ಆರೋಗ್ಯ ಮತ್ತು ಫಿಟ್ನೆಸ್ಸರಕಾರಿ ಯೋಜನೆ

Cashless Treatment for Insurers : ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಸಿಗುತ್ತೆ ಹಣವಿಲ್ಲದೇ ಚಿಕಿತ್ಸೆ | ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

WhatsApp Group Join Now
Telegram Group Join Now

Cashless Treatment for Insurers : ಗಣರಾಜ್ಯೋತ್ಸವದ ಮುನ್ನಾ ದಿನವಷ್ಟೇ ಈ ಶುಭ ಸುದ್ದಿ ಪ್ರಕಟವಾಗಿದೆ. ಇನ್ಮುಂದೆ ವಿಮಾದಾರರು ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಹಣವಿಲ್ಲದೇ ಚಿಕಿತ್ಸೆ ಪಡೆಯಬಹುದು. ನಿನ್ನೆ, ಜನವರಿ 25, 2024ರಂದು ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ವಿಮಾದಾರರಿಗೆ ಈ ಬಂಪರ್ ಸುದ್ದಿ ನೀಡಿವೆ.

ಪಾಲಿಸಿದಾರರು ಯಾವುದಕ್ಕೂ ಹಣ ಪಾವತಿಸದೆ ಸಂಪೂರ್ಣ ಉಚಿತವಾಗಿ ಆಸ್ಪತ್ರೆಗೆ ದಾಖಲಾಗಬಹುದು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ದಿನದಂದು ವಿಮಾ ಕಂಪನಿಗಳು ಬಿಲ್ ಪಾವತಿಸುತ್ತವೆ. ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (General Insurance Council) ಎಲ್ಲಾ ವಿಮಾ ಕಂಪನಿಗಳೊ೦ದಿಗೆ ಸಮಾಲೋಚನೆ ನಡೆಸಿ ಈ ಯೋಜನೆಯನ್ನು ಪ್ರಾರಂಭಿಸಿದ್ದು; ನಿನ್ನೆಯಿಂದಲೇ ಈ ಸೌಲಭ್ಯ ಜಾರಿಯಾಗಿದೆ.

ಇದನ್ನೂ ಓದಿ: Pension Schemes New Rules : ಇನ್ಮುಂದೆ ವಾರ್ಷಿಕ 32,000 ರೂಪಾಯಿ ಆದಾಯ ಇರುವವರಿಗಷ್ಟೇ ವೃದ್ಧಾಪ್ಯ ವೇತನ , ವಿಧವಾ ವೇತನ ಸಿಗಲಿದೆ | ಸರಕಾರದ ಹೊಸ ರೂಲ್ಸ್

ಈ ಸೌಲಭ್ಯ ಯಾರಿಗೆಲ್ಲ ಅನ್ವಯವಾಗಲಿದೆ?

ಯಾವುದೇ ರೀತಿಯ ವಿಮಾ ಪಾಲಸಿ ಹೊಂದಿರುವ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಕೇವಲ ಆರೋಗ್ಯ ವಿಮಾ ಪಾಲಸಿದಾರರು ಮಾತ್ರವಲ್ಲದೇ ಸಾಮಾನ್ಯ ವಿಮಾ ಪಾಲಸಿದಾರರು ಕೂಡ ‘ಎಲ್ಲೆಡೆ ನಗದು ರಹಿತ ಸೌಲಭ್ಯ’ (Cashless Everywhere System) ವ್ಯವಸ್ಥೆಯಡಿ ತಾವು ಆಯ್ಕೆ ಮಾಡಿಕೊಂಡ ಯಾವುದೇ ಆಸ್ಪತ್ರೆಯಲ್ಲಿ ಹಣವಿಲ್ಲದೇ ಚಿಕಿತ್ಸೆ ಪಡೆಯಬಹುದು.

ಯಾವೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು?

