ಸುದ್ದಿಗಳು

ಡಿಸೆಂಬರ್ 15ರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ ನೋಂದಣಿ ಆರಂಭ | Finger Millet and Paddy MSP purchase

WhatsApp Group Join Now
Telegram Group Join Now

ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಸಲಾಗುತ್ತಿದೆ. ಭತ್ತ ಮತ್ತು ರಾಗಿಗೆ ಎಷ್ಟೆಷ್ಟು ಬೆಲೆ ನಿಗದಿ ಮಾಡಲಾಗಿದೆ? ಯಾವ್ಯಾವ ಜಿಲ್ಲೆಯಲ್ಲಿ ಹೇಗೆ ಖರೀದಿ ನಡೆಯಲಿದೆ? ರೈತರು ಎಲ್ಲಿ ನೋಂದಣಿ ಮಾಡಿಕೊಳ್ಳಬೇಕು? ಬೇಕಾಗುವ ದಾಖಲೆಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ…

ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಸಲಾಗುತ್ತಿದ್ದು, ಇದೇ ಡಿಸೆಂಬರ್ 15ರಿಂದ ನೋಂದಣಿ ಆರಂಭವಾಗಲಿದೆ. ಭತ್ತ ಮತ್ತು ರಾಗಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದೆ. ಖರೀದಿ ಪ್ರಕ್ರಿಯೆಯು ಆ ಮಂಡಳಿ ಮೂಲಕ ನಡೆಯುತ್ತದೆ. ಜನವರಿ 1ರಿಂದ ಮಾರ್ಚ್ 31ರ ವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ ₹3.50 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಕರಾವಳಿ ಭಾಗಕ್ಕೆ ಮಾತ್ರ ಪ್ರೋತ್ಸಾಹಧನ

ತಿಂಗಳ ಹಿಂದಷ್ಟೇ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಭತ್ತದ ಬೆಳೆಗಾರರಿಗೆ ಭತ್ತ ಖರೀದಿ ವೇಳೆ ಕೊಟ್ಟಿದ್ದ ಪ್ರತಿ ಕ್ವಿಂಟಲ್‌ಗೆ 500 ರೂಪಾಯಿ ಪ್ರೋತ್ಸಾಹಧನದ (ಎಕ್ಸ್‌ಗ್ರೆಷಿಯಾ) ಬಂಪರ್ ಕೊಡುಗೆ ರಾಜ್ಯದ ಉಳಿದ ಜಿಲ್ಲೆಗಳ ಬೆಳೆಗಾರರಿಗೆ ಇಲ್ಲವಾಗಿದೆ.

ಸಾಮಾನ್ಯ ಭತ್ತ ಪ್ರತಿ ಕ್ವಿಂಟಲ್‌ಗೆ 2,040 ರೂಪಾಯಿ ಹಾಗೂ ಎ ಗ್ರೇಡ್ ಭತ್ತಕ್ಕೆ 2,060 ರೂಪಾಯಿ ಬೆಲೆ ನಿಗದಿಪಡಿಸಿದೆ. ಅದೇ ರೀತಿ ಪ್ರತಿ ಕ್ವಿಂಟಾಲ್ ರಾಗಿಗೆ 3,578 ರೂಪಾಯಿ ನಿಗದಿಪಡಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್ಸ್ ಸಮಿತಿಯು ಖರೀದಿಗೆ ಸಂಬಂಧಿಸಿದ ಅಗತ್ಯ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸಲು ಮುಂದಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ನೋಂದಣಿ ಯಾವಾಗ?

