ಶಿಕ್ಷಣ ಸುದ್ದಿಸರಕಾರಿ ಯೋಜನೆ

Bicycle Scheme : ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ | ಯಾರಿಗೆಲ್ಲ ಸಿಗಲಿದೆ ಪ್ರೀ ಬೈಸಿಕಲ್?

WhatsApp Group Join Now
Telegram Group Join Now

ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲು ರಾಜ್ಯ ಸರಕಾರ ಮುಂದಾಗಿದೆ. ಉಚಿತ ಬೈಸಿಕಲ್ ಯಾರಗೆಲ್ಲ ಸಿಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಶಾಲಾ ಮಕ್ಕಳ ಉಚಿತ ಸೈಕಲ್ ಯೋಜನೆಗೆ ರಾಜ್ಯ ಸರಕಾರ ಮರು ಚಾಲನೆ ನೀಡಲು ಮುಂದಾಗಿದ್ದು; ಶೀಘ್ರದಲ್ಲಿಯೇ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲು ತಯಾರಿ ನಡೆಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು (Education Minister Madhu S Bangarappa) ಮುಂಬರುವ ಶೈಕ್ಷಣಿಕ ವರ್ಷದಿಂದ ಸೈಕಲ್ ವಿತರಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

ಏನಿದು ಬೈಸಿಕಲ್ ಯೋಜನೆ?

ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲಾ ಮಕ್ಕಳು ಯಾವುದೇ ಸಾರಿಗೆ ನೆಚ್ಚದೇ ಸ್ವತಂತ್ರವಾಗಿ ಶಾಲೆಗೆ ಹೋಗಿ-ಬರಲು ಅನುಕೂಲ ಕಲ್ಪಿಸುವ ಹಿನ್ನಲೆಯಲ್ಲಿ ರಾಜ್ಯ ಸರಕಾರ 2006-07ನೇ ಸಾಲಿನಲ್ಲಿ ಜಾರಿಗೆ ತಂದ ಯೋಜನೆ ಇದು. ಆರಂಭದಲ್ಲಿ ಸುಸೂತ್ರವಾಗಿ ಅನುಷ್ಠಾನಗೊಂಡಿದ್ದ ಉಚಿತ ಸೈಕಲ್ ಯೋಜನೆಯು ಕೊರೋನಾ ಅವಧಿಯಲ್ಲಿ ಅಂದರೆ 2019ರಲ್ಲಿ ಹಠಾತ್ ಸ್ಥಗಿತಗೊಂಡಿದ್ದು ಈ ತನಕವೂ ಪುನರ್ ಆರಂಭವಾಗಿಲ್ಲ.

ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022ರಲ್ಲಿ ಸದರಿ ಯೋಜನೆಯನ್ನು ಮತ್ತೆ ಆರಂಭಿಸುವುದುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರುವ ಹೊತ್ತಿಗೆ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದರು. ಆನಂತರ ಬಂದ ಸಿದ್ದರಾಮಯ್ಯ ಅವರು ಈ ಯೋಜನೆ ಬಗ್ಗೆ ಪರಿಶೀಲಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದರು. ಇದೀಗ ಶಾಲಾಗಳು ಆರಂಭವಾಗಿ ಅರ್ಧ ವರ್ಷ ಸಮೀಪಿಸಿದ್ದು; ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಸೈಕಲ್ ಯೋಜನೆಗೆ ಚಾಲನೆ ನೀಡುವುದಾಗಿ ಸರಕಾರ ಹೇಳಿದೆ.

ಇದನ್ನೂ ಓದಿ: Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

ಯೋಜನೆಯ ಉದ್ದೇಶ

ಇನ್ನೂ ಸಾವಿರಾರು ಮಕ್ಕಳು, ಅದರಲ್ಲೂ ಗ್ರಾಮೀಣ ಭಾಗದ ಶಾಲೆಗಳನ್ನು ತಲುಪಲು ಸಾರ್ವಜನಿಕ ಸಾರಿಗೆಯ ಮೂಲಕ ಅಥವಾ ನಡಿಗೆಯ ಮೂಲಕ ಮೈಲುಗಳಗಟ್ಟಲೇ ಪ್ರಯಾಣಿಸುವಂತಹ ದುಃಸ್ಥಿತಿ ಇದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳನ್ನು, ವಿಶೇಷವಾಗಿ ವಿದ್ಯಾರ್ಥಿನಿಯರನ್ನು ಸಬಲೀಕರಣಗೊಳಿಸುವುದು ಮತ್ತು ಶಾಲೆಯಿಂದ ಹೊರಗುಳಿಯುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಉಚಿತ ಬೈಸಿಕಲ್ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆರಂಭದಲ್ಲಿ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾದ ಬಾಲಕಿಯರು ಮತ್ತು ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ಸರ್ಕಾರಿ ಅನುದಾನಿತ ಶಾಲೆಗಳನ್ನು ಮಾತ್ರ ಈ ಯೋಜನೆಯಡಿ ಸೇರಿಸಲಾಗಿತ್ತು. ನಂತರ 8ನೇ ತರಗತಿಗೆಯಲ್ಲಿ (8th Class Students) ಓದುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಬಾಲಕಿಯರು ಮತ್ತು ಬಾಲಕರಿಗೆ ಈ ಯೋಜನೆಯನ್ನು ಅನ್ವಯಿಸಲಾಯಿತು. ಬಳಿಕ 2008-09ರಲ್ಲಿ ಈ ಯೋಜನೆಯನ್ನು ಎಲ್ಲಾ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಯಿತು.

