ಉದ್ಯೋಗ

ಬಿಎಂಟಿಸಿ 636 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ: SSLC, ITI, ಪದವೀಧರರಿಗೆ ಅವಕಾಶ | BMTC Recruitment 2023

WhatsApp Group Join Now
Telegram Group Join Now

BMTCಯಲ್ಲಿ 636 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, SSLC, ITI ಮತ್ತು  ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ, ತರಬೇತಿ ಭತ್ಯೆ, ಅರ್ಜಿ ಸಲ್ಲಿಕೆಯ ಮಾನದಂಡಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ಬಿಎಂಟಿಸಿ ಶಿಶಿಕ್ಷು ಕಾಯಿದೆ 1961 ಅಡಿಯಲ್ಲಿ ಒಟ್ಟು 636 ಹುದ್ದೆಗಳ ಭರ್ತಿಗೆ ಮುಂದಾಗಿದೆ. ಎಸ್‌ಎಸ್‌ಎಲ್‌ಸಿ, ಐಟಿಐ ಮತ್ತು  ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ತರಬೇತಿ ಅವಧಿ ಒಂದರಿAದ ಎರಡು ವರ್ಷಗಳಾಗಿದ್ದು, ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ತರಬೇತಿ ಭತ್ಯೆ ನೀಡಲಾಗುವುದು. ಅಭ್ಯರ್ಥಿಗಳನ್ನು ಮೀಸಲು ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಹುದ್ದೆಗಳ ವಿವರ:

ಪೂರ್ಣಾವಧಿ ಶಿಶಿಕ್ಷು ಹುದ್ದೆಗಳು

 1. ಮೆಕ್ಯಾನಿಕ್ ಡೀಸೆಲ್: 100
 2. ಫಿಟ್ಟರ್: 50
 3. ವೆಲ್ಡರ್: 50
 4. ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್: 40
 5. ಎಲೆಕ್ಟ್ರೀಷಿಯನ್: 100
 6. ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್: 60
 7. ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್: 150

ಈ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವಾ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದಲ್ಲಿ 2 ವರ್ಷ, ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಒಂದು ವರ್ಷ ತರಬೇತಿ ಅವಧಿ ಇರುತ್ತದೆ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

ಡಿಪ್ಲೋಮ ಶಿಶಿಕ್ಷು ಹುದ್ದೆಗಳು

 1. ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿ೦ಗ್: 05
 2. ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿ0ಗ್: 08
 3. ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್ / ಡಿಪ್ಲೋಮ ಇನ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ / ಡಿಪ್ಲೋಮ ಇನ್ ಇನ್ಫರ್ಮೇಷನ್ ಟೆಕ್ನಾಲಜಿ: 30

ಈ ಹುದ್ದೆಗಳ ತರಬೇತಿ ಅವಧಿ ಒಂದು ವರ್ಷವಾಗಿರುತ್ತದೆ.

ಪದವಿ ಶಿಶಿಕ್ಷು ಹುದ್ದೆಗಳು

 1. ಬ್ಯಾಚುಲರ್ ಆಫ್ ಇಂಜಿನಿಯರಿ೦ಗ್ (ಸಿವಿಲ್): 05
 2. ಬ್ಯಾಚುಲರ್ ಆಫ್ ಇಂಜಿನಿಯರಿ೦ಗ್ (ಎಲೆಕ್ಟ್ರಿಕಲ್): 08
 3. ಬ್ಯಾಚುಲರ್ ಆಫ್ ಇಂಜಿನಿಯರಿ೦ಗ್ – ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್  & ಕಮ್ಯುನಿಕೇಷನ್ / ಇನ್ಫರ್ಮೇಷನ್ ಟೆಕ್ನಾಲಜಿ / ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್: 30

ಈ ಹುದ್ದೆಗಳ ತರಬೇತಿ ಅವಧಿ ಒಂದು ವರ್ಷವಾಗಿರುತ್ತದೆ.

ಇದನ್ನೂ ಓದಿ: ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ವಯೋಮಿತಿ : ದಿನಾಂಕ: 15-03-2023 ರಂದು ಕನಿಷ್ಠ 16 ವರ್ಷ ತುಂಬಿರಬೇಕು ಮತ್ತು 30 ವರ್ಷ ಮೀರಿರಬಾರದು. ಶಿಶಿಕ್ಷು  ಕಾಯ್ದೆ 1961 ನಿಯಮಗಳ ಪ್ರಕಾರ ಪರಿಶಿಷ್ಠ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ 1:7 ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ 1:15ರ ಪ್ರಮಾಣದಲ್ಲಿ ಒಟ್ಟು ಹುದ್ದೆಗಳಲ್ಲಿ ವಯೋಮಿತಿ ಮೀಸಲಾತಿ ಕಾಯ್ದಿರಿಸಲಾಗಿದೆ.

