ಕೃಷಿಸರಕಾರಿ ಯೋಜನೆ

Drought Relief : ರೈತರು ಸುಸೂತ್ರ ಬರ ಪರಿಹಾರ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ…

WhatsApp Group Join Now
Telegram Group Join Now

ರೈತರು ಬರ ಪರಿಹಾರದ ತಮ್ಮ ಖಾತೆಗೆ ಜಮೆಯಾಗಲು ಸರಕಾರ ಕೆಲವು ನಿಯಮಗಳನ್ನು ವಿಧಿಸಿದೆ. ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಹಾಗಿದ್ದರೆ ರೈತರು ಬರ ಪರಿಹಾರ ಪಡೆಯಲು ಏನು ಮಾಡಬೇಕು? ಸಮಗ್ರ ಮಾಹಿತಿ ಇಲ್ಲಿದೆ…

ಬರ ಪರಿಹಾರ ಕಾರ್ಯ ದಿನೇ ದಿನೆ ಚುರುಕು ಪಡೆಯುತ್ತಿದೆ. ರಾಜ್ಯದಲ್ಲಿ ಮಳೆ ಕೊತೆಯಿಂದಾಗಿ 33,710 ಕೋಟಿ ರೂಪಾಯಿ ಬೆಳೆಹಾನಿ ಆಗಿದ್ದು; ಕೇಂದ್ರದಿ೦ದ 17,901 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ರಾಜ್ಯ ಸರಕಾರ ಕೇಂದ್ರವನ್ನು ಮೇಲಿಂದ ಮೇಲೆ ವಿನಂತಿ ಸಲ್ಲಿಸುತ್ತಿದೆ. ಇಷ್ಟರಲ್ಲೇ ಪರಿಹಾರ ಫಂಡ್ ಬಿಡುಗಡೆಯಾಗಲಿದೆ.

ಈಚೆಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಖುದ್ದು ಭೇಟಿ ಮಾಡಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಬರ ಪರಹಾರ ಬಂದ ಕೂಡಲೇ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮೆಯಾಗಲಿದೆ. ಆದರೆ ಈ ಹಣ ಸುಸೂತ್ರ ಜಮೆಯಾಗಲು ರೈತರು ಕೆಲವು ನಿಯಮಗಳನ್ನು ಪಾಲಿಸಲೇ ಬೇಕಿದೆ.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಏನು ನಿಯಮಗಳು? : 2023-24ರ ಮುಂಗಾರು ರಾಜ್ಯದ ಕೆಲವೇ ಕೆಲವು ತಾಲ್ಲೂಕುಗಳನ್ನು ಹೊರತುಪಡಿಸಿ ಇಡೀ ರಾಜ್ಯವನ್ನೇ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬರದಿಂದ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರ ಪಾವತಿಸಲು ಸರಕಾರ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

  • 2023-24ನೇ ಸಾಲಿನಿಂದ ರೈತರು ಸರ್ಕಾರದ ಯಾವುದೇ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆಯಲು ಫ್ರೂಟ್ಸ್ (Farmers Registration and Unified Beneficiary Information System) ತಂತ್ರಾ೦ಶದಲ್ಲಿ ಪಹಣಿ ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ.
  • ಎಫ್‌ಐಡಿ (ರೈತರ ಗುರುತಿನ ಚೀಟಿ) ನೋಂದಣಿ ಮಾಡಿರದಿದ್ದರೆ ಯಾವುದೇ ರೀತಿಯ ಪರಿಹಾರ ದೊರಕುವುದಿಲ್ಲ. ಹೀಗಾಗಿ ರೈತರು ತಮ್ಮ ಎಲ್ಲ ಹೊಲಗಳನ್ನು ಕಡ್ಡಾಯವಾಗಿ ಎಫ್‌ಐಡಿಗೆ ನೋಂದಣಿ ಮಾಡಿಸಬೇಕು.
  • ಬೆಳೆ ಹಾನಿಯಾದ ಸರ್ವೇ ನಂಬರ್ ವಿವರ ಕಡ್ಡಾಯವಾಗಿ ಪ್ರೊಟ್ಸ್ ತಂತ್ರಾ೦ಶದಲ್ಲಿ ಜೋಡಣೆಯಾಗಿರಬೇಕು. ಸದರಿ ಸರ್ವೇ ನಂಬರ್‌ನ ಬೆಳೆಯು ಮುಂಗಾರು ಬೆಳೆ ಸಮೀಕ್ಷೆ 2023ರಲ್ಲಿ ದಾಖಲಾಗಿರುವುದು ಕಡ್ಡಾಯವಾಗಿರುತ್ತದೆ

