ಸರಕಾರಿ ಯೋಜನೆ

ಮಹಿಳೆಯರಿಗೆ ಉಚಿತ ನಾಟಿಕೋಳಿ ವಿತರಣೆ | ಪ್ರತಿಯೊಬ್ಬ ಫಲಾನುಭವಿಗೆ 2,600 ರೂಪಾಯಿ ಕೋಳಿಗಳು | Free NatiKoli scheme

WhatsApp Group Join Now
Telegram Group Join Now

ಗ್ರಾಮೀಣ ಮಹಿಳೆಯರಿಗೆ 2,600 ರೂಪಾಯಿ ವೆಚ್ಚದ ನಾಟಿಕೋಳಿ ಮರಿಗಳನ್ನು ಸರಕಾರ ಸಂಪೂರ್ಣ ಉಚಿತವಾಗಿ ವಿತರಿಸುತ್ತಿದೆ. ಈ ಸೌಲಭ್ಯಕ್ಕೆ ಯಾರೆಲ್ಲ ಅರ್ಹರು? ಉಚಿತ ಕೋಳಿ ಮರಿ ಪಡೆಯುವುದು ಹೇಗೆ? ಫಲಾನುಭವಿಗಳ ಆಯ್ಕೆ ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…

ಮುಖ್ಯಮಂತ್ರಿ ಅಮೃತ ಜೀವನ ಯೋಜನೆ, ಪಶುಭಾಗ್ಯ ಯೋಜನೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗಳಡಿ ಸಬ್ಸಿಡಿಯಲ್ಲಿ ಹಸು, ಕುರಿ-ಮೇಕೆಗಳನ್ನು ವಿತರಿಸುವ ಮಾದರಿಯಲ್ಲಿಯೇ ಸಂಪೂರ್ಣ ಉಚಿತ ಕೋಳಿ ಮರಿ ವಿತರಣೆ ಯೋಜನೆಯನ್ನು ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಈಗಾಗಲೇ ರಾಜ್ಯದ ಅನೇಕ ಗ್ರಾಮದ ಸಾವಿರಾರು ಬಡ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಕುಕ್ಕುಟೋದ್ಯಮವನ್ನು ಪ್ರೋತ್ಸಾಹಿಸಲು ಹಾಗೂ ಮಾರುಕಟ್ಟೆಯನ್ನು ವಿಸ್ತರಿಸಲು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ 2022-23ನೇ ಸಾಲಿನ ಬಜೆಟ್‌ನಂತೆ ಐದು ಲಕ್ಷ ನಾಟಿಕೋಳಿ ಮರಿಗಳನ್ನು ಉತ್ಪಾದಿಸಿ ರಾಜ್ಯದ ಗ್ರಾಮೀಣ ಮಹಿಳೆಯರಿಗೆ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ 2019-20ನೇ ಸಾಲಿನ ಆಯವ್ಯಯದಲ್ಲಿ ಘೊಷಿಸಿದಂತೆ ಐದು ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಆ ಪ್ರಕಾರ ಇದೀಗ ಆಯಾ ತಾಲೂಕುಗಳಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಿದ್ದು, ಕೋಳಿ ಮರಿಗಳ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆ: ರೈತರ ಖಾತೆಗೆ ನೇರ ಹಣ ಜಮೆ

2,600 ರೂಪಾಯಿ ವೆಚ್ಚದ ನಾಟಿಕೋಳಿ ವಿತರಣೆ

ರಾಜ್ಯದ ಪ್ರತಿ ತಾಲೂಕುಗಳಿಗೆ ಗುರಿ ನಿಗದಿಪಡಿಸಲಾಗಿದ್ದು, ಒಂದೊಂದು ತಾಲೂಕಿಗೆ 106 ಫಲಾನುಭವಿಗಳಿಗೆ ತಲಾ 20 ಕೋಳಿಮರಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಪ್ರತಿ ಫಲಾನುಭವಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದ್ದು; ಐದು ವಾರದ ತಲಾ ಒಂದೊಂದು ಕೋಳಿ ಮರಿಗೆ 130 ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಒಂದು ದಿನದ ಮರಿಗೆ 28 ರೂಪಾಯಿ ಹಾಗೂ ಐದು ವಾರ ಸಾಕಣೆ ವೆಚ್ಚ 102 ರೂಪಾಯಿ ಸೇರಿ ಐದು ವಾರದ ತಲಾ ಒಂದು ಕೋಳಿ ಮರಿಗೆ ಒಟ್ಟು 130 ರೂಪಾಯಿ ವೆಚ್ಚವಾಗಲಿದೆ.

