ಕೃಷಿಸರಕಾರಿ ಯೋಜನೆ

ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

WhatsApp Group Join Now
Telegram Group Join Now

ರೈತರು ಬರ ಪರಿಹಾರ ಪಡೆಯಲು ಎಫ್‌ಐಡಿ ನೋಂದಣಿ ಕಡ್ಡಾಯವಾಗಿದೆ. ಕೂಡಲೇ ಈ ಕೆಲಸ ಮಾಡಿದರೆ ಮಾತ್ರ ಬರಗಾಲದ ನೆರವು ಸಿಗಲಿದೆ. ಈ ಕುರಿತು ಕೃಷಿ ಇಲಾಖೆ ಹೊರಡಿಸಿರುವ ಪ್ರಕಣೆಯ ವಿವರ ಇಲ್ಲಿದೆ…

FID Registration : ರಾಜ್ಯದಲ್ಲಿ ಒಟ್ಟು 33,710 ಕೋಟಿ ರೂಪಾಯಿ ಬೆಳೆಹಾನಿ ಆಗಿದ್ದು; ಕೇಂದ್ರದಿ೦ದ 17,901 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಆದರೆ ಪರಿಹಾರ ಬಿಡುಗಡೆಗೆ ಕೇಂದ್ರ ಸರಕಾರ ವಿಳಂಬ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕಳೆದ ನವೆಂಬರ್ 3ರಂದು 324 ಕೋಟಿ ರೂಪಾಯಿ ತುರ್ತು ಬರ ಪರಿಹಾರ ಬಿಡುಗಡೆ ಮಾಡಿದೆ. SDRF ಅಡಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು; ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರು, ಗ್ರಾಮೀಣ ಭಾಗದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಆದರೆ, ರೈತರು ಬರ ಪರಿಹಾರ ಪಡೆಯಲು ಹಲವು ನಿಯಮಗಳಿದ್ದು; ಈ ಪೈಕಿ ಎಫ್‌ಐಡಿ ನೋಂದಣಿ ಕೂಡ ಒಂದಾಗಿದೆ. ಎಫ್‌ಐಡಿ (ರೈತರ ಗುರುತಿನ ಚೀಟಿ) ಹೊಂದಿರದಿದ್ದರೆ ಯಾವುದೇ ರೀತಿಯಿಂದ ಪರಿಹಾರ ದೊರಕುವುದಿಲ್ಲ. ಹೀಗಾಗಿ ಇನ್ನೂ ಎಫ್‌ಐಡಿ ಹೊಂದಿರದ ರೈತರು ಕೂಡಲೇ ಎಫ್‌ಐಡಿಯನ್ನು ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನೂ ಸಾವಿರಾರು ರೈತರು ಎಫ್‌ಐಡಿ ನೋಂದಣಿ ಮಾಡಿಸಿಕೊಂಡಿಲ್ಲ. ಇಂತಹ ರೈತರಿಗೆ ‘ಬರ ಪರಿಹಾರ’ ಅವರ ಬ್ಯಾಂಕ್ ಖಾತೆಗೆ ಜಮೆ ಆಗುವುದಿಲ್ಲ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಎಫ್‌ಐಡಿ ಎಂದರೆ…

ಎಫ್‌ಐಡಿ ಎಂದರೆ ಫಾರ್ಮರ್ಸ್ ಐಡೆಂಟಿಟಿ ಡೀಟೈಲ್ಸ್ ಎಂದರ್ಥ. ಇದೊಂದು ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ. ಸರಕಾರ ಇದಕ್ಕಾಗಿಯೇ FRUITS ಎಂದು ಕರೆಯಲ್ಪಡುವ ಸಾಫ್ಟ್ವೇರ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. Farmers Registration and Unified Beneficiary Information System (FRUITS) ಎಂಬುವುದು ಇದರ ಪೂರ್ಣಾರ್ಥ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು NIC ಸಹಯೋಗದೊಂದಿಗೆ FRUITS ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. FRUITS ವೆಬ್‌ಸೈಟ್‌ನಲ್ಲಿ ರೈತರು ಒಮ್ಮೆ ತಮ್ಮ ವಿವರ ನೋಂದಾಯಿಸಿದರೆ ಅನೇಕ ಸರ್ಕಾರಿ ಸಬ್ಸಿಡಿ ಯೋಜನೆಗಳ ಲಾಭ ಸಿಗಲಿದೆ. ಇದು ರೈತರು ಪ್ರಯೋಜನಗಳನ್ನು ಪಡೆಯಲು ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುತ್ತದೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ | Gruhalakshmi, Annabhagya Pension Money Deposit Date fix

