ಕೃಷಿ

ಮಣ್ಣನ್ನು ಮೃಷ್ಟಾನ್ನ ಮಾಡುವ ಎರೆಹುಳು | Earthworm

WhatsApp Group Join Now
Telegram Group Join Now

ಮಣ್ಣಿನಡಿಯಲ್ಲಿ ನಿಗೂಢವಾಗಿ ದುಡಿಯುವ ಎರೆಹುಳುಗಳು ಅನ್ನದಾತನ ಆಪ್ತಮಿತ್ರ ಎಂದೇ ಪ್ರಸಿದ್ಧ. ಮಣ್ಣಿನಲ್ಲಿರುವ ಸಾವಯುವ ವಸ್ತುಗಳನ್ನು ತಿಂದು, ಅವುಗಳನ್ನು ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನು ಒಳಗೊಂಡ ಸತ್ವಯುತ ಗೊಬ್ಬರವನ್ನಾಗಿ ಪರಿವರ್ತಿಸುವ ಇವುಗಳ ಶ್ರಮಕ್ಕೆ ಬೆಲೆ ಕಟ್ಟಲಾಗದು. ಎರೆಹುಳುಗಳು  ಬರುಡು ನೆಲವನ್ನು ಹೇಗೆ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುತ್ತವೆ ಎಂಬ ವಿವರ ಇಲ್ಲಿದೆ…

ಎರೆಹುಳು ಅಕ್ಷರಶಃ ನಿಸ್ವಾರ್ಥ ದುಡಿಮೆಗಾರ. ಅಪ್ಪಟ ಭೂಮಿಪುತ್ರ, ನೆಲ ಪೋಷಕ, ಸಸ್ಯಗಳ ಜೀವ ರಕ್ಷಕ. ಮಣ್ಣಲ್ಲಿರುವ ನಿರುಪಯುಕ್ತ ತ್ಯಾಜ್ಯ ತಿಂದು ಅನ್ನ ಬೆಳೆಯಲು ಬೇಕಾದ ಉತ್ಕೃಷ್ಟ ಗೊಬ್ಬರ ಕೊಡುವ ಇವು ಮಹಾನ್ ತ್ಯಾಗಜೀವಿಗಳು. ಈ ನಿರುಪದ್ರವಿ ಜೀವಿಗಳು ಮಣ್ಣಿನ ಆಳದಲ್ಲಿ ವಿಶ್ರಾಂತಿ ಇಲ್ಲದೇ ಶ್ರಮಿಸುತ್ತವೆ; ಪ್ರತಿಫಲ ನಿರೀಕ್ಷಿಸದೇ ದುಡಿಯುತ್ತವೆ.
ಮಣ್ಣಿನಲ್ಲಿರುವ ಸಾವಯುವ ವಸ್ತುಗಳನ್ನು ತಿಂದು, ಅವುಗಳನ್ನು ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನು ಒಳಗೊಂಡ ಸತ್ವಯುತ ಗೊಬ್ಬರವನ್ನಾಗಿ ಪರಿವರ್ತಿಸುವ ಎರೆಹುಳುಗಳು ಅನ್ನದಾತನ ಆಪ್ತಮಿತ್ರ ಎಂದೇ ಪ್ರಸಿದ್ಧ. ನೆಲದಡಿಯಲ್ಲಿ ಇವುಗಳ ಉಳಿಮೆ ನಿತ್ಯ ನಿರಂತರ ಸಾಗಿರುವುದರಿಂದ ಎರೆಹುಳುಗಳನ್ನು ಜೈವಿಕ ನೇಗಿಲು ಅಂತಲೂ ಕರೆಯುವುದಿದೆ. ಚಾರ್ಲ್ಸ್ ಡಾರ್ವಿನ್ ಇವುಗಳನ್ನು ನಾಗರಿಕತೆಯ ನಿರ್ಮಾಪಕರು ಎಂದು ಕರೆದ.
 

