ಉದ್ಯೋಗ

SSLC, PUC, ITI, ಪದವೀಧರ ಅಭ್ಯರ್ಥಿಗಳಿಂದ ಅರಣ್ಯ ಸಂಶೋಧನಾ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಆಹ್ವಾನ | FRI Recruitment 2022

WhatsApp Group Join Now
Telegram Group Join Now

ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ (FRI) ಖಾಲಿ ಇರುವ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಅಧಿಸೂಚನೆ ಹಾಗೂ ಅರ್ಜಿ ಲಿಂಕ್ ಕುರಿತ ಮಾಹಿತಿ ಇಲ್ಲಿದೆ…

ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ (FRI) ಖಾಲಿ ಇರುವ ಗ್ರುಪ್ ಸಿ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದೆಹ್ರಾದೂನ್‌ನಲ್ಲಿ (ಉತ್ತರಾಖಂಡ) ಸೇವೆ ಸಲ್ಲಿಸುವ ಆಸಕ್ತಿಯುಳ್ಳ ಅಭ್ಯರ್ಥಿಗಳು ಬರಲಿರುವ ಜನವರಿ 19, 2023ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಅಲ್ಲಿಸಿ ಈ ಅವಕಾಶ ಬಳಸಿಕೊಳ್ಳಬಹುದು.

ಕೇಂದ್ರ ಸರಕಾರದ ಅಧೀನದ ಸದರಿ ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆಯು ತಂತ್ರಜ್ಞ, ತಾಂತ್ರಿಕ ಸಹಾಯಕ, ಲೋವರ್ ಡಿವಿಷನ್ ಕ್ಲರ್ಕ್, ಫಾರೆಸ್ಟ್ ಗಾರ್ಡ್, ಸ್ಟೆನೋ, ಸ್ಟೋರ್ ಕೀಪರ್, ಡ್ರೈವರ್ ಮತ್ತು ಎಂಟಿಎಸ್ ಸೇರಿ ಒಟ್ಟು 72 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಕೇಂದ್ರ ರೈಲ್ವೆಯಲ್ಲಿ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ

  1. ತಂತ್ರಜ್ಞ (ಕ್ಷೇತ್ರ ಪ್ರಯೋಗಾಲಯ ಸಂಶೋಧನೆ) : 18 ರಿಂದ 30 ವರ್ಷ ವಯೋಮಿತಿ ಹೊಂದಿರುವ 12ನೇ ತರಗತಿ (ವಿಜ್ಞಾನ) ಪಾಸ್ ಆಗಿರುವ ಅಭ್ಯರ್ಥಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  2. ತಂತ್ರಜ್ಞ (ನಿರ್ವಹಣೆ) : 18 ರಿಂದ 30 ವರ್ಷ ವಯೋಮಿತಿಯ ಸಂಬಂಧಿತ ಕ್ಷೇತ್ರದಲ್ಲಿ ಐಟಿಐ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  3. ತಾಂತ್ರಿಕ ಸಹಾಯಕ (ಪ್ಯಾರಾ ಮೆಡಿಕಲ್) : 18 ರಿಂದ 30 ವರ್ಷ ವಯೋಮಿತಿಯುಳ್ಳ ಸಂಬಂಧಿತ ಕ್ಷೇತ್ರದಲ್ಲಿ ಬಿ.ಎಸ್ಸಿ/ ಡಿಪ್ಲೊಮಾ / ವಿಜ್ಞಾನದೊಂದಿಗೆ ಪಿಯುಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗೆ ಎರಡು ವರ್ಷಗಳ ಅನುಭವವಿರಬೇಕು.
  4. ಕೆಳ ವಿಭಾಗದ ಗುಮಾಸ್ತ : 18 ರಿಂದ 27 ವರ್ಷ ವಯಸ್ಸಿನ ಟೈಪಿಂಗ್ ಬಲ್ಲ ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
  5. ಅರಣ್ಯ ರಕ್ಷಕ : 18 ರಿಂದ 27 ವರ್ಷ ವಯೋಮಿತಿಯ ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
  6. ಸ್ಟೆನೋ ಗ್ರೇಡ್-2 : 18 ರಿಂದ 27 ವರ್ಷ ವಯಸ್ಸಿನ ಪಿಯುಸಿ + ಸ್ಟೆನೋ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
  7. ಸ್ಟೋರ್ ಕೀಪರ್ : 18 ರಿಂದ 27 ವರ್ಷ ವಯಸ್ಸಿನ ಪಿಯುಸಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
  8. ಚಾಲಕ (ಸಾಮಾನ್ಯ ದರ್ಜೆ) : 18 ರಿಂದ 27 ವರ್ಷ ವಯೋಮಿತಿಯುಳ್ಳ ಮೂರು ವರ್ಷ ಚಾಲಕ ವೃತ್ತಿ ಅನುಭವವುಳ್ಳ ೧೦ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.
  9. ಎಂಟಿಎಸ್ (ಬಹು ಕಾರ್ಯ ಸಿಬ್ಬಂದಿ) : 18 ರಿಂದ 27 ವರ್ಷ ವಯಸ್ಸಿನ ೧೦ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ: ಸಾಮಾನ್ಯ/ OBC ಅಭ್ಯರ್ಥಿಗಳಿಗೆ 700 ರೂಪಾಯಿ ಹಾಗೂ SC/ST/ಮಾಜಿ ಸೈನಿಕ/ PH ಅಭ್ಯರ್ಥಿಗಳಿಗೆ 300 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಿದ್ದು; ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬಹುದು.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ / ವ್ಯಾಪಾರ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಕೆ ದಿನಾಂಕ: ಇದೇ ಡಿಸೆಂಬರ್ 20, 2022ರಿಂದ ಕೇಂದ್ರೀಯ ಅರಣ್ಯ ಸಂಶೋಧನಾ ಸಂಸ್ಥೆಯ ನೇಮಕಾತಿಯ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಜನವರಿ 19, 2023 ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರಣ್ಯ ಸಂಶೋಧನಾ ಸಂಸ್ಥೆಯ (FRI) ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಅರಣ್ಯ ಸಂಶೋಧನಾ ಸಂಸ್ಥೆಯ (FRI) ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಅರಣ್ಯ ಸಂಶೋಧನಾ ಸಂಸ್ಥೆಯ (FRI) ಹುದ್ದೆಗಳ ನೇಮಕಾತಿ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 6352602197, 6268003264; ಸಮಯ: 10 AM ನಿಂದ) 6 PM (ಭಾನುವಾರ ಹೊರತುಪಡಿಸಿ)

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: ರೈತ ಮಕ್ಕಳೇ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಿ ₹2,500ದಿಂದ ₹11,000 ವಿದ್ಯಾರ್ಥಿವೇತನ ಪಡೆಯಿರಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!