ಸರಕಾರಿ ಯೋಜನೆ

ರೈತರೇ ಬೆಳೆ ವಿಮೆ ಗ್ಯಾರಂಟಿ ಪರಿಹಾರಕ್ಕೆ ಈ ಕ್ರಮ ಅನುಸರಿಸಿ |Crop insurance karnataka

WhatsApp Group Join Now
Telegram Group Join Now

 

ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಖಚಿತವಾಗಿ ಬೆಳೆ ವಿಮೆ ಪರಿಹಾರ ಪಡೆಯಲು ಏನು ಮಾಡಬೇಕು? ಯಾವೆಲ್ಲ ಅರ್ಹತೆಗಳು ಇರಬೇಕು? ಬೆಳೆವಿಮೆ ಅರ್ಜಿ ಸ್ಥಿತಿಗತಿ ಚೆಕ್ ಮಾಡುವುದು ಹೇಗೆ? ಈ ಎಲ್ಲ ಮಾಹಿತಿ ಇಲ್ಲಿದೆ….

 

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ ಪಡೆದ ರೈತರಿಗೆ ಸಾಲ ಮಂಜೂರಾತಿ ವೇಳೆ ವಿಮೆ ಕಂತನ್ನು ಕಡಿತ ಮಾಡಿಕೊಂಡೇ ಸಾಲದ ಮೊತ್ತ ನೀಡಲಾಗುತ್ತದೆ. ಹೀಗಾಗಿ ಈ ರೈತರು ಬೆಳೆವಿಮೆ ಕಂತನ್ನು ಪ್ರತ್ಯೇಕವಾಗಿ ಪಾವತಿಸುವ ಅಗತ್ಯವಿಲ್ಲ.

ಇದನ್ನೂ ಓದಿ: ಜಿಕೆವಿಕೆ ಕೃಷಿಮೇಳವನ್ನು ಮೊಬೈಲ್‌ನಲ್ಲೇ ವೀಕ್ಷಿಸಿ

ಇನ್ನು ಬೆಳೆ ಸಾಲ ಪಡೆಯದೇ ಇರುವ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಸಂಪರ್ಕಿಸಿ, ಜಮೀನು ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ವಿಮಾ ಅರ್ಜಿಯೊಂದಿಗೆ ನೀವು ಯಾವ ಬೆಳೆಗೆ ವಿಮೆ ಮಾಡಿಸುತ್ತಿದ್ದೀರೋ ಆ ಬೆಳೆ ವಿಮೆಯ ಕಂತನ್ನು (ಪ್ರೀಮಿಯಂ) ಪಾವತಿಸಬೇಕು.

ಬೆಳೆಯನ್ನು ಆಧರಿಸಿ ಪ್ರೀಮಿಯಂ ಕಂತು ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆಗೂ ಮೊದಲೇ ಮಾಡಬೇಕು. ಬಳಿಕ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ತಮ್ಮ ಕೈ ಮೀರಿದ ಯಾವುದೇ ನೈಸರ್ಗಿಕ ಅವಘಡಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆಯುತ್ತಾರೆ.

ಇದನ್ನೂ ಓದಿ: ಲಕ್ಷ ಲಕ್ಷ ಆದಾಯ ತರುವ ಖಿಲಾರಿ ಎತ್ತುಗಳ ಸಾಕಣೆ

ಹಾಗಂತ ಪ್ರೀಮಿಯಂ ಪಾವತಿಸಿದ ಮಾತ್ರಕ್ಕೆ ಬೆಳೆ ವಿಮಾ ಪರಿಹಾರ ರೈತರ ಕೈಸೇರುವುದಿಲ್ಲ. ಹವಾಮಾನ ವೈಪರೀತ್ಯದ ಕಾರಣದಿಂದ ಕೃಷಿಕರು ಪದೇ ಪದೆ ನಷ್ಟಕ್ಕೆ ಒಳಗಾಗುತ್ತಿದ್ದು; ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾವುದೇ ಸಂಭವಿಸಿದರೂ ರೈತ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ಬೆಳೆ ವಿಮೆ ಮಾಡಿಸಿದ ನಂತರ ನೈಸರ್ಗಿಕ ವಿಪತ್ತಿನಿಂದಾದ ಬೆಳೆ ನಷ್ಟಕ್ಕೆ ರೈತನು ವಿಮಾ ಹಕ್ಕು ಪಡೆಯಬಹುದು. ಅಂದರೆ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಅಕಾಲಿಕ ಮಳೆ, ಆಲಿಕಲ್ಲು ಮಳೆ, ಭೂ ಕುಸಿತ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.