ಕೃಷಿಯೊಗ್ಯ ಮಣ್ಣಿನಲ್ಲಿ 3 ಸೆಂಟಿ ಮೀಟರ್ ಮೇಲ್ಪದರು ತಯಾರಾಗಲು ಬರೋಬ್ಬರಿ ಒಂದು ಸಾವಿರ ವರ್ಷಗಳು ಬೇಕು ಎನ್ನುತ್ತವೆ ಸಂಶೋಧನೆಗಳು. ಆದರೆ ಈ ಪರೋಪಕಾರಿ ಎರೆಹುಳುಗಳಿಂದ ಕಲ್ಲು ಉಸುಕಿನ ಹೊಲವನ್ನು ಫಲವತ್ತು ಗದ್ದೆಯಾಗಿ ಪರಿವರ್ತಿಸಲು ಕೇವಲ ಹತ್ತು ವರ್ಷಗಳು ಸಾಕು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಎರೆಹುಳು ಗೊಬ್ಬರ ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ. ಭೂಮಿಯನ್ನು ಸಾಮಾನ್ಯ ಉಳುಮೆ ಮಾಡುವುದರಿಂದ 30 ಸೆಂಟಿ ಮೀಟರ್ ವರೆಗೆ ಮಾಡಬಹುದು. ಆದರೆ ಎರೆಹುಳುಗಳು ಮೂರು ಮೀಟರ್ ವರೆಗೂ ಬೆಳೆಗಳಿಗೆ ಯಾವುದೇ ದುಷ್ಪರಿಣಾಮವಿಲ್ಲದೇ ಉಳುಮೆ ಮಾಡುತ್ತವೆ.

ಪ್ರತಿ ಎರೆಹುಳುವೂ ತನ್ನ ತೂಕದ ಒಂದೂವರೆ ಪಟ್ಟು ಹೆಚ್ಚು ತೂಕದ ಮಣ್ಣನ್ನು ಪ್ರತಿದಿನವೂ ಅಗೆಯುತ್ತದೆ. ಪ್ರತಿರಾತ್ರಿಯೂ ಒಂದು ಎರೆಹುಳು ತಿಂದದ್ದನ್ನು ವಿಸರ್ಜಿಸಲು ಆರರಿಂದ ಎಂಟು ಬಾರಿ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ. ನೆನಪಿರಲಿ, ಪ್ರತಿ ಬಾರಿಯೂ ಅದು ಬೇರೆ ಬೇರೆ ದಾರಿಯಲ್ಲಿಯೇ ಹೊರ ಬರುತ್ತದೆ ಮತ್ತು ಒಳ ಹೋಗುತ್ತದೆ. ಅಂದರೆ ಒಂದು ಎರೆಹುಳು ಒಂದೇ ರಾತ್ರಿಗೆ ಅಂದಾಜು 14 ರಿಂದ 18 ರಂಧ್ರಗಳನ್ನು ಭೂಮಿಗೆ ಕೊರೆಯುತ್ತದೆ.

ಇದನ್ನೂ ಓದಿ: ಹಾಕಿಸಿದರೆ ಜಾನುವಾರುಗಳಿಗೆ ಲಸಿಕೆ, ಅಧಿಕವಾಗುವುದು ರೈತರ ಗಳಿಕೆ | Cattle vaccination

ಒಂದು ಅಡಿ ಜಾಗದಲ್ಲಿ 10 ಎರೆಹುಳುಗಳು ಇದ್ದರೆ ಅಲ್ಲಿ ಬರೋಬ್ಬರಿ 180 ರಂಧ್ರಗಳಾಗುತ್ತವೆ. ಹೀಗೆ ಸೃಷ್ಟಿಯಾಗುವ ತೂತುಗಳಿಂದ ಭೂಮಿಯ ಆಳಕ್ಕೆ ಗಾಳಿ ಸೂಸುತ್ತದೆ. ನೀರು ಹರಿಯುತ್ತದೆ. ಸಾರಜನಕ ಸತ್ವ ತಾನೇ ತಾನಾಗಿ ದುಮ್ಮಿಕ್ಕುತ್ತದೆ. ಆ ಮೂಲಕ ಸಸ್ಯಗಳಿಗೆ ಅಗತ್ಯವಾದ ಪೋಷಕಾಂಶಗಳು ಸೃಷ್ಟಿಯಾಗಿ ಮಣ್ಣಿನ ಫಲವತ್ತತೆ ಉತ್ಕೃಷ್ಟವಾಗುತ್ತದೆ.

ಅನುಪಯುಕ್ತ ತ್ಯಾಜ್ಯ ತಿನ್ನುವ ಎರೆಹುಳುಗಳು ವಿಸರ್ಜಿಸುವ ಗೊಬ್ಬರದಲ್ಲಿ ಶೇ.1.10ರಷ್ಟು ಸಾರಜನಕ, ಶೇ.0.86ರಷ್ಟು ರಂಜಕ, ಶೇ.0.96ರಷ್ಟು ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳಾದ ಕಬ್ಬಿಣ, ಸತು ಹಾಗೂ ತಾಮ್ರದ ಅಂಶಗಳಿರುತ್ತವೆ. ಇದು ಸಂಪೂರ್ಣ ಸಾವಯವ ಗೊಬ್ಬರವಾದ್ದರಿಂದ ಇದರಿಂದ ರೈತ ಬೆಳೆಯುವ ಪ್ರತಿ ಕೃಷಿ ಉತ್ಪನ್ನವೂ ಅಪ್ಪಟ ಆರೋಗ್ಯಕಾರಿ.

