ಪಶುಪಾಲನೆ

ಲಕ್ಷ ಲಕ್ಷ ಆದಾಯ ತರುವ ಖಿಲಾರಿ ಎತ್ತುಗಳ ಸಾಕಣೆ | Farming of Kilari bulls which brings huge income

WhatsApp Group Join Now
Telegram Group Join Now

ಕನ್ನಡ ನೆಲದ ಅಪ್ಪಟ ನಾಟಿ ತಳಿಯಾಗಿರುವ ಖಿಲಾರಿ ಎತ್ತುಗಳ ಸಾಕಣೆಯಿಂದ ರೈತರ ಅದೃಷ್ಟವೇ ಬದಲಾಗಲಿದೆ. ಏಕೆಂದರೆ ಪ್ರತಿ ಜೋಡಿ ಎತ್ತಿನ ಬೆಲೆ ಒಂದೂವರೆ ಲಕ್ಷದಿಂದ ನಾಲ್ಕು ಲಕ್ಷ ರೂಪಾಯಿ. ಉಳುಮೆಯಲ್ಲದೇ ಸೆಗಣಿ, ವೀರ‍್ಯದ ಮೂಲಕವೂ ಆದಾಯ ತರುತ್ತವೆ. ಖಿಲಾರಿ ಎತ್ತುಗಳ ತಳಿ ವೈವಿಧ್ಯತೆ, ವಿಸೇಷ ಗುಣಗಳು, ಸಾಕಣೆ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಒಂದು ಜೋಡಿ ಖಿಲಾರಿ ಎತ್ತುಗಳು ಒಂದು ಟ್ರ್ಯಾಕ್ಟರ್‌ಗಿಂತ ಹೆಚ್ಚಿನ ಕೆಲಸ ಮಾಡುತ್ತವೆ. ಉಳುಮೆಯಲ್ಲದೇ ಸೆಗಣಿ, ವೀರ‍್ಯದ ಮೂಲಕವೂ ಆದಾಯ ತರುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಜೋಡಿ ಖಿಲಾರಿ ಎತ್ತುಗಳಿದ್ದರೆ ಕಾರು ಇರುವುದಕ್ಕಿಂತ ಹೆಚ್ಚಿನ ಗೌರವ. ಒಂದೊಂದು ಹೋರಿಯೂ ಲಕ್ಷಾಂತರ ರುಪಾಯಿ ಬೆಲೆ ಬಾಳುತ್ತವೆ.

ಚಕ್ಕಡಿ ಗಾಡಿಗೆ ಕಟ್ಟಿದರೂ ಸೈ, ಹೊಲ ಉಳುಮೆ ಮಾಡುವುದಕ್ಕೂ ಸೈ ಎನಿಸಿರುವ ಈ ಖಿಲಾರಿ ತಳಿ ಎತ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ರಾಜ್ಯದ ದೇವಣಿ, ಅಮೃತಮಹಲ್, ಹಳ್ಳಿಕಾರ್ ತಳಿಗಳಂತೆ ಖಿಲಾರಿ ತಳಿಯೂ ಅಷ್ಟೇ ಉತ್ಕೃಷ್ಟ ಎನಿಸಿದೆ. ಖಿಲಾರಿ ಜಾನುವಾರು ತಳಿ ಉತ್ತರ ಕರ್ನಾಟಕ ಭಾಗದ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ.

ಈ ತಳಿಯ ಎತ್ತುಗಳು ದಿನದಲ್ಲಿ 8 ರಿಂದ 10 ಗಂಟೆಗಳ ವರೆಗೂ ಬಿಸಿಲು ಹಾಗೂ ಮಳೆಯಲ್ಲೂ ಕೆಲಸ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಕಡಿಮೆ ಮೇವು, ಕಡಿಮೆ ನೀರು ಅತಿಯಾದ ಬಿಸಿಲು ಹೊಂದಿರುವ, ಬರಪಿಡಿತ ಪ್ರದೇಶಗಳಲ್ಲೂ ಸಹ ಉತ್ತಮ ಸಾಮರ್ಥ್ಯ ತೊರಬಲ್ಲವು.

