ಉದ್ಯೋಗ

10th, 12th ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕಲಬುರಗಿಯಲ್ಲಿ ಕೆಲಸ | District Court Recruitment 2023

WhatsApp Group Join Now
Telegram Group Join Now

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವೇತನ, ವಿದ್ಯಾರ್ಹತೆ, ಅಧಿಸೂಚನೆ ಲಿಂಕ್ ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…

ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರು ಗ್ರೇಡ್ 3, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಹಾಗೂ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ಣh, 12ಣh  ಪಾಸಾದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದ್ದು; ಇದೇ ಮಾರ್ಚ್ 25, 2023ರ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ:

  1. ಶೀಘ್ರ ಲಿಪಿಗಾರರು ಗ್ರೇಡ್ III : 08 ಹುದ್ದೆಗಳು
  2. ಆದೇಶ ಜಾರಿಕಾರರು : 13
  3. ಜವಾನ : 29
  4. ಬೆರಳಚ್ಚುಗಾರರು : 09
  5. ಬೆರಳಚ್ಚು ನಕಲುಗಾರರು : 01

ಒಟ್ಟು ಹುದ್ದೆಗಳ: 60

ಇದನ್ನೂ ಓದಿ: ರೈತರಿಗೆ 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಸಾಲ ಏಪ್ರಿಲ್ 1ರಿಂದ ಜಾರಿ: ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

1. ಗ್ರೇಡ್ III ಶೀಘ್ರ ಲಿಪಿಕಾರರು:

ಗ್ರೇಡ್ 3 ಶೀಘ್ರ ಲಿಪಿಗಾರರು 08 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ  ಹುದ್ದೆಗೆ 27,650 ದಿಂದ 52,650 ರೂಪಾಯಿ ಮಾಸಿಕ ವೇತನ ನಿಗಧಿ ಮಾಡಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ (ಸೀನಿಯರ್ ಗ್ರೇಡ) ಮತ್ತು ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಪದವಿಯೊಂದಿಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಕಲಬುರಗಿ ಜಿಲ್ಲಾ ನ್ಯಾಯಾಲಯದ ಗ್ರೇಡ್ 3 ಶೀಘ್ರ ಲಿಪಿಕಾರರ ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಪದವಿಧರರಿಗೆ ಇಲ್ಲಿದೆ ವಾರ್ಷಿಕ 5 ಲಕ್ಷ ರೂಪಾಯಿ ಸಂಬಳದ ಉದ್ಯೋಗ | ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2023

2. ಬೆರಳಚ್ಚುಗಾರರು

ಬೆರಳಚ್ಚುಗಾರರು 09 ಹುದ್ದೆಗಳು ಖಾಲಿ ಇದ್ದು; ಈ ಹುದ್ದೆಗೆ 21,400 ರಿಂದ 42,000 ರೂಪಾಯಿ ಮಾಸಿಕ ವೇತನ ನಿಗಧಿಪಡಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೂ ಕೂಡ ಯಥಾಪ್ರಕಾರ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ (ಸೀನಿಯರ್ ಗ್ರೇಡ) ಮತ್ತು ಬೆರಳಚ್ಚು ಹಿರಿಯ ದರ್ಜೆ (ಸೀನಿಯರ್ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಪದವಿಯೊಂದಿಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಕಲಬುರಗಿ ಜಿಲ್ಲಾ ನ್ಯಾಯಾಲಯದ ಬೆರಳಚ್ಚುಗಾರರು ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