ಡಿಸೆಂಬರ್ 15ರಿಂದ ರೈತರ ನೋಂದಣಿ ಕಾರ್ಯ ಆರಂಭವಾಗಲಿದ್ದು, ಜನವರಿ 1ರಿಂದ ಮಾರ್ಚ್ 31ರ ವರೆಗೆ ಭತ್ತದ ಖರೀದಿ ಪ್ರಕ್ರಿಯೆ ನಡೆಯಲಿದೆ. ಖರೀದಿ ಪ್ರಕ್ರಿಯೆಗೆ ಕೃಷಿ ಇಲಾಖೆಯ ಗ್ರೇಡರ್‌ಗಳನ್ನು ನೇಮಿಸಲಾಗುತ್ತಿದೆ.ರಾಜ್ಯದಲ್ಲಿ ಒಟ್ಟು 5 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಬೆಳೆಗಾರರೊಬ್ಬರಿಂದ ಗರಿಷ್ಠ 40 ಕ್ವಿಂಟಲ್ ಮೀರದಂತೆ ಖರೀದಿಗೆ ಅವಕಾಶ ನೀಡಲಾಗಿದೆ. ರಾಗಿಯನ್ನು ಕನಿಷ್ಠ 10 ಕ್ವಿಂಟಲ್ ನಿಂದ 20 ಕ್ವಿಂಟಲ್ ಖರೀದಿಸಲಾಗುವುದು.

ಎಲ್ಲೆಲ್ಲಿ ಖರೀದಿ?

ಭತ್ತ ಖರೀದಿಗೆ ಮೂರು ಏಜೆನ್ಸಿಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ದಾವಣಗೆರೆ, ತುಮಕೂರು, ಬಾಗಲಕೋಟೆ, ಬೆಂಗಳೂರು ಉತ್ತರ ಮತ್ತು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೀದರ್, ಚಿತ್ರದುರ್ಗ, ದಕ್ಷಿಣ ಕನ್ನಡ, ಕಲಬುರಗಿ, ಕೋಲಾರ, ಕೊಪ್ಪಳ, ರಾಮನಗರ, ಉತ್ತರ ಕನ್ನಡ, ಉಡುಪಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ.

ರಾಜ್ಯ ಸಹಕಾರ ಮಾರಾಟ ಮಂಡಳದಿಂದ ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ, ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಖರೀದಿ ಕಾರ್ಯ ನಡೆಯಲಿದೆ. ಅದೇ ರೀತಿ ರಾಜ್ಯ ಕೃಷಿ ಮಾರಾಟ ಮಂಡಳದಿಂದ ಬಳ್ಳಾರಿ, ಬೆಳಗಾವಿ, ಕೊಡಗು, ಮೈಸೂರು, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಖರೀದಿಸಲಾಗುತ್ತ್ತದೆ.

ಇದನ್ನೂ ಓದಿ: ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ರೈತರು ಏನು ಮಾಡಬೇಕು?

ಭತ್ತವನ್ನು ಮಾರಲು ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಈಗ ನೋಂದಣಿ ಮಾಡಿಕೊಳ್ಳಲೂ ಅವಕಾಶವಿದೆ. ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ಪ್ರೂಟ್ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು. ಗ್ರಾಮೀಣ ಭಾಗದಲ್ಲಿ ರೈತರು ಖರೀದಿ ನೋಂದಣಿ ಕುರಿತು ಸ್ಥಳೀಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಕ್ವಿಂಟಾಲ್ ಭತ್ತಕ್ಕೆ 3,500 ರೂಪಾಯಿ?

ಸರ್ಕಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಕುಚಲಕ್ಕಿಗೆ 500 ರೂಪಾಯಿ ಸಹಾಯಧನ ಕೊಡುತ್ತಿದೆ. ಈ ತಾರತಮ್ಯ ಸರಿಯಲ್ಲ. ಎಲ್ಲ ರೈತರೂ ಒಂದೇ ಆಗಿದ್ದು, ಈ ಸಹಾಯಧನವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕು. ರಸಗೊಬ್ಬರ, ಸಾಗಣೆ ವೆಚ್ಚ, ಕಟಾವು ಖರ್ಚು ಹೆಚ್ಚಾಗುತ್ತಿದೆ. ಇದರಿಂದ ಸ್ವಾಮಿನಾಥ್ ವರದಿ ಪ್ರಕಾರ ಕ್ವಿಂಟಾಲ್ ಭತ್ತಕ್ಕೆ 3,500 ರೂಪಾಯಿ ಕ್ವಿಂಟಾಲ್ ಭತ್ತಕ್ಕೆ ಕೊಡಬೇಕು ಎಂಬುದು ರೈತರ ಆಗ್ರಹವಾಗಿದೆ.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!