ಸರಕಾರಿ ಯೋಜನೆ

ಜುಲೈ 1ರಿಂದ ಬಳಸುವ ಕರೆಂಟ್ ಸಂಪೂರ್ಣ ಉಚಿತ | ಹೇಗೆ ಬರಲಿದೆ ಕರೆಂಟ್ ಬಿಲ್? | Karnataka’s Gruha Jyoti scheme

WhatsApp Group Join Now
Telegram Group Join Now

ನಾಳೆಯಿಂದ ರಾಜ್ಯದ 2 ಎರಡು ಕೋಟಿಗೂ ಹೆಚ್ಚು ಗ್ರಾಹಕರ ಮನೆಮನೆಯಲ್ಲಿ ‘ಗೃಹಜ್ಯೋತಿ’ ಬೆಳಗಲಿದ್ದಾಳೆ. ಜುಲೈ 1ರ ರಾತ್ರಿ 12 ಗಂಟೆಯಿAದ 200 ಯೂನಿಟ್ ಉಚಿತ ವಿದ್ಯುತ್​ ಕಲ್ಪಿಸುವ ಗೃಹಜ್ಯೋತಿ ಯೋಜನೆ ಅನ್ವಯವಾಗಲಿದೆ. ಈಗಾಗಲೇ ಅರ್ಜಿ ಸಲ್ಲಿಸಿದ, ಇನ್ನೂ ಅರ್ಜಿ ಸಲ್ಲಿಸುತ್ತಿರುವ ಫಲಾನುಭವಿಗಳು ನಾಳೆಯಿಂದ ಬಳಸುವ ಕರೆಂಟ್‌ಗೆ ಬಿಲ್ ಕಟ್ಟುವಂತಿಲ್ಲ!

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ Fake App ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟೀ!… 

ನಾಳೆಯಿ೦ದ ಕರೆಂಟ್ ಉಚಿತ

ಹೌದು, ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳ ವರೆಗಿನ ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ‘ಬೆಳಕು’ ನಾಳೆಯಿಂದ ನಾಡಿನ ಜನತೆಗೆ ದಕ್ಕಲಿದೆ. ಕಳೆದ ಜೂನ್ 02, 2023ರಂದು ನಡೆದ ಸಂಪುಟ ಸಭೆಯಲ್ಲಿ ‘ಗೃಹಜ್ಯೋತಿ’ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ವಿಷಯ ಮಂಡನೆಯಾಗಿದೆ.

ಜೂನ್ 05, 2023ರಂದು ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ‘ಗೃಹಜ್ಯೋತಿ’ ಯೋಜನೆ ಸಂಬAಧ ನಡವಳಿಗಳನ್ನು ಹೊರಡಿಸಿದ್ದಾರೆ. ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಯಾರೆಲ್ಲ ಅರ್ಹರು?

ಗೃಹಜ್ಯೋತಿ ಯೋಜನೆಗೆ ರಾಜ್ಯದ 2.14 ಕೋಟಿ ಗ್ರಾಹಕರು ಅರ್ಹರಿರಾಗಿದ್ದಾರೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. 2.14 ಕೋಟಿ ಗ್ರಾಹಕರ ಪೈಕಿ 2 ಲಕ್ಷ ಗ್ರಾಹಕರು ಮಾತ್ರ ಹೊರ ಉಳಿಯಲಿದ್ದಾರೆ.ಗೃಹ ಜ್ಯೋತಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆ ಅಡಿಯಲ್ಲಿ ನಾಳೆಯಿಂದ ಬಳಸುವ 200 ಯುನಿಟ್ ಒಳಗಿನ ಸರಾಸರಿ ಕರೆಂಟ್ ಸಂಪೂರ್ಣ ಉಚಿತ.

ಜುಲೈ ತಿಂಗಳ ವಿದ್ಯುತ್​ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್​ ಉಚಿತ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಮಿತಿಯಲ್ಲಿದ್ದರೆ ಉಚಿತ ಕರೆಂಟ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ದರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್​ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ.

ಹೊಸ APL, BPL ರೇಷನ್ ಕಾರ್ಡ್ ಅರ್ಜಿ ಸ್ಥಗಿತ | New Ration Card Application Stop

ಎಲ್ಲೆಲ್ಲಿ ಎಷ್ಟೆಷ್ಟು ನೋಂದಣಿ?

ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ಒಟ್ಟು 77 ಲಕ್ಷದ 20 ಸಾವಿರದ 207 ಮಂದಿ ನೋಂದಾಯಿಸಿಕೊAಡಿದ್ದಾರೆ. ಬೆಸ್ಕಾಂನಲ್ಲಿ 31 ಲಕ್ಷ 55 ಸಾವಿರದ 367 ಅರ್ಜಿಗಳು ಬಂದಿವೆ. ಸೆಸ್ಕಾಂನಲ್ಲಿ 12 ಲಕ್ಷದ 4 ಸಾವಿರದ 627 ಮಂದಿ ನೋಂದಾಯಿಸಿಕೊ೦ಡಿದ್ದಾರೆ.

ಜೆಸ್ಕಾ೦ನಲ್ಲೂ 8 ಲಕ್ಷದ 15 ಸಾವಿರದ 968, ಹೆಸ್ಕಾಂನಲ್ಲಿ 15 ಲಕ್ಷದ 99 ಸಾವಿರದ 944 ಮಂದಿ ಫ್ರೀ ಕರೆಂಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. HRECSನಲ್ಲಿ 36 ಸಾವಿರದ 906 ಮಂದಿ ಹಾಗೂ ಮೆಸ್ಕಾಂನಲ್ಲಿ 9 ಲಕ್ಷದ 7 ಸಾವಿರದ 396 ಮಂದಿ ನೋಂದಾಯಿಸಿಕೊ೦ಡಿದ್ದಾರೆ.

ಇದನ್ನೂ ಓದಿ:

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!