ಉದ್ಯೋಗ

PUC ಅಭ್ಯರ್ಥಿಗಳಿಂದ ಕೇಂದ್ರ ರೈಲ್ವೆಯಲ್ಲಿ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನ | Central Railway Recruitment 2023

WhatsApp Group Join Now
Telegram Group Join Now

ಕೇಂದ್ರ ರೈಲ್ವೆಯು ಪಿಯುಸಿ, ಐಟಿಐ ವಿದ್ಯಾರ್ಹತೆಯಳ್ಳ ಅಭ್ಯರ್ಥಿಗಳು ಖಾಲಿ ಇರುವ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಅರ್ಹತೆ, ಅಧಿಕೃತ ನೋಟಿಫಿಕೇಷನ್, ಅರ್ಜಿ ಸಲ್ಲಿಕೆ ಲಿಂಕ್, ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ…

ಕೇಂದ್ರ ರೈಲ್ವೆಯು ಖಾಲಿ ಇರುವ 2,422 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಸಿ) ಡಿಸೆಂಬರ್ 15, 2022ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದು; ಅಪ್ರೆಂಟಿಸ್ ಆಕ್ಟ್ 1961ರಡಿ ಕೇಂದ್ರ ರೈಲ್ವೆಯ ವಿವಿಧ ಘಟಕಗಳಲ್ಲಿ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಹ ಮತ್ತು ಆಸಕ್ತ ಪಿಯುಸಿ, ಐಟಿಐ ವಿದ್ಯಾರ್ಹತೆಯಳ್ಳ ಅಭ್ಯರ್ಥಿಗಳು ಜನವರಿ 15, 2023ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  1. ಮುಂಬೈ ಕ್ಲಸ್ಟರ್: 1,659
  2. ಭೂಸಾವಲ್ ಕ್ಲಸ್ಟರ್: 418
  3. ಪುಣೆ ಕ್ಲಸ್ಟರ್: 152
  4. ನಾಗ್ಪುರ ಕ್ಲಸ್ಟರ್: 114
  5. ಸೊಲ್ಲಾಪುರ ಕ್ಲಸ್ಟರ್: 79

1. ಮುಂಬೈ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು

  • ಕ್ಯಾರಿಯೇಟ್ ಅಂಡ್ ವ್ಯಾಗನ್ (ಕೋಚಿಂಗ್) : 258
  • ಕಲ್ಯಾಣ್ ಡೀಸೆಲ್ ಶೆಡ್: 50
  • ಕರ್ಲಾ ಡೀಸೆಲ್ ಶೆಡ್: 60
  • ಸೀನಿಯರ್ ಡಿಇಇ (ಟಿಆರ್‌ಎಸ್) ಕಲ್ಯಾಣ್: 179
  • ಸೀನಿಯರ್ ಡಿಇಇ (ಟಿಆರ್‌ಎಸ್) ಕರ್ಲಾ: 192
  • ಪೆರೇಲ್ ವರ್ಕ್‌ಶಾಪ್: 313
  • ಮಾಥುಂಗ ವರ್ಕ್‌ಶಾಪ್: 547
  • ಎಸ್ & ಟಿ ವರ್ಕ್‌ಶಾಪ್, ಬೈಕುಲ್ಲಾ: 60

2. ಭುಸವಾಲ್ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು

  • ಕ್ಯಾರಿಯೇಟ್ & ವ್ಯಾಗನ್ ಡೆಪಾಟ್: 122
  • ಇಲೆಕ್ಟ್ರಿಕ್ ಲೊಕೊ ಶೆಡ್, ಭುಸವಾಲ್: 80
  • ಇಲೆಕ್ಟ್ರಿಕ್ ಲೋಕೋಮೊಟಿವ್ ವರ್ಕ್‌ಶಾಪ್: 118
  • ಮ್ಯಾನ್ಮಡ್ ವರ್ಕ್‌ಶಾಪ್: 51
  • ಟಿಎಂಡಬ್ಲ್ಯೂ ನಾಸಿಕ್ ರೋಡ್: 47

3. ಪುಣೆ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು

  • ಕ್ಯಾರಿಯೇಜ್ & ವ್ಯಾಗನ್ ಡೆಪಾಟ್: 31
  • ಡೀಸೆಲ್ ಲೋಕೋ ಶೆಡ್: 121

4. ನಾಗ್ಪುರ್ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು

  • ಇಲೆಕ್ಟ್ರಿಕ್ ಲೋಕೋ ಶೆಡ್: 48
  • ಕ್ಯಾರಿಯೇಟ್ & ವ್ಯಾಗನ್ ಡೆಪಾಟ್: 66

5. ಸೋಲಾಪುರ್ ಕ್ಲಸ್ಟರ್ ಅಪ್ರೆಂಟಿಸ್ ಹುದ್ದೆಗಳು

  • ಕ್ಯಾರಿಯೇಜ್ ಅಂಡ್ ವ್ಯಾಗನ್ ಡೆಪಾಟ್: 58
  • ಕುರ್ದುವಾಡಿ ವರ್ಕ್‌ಶಾಪ್: 21

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ವಿದ್ಯಾರ್ಹತೆ:  ಅಭ್ಯರ್ಥಿಗಳು 10+2 ಎಕ್ಸಾಮಿನೇಷನ್ ಸಿಸ್ಟಮ್‌ನಲ್ಲಿ 10ನೇ ತರಗತಿಯನ್ನು ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಜೊತೆಗೆ ಐಟಿಐ ಅನ್ನು ಈ ಮೇಲಿನ ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್‌ಗಳಲ್ಲಿ ಪಾಸ್ ಮಾಡಿರಬೇಕು.

ವಯೋಮಿತಿ: ಕೇಂದ್ರ ರೈಲ್ವೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 15-02-2022ರಂತೆ ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳು: 3 ವರ್ಷಗಳು, SC/ST ಅಭ್ಯರ್ಥಿಗಳು: 5 ವರ್ಷಗಳು, PWD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಬಹುದು. SC/ ST/ PWD/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಆಯ್ಕೆ ಹೇಗೆ?: ಲಿಖಿತ ಪರೀಕ್ಷೆ, ಸಂದರ್ಶನ ನಡೆಸಿ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೇಂದ್ರ ರೈಲ್ವೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯು ಇದೇ ಡಿಸೆಂಬರ್ 15, 2022ರಿಂದ ಆರಂಭವಾಗಿದ್ದು; ಜನವರಿ 15, 2023ರ ಸಂಜೆ 05 ಗಂಟೆ ಅರ್ಜಿ ಸಲ್ಲಿಕೆಯ ಅಂತಿಮ ಸಮಯವಾಗಿದೆ.

ಕೇಂದ್ರ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಕೇಂದ್ರ ರೈಲ್ವೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೀಡಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!