ಉದ್ಯೋಗ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | CISF Recruitment 2022

WhatsApp Group Join Now
Telegram Group Join Now

SSLC ಪಾಸಾದ ಅಭ್ಯರ್ಥಿಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದು. ಹುದ್ದೆಗಳ ವಿವರ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಲಿಂಕ್ ಹಾಗೂ ಅಧಿಕೃತ ಅಧಿಸೂಚನೆ ಕುರಿತ ಮಾಹಿತಿ ಇಲ್ಲಿದೆ… 

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್) 787 ಕಾನ್ಸ್‌ಟೇಬಲ್ ಹಾಗೂ ಟ್ರೇಡ್ಸ್‌ಮನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯೋಗ್ಯ ವಿದ್ಯಾರ್ಹತೆಯುಳ್ಳ ಯುವಕ / ಯುವತಿಯರು ಇದೇ ಡಿಸೆಂಬರ್ 20, 2022ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಅಡುಗೆ-304, ಚಮ್ಮಾರ-7, ಟೈಲರ್-27, ಕ್ಷೌರಿಕ-109, ವಾಷರ್ ಮ್ಯಾನ್-118, ಸ್ವೀಪರ್-199, ಪೇಂಟರ್-1, ಮೇಸನ್-12, ಪ್ಲಂಬರ್-4, ಮಾಲಿ-3, ವೆಲ್ಡರ್-3 ಹುದ್ದೆಗಳು ಸೇರಿ ಒಟ್ಟು 787 ಹುದ್ದೆಗಳಿಗೆ ಪುರುಷ ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಶೈಕ್ಷಣಿಕ ಅರ್ಹತೆ: ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಆಗಸ್ಟ್ 01, 2022ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 23 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳಿಗೆ 03 ವರ್ಷಗಳು, ST/SC ಅಭ್ಯರ್ಥಿಗಳಿಗೆ 05 ವರ್ಷಗಳು ಹಾಗೂ ಮಾಜಿ ಸೈನಿಕರಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ

ವೇತನ ಶ್ರೇಣಿ: ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್) ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ತಕ್ಕಂತೆ ಪ್ರತಿ ತಿಂಗಳು ₹21,700 ರಿಂದ ₹69,100 ರೂಪಾಯಿ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ: ಸಾಮಾನ್ಯ, ಹಿಂದುಳಿದ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಿದ್ದು; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ, ಸಹಿಷ್ಣುತಾ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಬೇಕಾದ ದಾಖಲೆಗಳು: ಅಭ್ಯರ್ಥಿಯ ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ದಾಖಲೆ, ಪಾಸ್‌ಪೋರ್ಟ್ ಅಳತೆ ಭಾವಚಿತ್ರ. ಇವುಗಳ ಜೊತೆಗೆ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತಿಸಿ.

ಇದನ್ನೂ ಓದಿ: ಸಣ್ಣ ವ್ಯಾಪಾರಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ : ಇಲ್ಲಿ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ದಿನಾಂಕ: ಇದೇ ನವೆಂಬರ್ 21, 2022ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು; ಡಿಸೆಂಬರ್ 20, 2022 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಕೆಳಗೆ ನೀಡಿರುವ ಲಿಂಕ್ ಮೂಲಕ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಈ ಹುದ್ದೆಗಳಿಗೆ ನೀವು ಅರ್ಹರಿದ್ದೀರಾ ಎಂಬುವುದನ್ನು ಖಚಿತ ಮಾಡಿಕೊಳ್ಳಿ. ನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಇತ್ತೀಚಿನ ಭಾವಚಿತ್ರ,  ಅಗತ್ಯ ಪ್ರಮಾಣ ಪತ್ರಗಳು, ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.

ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (ಸಿಐಎಸ್‌ಎಫ್) ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಉದ್ಯೋಗ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

—————————————————————————

ಇವುಗಳನ್ನೂ ಓದಿ 👇

ಹಸುವಿನಿಂದ ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ವರ್ಗಾವಣೆ ಮಾಡಬಲ್ಲ ಏಕಮಾತ್ರ ಮಾಧ್ಯಮ ಗಿಣ್ಣದ ಹಾಲು. ಇಂತಹ ಗಿಣ್ಣದ ಹಾಲನ್ನು ಸದ್ಭಳಕೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಲಾಭ ಗಳಿಕೆ ಹೇಗೆ? ಕರುವಿನ ಬೆಳವಣಿಗೆಗೆ ಗಿಣ್ಣದ ಹಾಲಿನಂದಾಗುವ ಅನುಕೂಲಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸುವಂತೆ ಕೃಷಿ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಯಾವಾಗ ಬರಲಿದೆ? ಎಷ್ಟು ಬರಲಿದೆ? ದಾಖಲೆ ಪರಿಶೀಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಪಶು ಆಹಾರ ತಯಾರಿಕೆಗಾಗಿ ಕೆಎಂಎಫ್ ವಿವಿಧ ಜಿಲ್ಲೆಗಳಿಂದ ಬೆಂಬಲ ಬೆಲೆಯೊಂದಿಗೆ ಮೆಕ್ಕೆಜೋಳ ಖರೀದಿಸುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಈ ಅವಕಾಶವನ್ನು ಬಳಸಿಕೊಳ್ಳಿ. ಮೆಕ್ಕೆಜೋಳ ಖದೀರಿ ಎಲ್ಲೆಲ್ಲಿ ನಡೆಯಲಿದೆ? ಖರೀದಿ ಪ್ರಕ್ರಿಯೆ ಹೇಗೆ? ಎಷ್ಟು ಬೆಲೆ ಸಿಗಲಿದೆ? ರೈತರು ನೋಂದಣಿ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಶೀಘ್ರದಲ್ಲಿಯೇ ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅಧಿಕೃತ ಹಕ್ಕು ಪತ್ರಗಳನ್ನು ನೀಡಲು ಸರಕಾರ ಮುಂದಾಗಿದೆ. ಈ ಪಟ್ಟಿಯಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆ, ತಾಲ್ಲೂಕುಗಳು ಮೊದಲ ಸಾಲಿನಲ್ಲಿವೆ? ಈ ಜಿಲ್ಲೆಯ ದಾಖಲೆರಹಿತ ವಸತಿ ಹೊಂದಿರುವ ಜನ ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಕಳೆದ ಮೂರು ವರ್ಷಗಳಿಂದ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಗದೆ ಲಕ್ಷಾಂತರ ಜನ ಪರಿತಪಿಸುತ್ತಿದ್ದಾರೆ. ಹಾಗಾದರೆ ಇವರಿಗೆಲ್ಲ ಹೊಸ ರೇಷನ್ ಕಾರ್ಡ್ ಯಾವಾಗ ಸಿಗಲಿದೆ? ಈ ವಿಳಂಬಕ್ಕೆ ಕಾರಣವೇನು? ರೇಷನ್ ಕಾರ್ಡ್ ಸಿಗದೇ ಬಡ ಜನರಿಗೆ ಆಗುತ್ತಿರುವ ತೊಂದರೆಗಳೇನು? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಕೋಳಿ ಸಾಕಣೆ ರೈತರಿಗೆ ಏಕ ಕಾಲಕ್ಕೆ ಸರಕಾರ ಹಲವು ಶುಭ ಸುದ್ದಿಯನ್ನು ನೀಡಿದೆ. ಕೋಳಿ ಸಾಕಣೆಗೆ ಬಳಕೆಯಾಗುವ ಜಮೀನಿಗೆ ಭೂ ಪರಿವರ್ತನೆ ವಿನಾಯಿತಿ, ವಿಮಾ ಸೌಲಭ್ಯದ ಭರವಸೆ ಹಾಗೂ ಗ್ರಾಮೀಣ ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕೋಳಿ ಸಾಕಣೆ ರೈತರಿಗೆ ಸಿಗುವ ಸರಕಾರಿ ಸೌಲಭ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!