ಇದನ್ನೂ ಓದಿ: Karnataka Mangalya Bhagya Vivah Yojana : ಮಾಂಗಲ್ಯ ಭಾಗ್ಯ ಯೋಜನೆ | ಮದುವೆಗೆ 60,000 ರೂಪಾಯಿ ಸಹಾಯಧನ | ಈಗಲೇ ಹೆಸರು ನೋಂದಾಯಿಸಿ

ಯಾರಗೆಲ್ಲ ಸಿಗಲಿದೆ ಉಚಿತ ಬೈಸಿಕಲ್?

ಕಾಲಕ್ರಮೇಣ ಉಚಿತ ಬೈಸಿಕಲ್ ಯೋಜನೆಯಲ್ಲಿ ಮಾರ್ಪಾಡು ತರಲಾಗಿದ್ದು; 2016-17ರ ಮಾರ್ಪಾಡಿನ ಪ್ರಕಾರ, ಉಚಿತ ಸೈಕಲ್ ಪಡೆಯುವ ಫಲಾನುಭವಿ ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು:

  • ಸಮಾಜ ಕಲ್ಯಾಣ ವಸತಿ ನಿಲಯಗಳಲ್ಲಿ ಉಳಿದುಕೊಂಡಿರುವವರು ಸೇರಿದಂತೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಸೈಕಲ್ ಸಿಗಲಿದೆ.
  • ನಗರ ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಬಸ್‌ಪಾಸ್ ಹೊಂದಿರುವವರು, ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಆದಾಗ್ಯೂ, ಮನೆಯಿಂದ ಬಸ್ ನಿಲ್ದಾಣಕ್ಕೆ (ಬಸ್‌ಪಾಸ್ ಹೊಂದಿದ್ದರೂ) ನಡೆಯುವ ಗುಡ್ಡಗಾಡು ಪ್ರದೇಶಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಸಿಗಲಿದೆ.

ಇದನ್ನೂ ಓದಿ: Application for Morarji Desai Residential School 2024-25 : ಮುರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗೆ ಅರ್ಜಿ ಅಹ್ವಾನ | ಹಲವಾರು ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗೆ ಅರ್ಜಿ ಅಹ್ವಾನ |

8ನೇ ತರಗತಿಯಲ್ಲಿ (8th Class Students) ಓದುತ್ತಿರುವ ವಿದ್ಯಾರ್ಥಿಗಳು ಉಚಿತ ಬೈಸಿಕಲ್‌ಗಾಗಿ ಯಾವುದೇ ರೀತಿಯ ಅರ್ಜಿ ಹಾಕಬೇಕಿಲ್ಲ. ಶಿಕ್ಷಣ ಇಲಾಖೆಯು ಮುಖ್ಯಶಿಕ್ಷಕರಿಂದ ಸರಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದು, ಅವರ ಬೇಡಿಕೆಗೆ ಅನುಸಾರವಾಗಿ ನೇರವಾಗಿ ಸೈಕಲ್ ವಿತರಿಸಲಿದೆ.

ಶಾಲಾ ಮಕ್ಕಳಿಗೆ ಸಿಗುವ ಇತರ ಸೌಲಭ್ಯಗಳು

  • ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಈಚೆಗೆ ನಡೆದ ಬೆಳಗಾವಿ ಚಳಿಗಾಲ ವಿಧಾನ ಮಂಡಲ ಅಧಿವೇಶನದಲ್ಲಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಬಸ್ ಸೌಲಭ್ಯ ಒದಗಿಸಲಾಗುತ್ತಿದೆ. ಅದಕ್ಕಾಗಿ ಉಚಿತ ಬಸ್‌ಪಾಸ್‍ಗಳಿವೆ.
  • ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೇಂದ್ರ ಪ್ರಾಯೋಜಿತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಲ್ಲಿ ತಮ್ಮ ವ್ಯಾಪ್ತಿಯನ್ನೂ ಮೀರಿದ ಶಾಲೆಗಳಿಗೆ ಪ್ರಯಾಣಿಸಲು ಪ್ರತಿ ತಿಂಗಳಿಗೆ 600 ರೂಪಾಯಿ ಸಾರಿಗೆ ಭತ್ಯೆ ನೀಡಲಾಗುತ್ತಿದೆ.
  • 1ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾವಿಕಾಸ ಯೋಜನೆಯಡಿ ಶೈಕ್ಷಣಿಕ ವರ್ಷದಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

Free Cycle for School Students | 8th Class Students in Karnataka Govt School

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

HDFC Bank Dairy Farming Loan : ಹೈನುಗಾರಿಕೆ, ಕೋಳಿ ಸಾಕಣೆ, ಮೀನುಗಾರಿಕೆಗೆ 10 ಲಕ್ಷದ ವರೆಗೂ ಮೇಲಾಧಾರ ಮುಕ್ತ ಸಾಲ ಸೌಲಭ್ಯ!

WhatsApp Group Join Now
Telegram Group Join Now

Related Posts

error: Content is protected !!