ಈ ತಳಿಯು ದಕ್ಷಿಣ ಕರ್ನಾಟಕದ ಹಳ್ಳಿಕಾರ ತಳಿಯಿಂದ ಉಗಮವಾಗಿದ್ದು, ಕರ್ನಾಟಕವಲ್ಲದೇ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ, ಕೊಲ್ಲಾಪೂರ, ಸಾಂಗ್ಲಿ, ಸತಾರಾ, ಪಶ್ಚಿಮ ಖಂಡೇಶ, ನಾಸಿಕ, ಅಹಮದ ನಗರ, ಪುಣೆ ಹಾಗೂ ಸಪ್ತಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಖಿಲಾರಿ ಎಂಬುವುದು ದಕ್ಷಿಣ ಮಹಾರಾಷ್ಟ್ರ ರಾಜ್ಯದ ಪಶುಪಾಲಕರ ಒಂದು ಗುಂಪಾಗಿದ್ದು; ಆ ಗುಂಪಿನಿಂದಾಗಿ ಈ ಜಾನುವಾರು ತಳಿಗೆ ಈ ಹೆಸರು ಬಂದಿದೆ.

ಇದನ್ನೂ ಓದಿ: ಕುರಿಮೇಕೆ ಸಾಕಾಣಿಕೆಗೆ 1.75 ಲಕ್ಷ ಆರ್ಥಿಕ ನೆರವು | Amrita Swabhimani Kurigahi Yojana

ಖಿಲ್ಲಾರಿ ತಳಿಯ ವಿಧಗಳು

1 ಮಶಿವದ ಖಿಲಾರಿ:  ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ, ಅಕ್ಕಲಕೋಟೆ, ಸತಾರಾ, ಮನವಾ ಭಾಗಗಳಲ್ಲಿ ಕಂಡು ಬರುತ್ತದೆ. ಬಿಳಿಯ ಬಣ್ಣವನ್ನು ಹೊಂದಿದ್ದು ಚುರುಕಾಗಿರುತ್ತವೆ.

2 ಹನುಮ ಖಿಲಾರಿ:  ಈ ವಿಧದ ಖಿಲಾರಿ ಜಾನುವಾರುಗಳು ಬೂದಿ ಬಣ್ಣ ಹೊಂದಿದ್ದು, ದಕ್ಷಿಣ ಮಹಾರಾಷ್ಟ್ರ ಮತ್ತು ಮುಂಬೈ ಭಾಗಗಳಲ್ಲಿ ಕಂಡುಬರುತ್ತವೆ. ಇವುಗಳಿಗೆ ಅತ್ಪಾಡಿ ಮಹಲ ಎಂದು ಕೂಡ ಕರೆಯುತ್ತಾರೆ.

3 ತಪ್ತಿ ಖಿಲಾರಿ: ಈ ವಿಧದ ಖಿಲಾರಿ ಜಾನುವಾರುಗಳು ಪಶ್ಚಿಮ ಖಂಡೇಶ ಭಾಗಗಳಲ್ಲಿ ಕಂಡುಬರುತ್ತವೆ.

4 ನಕಲಿ ಖಿಲ್ಲಾರಿ: ಇವು ಸಪ್ತಾಪುರ ಪರ್ವತ ಭಾಗಗಳಲ್ಲಿ ಕಂಡು ಬರುತ್ತವೆ.ಕಿಲಾರಿ, ಮಂದೇಶಿ, ಆಕಾರಿ, ಥಿಲ್ಲಾರ ಎಂದು ನಾಮಕರಣಗಳಿವೆ.