ಇದನ್ನೂ ಓದಿ: ಹಸು ಖರೀದಿಗೆ ₹58,500 ರೂಪಾಯಿ ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ… subsidy for purchase of cow

ನೋಂದಣಿಗಾಗಿ ಏನೇನು ಬೇಕು?: ಫ್ರೂಟ್ಸ್ ಐಡಿ ಆಗದೇ ಇರುವ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಎಲ್ಲ ಜಮೀನುಗಳ ಪಹಣಿ, ದೂರವಾಣಿ ಸಂಖ್ಯೆ (ಬ್ಯಾಂಕ್ ಖಾತೆಗೆ ಹಾಗೂ ಆಧಾರ್‌ಸಂಖ್ಯೆಗೆ ಜೋಡಣೆಯಾಗಿರುವ ದೂರವಾಣಿ ಸಂಖ್ಯೆ), ಆಧಾರ ಮತ್ತು ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್ ನೀಡುವ ಮೂಲಕ ಪ್ರೊಟ್ಸ್ ಐಡಿ ನೋಂದಣಿ ಮಾಡಿಸಬೇಕು.

ಇದನ್ನೂ ಓದಿ: ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ: ಯಾವ ಬೆಳೆ ಎಷ್ಟು ಹಣ? ಅರ್ಜಿ ಸಲ್ಲಿಕೆ ಹೇಗೆ? Mnarega Subsidy for Horticulture Crops

ಎಫ್‌ಐಡಿಯಿಂದ ಏನು ಲಾಭ?: ಫ್ರೂಟ್ಸ್ ಐಡಿ ಮಾಡಿಸುವುದರಿಂದಾಗಿ ಸರ್ಕಾರದಿಂದ ಬರುವ ಬರ ಪರಿಹಾರ, ಬೆಳೆವಿಮಾ, ಕೃಷಿ ಇಲಾಖೆಯ ಸೌಲಭ್ಯಗಳು, ತೋಟಗಾರಿಕೆಯ ಸೌಲಭ್ಯಗಳು ಸೇರಿದಂತೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಲು ತುಂಬ ಅನುಕೂಲವಾಗಲಿದೆ. ಬರ ಪರಿಹಾರವು ನೇರವಾಗಿ ರೈತರ ಖಾತೆಗೆ ನಗದು ವರ್ಗಾವಣೆ (DBT) ಮೂಲಕ ವರ್ಗಾವಣೆ ಮಾಡುವುದರಿಂದ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಈಗಾಗಲೇ ರೈತರು ಫ್ರೂಟ್ಸ್ ನೋಂದಣಿ ಮಾಡಿಕೊಂಡಿದ್ದರೆ, ತಮ್ಮ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಸೇರ್ಪಡೆಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು.

Drought Relief | Farmers Identity Details – FID

Drought Relief by Central Govt : ಕೇಂದ್ರ ಬರ ಪರಿಹಾರ ರೈತರ ಖಾತೆಗಳಿಗೆ ನೇರ ವರ್ಗಾವಣೆ Kendra Bara Parihara

WhatsApp Group Join Now
Telegram Group Join Now

Related Posts

error: Content is protected !!