ಸರಕಾರಿ ಯೋಜನೆ

SSLC ಅಭ್ಯರ್ಥಿಗಳಿಂದ ಧಾರವಾಡ ಜಿಲ್ಲಾ ನ್ಯಾಯಾಲಯದ ಹುದ್ದೆಗಳಿಗೆ ಅರ್ಜಿ ಆಹ್ವಾನ | Dharwad District Court Recruitment 2023

WhatsApp Group Join Now
Telegram Group Join Now

SSLC ಪಾಸಾದ ಅಭ್ಯರ್ಥಿಗಳಿಂದ ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿಯಿರುವ ಬೆರಳಚ್ಚು-ನಕಲುಗಾರ ಹಾಗೂ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವೇತನ, ಅರ್ಜಿ ಸಲ್ಲಿಕೆ ಲಿಂಕ್ ಹಾಗೂ ಅಧಿಸೂಚನೆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ… 

ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿಯಿರುವ ಬೆರಳಚ್ಚು-ನಕಲುಗಾರ ಹಾಗೂ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಮಾರ್ಚ್ 1, 2023ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದು.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ: ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಬೆರಳಚ್ಚು-ನಕಲುಗಾರ ಹಾಗೂ ಜವಾನ ಸೇರಿ ಒಟ್ಟು 33 ಹುದ್ದೆಗಳು ಖಾಲಿ ಇದ್ದು; ಈ ಪೈಕಿ 02 ಬೆರಳಚ್ಚು-ನಕಲುಗಾರ ಹಾಗೂ 31 ಜವಾನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ:

1. ಬೆರಳಚ್ಚು-ನಕಲುಗಾರ ಹುದ್ದೆ

  • ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.

ಅಥವಾ

  • ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಸೆಕ್ರೆಟೇರಿಯಲ್ ಪ್ರಾಕ್ಟಿಸ್ ಪಠ್ಯಕ್ರಮದ ಡಿಪ್ಲೋಮಾ ಪದವಿಯೊಂದಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಕಿರಿಯ ದರ್ಜೆಯ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

2. ಜವಾನ ಹುದ್ದೆ

  • ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
  • ಕನ್ನಡ ಓದಲು, ಬರೆಯಲು ತಿಳದಿರಬೇಕು. ಐಚ್ಛಕವಾಗಿ (Optional) ಲಘುವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ | 1.4 ಲಕ್ಷ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿ

ವಯೋಮಿತಿ: ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೇ ದಿನಾಂಕವಾದ ಮಾರ್ಚ್ 1, 2023ಕ್ಕೆ ಅಭ್ಯರ್ಥಿ ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ವಯಸ್ಸು 35 ಮೀರಕೂಡದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 05 ವರ್ಷ, 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗೆ 03 ವರ್ಷ, ಅಂಗವಿಕಲ ಹಾಗೂ ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ವೇತನಶೇಣಿ: ಬೆರಳಚ್ಚು-ನಕಲುಗಾರ ಹುದ್ದೆಗೆ ಇತರ ಭತ್ಯೆಯೊಂದಿಗೆ ಮಾಸಿಕ 21,400 ದಿಂದ 42,000 ರೂಪಾಯಿ ಹಾಗೂ ಜವಾನ ಹುದ್ದೆಗೆ ಇತರ ಭತ್ಯೆಗಳೊಂದಿಗೆ ಪ್ರತಿ ತಿಂಗಳು 17,000 ದಿಂದ 28,950 ರೂಪಾಯಿ ವೇತನ ಮತ್ತು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಜೇನು ಸಾಕಣೆ: ರೈತರಿಗೆ ಸಿಗಲಿದೆ ಭರ್ಜರಿ ಸಹಾಯಧನ | ಈ ಸೌಲಭ್ಯ ಪಡೆಯುವುದು ಹೇಗೆ?

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ-1, ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಲಿಂದ 200 ರೂಪಾಯಿ, ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಂದ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (SBI) ಚಲನ್ ಮೂಲಕ ಮಾರ್ಚ್ 3, 2023 ರೊಳಗೆ ಶುಲ್ಕ ಪಾವತಿಸಬೇಕು. ಗಮನಿಸಿ: ಒಮ್ಮೆ ಶುಲ್ಕ ಪಾವತಿಸಿದ ನಂತರ ಹಿಂತಿರುಗಿಸಲಾಗುವುದಿಲ್ಲ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಹಾಗೂ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಗಳನ್ನು ಧಾರವಾಡ ನ್ಯಾಯಾಲಯ ವೆಬ್‌ಸೈಟ್ https://districts.ecourts.gov.in/dharwad-onlinerecruitment ಲಿಂಕ್ ಮೂಲಕ ಸಲ್ಲಿಸತಕ್ಕದ್ದು. ಸರಿಯಾದ ಮಾಹಿತಿ ನೀಡದಿರುವ ಅಪೂರ್ಣ ಅರ್ಜಿ ತಿರಸ್ಕರಿಸಲಾಗುವುದು. ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಭಾವಚಿತ್ರ ಮತ್ತು ಸಹಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ, ಮಾಹಿತಿ ಭರ್ತಿ ಮಾಡಿ, ನಿಗದಿತ ಶುಲ್ಕ ಪಾವತಿಸಿ, ಅರ್ಜಿ ಹಾಗೂ ಶುಲ್ಕ ತುಂಬಿದ ಪ್ರತಿ ಡೌನ್‌ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವ ವರೆಗೂ ಕಾಯ್ದಿರಿಸಿಕೊಂಡು ಅರ್ಹತಾ ಪರೀಕ್ಷೆ/ಸಂದರ್ಶನದ ಸಮಯದಲ್ಲಿ ಹಾಜರುಪಡಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ:  ಫೆಬ್ರವರಿ 1, 2023ರಿಂದ ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿಯಿರುವ ಬೆರಳಚ್ಚು-ನಕಲುಗಾರ ಹಾಗೂ ಜವಾನ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಮಾರ್ಚ್ 1, 2023 ಕೊನೆಯ ದಿನವಾಗಿದೆ.

ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಬೆರಳಚ್ಚು-ನಕಲುಗಾರ ಹಾಗೂ ಜವಾನ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಬೆರಳಚ್ಚು-ನಕಲುಗಾರ ಹಾಗೂ ಜವಾನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಮಾಹಿತಿಗಾಗಿ ಧಾರವಾಡ ಜಿಲ್ಲಾ ನ್ಯಾಯಾಲಯ ಘಟಕದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ನಿಖರ ಉದ್ಯೋಗ Newsಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ

ಇದನ್ನೂ ಓದಿ: 

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!