ಸದ್ಯಕ್ಕೆ ವಿಮಾ ಕಂಪನಿಯೊ೦ದಿಗೆ ಟೈ-ಅಪ್ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ‘ನಗದು ರಹಿತ’ ಚಿಕಿತ್ಸಾ ಸೌಲಭ್ಯವಿದೆ. ಆಕಸ್ಮಾತ್ ಪಾಲಿಸಿದಾರರು ಹೀಗೆ ಟೈ-ಅಪ್ ಹೊಂದಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾದರೆ ಆಗ ನಗದು ರಹಿತ ಸೌಲಭ್ಯ ಸಿಗುವುದಿಲ್ಲ. ಡಿಸ್ಚಾರ್ಜ್ ಸಮಯದಲ್ಲಿ ಗ್ರಾಹಕರು ಸ್ವತಃ ಹಣ ಪಾವತಿಸಿ ನಂತರ ಆ ಹಣ ವಾಪಾಸು ಪಡೆಯಲು ಕ್ಲೈಮ್ ಸಲ್ಲಿಸಬೇಕಾಗುತ್ತದೆ.

ಈಗ ‘ಎಲ್ಲೆಡೆ ನಗದು ರಹಿತ ಸೌಲಭ್ಯ’ ಅಡಿಯಲ್ಲಿ ಪಾಲಿಸಿದಾರರು ತಾವು ಆಯ್ಕೆ ಮಾಡಿಕೊಂಡ ಯಾವುದೇ ಆಸ್ಪತ್ರೆಯಲ್ಲಿ ಹಣವಿಲ್ಲದೇ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವೇಳೆ ಚಿಕಿತ್ಸೆ ಪಡೆದ ಆಸ್ಪತ್ರೆಯು ವಿಮಾ ಕಂಪನಿಯ ಜಾಲದಲ್ಲಿ ಇಲ್ಲದಿದ್ದರೂ ಕೂಡ ‘ಕ್ಯಾಶ್‌ಲೆಸ್ ಎವೆರಿವೇರ್’ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಹಣವಿಲ್ಲದೇ ಚಿಕಿತ್ಸೆ ಪಡೆಯಲು ಏನು ಮಾಡಬೇಕು?

ಪ್ರಥಮತಃ ಗ್ರಾಹಕರು ವಿಮಾ ಪಾಲಸಿದಾರರಾಗಿರಬೇಕು. ಆರೋಗ್ಯ ವಿಮೆ ಅಥವಾ ಸಾಮಾನ್ಯ ವಿಮೆ ಸೇರಿದಂತೆ ಯಾವುದೇ ರೀತಿಯ ವಿಮೆ ಹೊಂದಿರುವ ಗ್ರಾಹಕರು ಆಸ್ಪತ್ರೆಗಳಿಗೆ ದಾಖಲಾಗುವ ಕನಿಷ್ಠ 48 ಗಂಟೆಗಳ ಮೊದಲು ವಿಮಾ ಕಂಪನಿಗೆ ಈ ಬಗ್ಗೆ ಮಾಹಿತಿ ನೀಡಬೇಕು.

ಒಂದು ದಿನ ಮೊದಲು ಗ್ರಾಹಕರು ತಮಗೆ ಅನ್ವಯವಾಗಿರುವ ವಿಮಾ ಕಂಪನಿಗೆ ಆಸ್ಪತ್ರೆ ದಾಖಲಾತಿ ವಿವರವನ್ನು ಒದಗಿಸಿದರೆ ಪಾಲಿಸಿಯ ನಿಯಮಗಳ ಪ್ರಕಾರ ಕ್ಲೈಮ್ ಸ್ವೀಕಾರಾರ್ಹವಾಗುತ್ತದೆ. ಬಳಿಕ ವಿಮಾ ಕಂಪನಿಯ ನಿರ್ವಹಣಾ ಮಾರ್ಗಸೂಚಿಗಳ ಪ್ರಕಾರ ನಗದು ರಹಿತ ಸೌಲಭ್ಯ ಸಿಗುತ್ತದೆ ಎಂದು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಹೇಳಿದೆ.

Cashless Treatment for Insurers

ಇದನ್ನೂ ಓದಿ: BPNL Recruitment 2024 : ಪಶುಪಾಲನಾ ನಿಗಮದಲ್ಲಿ SSLC, PUC ಪಾಸಾದವರಿಗೆ 1884 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ…

WCD Karnataka Anganwadi Recruitment 2024 : ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!