ಸರಕಾರಿ ಯೋಜನೆ

ಕಾಡು ಪ್ರಾಣಿಗಳಿಂದಾಗುವ ಹಾನಿ: ರೈತರಿಗೆ ಸಿಗಲಿದೆ ದುಪ್ಪಟ್ಟು ಪರಿಹಾರ | Damage to agricultural crops by wild animals

WhatsApp Group Join Now
Telegram Group Join Now

ಕಾಡುಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಾಡಾನೆ, ಮಂಗ, ಜಿಂಕೆ, ನವಿಲು, ಕಾಡಂದಿ, ಕಡವೆ, ಕಾಡುಕೋಣಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಸರಕಾರ ಕಾಡುಪ್ರಾಣಿಗಳಿಂದ ಸಂಭವಿಸುವ ಹಾನಿಗೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ತೀಮಾನಿಸಿದೆ. ಯಾವ್ಯಾವ ಹಾನಿಗೆ ಎಷ್ಟೆಷ್ಟು ಪರಿಹಾರ? ಕಾಡುಪ್ರಾಣಿ ಹಾವಳಿ ಹತೋಟಿಗೆ ರೂಪಿಸಲಾದ ಯೋಜನೆಗಳೇನು? ರೈತರ ಬೇಡಿಕೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಒಂದೆಡೆ ಹವಾಮಾನ ವೈಪರಿತ್ಯ, ಮತ್ತೊಂದೆಡೆ ಕಾಡು ಪ್ರಾಣಿ-ಪಕ್ಷಿಗಳ ದಾಳಿಯಿಂದಾಗಿ ರೈತರು ಹೈರಾಣಾಗುತ್ತಿದ್ದಾರೆ. ಕಾಡಾನೆ, ಮಂಗ, ಜಿಂಕೆ, ನವಿಲು, ಕಾಡಂದಿಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ದಿನದಲ್ಲಿ ರೈತರ ತಿಂಗಳಾನುಗಟ್ಟಲೇ ಶ್ರಮ ಮಣ್ಣುಪಾಲಾಗುತ್ತಿದೆ. ವರ್ಷಗಳಿಂದ ಜತನ ಮಾಡಿಕೊಂಡು ಬಂದ ತೋಟಗಳು ಕಾಡು ಪ್ರಾಣಿಗಳ ಹಾವಳಿಗೆ ಸರ್ವನಾಶವಾಗುತ್ತಿವೆ. ಅಡಿಕೆ, ತೆಂಗು, ಬಾಳೆ ಸಹಿತ ರೈತರು ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಕಾಡುಪ್ರಾಣಿಗಳು ಹಿಂಡುಹಿಂಡಾಗಿ ಲಗ್ಗೆ ಇಟ್ಟು ಹಾಳು ಮಾಡುತ್ತಿವೆ. ಕಾಡುಪ್ರಾಣಿಗಳಿಂದ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾದರೆ ಕೃಷಿ ಜೀವನ ಕಷ್ಟದಾಯಕವಾಗುತ್ತದೆ ಎಂಬುದು ರೈತರ ಅಳಲು.

ಇದನ್ನೂ ಓದಿ: ರೈತರ ಆದಾಯ ಹೆಚ್ಚಿಸುವ ತ್ರಿಮೂರ್ತಿ ಟಾನಿಕ್: ರೈತರೇ ತಯಾರಿಕೊಳ್ಳಬಲ್ಲ ಪವರ್‌ಫುಲ್ ಔಷಧಿ

ತೆಂಗು, ಅಡಿಕೆ, ತರಕಾರಿ, ಬಾಳೆ, ಭತ್ತವನ್ನೂ ಮಂಗಳು ಹಾನಿ ಮಾಡುತ್ತವೆ. ಬೇಸಾಯ ಮಾಡಲು ಸಿದ್ಧ ಮಾಡಿರುವ ನೇಜಿ, ದನಗಳಿಗೆ ಮೇಯಲು ಬೆಳೆಸಿರುವ ಹುಲ್ಲು, ಬೆಳೆದ ಭತ್ತದ ಪೈರು ಎಲ್ಲವನ್ನೂ ಜಿಂಕೆಗಳು ತಿಂದು ನಾಶ ಮಾಡುತ್ತವೆ. ಕಡವೆಗಳು ಹಿಂಡಾಗಿ ಬಂದು ಭತ್ತ, ಅಡಿಕೆ, ತೆಂಗು, ಬಾಳೆ ಗಿಡಗಳನ್ನೇ ತಿಂದು ನಾಶಪಡಿಸುತ್ತ್ತವೆ. ಕಾಡುಕೋಣಗಳು ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡುತ್ತಿವೆ. ಇತ್ತೀಚೆಗೆ ಚಿರತೆ, ಹುಲಿಗಳು ಕೂಡ ಅಲ್ಲಲ್ಲಿ ಕಾಣುತ್ತಿವೆ. ಸಾಕುನಾಯಿ, ದನಕರುಗಳನ್ನು ಹಿಡಿದು ತಿನ್ನುತ್ತಿವೆ. ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ.

