ಸರಕಾರಿ ಯೋಜನೆ

1,55,927 ಅರ್ಜಿದಾರರಿಗೆ ಶೀಘ್ರದಲ್ಲಿಯೇ ಸಿಗಲಿದೆ ಹೊಸ BPL ಕಾರ್ಡ್ | Applicants will get a new BPL card soon

WhatsApp Group Join Now
Telegram Group Join Now

ಕೊನೆಗೂ 1,55,927 ಹೊಸ ಬಿಪಿಎಲ್ ಕಾರ್ಡ್ ಹಂಚಿಕೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾರಿಗೆಲ್ಲ ಕಾರ್ಡ್ ವಿತರಣೆ ಆಗಲಿದೆ? ಯಾವ ಜಿಲ್ಲೆಗೆ ಎಷ್ಟೆಷ್ಟು ಕಾರ್ಡ್ ಹಂಚಿಕೆಯಾಗಲಿವೆ? ಹೊಸ ಕಾರ್ಡ್ ನೀಡುವ ವೇಳೆ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ…

ಹೊಸ ಪಡಿತರ ಚೀಟಿಗಾಗಿ ಹಲವು ವರ್ಷಗಳಿಂದ ಕೌತುಕದಿಂದ ಕಾಯುತ್ತಿರುವವರಿಗೆ ಕೊನೆಗೂ ರಾಜ್ಯ ಸರಕಾರ ಗುಡ್‌ನ್ಯೂಸ್ ನೀಡಿದೆ. ಹೊಸದಾಗಿ ಆದ್ಯತಾ ಪಡಿತರ ಚೀಟಿ (BPL) ಹಂಚಿಕೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಹೊಸದಾಗಿ 1,55,927 ಕಾರ್ಡ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.

ಎಪಿಎಲ್, ಬಿಪಿಎಲ್ ಕಾರ್ಡ್‌ಗಳಿಗಾಗಿ ಅರ್ಜಿ ಸಲ್ಲಿಸಿ ಹಲವು ತಿಂಗಳುಗಳು ಕಳೆದಿದ್ದರೂ ಲಕ್ಷಾಂತರ ಜನರ ಅರ್ಜಿಗಳಿಗೆ ಸದ್ಗತಿ ಸಿಕ್ಕಿರಲಿಲ್ಲ. ಸರಕಾರ ಇಂದೋ ನಾಳೆಯೋ ನಮಗೆ ಪಡಿತರ ಚೀಟಿ ವಿತರಿಸಲಿದೆ ಎಂದು ಕಾಯುತ್ತಿರುವ ಅರ್ಜಿದಾರರ ಏಕೈಕ ಪ್ರಶ್ನೆ ನಮಗೆ ಹೊಸ ಪಡಿತರ ಚೀಟಿ ಯಾವಾಗ ಸಿಗುತ್ತದೆ? ಎಂಬುವುದಾಗಿತ್ತು. ಇದೀಗ ಇವರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಈ ವರ್ಷ ಆಗಸ್ಟ್ ಅಂತ್ಯದ ವರೆಗೆ ಆನ್‌ಲೈನ್ ಮೂಲಕ ಸುಮಾರು 2,77,662 ಅರ್ಜಿಗಳು ಬಿಪಿಎಲ್ ಕಾರ್ಡ್‌ಗೆ ಸಲ್ಲಿಕೆಯಾಗಿದ್ದು; ಅವುಗಳ ಪರಿಶೀಲನೆ ಮಾಡಿರುವ ರಾಜ್ಯ ಸರ್ಕಾರ ಅರ್ಹತೆ ಪಡೆದ 1,55,927  ಅರ್ಜಿಗಳಿಗೆ ಕಾರ್ಡ್ ನೀಡಲು ಆದೇಶ ಮಾಡಿದೆ.

ಇದನ್ನೂ ಓದಿ: ಹೈನುಗಾರಿಕೆ, ಮೀನುಗಾರಿಕೆ ಕುರಿ-ಮೇಕೆ-ಕೋಳಿ ಸಾಕಣೆಗೆ ಗರಿಷ್ಠ ₹3 ಲಕ್ಷ ಸಾಲ

ಮೂರು ವರ್ಷಗಳಿಂದ ಪರದಾಟ

ಅನರ್ಹರು ಪಡೆದ ಪಡಿತರ ಚೀಟಿ ರದ್ದುಗೊಳಿಸಲು 2017ರಲ್ಲಿ ಆಹಾರ ಇಲಾಖೆ ಹೊಸ ಅರ್ಜಿಗಳ ವಿಲೇವಾರಿ ತಡೆ ಹಿಡಿದಿತ್ತು. ಜೊತೆಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿತ್ತು. ಈ ನಡುವೆ 2019-20ರ ಸಾಲಿನಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿತ್ತು.