ಇದನ್ನೂ ಓದಿ: ದಿನಕ್ಕೆ 33.8 ಲೀಟರ್ ಹಾಲು ಕೊಡುತ್ತದೆ ಈ ಎಮ್ಮೆ

ಖಿಲ್ಲಾರಿ ತಳಿಯ ಗುಣ ಲಕ್ಷಣಗಳು

ಬಿಳಿಯ ಬಣ್ಣ, ಉದ್ದನೆಯ ಹಿಮ್ಮುಖವಾಗಿರುವ ಚೂಪಾದ ಕೊಂಬುಗಳು, ಕಾಂತಿಯುಕ್ತ ಕಣ್ಣಗಳು, ಚಿಕ್ಕದಾದ ಮೊನಚಾಗಿರುವ ಕಿವಿಗಳು, ಉದ್ದನೆಯ ಬಲಿಷ್ಟವಾದ ಕಾಲುಗಳು, ಆಯಾತಾಕಾರದ ದೇಹ, ಉದ್ದವಾದ ಮುಖ ಉಬ್ಬಿರುವ ಹಣೆ, ಕೆಂಪನೆಯ ಮೂಗು, ಉದ್ದನೆಯ ಬಾಲ, ಮೃದವಾದ ಹೊಳಪಾದ ಚಿಕ್ಕ ಕೂದಲು ಹೊಂದಿರುವ ಚರ್ಮ, ಹಣೆಯಿಂದ ಮೂಗಿನವರೆಗೆ ಉಬ್ಬಿರುವ ಭಾಗ, ಇಣಿಯನ್ನು ಹೊಂದಿರುತ್ತವೆ.

ಹಸುಗಳಲ್ಲಿ ಮದ್ಯಮ ಗಾತ್ರದ ಕೆಚ್ಚಲು, ಹಸುಗಳಿಗಿಂತ ಎತ್ತುಗಳು ಎತ್ತರವಾಗಿರುತ್ತವೆ. ಹಸುಗಳು ಸರಾಸರಿ 300-360 ಕಿ.ಗ್ರಾಂ. ತೂಕ ಹೊಂದಿರುತ್ತವೆ. 1ರಿಂದ 2 ಲೀಟರ್ ವರೆಗೆ ಹಾಲು ಕೊಡುತ್ತದೆ. ಹಾಲಿನ ಕೊಬ್ಬಿನಾಂಶ 4.2% ಆಗಿದ್ದು ಇದಕ್ಕೆ ಹಾಲಿನ ಉತ್ಪನ್ನಗಳಾದ ಕೋವಾ ಮಾಡಲು ಉಪಯೋಗಿಸುತ್ತಾರೆ. ಎತ್ತುಗಳು ಸರಾಸರಿ 400 ರಿಂದ 450 ಕೆಜಿ ತೂಕವನ್ನು ಹೊಂದಿರುತ್ತವೆ. ಮಣಕಗಳು ಸರಾಸರಿ 30 ರಿಂದ 36 ತಿಂಗಳ ವರೆಗೆ ಮೊದಲ ಬಾರಿಗೆ ಬೆದೆಗೆ ಬರುತ್ತವೆ.

ಇದನ್ನೂ ಓದಿ: ಸಣ್ಣ ವ್ಯಾಪಾರ ಹಾಗೂ ವಾಣಿಜ್ಯ ವಾಹನ ಖರೀದಿಗೆ ₹10 ಲಕ್ಷ ಸಾಲ ಸೌಲಭ್ಯ | Pradhan Mantri MUDRA Yojana (PMMY)

ಖಿಲಾರಿ ವಿಶಿಷ್ಟ ಗುಣ

ಈ ತಳಿಯ ಎತ್ತುಗಳಿಗೆ ರೈತರಿಂದ ಭಾರಿ ಬೇಡಿಕೆ ಇದೆ. ಪ್ರತಿ ಜೋಡಿ ಎತ್ತಿನ ಬೆಳೆ ಒಂದೂವರೆ ಲಕ್ಷದಿಂದ 4 ಲಕ್ಷ ರೂಪಾಯಿ. ಕೆಸರುಗದ್ದೆ, ಮಳೆ, ಗುಡ್ಡಗಾಡು ಪ್ರದೇಶದಲ್ಲಿ, ಬರಪೀಡಿತ ಒಣಹವೆಯಲ್ಲೂ ಅಧಿಕ ಸಾಮರ್ಥ್ಯ ತೋರಬಲ್ಲವು. ಈ ತಳಿಯ ಜಾನುವಾರುಗಳಿಗೆ ವಿಶೇಷ ಕಾಳಜಿ ಅಗತ್ಯವಿಲ್ಲ. ಕಡಿಮೆ ಮೇವು ಅಧಿಕ ಬಿಸಿಲು ಅಧಿಕ ಮಳೆ ಬರಪೀಡಿತ ಪ್ರದೇಶದಲ್ಲಿ ಕೂಡ ಸುಲಭವಾಗಿ ಹೊಂದಿಕೊಳ್ಳುತ್ತವೆ. ಪಾಲನೆ ಮತ್ತು ಪೋಷಣೆ ಸುಲಭವಾಗಿ ಮಾಡಬಹುದು ಮತ್ತು ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ.