ಎಕರೆಗೆ ₹3 ಲಕ್ಷ ಪರಿಹಾರ? 

ನವಿಲುಗಳ ಕಾಟ ಇತ್ತೀಚೆಗೆ ಜಾಸ್ತಿಯಾಗಿದೆ. ತರಕಾರಿಗಳ ಗಿಡ, ಹೂವು ಎಲ್ಲವನ್ನೂ ನಾಶಪಡಿಸುತ್ತವೆ. ರೈತರು ಕೃಷಿಗಾಗಿ ಬ್ಯಾಂಕ್ ಸಹಿತ ಸಹಕಾರ ಸಂಘಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುತ್ತಾರೆ. ಮಳೆ-ಗಾಳಿ ಸಹಿತ ಹವಾಮಾನಗಳ ವೈಪರೀತ್ಯದ ಸಮಸ್ಯೆಯಿಂದ ಒಂದೆಡೆ ನಷ್ಟವಾದರೆ, ಇನ್ನೊಂದೆಡೆ ಕಾಡುಪ್ರಾಣಿಗಳ ಸಮಸ್ಯೆ, ಬೆಲೆ ಏರಿಕೆಯ ಸಂಕಷ್ಟ. ಸಮಸ್ಯೆ ಎದುರಿಸಿ ಬೆಳೆದ ಬೆಳೆಯ ಫಲ ರೈತರ ಕೈಗೆ ಸಿಗುವುದಿಲ್ಲ. ಹೀಗಾದರೆ ಸಾಲ ಮರುಪಾವತಿ ಮಾಡುವುದು ಹೇಗೆ? ಜೀವನ ಮಾಡುವುದು ಹೇಗೆ?

ಕಾಡುಪ್ರಾಣಿಗಳಿಂದ ಆದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪ್ರತಿ ರೈತನಿಗೆ ಎಕರೆಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಯಾವ ಷರತ್ತು ಇಲ್ಲದೆ ಬಂದೂಕು ಪರವಾನಗಿ ನೀಡಬೇಕು ಎಂಬುವುದು ಬಹಳಷ್ಟು ರೈತರ ಆಗ್ರಹವಾಗಿದೆ.

ಇದನ್ನೂ ಓದಿ: ಅಕಾಲಿಕ ಮಳೆ: ಬೆಳೆ ಹಾನಿಗೆ ಪರಿಹಾರವೇನು?

ಪರಿಹಾರ ದುಪ್ಪಟ್ಟು

ಆನೆಯೂ ಸೇರಿದಂತೆ ಕಾಡುಪ್ರಾಣಿಗಳಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ತೀರ್ಮಾನದಂತೆ:

  • ಮಾನವ ಜೀವ ಹಾನಿ ಪರಿಹಾರ: ₹7.5 ಲಕ್ಷ ದಿಂದ ₹15 ಲಕ್ಷ ರೂಪಾಯಿ
  • ಶಾಶ್ವತ ಅಂಗವಿಕಲತೆಗೆ ಪರಿಹಾರ: ₹5 ಲಕ್ಷ ದಿಂದ ₹10 ಲಕ್ಷ ರೂಪಾಯಿ
  • ಭಾಗಶಃ ಅಂಗವಿಕಲತೆಗೆ ಪರಿಹಾರ: ₹2.5 ಲಕ್ಷ ದಿಂದ ₹5 ಲಕ್ಷ
  • ಗಾಯಗೊಂಡವರಿಗೆ ಪರಿಹಾರ: ₹30,000 ದಿಂದ ₹60,000
  • ಆಸ್ತಿ ಹಾನಿಗೆ ಪರಿಹಾರ: ₹10,000 ದಿಂದ ₹20,000
  • ಜೀವ ಹಾನಿ ಅಥವಾ ಶಾಶ್ವತ ಅಂಗವಿಕಲತೆಯ ಕುಟುಂಬ ಮಾಸಾಶನ: ₹2,000 ದಿಂದ ₹4,000

ಹೀಗೆ ಕಾಡುಪ್ರಾಣಿಗಳಿಂದಾಗುವ ಹಾನಿ ಮತ್ತು ಅನಾಹುತಕ್ಕೆ ನೀಡಲಾಗುತ್ತಿದ್ದ ಪರಿಹಾರವನ್ನು ದುಪ್ಪಟ್ಟು ಮಾಡಲು ತೀರ್ಮಾನಿಸಲಾಗಿದೆ. ಇದಲ್ಲದೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನೂ ದ್ವಿಗುಣಗೊಳಿಸಲು ನಿರ್ಧರಿಸಲಾಯಿತು.

