ಸರಕಾರಿ ಯೋಜನೆ

2 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ | ಇದೇ ಜುಲೈ 5ರೊಳಗೆ ಅರ್ಜಿ ಸಲ್ಲಿಸಿ | Karnataka Gruha Jyothi Scheme

WhatsApp Group Join Now
Telegram Group Join Now

ಇದೇ ಆಗಸ್ಟ್ ಮೊದಲ ವಾರದಿಂದ ರಾಜ್ಯದ 2.14 ಕೋಟಿ ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಉಚಿತ ಕರೆಂಟ್ ಸಿಗಲಿದೆ. ಇದಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಯಾರೆಲ್ಲ ಅರ್ಹರು? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳ ವರೆಗಿನ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆ ರಾಜ್ಯದಲ್ಲಿ ಅಧಿಕೃತವಾಗಿ ಅನುಷ್ಠಾನಗೊಂಡಿದೆ. ಕಳೆದ ಜೂನ್ 02, 2023ರಂದು ನಡೆದ ಸಂಪುಟ ಸಭೆಯಲ್ಲಿ ‘ಗೃಹಜ್ಯೋತಿ’ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿದೆ.

ಜೂನ್ 05, 2023ರಂದು ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ‘ಗೃಹಜ್ಯೋತಿ’ ಯೋಜನೆ ಸಂಬ೦ಧ ನಡವಳಿಗಳನ್ನು ಹೊರಡಿಸಿದ್ದಾರೆ. ಈ ಯೋಜನೆಯನ್ನು ಜುಲೈ 2023ರ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ 2023ರ ತಿಂಗಳಿನಿ೦ದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಜಾರಿಗೆ ತರಲು ಆದೇಶಿಸಲಾಗಿದೆ.

ರೈತರು ಮತ್ತು ರೈತ ಮಹಿಳೆಯರಿಂದ ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ

ಯಾರೆಲ್ಲ ಅರ್ಹರು?

ಗೃಹಜ್ಯೋತಿ ಯೋಜನೆಗೆ ರಾಜ್ಯದ 2.14 ಕೋಟಿ ಗ್ರಾಹಕರು ಅರ್ಹರಿರಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಆಗಸ್ಟ್ ಮೊದಲ ವಾರದಿಂದಲೇ ಯೋಜನೆ ಲಾಭ ಅರ್ಹರೆಲ್ಲರಿಗೂ ತಲುಪಲಿದೆ. 2.14 ಕೋಟಿ ಗ್ರಾಹಕರ ಪೈಕಿ 2 ಲಕ್ಷ ಗ್ರಾಹಕರು ಮಾತ್ರ ಹೊರ ಉಳಿಯಲಿದ್ದಾರೆ.

ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಎಲ್ಲ ಎಸ್ಕಾಂಗಳಿಗೆ ಸರ್ಕಾರವೇ ಹಣ ಪಾವತಿಸಲಿದೆ. ರಾಜ್ಯದಲ್ಲಿ 2.14 ಕೋಟಿ ಗ್ರಾಹಕರು 13,575 ದಶಲಕ್ಷ ಯುನಿಟ್ ಬಳಸುತ್ತಾರೆ. ಅಂದರೆ ಸರಾಸರಿ ಬಳಕೆ ತಲಾ 53 ಯುನಿಟ್ ಆಗಲಿದೆ.

ಬಾಡಿಗೆ ಮನೆಯಲ್ಲಿರುವ ಜನರು ತಾವು ಬಳಸುತ್ತಿರುವ ಮೀಟರ್‌ನ ಮಾಹಿತಿಯನ್ನು ಬಾಡಿಗೆ ಕರಾರು ಪತ್ರದ ಜತೆಗೆ ನೀಡಿದರೆ ಅವರೂ ಗೃಹಜ್ಯೋತಿ ಸೌಲಭ್ಯ ಪಡೆದುಕೊಳ್ಳಬಹುದು. ಈಗಾಗಲೇ ವರ್ಷದಿಂದ ಬಾಡಿಗೆ ಇದ್ದರೆ ಅದೇ ಸರಾಸರಿಯನ್ನು ಪಡೆದುಕೊಳ್ಳಲಾಗುವುದು.

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ಅರ್ಜಿ ಸಲ್ಲಿಕೆ ಹೇಗೆ?

ಸೌಲಭ್ಯ ಪಡೆದುಕೊಳ್ಳಲು ದಾಖಲಾತಿಗಳ ಸಹಿತ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸೇವಾ ಸಿಂಧು ಪೋರ್ಟಲ್ ಹಾಗೂ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಹಾಗೂ ಮೊಬೈಲ್ ಮೂಲಕವೂ ಗ್ರಾಹಕರು ಅರ್ಜಿ ಸಲ್ಲಿಸುವ ವ್ಯವಸ್ಥೆ ಇರಲಿದೆ. ಅರ್ಜಿ ಸಲ್ಲಿಕೆ ನಂತರ ಸೇವಾ ಸಿಂಧು ಅವರಿಂದ ಸ್ವೀಕೃತಿ ಸಂದೇಶವನ್ನು ಕಳುಹಿಸಲಾಗುತ್ತದೆ. ನೋಂದಾಯಿತ ಗ್ರಾಹಕರಿಗೆ ಇಮೇಲ್ / SMS ಮೂಲಕವೂ ತಲುಪಲಿದೆ.

ಹೊಸ ರೇಷನ್ ಕಾರ್ಡ್ ವಿತರಣೆಗೆ ಆನ್‌ಲೈನ್ ಅರ್ಜಿ ಆಹ್ವಾನ | ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

ಬೇಕಾಗುವ ದಾಖಲಾತಿಗಳೇನು?

ಗ್ರಾಹಕರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯ. ಬಾಡಿಗೆದಾರರಾಗಿದ್ದರೆ, ರೆಂಟಲ್ ಅಗ್ರಿಮೆಂಟ್ ಕೊಡಬೇಕು. ಅಲ್ಲಿಯೇ ವಾಸ ಇರುವುದಕ್ಕೆ ವೋಟರ್ ಐಡಿ ಸೇರಿದಂತೆ ಯಾವುದಾದರೂ ದಾಖಲೆ ನೀಡಬಹುದು. ನೋಟರಿ, ನೋಂದಣಿ ಇತ್ಯಾದಿ ದಾಖಲೆ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಪ್ರಮುಖ ದಿನಾಂಕಗಳು

 

ಅರ್ಜಿ ಸಲ್ಲಿಕೆ  ಆರಂಭಜೂನ್  15, 2023
ಅರ್ಜಿ ಸಲ್ಲಿಕೆ ಕೊನೆ ದಿನಜುಲೈ 5, 2023

ಇದನ್ನೂ ಓದಿ:

ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!