ಸರಕಾರಿ ಯೋಜನೆ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

WhatsApp Group Join Now
Telegram Group Join Now

ಈ ರೈತರಿಗೆ ಒಟ್ಟು 08 ಹಂತಗಳಲ್ಲಿ ಬರೋಬ್ಬರಿ 208 ರೂಪಾಯಿಗೂ ಹೆಚ್ಚು ಬೆಳೆಹಾನಿ ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಬೆಳೆ ಹಾನಿಯಾದ ರೈತರು ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು  ತಮ್ಮ ಮೊಬೈಲ್‌ನಲ್ಲಿಯೇ ಚೆಕ್ ಮಾಡಬಹುದು…

ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಸರ್ಕಾರವು ಸಂತ್ರಸ್ತ ರೈತರಿಗೆ ಬೆಳೆಹಾನಿ ಪರಿಹಾರ ನೀಡುತ್ತದೆ. ಒಣ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 13,600 ರೂಪಾಯಿ, ನೀರಾವರಿ ಭೂಮಿಗೆ ಪ್ರತಿ ಹೆಕ್ಟೇರ್‌ಗೆ 25,000 ರೂಪಾಯಿ ಹಾಗೂ ಬಹುವಾರ್ಷಿಯ ಅಥವಾ ತೋಟಗಾರಿಕಾ ಬೆಳೆಗಳಿಗೆ 28,000 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ ಬಹುತೇಕ ಜೆಲ್ಲಿಯ ರೈತರಿಗೆ ವಿವಿಧ ಹಂತಗಳಲ್ಲಿ ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಇನ್ನೂ ಹಲವು ರೈತರಿಗೆ ಬೆಳೆಹಾನಿ ಪರಿಹಾರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ರೈತರು ಉಚಿತ ಡಿಸೇಲ್ ಪಡೆಯಲು ಮೊಬೈಲ್ ಮೂಲಕ ಹೆಸರು ನೋಂದಣಿ ಮಾಡುವುದು ಹೇಗೆ?

2022ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿಯಾಗಿದ್ದು; ರಾಜ್ಯ ಸರ್ಕಾರವು ಇಲ್ಲಿಯ ವರೆಗೆ ಎಂಟು ಹಂತಗಳಲ್ಲಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಯವರು ಒಟ್ಟು 1,25,541 ರೈತ ಫಲಾನುಭವಿಗಳಿಗೆ 208,31,46,904 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.

  1. ಸೆಪ್ಟೆಂಬರ್ 07, 2022ರಂದು 2,049 ಫಲಾನುಭವಿ ರೈತರಿಗೆ  3,91,23,332 ರೂಪಾಯಿ
  2. ಸೆಪ್ಟೆಂಬರ್ 15, 2022 ರಂದು 18,534 ಫಲಾನುಭವಿ ರೈತರಿಗೆ 34,53,04,149 ರೂಪಾಯಿ
  3. ಸೆಪ್ಟೆಂಬರ್ 22, 2022 ರಂದು 15,608 ಫಲಾನುಭವಿ ರೈತರಿಗೆ 27,27,00,000 ರೂಪಾಯಿ
  4. ಅಕ್ಟೋಬರ್ 12, 2022 ರಂದು 29,987 ಫಲಾನುಭವಿ ರೈತರಿಗೆ 50,59,34,072 ರೂಪಾಯಿ
  5. ಅಕ್ಟೋಬರ್ 14, 2022 ರಂದು 30,787 ಫಲಾನುಭವಿ ರೈತರಿಗೆ 50,23,03,548 ರೂಪಾಯಿ
  6. ಅಕ್ಟೋಬರ್ 29,2022 ರಂದು 13,108 ಫಲಾನುಭವಿ ರೈತರಿಗೆ 20,83,62,472 ರೂಪಾಯಿ
  7. ನವೆಂಬರ್ 10, 2022  ರಂದು 8,626 ಫಲಾನುಭವಿ ರೈತರಿಗೆ 12,34,88,422 ರೂಪಾಯಿ
  8. ಕಳೆದ ಜನವರಿ 06, 2023 ರಂದು 5,806 ಫಲಾನುಭವಿ ರೈತರಿಗೆ 8,59,30,909 ರೂಪಾಯಿ

…ಹೀಗೆ ಒಟ್ಟು 08 ಹಂತಗಳಲ್ಲಿ ಒಟ್ಟು 1,25,541 ರೈತ ಫಲಾನುಭವಿಗಳಿಗೆ ಬರೋಬ್ಬರಿ 208,31,46,904 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ. ಇನ್ನುಳಿದ ಅರ್ಹ ರೈತ ಫಲಾನುಭವಿಗಳಿಗೆ ಬೆಳೆಹಾನಿ ಪರಿಹಾರವನ್ನು ಹಂತಹಂತವಾಗಿ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ನಿಮ್ಮ ಬೆಳೆ ಹಾನಿ ಪರಿಹಾರ ಮೊಬೈಲ್‌ನಲ್ಲಿ ಚೆಕ್ 

ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ರೀತಿ ವಿವಿಧ ಹಂತಗಳಲ್ಲಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗಿದೆ. ಬೆಳೆ ಹಾನಿಯಾದ ರೈತರು ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ನೋಡುವುದಲ್ಲದೆ, ಯಾವ ಬ್ಯಾಂಕಿಗೆ ಜಮೆಯಾಗಿದೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಕೂಡ ತಮ್ಮ ಮೊಬೈಲ್‌ನಲ್ಲಿಯೇ ಚೆಕ್ ಮಾಡಬಹುದು.

ರೈತರು ಬೆಳೆಹಾನಿ ಪರಿಹಾರಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

ಕಂದಾಯ ಇಲಾಖೆಯ ಭೂಮಿ ವೆಬ್‌ಸೈಟ್‌ನ ಪರಿಹಾರ ಹಣ ಸಂದಾಯ ವರದಿ/Parihara Payment Report ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ ಸಂಖ್ಯೆ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ Calamity Type ಆಯ್ಕೆಯಲ್ಲಿ Flood ಅಂತ ಸೆಲೆಕ್ಟ್ ಮಾಡಿ. Year 2022-23 select ಸೆಲೆಕ್ಟ್ ಮಾಡಿ ನಿಮ್ಮ ಆಧಾರ್ ನಂಬರ್ ಹಾಕಿ ನಂತರ ಅಲ್ಲಿ ತೋರಿಸುವ Captch Type ಮಾಡಿದರೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಮಾಹಿತಿ ಸಿಗುತ್ತದೆ. ಪರಿಹಾರದ ಹಣ ಇನ್ನು ಜಮಾ ಆಗಿರದಿದ್ದರೆ ಹಣ ಸಂದಾಯವಾಗಿಲ್ಲ/Payment not made ಎಂದು ತೋರಿಸುತ್ತದೆ.

ಮಹಿಳೆಯರಿಗೆ ಉಚಿತ ನಾಟಿಕೋಳಿ ವಿತರಣೆ | ಪ್ರತಿಯೊಬ್ಬ ಫಲಾನುಭವಿಗೆ 2,600 ರೂಪಾಯಿ ಕೋಳಿಗಳು

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆ: ರೈತರ ಖಾತೆಗೆ ನೇರ ಹಣ ಜಮೆ

ಪಿಎಂ ಕಿಸಾನ್ ಯೋಜನೆ 13ನೇ ಕಂತಿನ ಹಣ ನಿಮಗೆ ಸಿಗುತ್ತೋ? ಇಲ್ವೋ? ಮೊಬೈಲ್‌ನಲ್ಲೇ ಚೆಕ್ ಮಾಡಿ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

error: Content is protected !!