ಸರಕಾರಿ ಯೋಜನೆ

Karnataka Gruha Lakshmi Scheme: ಗೃಹಲಕ್ಷ್ಮಿ ₹2,000 ಹಣ ಈ ಲೀಸ್ಟ್ ನಲ್ಲಿರುವ ಕುಟುಂಬ ಯಜಮಾನಿಯರಿಗೆ ಗ್ಯಾರಂಟಿ ಸಿಗಲಿದೆ

WhatsApp Group Join Now
Telegram Group Join Now

ಗೃಹಲಕ್ಷ್ಮಿ ₹2000 ಹಣ ಈ ಪಟ್ಟಿಯಲ್ಲಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಗ್ಯಾರಂಟಿ ಜಮಾ ಆಗಲಿದೆ. ಕುಟುಂಬ ಯಜಮಾನಿಯರ ಪಟ್ಟಿ ಇಲ್ಲಿದೆ….

‘ಗೃಹಲಕ್ಷಿ’ಗೆ ಇದುವರೆಗೆ ಬರೋಬ್ಬರಿ ಒಂದು ಕೋಟಿ ಮಹಿಳೆಯರು ನೋಂದಾಣಿ ಮಾಡಿಕೊಂಡಿದ್ದಾರೆ. ಒಟ್ಟು 1.28 ಕೋಟಿ ಫಲಾನುಭವಿಗಳಿದ್ದು, ನೋಂದಣಿ ಪ್ರಕ್ರಿಯೆ ಆರಂಭಗೊ೦ಡ 15 ದಿನಗಳಲ್ಲೇ ಕೋಟಿಗೂ ಅಧಿಕ ಮಹಿಳೆಯರು ಹೆಸರು ನೋಂದಾಯಿಸಿಕೊ೦ಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 20ರಂದು ಚಾಲನೆ ಸಿಗಲಿದ್ದು, ಪೂರ್ವ ತಯಾರಿ ಆರಂಭವಾಗಿದೆ. ಅಂದು ಬೆಳಗಾವಿಯಲ್ಲಿ ಆಯೋಜನೆಗೊಳ್ಳಲಿರುವ ದೊಡ್ಡ ಸಮಾವೇಶದಲ್ಲಿ ಯೋಜನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಚಾಲನೆ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ಅದೇ ದಿನ ಜಿಲ್ಲಾ ಕೇಂದ್ರಗಳಲ್ಲೂ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಯಾವೆಲ್ಲ ಕಾರಣಕ್ಕೆ ಬೆಳೆಹಾನಿಯಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಗೊಂದಲ ಪರಿಹರಿಸಿಕೊಳ್ಳಿ

ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರೂ ಕೂಡ ಅನೇಕ ಮಹಿಳೆಯರಲ್ಲಿ ವಿವಿಧ ಕಾರಣಕ್ಕೆ ನಮಗೆ ಮೊದಲ ಕಂತಿನ ಹಣ ಸಿಗುತ್ತೋ? ಸಿಗಲ್ವೋ? ಎಂಬ ಗೊಂದಲವಿದೆ. ಈ ಗೊಂದಲವನ್ನು ಈ ಕೆಳಗಿನ ವಿಧಾನದಲ್ಲಿ ತಮ್ಮ ಹೆಸರು ಪರಿಶೀಲಿಸುವ ಮೂಲಕ ಪರಿಹರಿಸಿಕೊಳ್ಳಬಹುದು.

ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ….

ನಿಮಗೆ ಕರ್ನಾಟಕ ಸರಕಾರದ ‘ಮಾಹಿತಿ ಕಣಜ’ ವೆಬ್‌ಸೈಟ್‌ನ My Ration Card Details- ನನ್ನ ಪಡಿತರ ಚೀಟಿ ವಿವರಗಳು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ, ಬಳಿಕ ನಿಮ್ಮ ರೇಷನ್ ಕಾರ್ಡ್ 12 ಸಂಖ್ಯೆಯ ನಂಬರ್ ನಮೂದಿಸಿ ‘ಸಲ್ಲಿಸು’ ಎಂಬಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

ಕುಟುಂಬ ಯಜಮಾನಿಯ ಹೆಸರು  

ರೇಷನ್ ಕಾರ್ಡ್ ನಂಬರ್ ನಮೂದಿಸಿ ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿದ ಬಳಿಕ ‘ನನ್ನ ಪಡಿತರ ಅಂಗಡಿ ವಿವರ’ ಹಾಗೂ ‘ಕುಟುಂಬ ಸದಸ್ಯರ ವಿವರಗಳು’ ಎಂಬ ಎರಡು ಬಾಕ್ಸ್ ಕಾಣಿಸಿಕೊಳ್ಳುತ್ತವೆ.