ಹಾಲಿನ ಜಿಡ್ಡಿನ ಅಂಶ ಅಧಿಕವಾಗಿದ್ದು ಹಾಲಿನ ಇಳುವರಿ ಕಡಿಮೆ ಇರುವುದರಿಂದ ಈ ತಳಿಯು ಹೈನುಗಾರಿಕೆಗೆ ಸೂಕ್ತವಲ್ಲ. ಕರುಗಳು ಅದರಲ್ಲೂ ಗಂಡು ಕರುಗಳು ಪಾಲನೆಯಿಂದಾಗಿ ಹಲವಾರು ರೈತರು, ಪಶುಪಾಲಕರು ಲಕ್ಷಾಂತರ ರೂಪಾಯಿ ಗಳಿಸಿದ ಉದಾಹರಣೆ ಮಹಾರಾಷ್ಟ್ರದಲ್ಲಿದೆ. ಎರಡು ವರ್ಷದ ಗಂಡು ಕರಗಳ ಬೆಲೆ ಒಂದೂವರೆ ಲಕ್ಷ ರೂಪಾಯಿ ಆಗಿದೆ.

ಗರ್ಭಧರಿಸಿದ ಹಸುಗಳ ಬೆಲೆ ಬೆಲೆ 30ರಿಂದ 40 ಸಾವಿರ ರೂಪಾಯಿಗಳು ಮಾತ್ರ. ಹೋರಿ ಮತ್ತು ಎತ್ತುಗಳು ಸೂಕ್ಷ್ಮ ಮನಸ್ಥಿತಿಯನ್ನು ಹಾಗೂ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತವೆ. ಕಲಬುರಗಿ, ವಿಜಯಪುರ, ಬಾಗಲಕೋಟೆಯಲ್ಲಿ ನಡೆಯುವ ಜಾತ್ರೆಯಲ್ಲಿ ಜೋಡಿ ಎತ್ತು / ಹೋರಿಗಳು 10 ಲಕ್ಷ ರೂಪಾಯಿಗಿಂತಲೂ ಜಾಸ್ತಿ ಬೆಲೆಗೆ ಮಾರಾಟವಾದ ನಿದರ್ಶನಗಳಿವೆ.

ಇದನ್ನೂ ಓದಿ: ಪಿಡಿಒ ಮುಷ್ಕರ: ನವೆಂಬರ್ 2ರಿಂದ ಗ್ರಾಮ ಪಂಚಾಯ್ತಿ ಸೇವೆಗಳು ಸ್ಥಗಿತ?

ಬಂಕಾಪುರ ಖಿಲಾರಿ ತಳಿ ಸಂವರ್ಧನಾ ಕೇಂದ್ರ 

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದ ಖಿಲಾರಿ ತಳಿ ಸಂವರ್ಧನಾ ಕೇಂದ್ರ ಖಿಲಾರಿ ಜಾನುವಾರುಗಳಿಂದಾಗಿ ದೇಶದೆಲ್ಲೆಡೆ ಗಮನ ಸೆಳೆಯುತ್ತಿದೆ. ದೇಸೀ ತಳಿ ಉಳಿಸಿ ಬೆಳೆಸುವ ಉದ್ದೇಶದಿಂದ ಸರ್ಕಾರದಿಂದ ಖಿಲಾರಿ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿಯ ಖಿಲಾರಿ ಹೋರಿಗಳಿಗೆ ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಕಡೆಗಳಿಂದ ಬೇಡಿಕೆಯಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲಿನಿಂದಲೂ ಖಿಲಾರಿ ತಳಿಗೆ ಬೇಡಿಕೆಯಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಹೈಬ್ರೀಡ್ ಹಸುಗಳೇ ಹೆಚ್ಚಿರುವುದರಿಂದ ದೇಸೀ ತಳಿ ನಶಿಸುವ ಹಂತಕ್ಕೆ ಬಂದಿದ್ದವು. ಇದನ್ನು ಅರಿತು ಖಿಲಾರಿ ತಳಿ ಸಂವರ್ಧನೆಗಾಗಿ ಬಂಕಾಪುರದಲ್ಲಿ 350 ಎಕರೆ ಪ್ರದೇಶದಲ್ಲಿ ಈ ತಳಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯ ಹೋರಿಗಳಿಂದ ಬಂಕಾಪುರದ ಹೆಸರು ಇಡೀ ದೇಶಕ್ಕೆ ಪಸರಿಸುವಂತಾಗಿದೆ. ರಾಜ್ಯದ ಬೆಂಗಳೂರಿನ ಹೆಸರುಘಟ್ಟ, ಬಿರೂರು, ಧಾರವಾಡ ಕೃಷಿ ವಿವಿ ಆವರಣದಲ್ಲಿರುವ ಕೇಂದ್ರಕ್ಕೂ ಇಲ್ಲಿನ ಖಿಲಾರಿ ಹೋರಿಗಳನ್ನು ಕಳುಹಿಸಲಾಗುತ್ತದೆ.