ಹಾಸನ, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಕಾರ್ಯಪಡೆಗಳಿಗೆ ಅಗತ್ಯ ಮಾನವ ಸಂಪನ್ಮೂಲ, ಉಪಕರಣಗಳು, ನಿಯಂತ್ರಣ ಕೊಠಡಿ ಹಾಗೂ ವಾಹನ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಹಾಸನ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಸಂಖ್ಯೆ 9480817460 ಅಥವಾ ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು…

ಕಾಡುಪ್ರಾಣಿ ಹತೋಟಿಗೆ ಕೈಗೊಳ್ಳಲಾದ ಇತರ ತೀರ್ಮಾನಗಳು

ಹಾಸನ ಜಿಲ್ಲೆ ಅರಣ್ಯ ಪ್ರದೇಶದಲ್ಲಿ 9.7 ಕಿ.ಮೀ. ನಷ್ಟು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಲಾಗಿದ್ದು, ಈ ವರ್ಷ 11.5 ಕಿ.ಮೀ. ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಹೇಮಾವತಿ ಹಿನ್ನೀರಿನ ಉದ್ದಕ್ಕೂ 25 ಕಿ.ಮೀ. ನಷ್ಟು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಕೂಡಲೆ ಚಾಲನೆ. ಇದರಿಂದ ಕೊಡಗು ಕಡೆಯಿಂದ ಆನೆಗಳ ಸಂಚಾರವನ್ನು ತಡೆಯಬಹುದಾಗಿದೆ. ಇದರೊಂದಿಗೆ ಶಾಶ್ವತ ಕಾವಲು ಗೋಪುರಗಳು, ಮೋಟರೈಸ್ಡ್ ಬೋಟ್‌ಗಳು, ನೈಟ್ ವಿಷನ್ ಬೈನಾಕ್ಯುಲರ್‌ಗಳು, ಲಾಂಗ್ ರೇಂಜ್ ಸರ್ಚ್ ಲೈಟ್‌ಗಳನ್ನು ಅಳವಡಿಸಲಾಗುವುದು.

ಮಾನವ-ಆನೆ ಸಂಘರ್ಷ ನಿವಾರಣಾ ಸಮಿತಿಯನ್ನು ಹಾಸನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲು ನಿರ್ಧರಿಸಲಾಯಿತು. ಹಾಸನ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಮಿತಿ ಸದಸ್ಯರಾಗಿದ್ದು, ಹಾಸನದ ಡಿಸಿಎಫ್ ಇದರ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ರಸ್ತೆ ಬದಿ ಪೊದೆಗಳನ್ನು ತೆಗೆಯುವುದು, ಕಪ್ಪು ಸ್ಥಳಗಳಲ್ಲಿ ಬೀದಿ ದೀಪ ಅಳವಡಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಜತೆಗೆ ಕೊಡಗು ಫೌಂಡೇಷನ್ ಮಾದರಿಯಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷವನ್ನು ನಿರ್ವಹಿಸಲು ಒಂದು ಫೌಂಡೇಷನ್ ಸ್ಥಾಪಿಸಲು ತೀರ್ಮಾನಿಸಲಾಯಿತು. ರೈತರ ಭೂಮಿಯಲ್ಲಿ ಸೌರವಿದ್ಯುತ್ ಬೇಲಿ ನಿರ್ಮಿಸಲು ಶೇ. 50:50ರ ಅನುಪಾತದ ಯೋಜನೆಯ ಷರತ್ತನ್ನು ಸಡಿಲಿಸಿ, ವೈಯಕ್ತಿಕ ಬೇಲಿ ನಿರ್ಮಾಣಕ್ಕೆ ಸರ್ಕಾರದ ಪಾಲನ್ನು ಶೇ.60ಕ್ಕೆ ಹೆಚ್ಚಿಸಲು ಹಾಗೂ ಅರಣ್ಯದ 5 ಕಿ.ಮೀ. ಸುತ್ತಳತೆಯ ಷರತ್ತನ್ನು ಸಡಿಲಿಸಲು ತೀರ್ಮಾನಿಸಲಾಯಿತು. ಅರಣ್ಯದ ಅಂಚಿನಲ್ಲಿ ಸಾಮೂಹಿಕ ಬೇಲಿ ನಿರ್ಮಿಸಲು ಅನುಮೋದನೆ ನೀಡಲಾಯಿತು. ಇದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಅಂಚೆ ಕಚೇರಿಯಲ್ಲಿ ಕೇವಲ ₹399ಕ್ಕೆ ಈ ಪಾಲಸಿ ಮಾಡಿದರೆ ಸಿಗಲಿದೆ ₹10 ಲಕ್ಷ ಆರ್ಥಿಕ ನೆರವು

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!