ಪಶುಪಾಲನೆ

ಹಾಕಿಸಿದರೆ ಜಾನುವಾರುಗಳಿಗೆ ಲಸಿಕೆ, ಅಧಿಕವಾಗುವುದು ರೈತರ ಗಳಿಕೆ | Cattle vaccination

WhatsApp Group Join Now
Telegram Group Join Now

ಹಾಲು ಕೊಡುವ ಜಾನುವಾರುಗಳಿಗೆ ಲಸಿಕೆ ಹಾಕಿಸಿದರೆ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಪುರಾತನ ನಂಬಿಕೆಯೊಂದು ರೈತ ವಲಯದಲ್ಲಿದೆ. ನಿಜ, ಲಸಿಕೆ ಹಾಕಿಸುವುದರಿಂದ ಕೊಂಚ ಹಾಲಿನ ಪ್ರಮಾಣ ಕಮ್ಮಿಯಾಗಬಹುದು. ಆದರೆ ಜೀವದಾಯಿ ಲಸಿಕೆಗಳಿಂದಲೇ ಜಾನುವಾರುಗಳನ್ನು ವಂಚಿತವಾಗಿಸಿದರೆ ಆಗುವ ನಷ್ಟ ಅಷ್ಟಿಷ್ಟಲ್ಲ.

ಜಾನುವಾರುಗಳಿಗೆ ಕಾಲಕಾಲಕ್ಕೆ ಸೂಕ್ತ ಲಸಿಕೆಗಳನ್ನು ಹಾಕಿಸುವುದರಿಂದ ಕೃಷಿಕನ ಗಳಿಕೆ ಹೆಚ್ಚಾಗುತ್ತದೆಯೇ ವಿನಃ ಕಮ್ಮಿಯಾಗುವ ಮಾತೇ ಇಲ್ಲ. ಇವತ್ತು ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಕಾಲು ಮತ್ತು ಬಾಯಿ ರೋಗ, ರೇಬಿಸ್ ರೋಗ, ಕುರಿ ಸಿಡುಬು ರೋಗ ಸೇರಿದಂತೆ ಹಲವಾರು ರೋಗಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ. ಇಂತಹ ಮಹಾಮಾರಿ ರೋಗಗಳ ನಿಯಂತ್ರಣಕ್ಕೆ ಲಸಿಕೆ ಒಂದೇ ಪರಿಹಾರ. ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡಿಕೊಂಡರೆ ರೈತರು ಪಶುಪಾಲನೆಯಲ್ಲಿ ಅಧಿಕ ಲಾಭ ಪಡೆಯಬಹುದಲ್ಲದೆ ರೋಗಗಳ ಚಿಕಿತ್ಸೆಗಾಗಿ ಮಾಡುವ ಅನಗತ್ಯ ಖರ್ಚನ್ನೂ ತಪ್ಪಿಸಬಹುದು.

ಈ ಬಗ್ಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಪ್ರತೀ ವರ್ಷ ಏಪ್ರಿಲ್ 27ರ ಕೊನೆಯ ಶನಿವಾರವಾರ ಜಗತ್ತಿನಾದ್ಯಾಂತ ಆಚರಿಸಲ್ಪಡುವ ವಿಶ್ವ ಪಶು ವೈದ್ಯಕೀಯ ದಿನಾಚರಣೆಗೆ ಅದರದೇ ಆದ ಮಹತ್ವವಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಪಶುಪಾಲನೆಯು ಒಂದು ಪ್ರಮುಖ ಉದ್ಯೋಗವಾಗಿದ್ದು, ಪಶುವೈದ್ಯ ಸೇವೆಯು ಇದರ ಆಧಾರ ಸ್ಥಂಭ. ಮನುಷ್ಯರಂತೆ ಪಶುಗಳು ಕೂಡ ಹಲವಾರು ರೋಗಗಳಿಗೆ ತುತ್ತಾಗುತ್ತವೆ. ಈ ರೋಗಗಳಿಂದ ಮುನ್ನೆಚರಿಕೆ ಕ್ರಮವಾಗಿ ಜಾನುವಾರುಗಳನ್ನು ರಕ್ಷಿಸಲು ಲಸಿಕೆಗಳು ರಾಮಬಾಣವಾಗಿವೆ. ಸತತ ಲಸಿಕಾ ಕಾರ್ಯಕ್ರಮಗಳಿಂದ ಇಂದು ನಮ್ಮ ದೇಶವು ದೊಡ್ಡರೋಗ ಎಂಬ ಜಾನುವಾರುಗಳ ಮಹಾಮಾರಿಯಿಂದ ಮುಕ್ತವಾಗಿದೆ.