ಇದನ್ನೂ ಓದಿ: ರೈತರೇ ತೋಟಗಾರಿಕೆಯ ಈ ಸಬ್ಸಿಡಿ ಸೌಲಭ್ಯಗಳನ್ನು ತಪ್ಪದೇ ಬಳಸಿಕೊಳ್ಳಿ

ಖಿಲಾರಿ ತಳಿಯ ಬಗ್ಗೆ ಪರಿಣಿತರ ಅನಿಸಿಕೆಗಳು

ನನ್ನ ಖಿಲಾರಿ ಎತ್ತುಗಳು ಬಿತ್ತನೆ ಹಾಗೂ ಕುಂಟೆ ಹೊಡೆಯುವ ಸಂದರ್ಭದಲ್ಲಿ ಎಂಟರಿಂದ ಹತ್ತು ಗಂಟೆ ಗಂಟೆಗಳ ವರೆಗೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು ನಮ್ಮ ಉತ್ತರ ಕರ್ನಾಟಕದ ಹವಾಮಾನಗಳಿಗೆ ಸೂಕ್ತವಾಗಿ ಹೊಂದಿಕೊಂಡಿದೆ.

| ಬಸವರಾಜ ಪಾಟೀಲ್, ಗೋಟೂರು ಗ್ರಾಮ, ಕಾಳಗಿ ತಾ|| ಕಲಬುರಗಿ ಜಿಲ್ಲೆ

ದಿನ ಕಳೆದಂತೆ ರೈತರಲ್ಲಿ ಖಿಲಾರಿ ತಳಿಗಳಿಗೆ ಭಾರಿ ಬೇಡಿಕೆ ಹೆಚ್ಚುತ್ತಿದ್ದು, ಖಿಲ್ಲಾರಿ ತಳಿಯ ಗಂಡು ಕರುಗಳನ್ನು ಸಾಕುವುದರಿಂದ ಲಕ್ಷಾಂತರ ರೂಪಾಯಿಗಳ ಆದಾಯವನ್ನು ಪಡೆಯಬಹುದು.

 

 

| ಡಾ. ಶಾಂತಕುಮಾರ್ ಸಿದ್ದೇಶ್ವರ, ಹಿರಿಯ ಪಶು ವೈದ್ಯಾಧಿಕಾರಿಗಳು, ಬೀದರ್ ಜಿಲ್ಲೆ

ಖಿಲಾರಿ ತಳಿಗಳು ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಇವುಗಳಿಗೆ ರೋಗ ಕಾಣಿಸುವುದು, ಕಾಯಿಲೆ ಬೀಳುವುದು ಅಪರೂಪ. ಒಂದು ವೇಳೆ ಬಂದರೂ ಸಹ ಚಿಕಿತ್ಸೆಗೆ ಬಹುಬೇಗನೆ ಸ್ಪಂದಿಸುತ್ತವೆ.

ಡಾ. ಸುಧೀರ್ ನಾಯಕ್, ಹಿರಿಯ ಪಶು ವೈದ್ಯಾಧಿಕಾರಿಗಳು ಮತ್ತು ಕುಕ್ಕುಟ ತಜ್ಞರು, ವಿಜಯಪುರ ಜಿಲ್ಲೆ

ತಾಂತ್ರಿಕ ಮಾಹಿತಿ: ಡಾ. ಅಣ್ಣಾರಾವ್ ಪಾಟೀಲ್

ಇದನ್ನೂ ಓದಿ: SSLC ಪಾಸ್ ಆದವರಿಗೆ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ , 24,369 ಹುದ್ದೆಗಳು… 

WhatsApp Group Join Now
Telegram Group Join Now

Related Posts

error: Content is protected !!