ಬರ ಪರಿಹಾರಕ್ಕೆ ಎಫ್‌ಐಡಿ ಕಡ್ಡಾಯ

ಬರಪೀಡಿತ ತಾಲ್ಲೂಕುಗಳ ಪಟ್ಟಿ ಹಚ್ಚಾಗುತ್ತಾ ಹೋಗುತ್ತಿದೆ. ಮೂರನೇ ಹಂತದಲ್ಲಿ ಏಳು ತಾಲ್ಲೂಕುಗಳನ್ನು ಸೇರಿಸಲಾಗಿದ್ದು; ಈಗ ರಾಜ್ಯದ ಒಟ್ಟು 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ಬರಪೀಡಿತ ತಾಲ್ಲೂಕುಗಳ ರೈತರಿಗೆ ವಿಶೇಷ ‘ಬರ ಪರಿಹಾರ’ ಸಿಗಲಿದೆ. ಇದರ ಪ್ರಯೋಜನೆ ಪಡೆಯಲು ಬರ ಪೀಡಿತ ಎಂದು ಘೋಷಣೆಯಾಗಿರುವ ತಾಲ್ಲೂಕುಗಳ ರೈತರು ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು.

ಬರ ಪರಿಹಾರವು ನೇರವಾಗಿ ರೈತರ ಖಾತೆಗೆ ನಗದು ವರ್ಗಾವಣೆ (DBT) ಮೂಲಕ ವರ್ಗಾವಣೆ ಮಾಡಲಾಗುವುದು. ಹೀಗಾಗಿ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಈಗಾಗಲೇ ರೈತರು ಫ್ರೂಟ್ಸ್ ನೋಂದಣಿ ಮಾಡಿಕೊಂಡಿದ್ದರೆ, ತಮ್ಮ ಎಲ್ಲ ಜಮೀನುಗಳ ಸರ್ವೇ ನಂಬರ್‌ಗಳನ್ನು ಸೇರ್ಪಡೆಯಾಗಿರುವ ಕುರಿತು ಖಚಿತಪಡಿಸಿಕೊಳ್ಳಬೇಕು.

ಇದನ್ನೂ ಓದಿ: New Ration Card: ಹೊಸ ಕಾರ್ಡ್ ವಿತರಣೆಗೆ ಸರಕಾರದ ಗ್ರೀನ್ ಸಿಗ್ನಲ್ : ಯಾರಿಗೆಲ್ಲ ಸಿಗಲಿದೆ ಹೊಸ ರೇಷನ್ ಕಾರ್ಡ್?

ಎಲ್ಲ ಸರ್ವೇ ನಂಬರ್‌ಗಳನ್ನೂ ನಮೂದಿಸಿ

ಒಬ್ಬ ರೈತ ಒಂದಕ್ಕಿ೦ತ ಹೆಚ್ಚು ಸರ್ವೆ ನಂಬರ್‌ಗಳನ್ನು ಹೊಂದಿದ್ದಲ್ಲಿ, ಎಲ್ಲಾ ಸರ್ವೆ ನಂಬರ್‌ಗಳನ್ನು ಎಫ್‍ಐಡಿಯಲ್ಲಿ ನಮೂದಿಸಬೇಕು ಹಾಗೂ ಜಂಟಿ ಖಾತೆಗಳಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್‍ಐಡಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬರ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗುವುದಿಲ್ಲ. ಈಗಾಗಲೇ ಎಫ್‌ಐಡಿ ಮಾಡಿಸಿದ್ದಲ್ಲಿ ಮತ್ತೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

ಎಫ್‌ಐಡಿ ಮಾಡಿಸಿಕೊಳ್ಳಲು ರೈತರ ಆಧಾರ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ಸಮೀಪದ ನಾಗರೀಕ ಸೇವಾ ಕೇಂದ್ರ (ಸಿಎಸ್‌ಸಿ), ಹೋಬಳಿಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆಯ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಬಹುದು.

ಎಫ್‌ಐಡಿ ಆನ್‌ಲೈನ್ ನೋಂದಣಿ ಲಿಂಕ್ : https://fruits.karnataka.gov.in

ಕೃಷಿ, ಪಶುಪಾಲನೆ, ತೋಟಗಾರಿಕೆ ಸರಕಾರಿ ಯೋಜನೆಗಳ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ…

ಅನ್ನಭಾಗ್ಯ ಹಣ ಬಂದ್ ಮಾಡುವಂತೆ ನ್ಯಾಯಬೆಲೆ ಅಂಗಡಿಕಾರರ ಹರತಾಳ : ಕಮೀಷನ್‌ಗಾಗಿ ಪಡಿತರ ವಿತರಕರ ಪ್ರತಿಭಟನೆ Ration Distributors Protest

WhatsApp Group Join Now
Telegram Group Join Now

Related Posts

error: Content is protected !!