ಇದನ್ನೂ ಓದಿ: ಕುರಿಮೇಕೆ ಸಾಕಾಣಿಕೆಗೆ 1.75 ಲಕ್ಷ ಆರ್ಥಿಕ ನೆರವು

ಕಟಾವಿನ ನಂತರ ಜಮೀನಿನಲ್ಲೇ ಒಣಗಲು ಬಿಟ್ಟ ಬೆಳೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದಾಗಿ ಹಾಳಾದರೆ ಪ್ರತ್ಯೇಕವಾಗಿ ನಷ್ಟ ಪರಿಹಾರ ನೀಡಲಾಗುವುದು. ಕೇಂದ್ರ ಸರ್ಕಾರದ ಕೃಷಿ ಸಾಲದ ಖಾತೆ ಹೊಂದಿರುವಂತಹ ರೈತರು, ಯಾವುದೇ ಪರಿಶೀಲನೆಯಿಲ್ಲದೆ ಈ ಯೋಜನೆಯಲ್ಲಿ ವಿಮೆ ಪಡೆಯಲು ಅರ್ಹರಾಗಿರುತ್ತಾರೆ. ಯುದ್ಧ ಅಥವಾ ಪರಮಾಣು ವಿಕಿರಣಗಳ ಅಪಾಯದಿಂದಾಗುವ ಬೆಳೆ ಹಾನಿ, ಗಲಭೆಗಳಿಂದಾಗುವ ಬೆಳೆ ಹಾನಿ ಹಾಗೂ ಕಳ್ಳತನ ಅಥವಾ ಪ್ರಾಣಿಗಳ ಮೇಯುವಿಕೆಯಿಂದಾಗುವ ಬೆಳೆ ಹಾನಿಗೆ ಪರಿಹಾರ ಲಭ್ಯವಿರುವುದಿಲ್ಲ.

ಮೊದಲಿಗೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರು ಬೆಳೆ ಸಮೀಕ್ಷೆ ಆಪ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡಬೇಕು. ಒಂದು ವೇಳೆ ನೀವು ಮೊಬೈಲ್‌ನಲ್ಲಿ ಮಾಹಿತಿ ಅಪ್ಲೋಡ್ ಮಾಡುವುದು ಗೊತ್ತಿರದಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡಿಸಬಹುದು.

ಬಳಿಕ ಪ್ರಕೃತಿ ವಿಕೋಪದಿಂದ ಬೆಳೆ ಹಾಳಾದಾಗ ರೈತರು ಯಾವ ವಿಮಾ ಕಂಪನಿಗಳಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ 72 ಗಂಟೆಯೊಳಗೆ ಕರೆ ಮಾಡಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾಳಾದ ಕುರಿತು ಪರಿಶೀಲನೆ ನಡೆಸುತ್ತಾರೆ. ಯಾವ ಪ್ರಮಾಣದಲ್ಲಿ ಬೆಳೆ ಹಾಳಾಗಿದೆಯೋ ಅದನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ. ಮೇಲಧಿಕಾರಿಗಳು ಕೆಲವು ದಿನಗಳ ನಂತರ ರೈತರ ಖಾತೆಗೆ ಬೆಳೆ ವಿಮೆ ಹಣ ಜಮೆ ಮಾಡುತ್ತಾರೆ.

ಇದನ್ನೂ ಓದಿ: ದಿನಕ್ಕೆ 33.8 ಲೀಟರ್ ಹಾಲು ಕೊಡುತ್ತದೆ ಈ ಎಮ್ಮೆ

2016ರ ಜನವರಿ 13 ರಂದು ಪ್ರಧಾನ ಮಂತ್ರಿ ಫಸಲ್ ಬಿಮಾ  ಯೋಜನೆಯನ್ನು ಘೋಷಿಸಲಾಗಿದೆ. ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯವು ಈ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿದೆ. ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಆದರೆ ರಾಜ್ಯದಲ್ಲಿ ಬೆಳೆ ವಿಮೆ ಯೋಜನೆ ರೈತರ ನೆರವಿಗೆ ಬರುತ್ತಿಲ್ಲ ಎಂಬುದು ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 17ರ ಸೋಮವಾರ ನಡೆದ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರ ಸಭೆಯಲ್ಲೂ ಪ್ರಸ್ತಾಪವಾಗಿದೆ. ರೈತರು ಕಟ್ಟಿದ ಪ್ರಿಮಿಯಂ ಮೊತ್ತದಷ್ಟೂ ವಿಮೆ ಪರಿಹಾರ ವಿತರಣೆಯಾಗುತ್ತಿಲ್ಲ ಎಂಬುದು ಅಧಿಕೃತ ಅಂಕಿ ಅಂಶಗಳಿಂದಲೇ ದೃಢಪಟ್ಟಿದೆ. ಇನ್ನು ಮುಂದೆ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ವಂಚನೆಯಾಗಬಾರದು. ರೈತರಿಗೆ ನ್ಯಾಯಯುತ ವಿಮೆ ಪರಿಹಾರ ಸಿಗುವಂತೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಜಿಲ್ಲೆಯಲ್ಲಿಈ ಬಗ್ಗೆ ನಿಗಾ ವಹಿಸಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಸಣ್ಣ ವ್ಯಾಪಾರ ಹಾಗೂ ವಾಣಿಜ್ಯ ವಾಹನ ಖರೀದಿಗೆ ₹10 ಲಕ್ಷ ಸಾಲ ಸೌಲಭ್ಯ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಬೆಳೆ ವಿಮೆ ಪ್ರೀಮಿಯಂ ಅನ್ನು ಯಾವ ಕಂಪನಿಗೆ ಪಾವತಿಸಲಾಗಿದೆ ಎಂಬುವುದನ್ನು ಹಾಗೂ ಬೆಳೆವಿಮೆ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ತಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

ಇದನ್ನೂ ಓದಿ: SSLC ಪಾಸ್ ಆದವರಿಗೆ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ , 24,369 ಹುದ್ದೆಗಳು… 

WhatsApp Group Join Now
Telegram Group Join Now

Related Posts

error: Content is protected !!