2021ರ ಸೆಪ್ಟೆಂಬರ್ ವೇಳೆಗೆ ಕೊರೋನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ಹೊಸ ಪಡಿತರ ಚೀಟಿ ವಿತರಣೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅವಕಾಶ ನೀಡಿತ್ತು. ಕೊರೋನಾ 3ನೇ ಅಲೆಯೂ ಹೆಚ್ಚು ಬಾಧಿಸದ ಕಾರಣ ಪಡಿತರ ಚೀಟಿ ಹಂಚಿಕೆ ಮುಂದುವರೆಸಲಾಗಿತ್ತು. ಆದರೆ ಅಕ್ರಮ ಪಡಿತರ ಚೀಟಿ ತನಿಖೆಯ ನೆಪದಲ್ಲಿ ನಿಗದಿತ ಸಮಯಕ್ಕೆ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಕ್ಕಿರಲಿಲ್ಲ.

ಕಳೆದ ಮೂರು ವರ್ಷಗಳಿಂದ ಪಡಿತರ ಚೀಟಿ ಸಿಗದೆ, ಜೊತೆಗೆ ಪಡಿತರ ಆಹಾರ ಧಾನ್ಯವೂ ಸಿಗದೆ ಹಲವು ಮಂದಿ ಬಡವರು ಪರಿತಪಿಸುತ್ತಿದ್ದರು. ಆನ್‌ಲೈನ್ ಮೂಲಕ 2019-20ರಲ್ಲಿ ಅರ್ಜಿ ಸಲ್ಲಿಸಿದ್ದವರ ಪೈಕಿ 10,664 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ. 2021ರಲ್ಲಿ 3,35,388 ಅರ್ಜಿಗಳು ವಿಲೇವಾರಿಯಾಗಿಲ್ಲ.

ಇದನ್ನೂ ಓದಿ: ಕೋಳಿ ಸಾಕಣೆಗೆ ₹25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ ₹50 ಲಕ್ಷ ಆರ್ಥಿಕ ನೆರವು

ಅರ್ಜಿದಾರರಿಗೆ ಪಡಿತರ ಚೀಟಿ ಸಿಗದೇ ಇದ್ದ ಕಾರಣಕ್ಕೆ ಬಡ ಜನರು ಪಡಿತರ ಆಹಾರ ಧಾನ್ಯ ಪಡೆಯಲು ಸಾಧ್ಯವಾಗಿರಲಿಲ್ಲ. ಆಸ್ಪತ್ರೆಯಿಂದ ಸರಕಾರಿ ಸೌಲಭ್ಯ ಪಡೆಯಲು, ಆಧಾರ್ ಕಾರ್ಡ್, ಆರೋಗ್ಯ ಭಾರತ್ ಕಾರ್ಡ್ ಮಾಡಿಸಲು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆದರೆ ಸಕಾಲದಲ್ಲಿ ರೇಷನ್ ಕಾರ್ಡ್ ಸಿಗದ ಕಾರಣ ಹಲವು ಸರಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಈ ಸೌಲಭ್ಯ ವಂಚಿತರಿಗೆ ಕಾರ್ಡ್ ವಿತರಣೆಯಾದರೆ ಸರಕಾರಿ ಸೌಲಭ್ಯಗಳು ಸಿಗಲಿವೆ.

ಯಾವ ಜಿಲ್ಲೆಗೆ ಎಷ್ಟೆಷ್ಟು ಕಾರ್ಡ್ ಹಂಚಿಕೆ?

ಹೊಸ ಕಾರ್ಡ್ ನೀಡುವ ವೇಳೆ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳು ಪಾಲನೆ ಆಗಬೇಕೆ ಮತ್ತು ಕಾರ್ಡ್ ಹಂಚಿಕೆ ವೇಳೆ 2017 ರಿಂದ 2021ರ ವರೆಗೆ ಅರ್ಜಿ ಸಲ್ಲಿಕೆಯಾದವರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಅಲ್ಲದೆ ಬಿಪಿಎಲ್ ಕಾರ್ಡ್ ಹಂಚಿಕೆ ವೇಳೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರು-13,532, ಬೆಳಗಾವಿ-10,874, ಕಲಬುರಗಿ-15,432, ವಿಜಯಪುರ-10,980, ಬಾಗಲಕೋಟ-7,290, ಬೆಂಗಳೂರು ಪೂರ್ವ- 6,279, ಬೆಂಗಳೂರು ಉತ್ತರ- 4,484, ಬೆಂಗಳೂರು ದಕ್ಷಿಣ- 4,149, ಬೆಂಗಳೂರು-7,438, ಹಾಸನ- 5,251, ಕೊಪ್ಪಳ- 6,709, ಯಾದಗಿರಿ- 4,289, ಮೈಸೂರು- 5,046, ರಾಯಚೂರು- 5,027 ಜಿಲ್ಲೆಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

====================================

ಇವುಗಳನ್ನೂ ಓದಿ:

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!