3. ಬೆರಳಚ್ಚು ನಕಲುಗಾರರು

ಬೆರಳಚ್ಚು ನಕಲುಗಾರರು 01 ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು; ಈ ಹುದ್ದೆಗೆ 21,400 ರಿಂದ 42,000 ರೂಪಾಯಿ ತಿಂಗಳ ಸಂಬಳ ನಿಗಧಿಪಡಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೂ ಸಹ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ (ಸೀನಿಯರ ಗ್ರೇಡ್) ಮತ್ತು ಬೆರಳಚ್ಚು ಹಿರಿಯ ದರ್ಜೆ (ಸೀನಿಯರ ಗ್ರೇಡ್) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ತಾಂತ್ರಿಕ ಪರೀಕ್ಷಾ ಮಂಡಳಿಯು ನಡೆಸುವ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಪದವಿಯೊಂದಿಗೆ ಕನ್ನಡ ಹಾಗೂ ಆಂಗ್ಲ ಭಾಷೆಯ ಶೀಘ್ರಲಿಪಿ ಹಾಗೂ ಬೆರಳಚ್ಚು ವಿಷಯವನ್ನು ಐಚ್ಚಿಕ ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಕಲಬುರಗಿ ಜಿಲ್ಲಾ ನ್ಯಾಯಾಲಯದ ಬೆರಳಚ್ಚು ನಕಲುಗಾರರು ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

4. ಆದೇಶ ಜಾರಿಕಾರರು:

ಆದೇಶ ಜಾರಿಕಾರರು ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾಲಿಸಲಾಗಿದ್ದು; ಈ ಹುದ್ದೆಗೆ 19,950 ರಿಂದ 37,900 ರೂಪಾಯಿ ವೇತನ ನಿಗಧಿ ಮಾಡಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಲಘು ವಾಹನ ಚಾಲನಾ ಪರವಾನಿಗೆ ಪತ್ರ (Driving license) ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಕಲಬುರಗಿ ಜಿಲ್ಲಾ ನ್ಯಾಯಾಲಯದ ಆದೇಶ ಜಾರಿಕಾರರು ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

5. ಜವಾನ:

ಒಟ್ಟು 29 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು; ಈ ಹುದ್ದೆಗೆ 17,000 ರಿಂದ 28,950 ರೂಪಾಯಿ ಮಾಸಿಕ ವೇತನ ನಿಗಧಿಪಡಿಸಲಾಗಿದೆ.

ವಿದ್ಯಾರ್ಹತೆ: ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ಲಘು ವಾಹನ ಚಾಲನಾ ಪರವಾನಿಗೆ ಪತ್ರ ಐಚ್ಛಿಕವಾಗಿರುತ್ತದೆ (Optional).

ಕಲಬುರಗಿ ಜಿಲ್ಲಾ ನ್ಯಾಯಾಲಯದ ಜಾವಾನರ ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: 3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ವಯೋಮಿತಿ:  ಮೇಲ್ಕಾಣಿಸಿದ ಎಲ್ಲ ಹುದ್ದೆಗಳಿಗೆ ಕನಿಷ್ಟ ವಯೋಮಿತಿ 18 ವರ್ಷ ನಿಗಧಿಪಡಿಸಲಾಗಿದೆ. ಗರಿಷ್ಟ ವಯೋಮಿತಿಯು ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು 38 ವರ್ಷ ಹಾಗೂ SC,ST, ಪ್ರವರ್ಗ 1 ಅಭ್ಯರ್ಥಿಗಳು 40 ವರ್ಷ ಗರಿಷ್ಟ ವಯೋಮಿಯೊಳಗೆ ಇರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ರೂಪಾಯಿ, ಎಸ್ಸಿ, ಎಸ್ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ 100 ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿAಗ್ ಮೂಲಕ ಶುಲ್ಕ ಪಾವತಿಸಬಹುದು. ಅಥವಾ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಿಂದ ಚಲನ್ ಪ್ರಿಂಟ್ ತೆಗೆದು ಎಸ್‌ಬಿಐ ಬ್ಯಾಂಕಿನ ಯಾವುದೇ ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ: ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ ಹುದ್ದೆಗೆ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಹಾಗೂ ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇನ್ನು ಆದೇಶ ಜಾರಿಕಾರ, ಜವಾನ ಹುದ್ದೆಗೆ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ದಿನಾಂಕ: ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರು ಗ್ರೇಡ್ 3, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಹಾಗೂ ಜವಾನ ಹುದ್ದೆಗಳಿಗೆ ಫೆಬ್ರವರಿ 24, 2023ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಮಾರ್ಚ್ 25, 2023 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ. ಅದೇ ರೀತಿ ಮಾರ್ಚ್ 27, 2023 ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.

ಕಲಬುರಗಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ…

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!