ಸರಕಾರಿ ಯೋಜನೆ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ | Crop Loan Waiver Scheme

WhatsApp Group Join Now
Telegram Group Join Now

ಬೆಳೆಸಾಲ ಮನ್ನಾ ಮಾಹಿತಿ ಲಭ್ಯವಾಗದೇ ಅನೇಕ ರೈತರು ಗೊಂದಲದಲ್ಲಿದ್ದಾರೆ. ಈ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು; ಫಲಾನುಭವಿ ರೈತರು ಆಧಾರ್ ಕಾರ್ಡ್ ನಂಬರ್, ರೇಷನ್ ಕಾರ್ಡ್ ನಂಬರ್ ಬಳಸಿ ಯಾರ ಸಹಾಯವೂ ಇಲ್ಲದೇ ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲೇ ಸಾಲಮನ್ನಾ ಮಾಹಿತಿ ಪಡೆಯಬಹುದಾಗಿದೆ. ರೈತರು ತಮ್ಮ ಬೆಳೆ ಸಾಲ ಮನ್ನಾ ಮಾಹಿತಿ ತಿಳಿಯಲು ಇಲ್ಲಿದೆ...

ಸರ್ಕಾರವು ರೈತರ ಜಮೀನಿನ ಆಧಾರದ ಮೇಲೆ ಕೃಷಿ ಚಟುವಟಿಕೆಗೆ ಪೂರಕವಾಗಿ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ಹಾಗೂ ಮಧ್ಯಮಾವಧಿ ಸಾಲವನ್ನು ನೀಡುತ್ತದೆ. ರೈತರು ಈ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಬಹುದು. ಆದರೆ ಪ್ರಕೃತಿ ವಿಕೋಪದಂತಹ ನೈಸರ್ಗಿಕ ಕಾರಣದಿಂದ ನಿರೀಕ್ಷಿತ ಬೆಳೆ ಬಾರದೇ ರೈತರು ಸಾಲ ಮರುಪಾವತಿ ಮಾಡಲಾಗದ ಸಂದರ್ಭದಲ್ಲಿ ಹಾಗೂ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ನೀಡಿದ ಪ್ರಣಾಳಿಕೆ ಈಡೇರಿಕೆಗಾಗಿ ರೈತರ ಸಾಲಮನ್ನಾ ಮಾಡುತ್ತವೆ. ಹೀಗೆ ಮನ್ನಾ ಆದ ಸಾಲದ ಮಾಹಿತಿ ಅನೇಕ ರೈತರಿಗೆ ಲಭ್ಯವಾಗಿಲ್ಲ. ಈಗಲೂ ಬಹಳಷ್ಟು ಕೃಷಿಕರು ಸಾಲಮನ್ನಾ ಯೋಜನೆ ಸರಿಯಾದ ಮಾಹಿತಿ ಸಿಗದೇ ಗೊಂದಲದಲ್ಲಿದ್ದಾರೆ.

ಈಚೇಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ರಾಜ್ಯ ಸರಕಾರ ಗರಿಷ್ಠ ಒಂದು ಲಕ್ಷ ರೂಪಾಯಿ ಬೆಳೆಸಾಲ ಮನ್ನಾ ಮಾಡಿತ್ತು. ರಾಜ್ಯದ ರೈತರ ಹಿತದೃಷ್ಟಿಯಿಂದ ಮಾಡಿದ ಬೆಳೆಸಾಲ ಮನ್ನಾ ಯೋಜನೆ ಘೋಷಣೆಯಾಗಿ ಈಗ ಸುಮಾರು ನಾಲ್ಕೂವರೆ ವರ್ಷ ಕಳೆದಿದೆ. ಆದರೆ ರಾಜ್ಯದಲ್ಲಿ ಇನ್ನೂ ಸಾವಿರಾರು ರೈತ ಫಲಾನುಭವಿಗಳಿಗೆ ಸಾಲಮನ್ನಾ ಯೋಜನೆಯ ಮೊತ್ತ ಸಿಕ್ಕಿಲ್ಲ.

ಇದನ್ನೂ ಓದಿ: ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆ: ರೈತರ ಖಾತೆಗೆ ನೇರ ಹಣ ಜಮೆ

ಸಾಲ ಮನ್ನಾ ಭಾಗ್ಯದಿಂದ ವಂಚಿತ ರೈತರು 

2018 ಆಗಸ್ಟ್ 14ರ ಆದೇಶದ ಪ್ರಕಾರ, 2018 ಜುಲೈ 10ರ ವರೆಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿಂದ ಬೆಳೆ ಸಾಲ ಪಡೆದಿದ್ದ ರೈತ ಸದಸ್ಯರ ಹೊರ ಬಾಕಿ ಸಾಲಗಳಿಗೆ ಗರಿಷ್ಟ ಒಂದು ಲಕ್ಷ ರೂಪಾಯಿ ವರೆಗೆ ಸಾಲ ಮನ್ನಾ ಭಾಗ್ಯ ನೀಡಲಾಗಿತ್ತು. ಹಲವಾರು ತೊಡಕುಗಳ ಬಳಿಕ ಹೆಚ್ಚಿನ ರೈತರ ಸಾಲ ಮನ್ನಾ ಆಗಿದ್ದು, ಹಲವು ಕಂತುಗಳ ಮೂಲಕ ಪಾವತಿಯಾಗಿತ್ತು. ಸಹಕಾರಿ ಸಂಘಗಳು ಈ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದರು.

ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಇತ್ಯಾದಿ ಒಂದಕ್ಕೊಂದು ತಾಳೆಯಾಗದೆ ಫಲಾನುಭವಿಗಳಿಗೆ ಮೊತ್ತ ಬಿಡುಗಡೆಯಾಗಲು ತಡವಾಗಿತ್ತು. ಕೆಲವೊಂದು ತಾಂತ್ರಿಕ ಎಡವಟ್ಟುಗಳಿಂದ ಒಂದಿಷ್ಟು ಫಲಾನುಭವಿಗಳು ಯೋಜನೆಯಿಂದ ವಂಚಿತರಾದದ್ದೂ ಉಂಟು. ಮೂಲಗಳ ಪ್ರಕಾರ ರಾಜ್ಯದಲ್ಲಿ 40,000ಕ್ಕಿಂತ ಹೆಚ್ಚು ರೈತರಿಗೆ ಇನ್ನೂ ಕೂಡ ಸಾಲಮನ್ನಾದ ಮೊತ್ತ ಬಿಡುಗಡೆಯಾಗಿಲ್ಲ. ಸಹಕಾರಿ ಸಂಘಗಳು ಇವರೆಲ್ಲರ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಿದರೂ ಫಲಾನುಭವಿಗಳು ಇನ್ನೂ ನಿರೀಕ್ಷೆಯಲ್ಲೇ ಕಾಲ ಕಳೆಯುವಂತಾಗಿದೆ.

ಇದನ್ನೂ ಓದಿ: ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಮೊಬೈಲ್‌ನಲ್ಲೇ ಬೆಳೆಸಾಲ ಮನ್ನಾ ಮಾಹಿತಿ

ಬೆಳೆಸಾಲ ಮನ್ನಾ ಮಾಹಿತಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು; ರೈತರು ಯಾರ ಸಹಾಯವೂ ಇಲ್ಲದೇ ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲೇ ಸಾಲಮನ್ನಾ ಮಾಹಿತಿ ಪಡೆಯಬಹುದಾಗಿದೆ. ಬೆಳೆಸಾಲ ಮನ್ನಾ ಫಲಾನುಭವಿ ರೈತರು ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಬಳಸಿ ಬೆಳೆಸಾಲ ಮನ್ನಾ ಪ್ರಮಾಣಪತ್ರವನ್ನು ಪರಿಶೀಲಿಸಬಹುದು. ಸಹಕಾರಿ ವಲಯ ಅಥವಾ ವಾಣಿಜ್ಯ ವಲಯದಿಂದ ಸಾಲ ಪಡೆದಿರುವ ಕರ್ನಾಟಕ ರೈತ ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಸಂಪೂರ್ಣ ಪಟ್ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಕರ್ನಾಟಕ ಬೆಳೆಸಾಲ ಮನ್ನಾ ಯೋಜನೆಯ ಮಾಹಿತಿ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ http://clws.karnataka.gov.in/. ಕರ್ನಾಟಕ ಸರಕಾರದ ಬೆಳೆಸಾಲ ಮನ್ನಾ ಯೋಜನೆ (Crop Loan Waiver System) ಅಧಿಕೃತ ಜಾಲತಾಣ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಬಲತುದಿಯಲ್ಲಿ ಕನ್ನಡ / ಇಂಗ್ಲಿಷ್ ಆಯ್ಕೆಗಳಿದ್ದು; ರೈತರು ಸುಲಭ ಬಳಕೆಗೆ ಕನ್ನಡ ಆಪ್ಷನ್ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಪಹಣಿ (ಉತಾರ) ಪತ್ರಿಕೆಯನ್ನು ಮೊಬೈಲ್‌ನಲ್ಲೇ ಪಡೆಯಿರಿ

ನಂತರ ನಾಗರಿಕ ಮೇಲೆ ಕ್ಲಿಕ್ ಮಾಡಿ. ಮುಂದೆ ನಾಗರಿಕ ಸೇವೆಗಳು ಕೆಳಗಿರುವ CLWS ನಾಗರಿಕ ವರದಿಗಳು ಮೇಲೆ ಕ್ಲಿಕ್ ಮಾಡಿ. ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ನಂಬರ್ ಆಯ್ಕೆಗಳು ಕಾಣಿಸಿಳ್ಳುತ್ತವೆ. ಅದರಲ್ಲಿ ನಿಮಗೆ ಅಗತ್ಯವಾದ ಆಪ್ಷನ್ ಸೆಲೆಕ್ಟ್ ಮಾಡಿ  Fetch report ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ಬ್ಯಾಂಕ್ ಹೆಸರು, ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತದ ವಿವರ ಲಭ್ಯವಾಗುತ್ತದೆ.

ಕರ್ನಾಟಕ ಬೆಳೆಸಾಲ ಮನ್ನಾ ಯೋಜನೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರೈತರ ಬೆಳೆ ಸಾಲ ಮನ್ನಾ ಪರಿಹಾರ ಯೋಜನೆ ಸಹಾಯವಾಣಿ: 080-22113255

ಇದನ್ನೂ ಓದಿ: ರೈತರಲ್ಲಿ ಈ ಕಾರ್ಡ್ ಇದ್ದರೆ ಸುಲಭದಲ್ಲಿ ಸಿಗಲಿದೆ ಸರಕಾರಿ ಸೌಲಭ್ಯ | ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ನೋಂದಾಯಿಸಿ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

 

WhatsApp Group Join Now
Telegram Group Join Now

Related Posts

error: Content is protected !!