ಸರಕಾರಿ ಯೋಜನೆ

ಉಚಿತ ಕರೆಂಟ್ ಪಡೆಯಲು ಯಾವುದೇ ಡೆಡ್‌ಲೈನ್ ಇಲ್ಲ | ಈ ಹೊಸ ಲಿಂಕ್ ಬಳಸಿ ಮನೆಯಲ್ಲೇ ಅರ್ಜಿ ಸಲ್ಲಿಸಿ… | Gruha Jyoti Scheme No Deadlin

WhatsApp Group Join Now
Telegram Group Join Now

ಉಚಿತ ಕರೆಂಟ್ ಪಡೆಯುವ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು  ಯಾವುದೇ ಗಡುವು ಇಲ್ಲ; ಸಮಾಧಾನದಿಂದ ಅರ್ಜಿ ಸಲ್ಲಿಸಿ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ…

‘ಗೃಹ ಜ್ಯೋತಿ’ ಯೋಜನೆಗೆ ಜೂನ್ 22ರ ಗುರುವಾರ ಸಂಜೆಯ ವರೆಗೆ ಒಟ್ಟು 20.10 ಲಕ್ಷ ಗ್ರಾಹಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಜೂನ್ 18ರಂದು ನೋಂದಣಿ ಪ್ರಾರಂಭವಾಗಿತ್ತು. ಅಂದು 96,305, ಜೂನ 19ರ ಸೋಮವಾರ 3,34,845, ಜೂನ್ 20ರ ಮಂಗಳವಾರ 4,64,225, ಜೂನ್ 21ರ ಬುಧವಾರ 5,25,953 ಗ್ರಾಹಕರು ನೋಂದಣಿ ಮಾಡಿದ್ದರು. ಜೂನ್ 22ರ ಗುರುವಾರ ಸಂಜೆಯ ವೇಳೆಗೆ 5,89,158 ಲಕ್ಷ ಗ್ರಾಹಕರು ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸೇರಿ ಇತರೆಡೆ ನೋಂದಣಿ ಮಾಡಿಕೊಂಡಿದ್ದಾರೆ.

ಮನೆ ಬಾಗಿಲಲ್ಲೇ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ | ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೆರವು | Gruhalakshmi Scheme…

ಯಾವುದೇ ಗಡುವು ಇಲ್ಲ….

‘ಗೃಹಜ್ಯೋತಿ’ ಯೋಜನೆ 2023ರ ಆಗಸ್ಟ್ 1ರಿಂದ (ಜುಲೈ ತಿಂಗಳ ವಿದ್ಯುಚ್ಛಕ್ತಿ ಬಳಕೆ) ಜಾರಿಗೆ ಬರಲಿದೆ. ಯೋಜನೆಯ ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಯೋಜನೆಗೆ ಫಲಾನುಭವಿಯಾಗಲು ನೋಂದಣಿ ಮಾಡುವುದು ಕಡ್ಡಾಯ.

ಆದರೆ ನೋಂದಣಿ ಆರಂಭವಾದಾಗಿನಿ೦ದಲೂ ಸರ್ವರ್ ಸಮಸ್ಯೆ ತಲೆದೋರಿದ್ದು; ಸಾರ್ವಜನಕರು ಅರ್ಜಿ ಸಲ್ಲಿಕೆಗಾಗಿ ತಡಕಾಡುವಂತಾಗಿದೆ. ನಿಗದಿತ ದಿನಾಂಕದೊಳಗೇ ಅರ್ಜಿ ಸಲ್ಲಿಸಬೇಕೆಂದು ಗಡುವು ವಿಧಿಸಿದ್ದರಿಂದ ಜನರಲ್ಲಿ ಆತಂಕ ಶುರುವಾಗಿದೆ.

ಆದರೆ ಈಗ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಯಾವುದೇ ಗಡುವು ಇಲ್ಲ ಎಂದು ಇಂಧನ ಸಚಿವರು ಹೇಳಿದ್ದಾರೆ. ಜನರು ನೋಂದಣಿ ಮಾಡಿಸಲು ಕ್ಯೂ ನಿಂತಿದ್ದಾರೆ. ಇಂಧನ ಸಚಿವ ಕೆ. ಜೆ. ಜಾರ್ಜ್ ಬೆಂಗಳೂರಿನಲ್ಲಿ ನಿನ್ನೆ ಜೂನ್ 22ರಂದು ಮಾತನಾಡಿ, ‘ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಯಾವುದೇ ಗಡುವು ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಸಮಾಧಾನದಿಂದ ಅರ್ಜಿ ಸಲ್ಲಿಸಿ, ಆತಂಕ ಬೇಡ

‘ಗೃಹಜ್ಯೋತಿ’ ಯೋಜನೆಗೆ ನೋಂದಣಿಯನ್ನು ಜೂನ್ 18ರಿಂದ ಆರಂಭಿಸಲಾಗಿದೆ. ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಜೊತೆಗೆ, ಜನರು ತಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳ ಮೂಲಕವೂ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕೆಲವು ವಿದ್ಯುತ್ ಕಚೇರಿಗಳಲ್ಲಿ ಗ್ರಾಹಕರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ಯೋಜನೆ ನೋಂದಣಿ ಪ್ರಕ್ರಿಯೆ ತುಂಬಾ ಸರಳ ಇರುವುದರಿಂದ ಭೌತಿಕವಾಗಿ ಯಾವುದೇ ದಾಖಲೆಗಳನ್ನು ನೀಡದೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಖಾತೆ ಸಂಖ್ಯೆ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನಮೂದಿಸುವ ಮೂಲಕ ಸುಲಭವಾಗಿ ನೋಂದಣಿ ಮಾಡಬಹುದಾಗಿದೆ. ಯೋಜನೆ ಫಲಾನುಭವಿಯಾಗಲು ನೋಂದಣಿಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಡೈರೆಕ್ಟ್ ಲಿಂಕ್ ಮೂಲಕ ತಕ್ಷಣ ನೋಂದಣಿ ಮಾಡಿ

ವಿದ್ಯುತ್ ಕಚೇರಿ, ಗ್ರಾಮ ಪಂಚಾಯಿತಿ, ನಾಡ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆದರೆ ಕೇಂದ್ರಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದು, ಸರ್ವರ್ ಸಮಸ್ಯೆಯಿಂದ ನೋಂದಣಿ ಆಗುತ್ತಿಲ್ಲ.

ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು  ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಿರುವ https://sevasindhugs.karnataka.gov.in/ ಡೈರೆಕ್ಟ್ ಲಿಂಕ್ ಮೂಲಕ ಲಾಗಿನ್ ಆಗಿ ನೋಂದಾಯಿಸಬಹುದು.

ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ಅರ್ಜಿ ಸಲ್ಲಿಕೆಯ ಸರಳ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ…

 

ಇವುಗಳನ್ನೂ ಓದಿ:

ರೈತರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ | ಪ್ರೋತ್ಸಾಹಧನ ಕೂಡ 7 ರೂಪಾಯಿಗೆ ಹೆಚ್ಚಳ

ತೋಟಗಾರಿಕೆ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನ

ದುಬಾರಿ ಕರೆಂಟ್ ಬಿಲ್ ಕಂತುಗಳಲ್ಲಿ ಪಾವತಿಸಲು ಇಲ್ಲಿದೆ ಅವಕಾಶ

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!