ಇದನ್ನೂ ಓದಿ: ಆಧಾರ್-ಪ್ಯಾನ್ ಜೋಡಣೆಗೆ ಜೂನ್ 30ರ ವರೆಗೂ ಅವಕಾಶ | ಅಷ್ಟರೊಳಗೆ ಮೊಬೈಲ್‌ನಲ್ಲೇ ಮಾಡಿ ಆಧಾರ್-ಪ್ಯಾನ್ ಲಿಂಕ್

2011ರಿಂದ ಕಾಲು ಮತ್ತು ಬಾಯಿ ರೋಗ ನಿರ್ಮೂಲನೆ ಮಾಡಲು ಆರು ತಿಂಗಳಿಗೊಮ್ಮೆ ಲಸಿಕಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕೋಳಿಗಳಲ್ಲಿ ಮಾರೆಕ್ಸ್ ಹಾಗೂ ರಾಣಿಖೇತ ರೋಗಗಳ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. ಕುರಿ ಹಾಗೂ ಆಡುಗಳಲ್ಲಿ ಕರಳು ಬೇನೆ, ಹಿರೇಬೇನೆ, ಗಂಟಲು ಬೇನೆ ಮತ್ತು ರೋಗೋದ್ರೇಕವಿರುವ ಪ್ರದೇಶಗಳಲ್ಲಿ ನೆರಡಿ ರೋಗ, ನೀಲಿ ನಾಲಿಗೆ ರೋಗದ ವಿರುದ್ದ ಲಸಿಕೆ ಹಾಕುವ ಮೂಲಕ ರಕ್ಷಣೆ ಮಾಡಲಾಗುತ್ತಿದೆ.

ದನ, ಎತ್ತುಗಳಿಗೆ ಆರು ತಿಂಗಳಿಗೊಮ್ಮೆ ಕಾಲು ಮತ್ತು ಬಾಯಿ ರೋಗದ ಲಸಿಕೆ, ವರ್ಷಕ್ಕೊಮ್ಮೆ ಮಳೆಗಾಲದ ಆರಂಭದಲ್ಲಿ ಛಪ್ಪೆ ರೋಗದ ವಿರುದ್ದ ಲಸಿಕೆ ಹಾಕಲಾಗುತ್ತಿದೆ. ಎಮ್ಮೆಗಳಿಗೆ ವರ್ಷಕ್ಕೊಮ್ಮೆ ಗಂಟಲು ಬೇನೆ ರೋಗದ ವಿರುದ್ದ ಲಸಿಕೆ ಹಾಗೂ ಆರು ತಿಂಗಳಿಗೊಮ್ಮೆ ಕಾಲು ಮತ್ತು ಬಾಯಿ ರೋಗದ ವಿರುದ್ದ ಲಸಿಕೆ ಹಾಕಲಾಗುತ್ತಿದೆ.

ಇದನ್ನೂ ಓದಿ: SSLC ಅಭ್ಯರ್ಥಿಗಳಿಂದ ಪೊಲೀಸ್ ಪೇದೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಮಹಿಳೆಯರಿಗೂ ಅವಕಾಶ, 69,100 ಸಂಬಳ

