ಪಶುಪಾಲನೆ

Free Poultry Farming Training: ಉಚಿತ ಊಟ-ವಸತಿ ಸಹಿತ ಕೋಳಿ ಸಾಕಾಣೆ ತರಬೇತಿ, ಮೊಬೈಲ್‌ನಲ್ಲೇ ಹೆಸರು ನೋಂದಾಯಿಸಿ

WhatsApp Group Join Now
Telegram Group Join Now

ಕೋಳಿ ಸಾಕಣೆ ಮಾಡುವ ಇಚ್ಛೆಯುಳ್ಳ ಆಸಕ್ತ ಯುವ ರೈತರು ಮತ್ತು ರೈತ ಮಹಿಳೆಯರಿಗೆ ಇಲ್ಲಿ ಊಟ, ವಸತಿ ಸಹಿತ ಉಚಿತ ತರಬೇತಿ ನೀಡಲಾಗುತ್ತದೆ…

ಕೋಳಿ ಸಾಕಣೆ ಇತ್ತೀಚೆಗೆ ಭಾರೀ ಜನಪ್ರಿಯವಾಗುತ್ತಿದೆ. ಇದರಿಂದ ಉತ್ತೇಜಿತರಾದ ಹಲವು ಯುವ ರೈತರು ಮತ್ತು ರೈತ ಮಹಿಳೆಯರು ಕೋಳಿ ಸಾಕಾಣಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಂತಹ ಯುವ ರೈತರಲ್ಲಿ ಬಹುತೇಕರು ಕೋಳಿ ಸಾಕಣೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಸಾಕಾಣಿಕೆ ಮಾಡುತ್ತಿದ್ದಾರಾದ್ದರಿಂದ ಸಹಜವಾಗಿಯೇ ನಷ್ಟ ಅನುಭವಿಸುತ್ತಿದ್ದಾರೆ. ಯಾಕೆಂದರೆ ಅವರ ಆರಂಭಿಕ ಯೋಜನೆ, ಯೋಚನೆಯಲ್ಲಿಯೇ ಲೋಪದೋಷವಿರುತ್ತದೆ.

ಹೀಗೆ ಕೋಳಿ ಸಾಕಣೆ ಮಾಡುವ ಇಚ್ಛೆ ಇದ್ದು; ಮಾಹಿತಿ ಕೊರತೆ ಎದುರಿಸುವ ಆಸಕ್ತ ಯುವ ರೈತರು ಮತ್ತು ರೈತ ಮಹಿಳೆಯರಿಗೆ ತರಬೇತಿ ನೀಡಲು ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಈ ಪೈಕಿ  ರುಡ್‌ಸೆಟ್ ಸಂಸ್ಥೆಯು ಒಂದಾಗಿದ್ದು; ಇದೇ ಜೂನ್ 26 ರಿಂದ ಜುಲೈ 5ರ ವರೆಗೆ ವಿಜಯಪುರ ನಗರದಲ್ಲಿ 10 ದಿನಗಳ ಕಾಲ ಉಚಿತ ಕೋಳಿ ಸಾಕಾಣಿಕೆ ತರಬೇತಿ ಆಯೋಜಿಸಿದೆ.

ಮಹಿಳೆಯರು ಪ್ರತಿ ತಿಂಗಳು 2,000 ನೆರವು ಪಡೆಯಲು ಜೂನ್ 20ರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಹೇಗೆ?

ತರಬೇತಿಯಲ್ಲಿ ಏನೇನಿರುತ್ತದೆ?

 • ಕೋಳಿ ಉದ್ಯಮದ ಮಹತ್ವ
 • ಹಿತ್ತಲು ಮತ್ತು ವ್ಯಾಪಾರೋದ್ಯಮವಾಗಿ ಕೋಳಿ ಸಾಕಾಣಿಕೆ ವಿಧಾನ
 • ಕೋಳಿಗೆ ಬರುವ ರೋಗಗಳು
 • ಕೋಳಿ ಮತ್ತು ಮರಿಗಳ ಪಾಲನೆ
 • ಕೋಳಿ ಸಾಕಣೆ ಕೊಟ್ಟಿಗೆ ನಿರ್ಮಾಣ
 • ಬೇಕಾಗುವ ಸಲಕರಣೆಗಳು
 • ಆಹಾರ ನೀಡುವ ಮತ್ತು ತಯಾರಿಸುವ ವಿಧಾನ
 • ಮೊಟ್ಟೆಯ ಮಾರುಕಟ್ಟೆ
 • ಕೋಳಿ ತ್ಯಾಜ್ಯದ ಮಾರುಕಟ್ಟೆ
 • ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಿಗುವ ಯೋಜನೆಗಳು
 • ಉದ್ಯಮಶೀಲತೆ, ಮಾರುಕಟ್ಟೆ ನಿರ್ವಹಣೆ
 • ಬ್ಯಾಂಕಿ೦ಗ್, ಸಾಲ ಸವಲತ್ತುಗಳು

…ಹೀಗೆ ಅನೇಕ ವಿಷಯಗಳ ಕುರಿತು ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತದೆ.

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಯಾರೆಲ್ಲ ತರಬೇತಿ ಪಡೆಯಬಹುದು?

19 ರಿಂದ 45 ವಯೋಮಿತಿಯ ಹಾಗೂ ಗ್ರಾಮೀಣ ಪ್ರದೇಶದ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರುವ ಪುರುಷ ಮತ್ತು ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯಲ್ಲಿ ಉಚಿತ ಊಟ ವಸತಿ ನೀಡಲಾಗುವುದು. ಆಸಕ್ತರು ದೂರವಾಣಿ ಮೂಲಕ ಹೆಸರು ನೋಂದಾಯಿಸಬಹುದು.

ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ:

ಸಂಸ್ಥೆಯ ವಿಳಾಸ: ರುಡ್‌ಸೆಟ್ ಸಂಸ್ಥೆ, ರಾಘವೇಂದ್ರ ಕಾಲೋನಿ, ಜಮಖಂಡಿ-ಬಾಗಲ ಕೋಟ ಬೈಪಾಸ್ ರಸ್ತೆ, ವಿಜಯಪುರ, ಮೊಬೈಲ್ ಸಂಖ್ಯೆ: 97310 65632, 9739511914

ಇದನ್ನೂ ಓದಿ:

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಕೃಷಿ ಯಂತ್ರೋಪಕರಣ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ | ಅರ್ಜಿ ಸಲ್ಲಿಕೆ ಹೇಗೆ?

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ | ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ… … 

ಕೈ ಕೊಟ್ಟ ಮುಂಗಾರು | ರೈತರಿಗೆ ಮಳೆ ತರಿಸಲು ಮುಂದಾದ ರಾಜ್ಯ ಸರಕಾರ

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!