ತರಬೇತಿ ಭತ್ಯೆ: ಆಯ್ಕೆಗೊಂಡ ಶಿಶಿಕ್ಷು  ಆರ್ಭ್ಯಥಿಗಳಿಗೆ ಈ ಕೆಳಕಂಡ೦ತೆ ಮಾಸಿಕ ತರಬೇತಿ ಭತ್ಯೆ ನೀಡಲಾಗುವುದು.

 1. ಎಸ್‌ಎಸ್‌ಎಲ್‌ಸಿ ತೇರ್ಗಡೆಹೊಂದಿರುವ ಅಭ್ಯರ್ಥಿಗಳಿಗೆ 6,000 ರೂಪಾಯಿ
 2. ಐಟಿಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ 7,000 ರೂಪಾಯಿ
 3. ಡಿಪ್ಲೋಮ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ 8,000 ರೂಪಾಯಿ
 4. ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ 9,000 ರೂಪಾಯಿ

ಇದನ್ನೂ ಓದಿ: 3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಅರ್ಜಿ ಸಲ್ಲಿಕೆ ಬೇಕಾಗುವ ದಾಖಲಾತಿಗಳು:

 • ಶಿಶಿಕ್ಷು  ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಭ್ಯರ್ಥಿಯ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಅಪೇಕ್ಷಿತ ವೃತ್ತಿಯ ಮಾಹಿತಿಗಳನ್ನೊಳಗೊಂಡ ಹಾಗೂ ಸ್ಪಷ್ಟವಾಗಿ ಬೆರಳಚ್ಚುಗೊಳಿಸಿದ ಅರ್ಜಿ
 • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಮೂಲ ಪ್ರತಿ
 • ಐಟಿಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿ
 • ಡಿಪ್ಲೋಮ ಅಂಕಪಟ್ಟಿಗಳು
 • ಪದವಿ ಅಂಕ ಪಟ್ಟಿಗಳು
 • ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
 • ಆಧಾರ್ ಕಾರ್ಡ್
 • ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ
 • ಇತ್ತೀಚಿನ 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ಅರ್ಜಿ ಸಲ್ಲಿಕೆ ಹೇಗೆ?

ಮೇಲ್ಕಾಣಿಸಿದ ಎಲ್ಲ ದಾಖಲಾತಿಗಳೊಂದಿಗೆ ಮಾರ್ಚ್ 15, 2023 ರಂದು ಬೆಳಿಗ್ಗೆ 10.30 ಗಂಟೆಯಿ0ದ 5.00 ಗಂಟೆಯೊಳಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ ಪಕ್ಕ, ಬೆಂಗಳೂರು-560027, ಇಲ್ಲಿಗೆ ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು. ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರಬೇಕು. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆ ನೇಮಕ | 10 ಮತ್ತು 8ನೇ ತರಗತಿ ಪಾಸಾದವರಿಗೆ ಅವಕಾಶ | ಸರಕಾರದ ತುರ್ತು ಆದೇ

ಸೂಚನೆಗಳು

 • ಅಭ್ಯರ್ಥಿಗಳು ಈಗಾಗಲೇ ಶಿಶಿಕ್ಷು ಕಾಯ್ದೆ 1961 ರನ್ವಯ ಶಿಶಿಕ್ಷÄ ತರಬೇತಿ ಪಡೆದಿರುವವರು ಪುನಃ ಅರ್ಜಿ ಸಲ್ಲಿಸಲು ಅರ್ಹರಲ್ಲ.
 • ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆಯಲ್ಲಿ ಅವರಿಗೆ ಯಾವುದೇ ರೀತಿಯ ನೇಮಕಾತಿ ಮಾಡಿಕೊಳ್ಳುವ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಮತ್ತು ತರಬೇತಿ ಪಡೆಯಲು ಅರ್ಹತೆ ಪಡೆದವರು ಶಿಶಿಕ್ಷು ಕಾಯ್ದೆ 1961೧ರ ನಿಯಮಗಳು, ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತಾರೆ.
 • ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು.
 • ಒ೦ದಕ್ಕಿ೦ತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಭ್ಯಥಿಗಳು ಪ್ರತಿಯೊಂದು ವೃತ್ತಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆಯ್ಕೆಗೆ ಸಂಬ೦ಧಿಸಿದ೦ತೆ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
 • ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್ https://mybmtc.karnataka.gov.in/ನಲ್ಲಿ ಪಡೆಯಬಹುದಾಗಿದೆ.

ಬಿಎಂಟಿಸಿಯಲ್ಲಿ 636 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಹಾಗೂ ಅರ್ಜಿ ಫಾರ್ಮ್ಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಎಂಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!