ಲಸಿಕೆ ಹಾಕಿಸುವಾಗ ರೈತರು ಅನುಸರಿಸಬೇಕಾದ ಕ್ರಮಗಳು
  • ಜಂತುನಾಶಕ ಔಷಧಿ ಕುಡಿಸಿದ ನಂತರ ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಲಸಿಕೆ ಮಾಡಿಸಿದರೆ ಗಡ್ಡೆಗಳಾಗುತ್ತವೆ ಎಂಬ ಕಾರಣದಿಂದ ಲಸಿಕೆಯನ್ನು ನಿರಾಕರಿಸಬೇಡಿ. ಕೆಲಸ ಮಾಡಿ ದಣಿದು ಬಂದ ರಾಸುಗಳಿಗೆ ನೀರನ್ನು ಕುಡಿಸಿ ಸ್ವಲ್ಪ ವಿಶ್ರಾಂತಿ ನೀಡಿ ನಂತರ ಲಸಿಕೆ ಹಾಕಿಸಿ. ನಿಮ್ಮ ಊರಿನಲ್ಲಿ ಪಶು ಪಾಲನೆ ಇಲಾಖೆಯ ಲಸಿಕಾ ಶಿಬಿರಗಳಲ್ಲಿ ನಿಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ.
  • ರೋಗಗ್ರಸ್ಥ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಡಿ. ಆಯಾ ಋತುವಿಗನುಗುಣವಾಗಿ ನಿಮ್ಮ ಹತ್ತಿರದ ಪಶು ವೈದ್ಯ ಸಂಸ್ಥೆಗೆ ಭೇಟಿ ನೀಡಿ ನಿಮ್ಮ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸಿಕೊಳ್ಳಿ.
  • ರೇಬಿಸ್ ಲಸಿಕೆಯನ್ನು ಹುಚ್ಚು ನಾಯಿ ಕಡಿತದ ನಂತರ ಜಾನುವಾರುಗಳಿಗೆ ಹಾಕಿಸುವ ಮೂಲಕ ರೇಬಿಸ್ ರೋಗವನ್ನು ತಡೆಗಟ್ಟಬಹುದಾಗಿದೆ.
  • ಲಸಿಕೆ ಹಾಕಿದಾಗ ಹಾಲಿನ ಇಳುವರಿ ಸ್ವಲ್ಪ ಕಡಿಮೆಯಾಗಿತ್ತದೆ ನಂತರ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಹಾಕಿಸದೇ ಇದ್ದರೆ ಮುಂದೆ ಜಾನುವಾರುಗಳು ರೋಗಕ್ಕೆ ಬಲಿಯಾಗುವ ಸಂಭವವಿರುತ್ತದೆ. ಆದರಿಂದ ತಪ್ಪದೆ ಲಸಿಕೆ ಹಾಕಿಸಿ.
  • ತಂಪಾದ ಮೋಡ ಕವಿದ ಹಾಗೂ ಮಳೆ ಬರುವ ಸಮಯದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಬೇಡ. ಮುಂಜಾನೆ ಹಾಗೂ ಸಾಯಂಕಾಲದ ಅವಧಿಯಲ್ಲಿ ಮಾತ್ರ ಲಸಿಕೆ ಹಾಕಿಸಬೇಕು, ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಲಸಿಕೆ ಹಾಕಿಸುವುದು ಬೇಡ.
  • ತುಂಬು ಗರ್ಭಧರಿಸಿದ, ರೋಗಗ್ರಸ್ಥ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸು ಹೊಂದಿರುವ ಜಾನುವಾರುಗಳಿಗೆ ಲಸಿಕೆ ಹಾಕುವುದು ಬೇಡ. ಅದೇ ರೀತಿ ರೋಗೋದ್ರೇಕವಿರುವ ಪ್ರದೇಶದಲ್ಲಿ ರೋಗದ ಲಕ್ಷಣಗಳನ್ನು ತೋರಿಸುವ ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಬೇಡ.
  • ಆದಷ್ಟು ಕುತ್ತಿಗೆ ಭಾಗದಲ್ಲಿ ಲಸಿಕೆ ಹಾಕಿಸುವುದು ಉತ್ತಮ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಕಳೆದ ನಾಲ್ಕು ವರ್ಷಗಳಿಂದ ರೋಗೋದ್ರೇಕದ ಇತಿಹಾಸ ಹೊಂದಿರದ ರೋಗದ ವಿರುದ್ಧ ಲಸಿಕೆ ಹಾಕಿಸುವುದುಬೇಡ.

ವೈದ್ಯರು ಕರುಗಳ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಯಾ ಪ್ರದೇಶದ ಹವಾಮಾನ, ಪರಿಸರ ಹಾಗೂ ರೋಗ್ರೋದ್ರೇಕದ           ಇತಿಹಾಸಗಳನ್ನು ಅಧ್ಯಯನ ಮಾಡಿ ಲಸಿಕಾ ಕಾರ್ಯಕ್ರಮದ ಪಟ್ಟಿ ಸಿದ್ಧಪಡಿಸಬೇಕು. ಸ್ವೀಕರಿಸಿದ ಲಸಿಕೆ ದಾಸ್ತಾನು ಶೀತ ಕವಚದಲ್ಲಿ ಸಂಗ್ರಹಿಸಲ್ಪಟ್ಟಿದೆಯೇ ಪರೀಕ್ಷಿಸಬೇಕು. ಲಸಿಕಾ ದಾಸ್ತಾನುವಿನ ಬ್ಯಾಚ್ ಸಂಖ್ಯೆ ಹಾಗೂ ಲಸಿಕಾ ಅವಧಿ ಮುಗಿಯುವ ದಿನಾಂಕದ ಕೂಡ ಪರೀಕ್ಷಿಸುವುದು ಕ್ಷೇಮಕರ.

ತಾಂತ್ರಿಕ ಮಾಹಿತಿ: ಡಾ: ಅಣ್ಣಾರಾವ ಪಾಟೀಲ್, ಹಿರಿಯ ಪಶುವೈದ್ಯಾಧಿಕಾರಿಗಳು

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

ಗ್ರಾಮ ಪಂಚಾಯತಿ 6,406 ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳ ನೇಮಕಾತಿ

ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿAgriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!