ಒಡೆತನ ಯೋಜನೆ’ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಸಹಾಯವಾಣಿ 9482-300-400

Karnataka Land Purchase Scheme | Bhu odetana Yojane

Bara Parihara : ರೈತರ ಬ್ಯಾಂಕ್ ಖಾತೆಗೆ ಸಂಪೂರ್ಣ ಬರ ಪರಿಹಾರ ಜಮಾ ಯಾವಾಗ? ಯಾವ ರೈತರಿಗೆ ಎಷ್ಟು ಸಿಗಲಿದೆ ಪರಿಹಾರ? ಇಲ್ಲಿದೆ ಮಹತ್ವದ ಮಾಹಿತಿ

WhatsApp Group Join Now
Telegram Group Join Now

Related Posts

error: Content is protected !!