ಅಂದರೆ ತಲಾ ಒಬ್ಬೊಬ್ಬ ಫಲಾನುಭವಿಗಳಿಗೆ ಒಟ್ಟು 2,600 ರೂಪಾಯಿ ವೆಚ್ಚದ ನಾಟಿಕೋಳಿ ಮರಿಗಳನ್ನು ಸರಕಾರ ಸಂಪೂರ್ಣ ಉಚಿತವಾಗಿ ವಿತರಿಸುತ್ತಿದೆ. ಈ ಕೋಳಿ ಮರಿಗಳನ್ನು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಕುಕ್ಕುಟ ಕ್ಷೇತ್ರಗಳಲ್ಲಿ, ಬೆಂಗಳೂರಿನ ಹೆಸರಘಟ್ಟದ ಕೇಂದ್ರೀಯ ಕುಕ್ಕಟ ಅಭಿವೃದ್ಧಿ ಸಂಸ್ಥೆ, ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಕೋಳಿಮರಿಗಳನ್ನು ಉತ್ಪಾದಿಸಲಾಗುತ್ತದೆ.

ಇದನ್ನೂ ಓದಿ: ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಫಲಾನುಭವಿಗಳ ಆಯ್ಕೆ ಹೇಗೆ?

ಬಡತನ ರೇಖೆಗಿಂತ ಕೆಳಗಿರುವ ರೈತ ಮಹಿಳೆಯರು, ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರು ಹಾಗೂ ರೈತ ಉತ್ಪಾದಕ ಸಂಸ್ಥೆಯ ಮಹಿಳಾ ಸದಸ್ಯೆಯರಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯ ಸಹಕಾರ ಕುಕ್ಕುಟ ಮಂಡಳಿ ವ್ಯವಸ್ಥಾಪಕರು ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ. ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಆಯಾ ಜಿಲ್ಲೆಯಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ಅಧ್ಯಕ್ಷರಾಗಿರುತ್ತಾರೆ.

ಕುಕ್ಕುಟ ಮಂಡಳಿಯ ಪ್ರಾದೇಶಿಕ ಕೇಂದ್ರಗಳ ಸಹಾಯಕ ನಿರ್ದೇಶಕರು ಯೋಜನಾ ಅನುಷ್ಠಾನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ. ಜಿಲ್ಲಾ ಉಪ ನಿರ್ದೇಶಕರು ಹಾಗೂ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಸಮನ್ವಯ ಸಾಧಿಸಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಆದರೆ ಸ್ವೀಕರಿಸಿದ ಅರ್ಜಿಯನ್ನು ಆಯ್ಕೆ ಸಮಿತಿ ಮುಂದೆ ಮಂಡಿಸಿ ನಿಯಮಾನುಸಾರ ಅರ್ಹರನ್ನು ಗುರುತಿಸಬೇಕಾಗುತ್ತದೆ.

ಉಚಿತ ನಾಟಿಕೋಳಿ ಮರಿ ವಿತರಣೆ ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಪಶು ಸಂಗೋಪನಾ ಇಲಾಖೆಯ ವಿವಿಧ ಜಿಲ್ಲೆಯ ಉಪ ನಿರ್ದೇಶಕರ ಸಂಪರ್ಕ ಸಂಖ್ಯೆ ಹಾಗೂ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

 

WhatsApp Group Join Now
Telegram Group Join Now

Related Posts

error: Content is protected !!