My Ration Card Details (ನನ್ನ ಪಡಿತರ ಅಂಗಡಿ ವಿವರ) ಬಾಕ್ಸ್ ನಲ್ಲಿ ನಿಮ್ಮ ತಾಲ್ಲೂಕು, ಗ್ರಾಮ ಪಂಚಾಯತಿ, ಗ್ರಾಮ, ಪ್ರದೇಶ, ಕಾರ್ಡ್ ಪ್ರಕಾರ, ಅಂಗಡಿ ಹೆಸರು ಹಾಗೂ ಕಾರ್ಡ್ ಸ್ಥಿತಿಯ ವಿವರಗಳು ಕಾಣಸಿಗುತ್ತವೆ. Card Status – ಕಾರ್ಡ್ ಸ್ಥಿತಿ ವಿವರದಲ್ಲಿ Active- ಸಕ್ರೀಯ ಎಂದಿರಬೇಕು. ಅಂದರೆ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ ಎಂದರ್ಥ.

ಇನ್ನು ಕೆಳಗೆ My Ration Shop Details – ನನ್ನ ಪಡಿತರ ಅಂಗಡಿ ವಿವರ ಬಾಕ್ಸ್ ನಲ್ಲಿ ಕುಟುಂಬ ಸದಸ್ಯರು, ಕುಟುಂಬದ ಮುಖ್ಯಸ್ಥರೊಂದಿಗೆ ಸಂಬ೦ಧ, ವಿಳಾಸ, ಲಿಂಗ, ಹುಟ್ಟಿದ ದಿನಾಂಕ ಮತ್ತು ವಯಸ್ಸಿನ ಮಾಹಿತಿ ಸಿಗುತ್ತದೆ.

ಇದರಲ್ಲಿ Relationship with family He – ಕುಟುಂಬದ ಮುಖ್ಯಸ್ಥರೊಂದಿಗೆ ಸಂಬ೦ಧ ಎಂಬ ಕಾಲಂನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಹೆಸರಿನ ಮುಂದೆ family Head – ಕುಟುಂಬದ ಮುಖ್ಯಸ್ಥರು ಎಂದಿರಬೇಕು. ಅಂದರೆ ನೀವು ಕುಟುಂಬ ಯಜಮಾನಿ ಆಗಿದ್ದು; ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದೀರಿ ಎಂದರ್ಥ.

 

ಹೀಗೆ Card Status – ಕಾರ್ಡ್ ಸ್ಥಿತಿ ವಿವರದಲ್ಲಿ Active- ಸಕ್ರೀಯವಾಗಿದ್ದು; ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದ ಫಲಾನುಭವಿ ಮಹಿಳೆಯ ಹೆಸರಿನ ಮುಂದೆ family Head – ಕುಟುಂಬದ ಮುಖ್ಯಸ್ಥರು ಎಂದು ನಮೂದಾಗಿದ್ದರೆ ಖಂಡಿತ ಅಂಥವರ ಬ್ಯಾಂಕ್ ಖಾತೆಗೆ ಯೋಜನೆಯ 2,000 ರೂಪಾಯಿ ಪ್ರೋತ್ಸಾಹಧನ ಜಮಾ ಆಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ…

ಇದನ್ನೂ ಓದಿ: Ration Card Update: ರೇಷನ್ ಕಾರ್ಡ್ ಅಪ್ಡೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ | ಇಲ್ಲಿದೆ ಅಪ್ಡೇಟ್ ಮಾಡುವ ಸರಳ ವಿಧಾನ

WhatsApp Group Join Now
Telegram Group Join Now

Related Posts

error: Content is protected !!