ಸರಕಾರಿ ಯೋಜನೆ

Fisheries Subsidy: ಮೀನುಗಾರಿಕೆ ₹4.40 ಲಕ್ಷ ರೂಪಾಯಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ | ಜೂನ್ 15ರೊಳಗೆ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

ಮೀನುಗಾರಿಕೆ ಇಲಾಖೆಯು ಮೀನುಕೃಷಿಗೆ ಸಹಾಯಧನ ಒದಗಿಸುತ್ತಿದ್ದು; ಈ ಸಂಬ೦ಧ ಅರ್ಹ, ಆಸಕ್ತ ರೈತರು ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆ ಕಚೇರಿ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು…

ಮೀನುಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ಜಿಲ್ಲಾ ವಲಯ ಯೋಜನೆಗಳಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ರೈತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ವಿಶೇಷ ಅನುದಾನ ಪಡೆದು ಮೀನು ಕೃಷಿ ಆರಂಭಿಸಬಹುದು.

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಯಾವುದಕ್ಕೆಲ್ಲ ಸಹಾಯಧನ?

ಮೀನು ಕೃಷಿ ಕೊಳ ನಿರ್ಮಾಣ: ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನು ಕೃಷಿಕರು ಮೀನು ಕೃಷಿ ಕೊಳ ನಿರ್ಮಾಣ ಮಾಡಲು ಒಂದು ಹೆಕ್ಟೇರ್ ಕೊಳಕ್ಕೆ 4.40 ಲಕ್ಷಗಳ ರೂಪಾಯಿ ಸಹಾಯಧನ ನೀಡಲಾಗುವುದು.

ಉಚಿತ ಫೈಬರ್ ಗ್ಲಾಸ್ ಹರಿಗೋಲು: ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನು ಕೃಷಿಕರಿಗೆ 10,000 ರೂಪಾಯಿ ವೆಚ್ಚದಲ್ಲಿ ಉಚಿತ ಫೈಬರ್ ಗ್ಲಾಸ್ ಹರಿಗೋಲುಗಳನ್ನು ವಿತರಿಸಲಾಗುವುದು.

Karnataka Yuva Nidhi Scheme: ನಿರುದ್ಯೋಗಿ ಯುವಕ ಯುವತಿಯರಿಗೆ ಸಿಗಲಿದೆ ಪ್ರತಿ ತಿಂಗಳು 3,000 ರೂಪಾಯಿ ಭತ್ಯೆ | ಅರ್ಜಿ ಸಲ್ಲಿಕೆ ಹೇಗೆ?

ಉಚಿತ ಮೀನುಗಾರಿಕೆ ಸಲಕರಣೆ ಕಿಟ್: ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀನು ಕೃಷಿಕರಿಗೆ 10,000 ರೂಪಾಯಿ ವೆಚ್ಚದಲ್ಲಿ ಉಚಿತ ಮೀನುಗಾರಿಕೆ ಸಲಕರಣೆ ಕಿಟ್ಟುಗಳನ್ನು ವಿತರಿಸಲಾಗುವುದು.

ಐಸ್ ಬಾಕ್ಸ್ ನೊಂದಿಗೆ ಮೊಪೆಡ್ ಖರೀದಿ: ಮೀನು ಮಾರುಕಟ್ಟೆಗಳ ನಿರ್ಮಾಣ ಮತ್ತು ಮೀನು ಮಾರಾಟಕ್ಕೆ ಸಹಾಯ ಮತ್ಸ್ಯವಾಹಿನಿ ಯೋಜನೆಯಡಿ ಐಸ್ ಬಾಕ್ಸ್ ನೊಂದಿಗೆ ಮೊಪೆಡ್ ಮತ್ತು ಸೈಕಲ್ ಖರೀದಿಸಲು ಕೂಡ ಸಹಾಯಧನ ಲಭ್ಯವಿದೆ.

ಅರ್ಜಿ ಸಲ್ಲಿಕೆ ಎಲ್ಲಿ?

ಈ ಯೋಜನೆ ರಾಜ್ಯಾದ್ಯಂತ ಚಾಲ್ತಿಯಲ್ಲಿದ್ದು ಅರ್ಹ, ಆಸಕ್ತ ರೈತರು ಆಯಾ ತಾಲ್ಲೂಕಿನ ಮೀನುಗಾರಿಕೆ ಇಲಾಖೆ ಕಚೇರಿ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳೊಡನೆ ಬಳ್ಳಾರಿ ಜಿಲ್ಲೆಗೆ ಸಂಬ೦ಧಿಸಿದ೦ತೆ https://ballari.nic.in ವೆಬ್‌ಸೈಟ್ ಮತ್ತು ವಿಜಯನಗರ ಜಿಲ್ಲೆಗೆ ಸಂಬ೦ಧಿಸಿದ೦ತೆ https://vijayanagara.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.

Mysore District Court Recruitment 2023: SSLC, PUC ಪಾಸಾದವರಿಂದ ಮೈಸೂರು ಜಿಲ್ಲಾ ನ್ಯಾಯಾಲಯದ ಹುದ್ದೆಗಳಿಗೆ ಅರ್ಜಿ ಆಹ್ವಾನ | 17,000-52,650 ರೂಪಾಯಿ ಸಂಬಳ … 

ಹೆಚ್ಚಿನ ಮಾಹಿತಿಗೆ

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕು ವ್ಯಾಪ್ತಿಯವರು ಶಿವಣ್ಣ ಮೊ: 9449593156 ಮತ್ತು ಸಂಡೂರು, ಹೊಸಪೇಟೆ ಹಾಗೂ ಹರಪನಹಳ್ಳಿ ತಾಲೂಕು ವ್ಯಾಪ್ತಿಯವರು ಜಿ.ಶಾಂತಕುಮಾರ್ ಮೊ: 9620177588 ಇವರನ್ನು ಸಂಪರ್ಕಿಸಬಹುದು ಎಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!