ಸರಕಾರಿ ಯೋಜನೆ

Gruha Jyoti scheme: ಉಚಿತ ವಿದ್ಯುತ್‌ಗೆ ಇಂದಿನಿ೦ದ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ: 20 ದಿನಗಳಷ್ಟೇ ಸಮಯ ಅವಕಾಶ…

WhatsApp Group Join Now
Telegram Group Join Now

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಇಂದಿನಿAದ (ಜೂನ್ 18) ನೋಂದಣಿ ಆರಂಭವಾಗಿದೆ. ಅರ್ಜಿದಾರರು ಮೊಬೈಲ್‌ನಲ್ಲೇ ನೋಂದಣಿ ಮಾಡಿಕೊಳ್ಳಬಹುದು…

ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಪ್ರತಿ ಮನೆಯು ತಿಂಗಳಿಗೆ 200 ಯೂನಿಟ್‌ಗಳ ಗರಿಷ್ಠ ಬಳಕೆಯ ಮಿತಿಯನ್ನು ಹೊಂದಿರುತ್ತದೆ. ಗರಿಷ್ಠ ಬಳಕೆಯ ಮಿತಿ 10% ಪರ್ಸೆಂಟ್‌ಗೆ ಒಳಪಟ್ಟಿರುತ್ತದೆ. ಮಾಸಿಕ ಸರಾಸರಿ ಬಳಕೆ (2022-23 ಹಣಕಾಸು ವರ್ಷದ ಬಳಕೆಯ ಆಧಾರದ ಮೇಲೆ) ಪ್ರತಿ ಗ್ರಾಹಕರ ಘಟಕಗಳು ಅರ್ಹವಾಗಿರುತ್ತವೆ.

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

ವಿದ್ಯುತ್ ಬಳಕೆದಾರರು ಗೃಹ ಜ್ಯೋತಿ ಯೋಜನೆಯಡಿ ಬಾಡಿಗೆದಾರರಾಗಿದ್ದರೆ, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.inನಲ್ಲಿ ನಿವಾಸದ ವಿಳಾಸದೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಮತ್ತು ನೋಂದಾಯಿಸಿಕೊಳ್ಳುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಹೊಸ ಮನೆಗೆ 53 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. 53 ಯೂನಿಟ್ ಜೊತೆ 10% ಪರ್ಸೆಂಟ್ ಅಂದರೆ 58 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ.

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ…

20 ದಿನಗಳ ಅವಕಾಶವಿದೆ

ಹಿಂದಿನ ಸೂಚನೆಯ ಪ್ರಕಾರ ಕಂಪ್ಯೂಟರ್ ಹಾಗೂ ಆಯಂಡ್ರಾಯ್ಡ್ ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಗೆ ಜೂನ್ 18ರಿಂದ ಅವಕಾಶ ನೀಡಲಾಗಿದ್ದು; ಅಂತಿಮ ದಿನಾಂಕವನ್ನು ಮೊದಲು ಜುಲೈ 5 ಎಂದು ನಿಗದಿ ಮಾಡಲಾಗಿತ್ತು. ಇದೀಗ ಅದು ಜುಲೈ 8ಕ್ಕೆ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಯಾವುದೇ ರೀತಿಯ ತೊಂದರೆಗಳು ಆಗದಂತೆ ಇಂಧನ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು; ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಹೀಗೆ ಐದು ವಿಭಾಗಗಳಲ್ಲಿ ಜಾರಿ ಮಾಡಿಕೊಳ್ಳಲಾಗುತ್ತಿದೆ.

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಕೆಗೆ ಏನೇನು ಬೇಕು?

  • ಅರ್ಜಿ ಸಲ್ಲಿಸುವವರು ಆರ್‌ಆರ್ ನಂಬರ್ ಜೊತೆಗೆ ಆಧಾರ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು.
  • ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕರಾರು ಪತ್ರ ಅಥವಾ ವೋಟರ್ ಐಡಿ ಕಡ್ಡಾಯವಾಗಿದ್ದು, ಇವೆರಡರಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು.
  • ಅರ್ಜಿ ಸಲ್ಲಿಕೆಯನ್ನು ಇಂಧನ ಇಲಾಖೆ ಸರಳೀಕರಣ ಮಾಡಿದೆ. ಹಳ್ಳಿಗಳಲ್ಲಿ ಹಾಗೂ ನಗರ ಭಾಗಗಳಲ್ಲಿ ಬಾಡಿಗೆ ಇರುವವರ ದೃಷ್ಟಿಯಿಂದ ಸರಳೀಕರಣ ಮಾಡಲಾಗಿದೆ.

ನೋಂದಣಿ ಹೇಗೆ?

ಅರ್ಹ ಫಲಾನುಭವಿಗಳು ಮೊಬೈಲ್ ಫೋನ್ / ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಸಾಫ್ಟ್ವೇರ್ ಮೂಲಕ ನೋಂದಾಯಿಸಿಕೊಳ್ಳಬಹುದು.ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ನಾಡಕಚೇರಿಗಳಲ್ಲಿ ಅಥವಾ ಯಾವುದೇ ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಬಹುದು.

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಇಂದು (ಜೂನ್ 18) ಬೆಳ್ಳಗೆ 11-00 ಗಂಟೆಯ ನಂತರ ರಾಜ್ಯ ಸರಕಾರದ ಸೇವಾ ಸಿಂಧು ಪೋರ್ಟಲ್ (https://sevasindhugs.karnataka.gov.in/about_kan nada.html) ಭೇಟಿ ಮಾಡಿ ನೀವೇ ಸ್ವತಃ ನಿಮ್ಮ ಮೊಬೈಲ್ ಮೂಲಕ ಅಗತ್ಯ ವಿವರ ದಾಖಲಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯುತ್ ಕಚೇರಿ ಅಥವಾ 24X7 ಸಹಾಯವಾಣಿ 1912 ಹಾಗೂ 08022279954 / 8792662814 / 8792662816ಗೆ ಕರೆ ಮಾಡಬಹುದು.

ಇದನ್ನೂ ಓದಿ:

ಉಚಿತ ಊಟ-ವಸತಿ ಸಹಿತ ಕೋಳಿ ಸಾಕಾಣೆ ತರಬೇತಿ, ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ… 

ಕೃಷಿ ಯಂತ್ರೋಪಕರಣ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ | ಅರ್ಜಿ ಸಲ್ಲಿಕೆ ಹೇಗೆ?

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ | ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ… … 

ಕೈ ಕೊಟ್ಟ ಮುಂಗಾರು | ರೈತರಿಗೆ ಮಳೆ ತರಿಸಲು ಮುಂದಾದ ರಾಜ್ಯ ಸರಕಾರ

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!