ಉದ್ಯೋಗ

ಕನ್ನಡ ಬಲ್ಲವರಿಗೆ ಬೆಂಗಳೂರು ಮೆಟ್ರೋ ರೈಲಿನಲ್ಲಿ ಉದ್ಯೋಗ | 236 ಖಾಯಂ ಹುದ್ದೆಗಳಿಗೆ ಅರ್ಜಿ ಆಹ್ವಾನ | BMRCL Recruitment 2023

WhatsApp Group Join Now
Telegram Group Join Now

ಬೆಂಗಳೂರು ಮೆಟ್ರೋ ರೈಲು ನಿಗಮದ 236 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು; ಕನ್ನಡ ಬಲ್ಲವರಿಗೆ ಪ್ರಥಮ ಆದ್ಯತೆ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ವಿದ್ಯಾರ್ಹತೆ ಏನು? ಸಂಬಳ ಎಷ್ಟು? ಆಯ್ಕೆ ಪ್ರಕ್ರಿಯೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಉಳಿಕೆ ಮೂಲ ವೃಂದದ ಅಡಿಯಲ್ಲಿ ಖಾಲಿ ಇರುವ 236 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು; ಕನ್ನಡ ಬಲ್ಲವರಿಗೆ ಪ್ರಥಮ ಆದ್ಯತೆ ಕಲ್ಪಿಸಲಾಗಿದೆ. ಆಸಕ್ತ ಪುರುಷರು ಮತ್ತು ಮಹಿಳೆಯರು ಇದೇ ಏಪ್ರಿಲ್ 24ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶ ಬಳಸಿಕೊಳ್ಳಬಹುದು.

ಇದನ್ನೂ ಓದಿ: ತುಮಕೂರು ಹಾಲು ಒಕ್ಕೂಟದ 219 ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ 21,400 ರಿಂದ 97,100 ರೂಪಾಯಿ

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಇ-ಮೇಲ್, ಅಂಚೆಯಿAದ ಬಂದ ಅರ್ಜಿ ತಿರಸ್ಕರಿಸಲಾಗುವುದು. ಅರ್ಜಿ ಸಲ್ಲಿಸುವ ಪ್ರತಿ ಅಭ್ಯರ್ಥಿಗೆ ಕನ್ನಡದಲ್ಲಿ ಓದಲು, ಮಾತನಾಡಲು, ಅರ್ಥ ಮಾಡಿಕೊಳ್ಳಲು ಮತ್ತು ಬರೆಯಲು ಬರಬೇಕು. ದಾಖಲೆ ಪರಿಶೀಲನೆ ಸಮಯದಲ್ಲಿ ಕನ್ನಡ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದರೂ ಕನ್ನಡ ಜ್ಞಾನವಿಲ್ಲದಿದ್ದರೆ ಅವರನ್ನು ಅನರ್ಹಗೊಳಿಸಲಾಗುವುದು.

ಹುದ್ದೆಗಳ ವಿವರ

  • ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್: 92
  • ಸೆಕ್ಷನ್ ಇಂಜಿನಿಯರ್: 24
  • ಮೇಂಟೇನರ್ಸ್: 145
  • ಒಟ್ಟು ಹುದ್ದೆಗಳು: 236

ವಯೋಮಿತಿ : ಬೆಂಗಳೂರು ಮೆಟ್ರೋ ನಿಗಮದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷ ವಯಸ್ಸು ಮೀರಿರಬಾರದು.

ಇದನ್ನೂ ಓದಿ: SSLC ಅಭ್ಯರ್ಥಿಗಳಿಂದ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಹಿಳೆಯರಿಗೂ ಅವಕಾಶ, 69,100 ಸಂಬಳ

ಸಂಬಳ ಮತ್ತು ವಿದ್ಯಾರ್ಹತೆ:

  1. ಸ್ಟೇಷನ್ ಕಂಟ್ರೋಲರ್ / ಟ್ರೈನ್ ಆಪರೇಟರ್ : 92 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಮೂರು ವರ್ಷಗಳ ಡಿಪ್ಲೊಮ ಪಾಸ್ ಮಾಡಿರಬೇಕು. ಸಂಬಳ: 35,000-82660 ರೂಪಾಯಿ
  2. ಸೆಕ್ಷನ್ ಇಂಜಿನಿಯರ್ : 24 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗೆ ಸಂಬAಧಿತ ವಿಷಯದಲ್ಲಿ ಇಂಜಿನಿಯರಿ೦ಗ್ ಪಾಸ್ ಮಾಡಿರಬೇಕು. ಸಂಬಳ: 40,000-94500 ರೂಪಾಯಿ
  3. ಮೇಂಟೇನರ್ : 145 ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಜತೆಗೆ ವಿವಿಧ ಟ್ರೇಡ್‌ನಲ್ಲಿ ಐಟಿಐ ಪಾಸ್ ಮಾಡಿರಬೇಕು. ಸಂಬಳ: 25,000-59060 ರೂಪಾಯಿ

ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಸಣ್ಣ ರೈತರ ಖಾತೆಗೆ 2,000 ರೂಪಾಯಿ ಜಮಾ | ನಿಮಗೆ ಹಣ ಬಂದಿದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿ

ಆಯ್ಕೆಯ ವಿಧಾನ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಲಿಖಿತ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುವುದು. ಆಯ್ಕೆಯಾಗುವ ಅಭ್ಯರ್ಥಿ ಅಗತ್ಯವಿರುವ ಎಲ್ಲ ತರಬೇತಿಗೆ ಒಳಗಾಗಬೇಕು. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ದಾಖಲಾತಿ ಮತ್ತು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆ ಮಾಡಲಾಗುವುದು. ಪ್ರಶ್ನೆ ಪತ್ರಿಕೆ ಬಹು ಉತ್ತರಗಳನ್ನು ಹೊಂದಿರುವ ವಸ್ತುನಿಷ್ಠ ಮಾದರಿಯಲ್ಲಿರಲಿದೆ. ಪ್ರತಿ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕ ಇರಲಿದೆ. 100 ಅಂಕಗಳ ಪರೀಕ್ಷೆ ಆಗಿದ್ದು, ಪಠ್ಯಕ್ರಮವು ಸಾಮಾನ್ಯವಾಗಿ ಹುದ್ದೆಗಳಿಗೆ ಸೂಚಿಸಲಾದ ಶೈಕ್ಷಣಿಕ ಮಾನದಂಡಗಳು ಮತ್ತು ತಾಂತ್ರಿಕ ಅರ್ಹತೆಗಳಿಗೆ ಅನುಗುಣವಾಗಿರುತ್ತದೆ.

ಪರೀಕ್ಷೆ ದಿನಾಂಕ : 

  • ಸ್ಟೇಷನ್ ಕಂಟ್ರೋಲರ್ / ಟ್ರೆಟ್ರೈನ್  ಆಪರೇಟರ್ : 07-06-2023 (ಪೂರ್ವಾಹ್ನ)
  • ಸೆಕ್ಷನ್ ಇಂಜಿನಿಯರ್ : 07-06-2023 (ಅಪರಾಹ್ನ)
  • ಮೇಂಟೇನರ್ಸ್ : 08-06-2023 (ಪೂರ್ವಾಹ್ನ)

ಇದನ್ನೂ ಓದಿ: ಇಲ್ಲಿವೆ ಪಿಯುಸಿ ಪಾಸಾದವರಿಗೆ ಹೆಚ್ಚು ಸಂಬಳ ನೀಡುವ ಕೇಂದ್ರ ಸರ್ಕಾರಿ ಹುದ್ದೆಗಳು

ಪರೀಕ್ಷಾ ಶುಲ್ಕ : ಮೀಸಲಾತಿ ಅಭ್ಯರ್ಥಿಗಳಿಗೆ 590 ರೂಪಾಯಿ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 1180 ರೂಪಾಯಿ (ಶೇ.18 ಜಿಎಸ್‌ಟಿ) ಪರೀಕ್ಷಾ ಶುಲ್ಕ ಇರಲಿದೆ. ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ : ಇದೇ ಮಾರ್ಚ್ 22, 2023ರಂದು ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು; ಅಂದಿನಿAದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಏಪ್ರಿಲ್ 24, 2023 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 27-04-2023. ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸ್ಕ್ಯಾನ್ ಮಾಡಲಾದ ಫೋಟೋ, ಸಹಿಯನ್ನು ಅಪ್‌ಲೋಡ್ ಮಾಡಬೇಕು.

ಬೆಂಗಳೂರು ಮೆಟ್ರೋ ನಿಗಮದ ಖಾಲಿ ಹುದ್ದೆಗಳ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ನೇರವಾಗಿ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ: ಇ-ಮೇಲ್ ವಿಳಾಸ: [email protected]ಸಂಪರ್ಕಕ್ಕೆ:  080-22969400, 22969200

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

ಗ್ರಾಮ ಪಂಚಾಯತಿ 6,406 ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳ ನೇಮಕಾತಿ

ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿAgriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!