ಗಮನಾರ್ಹವೆಂದರೆ, ಎರೆಹುಳುಗಳು ಶೀಘ್ರದಲ್ಲಿಯೇ ಜೀವನ ಚಕ್ರವನ್ನು ಮುಗಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಒಂದು ಎರೆಹುಳು ತನ್ನ ಜೀವಿತ ಅವಧಿಯಲ್ಲಿ 50 ರಿಂದ 100 ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಪ್ರತಿಕೋಶದಿಂದ ಒಂದರಿಂದ ಮೂರು ಮರಿಗಳು 15 ರಿಂದ 21 ದಿನಗಳಲ್ಲಿ ಹೊರ ಬಂದು, ನಂತರ 40 ರಿಂದ 45 ದಿನಗಳಲ್ಲಿ ಪ್ರೌಢಾವಸ್ಥೆಗೆ ತಲುಪಿ ವಂಶೋತ್ಪತ್ತಿ ಆರಂಭಿಸುತ್ತವೆ.

ಇದನ್ನೂ ಓದಿ: ಉಚಿತ ವಿದ್ಯುತ್ ಯೋಜನೆ ನೋಂದಣಿ ಆರಂಭ | ಅಮೃತ ಜ್ಯೋತಿ ವಿದ್ಯುತ್‌ಗೆ ಇಂದೇ ಅರ್ಜಿ ಸಲ್ಲಿಸಿ | amrita jyoti Free electricity scheme

ಉಳಿಮೆ ಮಾಡದೆ, ರಾಸಾಯನಿಕಗಳನ್ನು ಬಳಸದೇ ಇದ್ದರೆ ಒಂದು ಎಕರೆಯಲ್ಲಿ ಮೂರರಿಂದ ನಾಲ್ಕು ಲಕ್ಷ ಎರೆಹುಳುಗಳನ್ನು ಸೃಷ್ಟಿಸಬಹುದು. ಆದರೆ ನೆಲದಡಿಯಲ್ಲಿ ತಮ್ಮಷ್ಟಕ್ಕೆ ತಾವು ಶ್ರಮಿಸುವ ಈ ಎರೆಹುಳುವೆಂಬ ಭೂಮಿಪುತ್ರನಿಗೆ ಈಗೀಗ ರಾಸಾಯನಿಕಯುಕ್ತ ಆಧುನಿಕ ಕೃಷಿಯೇ ಮಾರಕವಾಗುತ್ತಿವೆ. ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಾಕುವುದರಿಂದ, ಕಳೆನಾಶಕ- ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಸುವುದರಿಂದ ಎರೆಹುಳುಗಳು ತಮ್ಮ ಚಟುವಟಿಕೆ ಕುಂಟಿತಗೊಳಿಸುತ್ತಿವೆ.

ಸಮೀಕ್ಷೆಗಳ ಪ್ರಕಾರ ಸುಮಾರು ಆರುನೂರು ಕೋಟಿ ವರ್ಷಗಳಿಂದ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಬದುಕುಳಿದು, ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡು ಬಂದಿರುವ ಎರೆಹುಳುಗಳು ಆಧುನಿಕ ಕೃಷಿಯ ಅಬ್ಬರ-ಅಟ್ಟಹಾಸಕ್ಕೆ ನಿಧನಿಧಾನಕ್ಕೆ ನಲುಗುತ್ತಿವೆ. ಎರೆಹುಳು ಸಂತತಿಯ ನಾಶವೆಂದರೆ ಅದು ನಮ್ಮದೇ ಅವಸಾನದ ಆರಂಭ ಅಂತಲೇ ಅರ್ಥ..!

ಇದನ್ನೂ ಓದಿ: ನಿಮ್ಮ ಜಮೀನಿನ ಮಣ್ಣು ಹೀಗಿದ್ದರೆ ಬಂಪರ್ ಇಳುವರಿ ಗ್ಯಾರಂಟಿ

WhatsApp Group Join Now
Telegram Group Join Now

Related Posts

error: Content is protected !!