ಸರಕಾರಿ ಯೋಜನೆ

ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ ಆಹ್ವಾನ : ಬಡಿಗಿ, ದೋಬಿ, ಗೌಂಡಿ, ಕಮ್ಮಾರ, ಕ್ಷೌರಿಕರಿಗೆ ಉಚಿತ ಉಪಕರಣಗಳು Free Tailoring Machine Scheme

WhatsApp Group Join Now
Telegram Group Join Now

2023-24ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಉಚಿತ ಹೊಲಿಗೆಯಂತ್ರ, ವೃತ್ತಿಪರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆಗಳ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

District Industry Center Scheme : 2023-24ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರ, ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳ ಸರಬರಾಜು ಯೋಜನೆಯಡಿ ಬಡಿಗತನ, ಕ್ಷೌರಿಕ, ಧೋಬಿ, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಹೊಲಿಗೆ ಯಂತ್ರಗಳನ್ನು ವಿತರಿಸಲು ಗ್ರಾಮೀಣ ಪ್ರದೇಶದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗಳ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ವೃತ್ತಿಯಾಧಾರಿತ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

 • ಬಟ್ಟೆ ಹೊಲಿಯುವ ವೃತ್ತಿ ಮಾಡುವ ದರ್ಜಿಗಳು, ಸಿಂಪಿಗರು ಅಥವಾ ವೃತ್ತಿಪರ ಹೊಲಿಗೆ ಕೆಲಸ ಮಾಡುವ ಯಾವುದೇ ಜಾತಿಯ ಟೈಲರ್‌ಗಳು
 • ಮರಗೆಲಸದ ಬಡಿಗೆತನ ಮಾಡುವವರು
 • ಬಟ್ಟೆ ತೊಳೆಯುವ ಕಸುಬು ಮಾಡುವ ದೋಬಿ/ ಮಡಿವಾಳರು
 • ಕಬ್ಬಿಣದ ಕೆಲಸ ಮಾಡುವ ಕಮ್ಮಾರರು
 • ಕಟ್ಟಡ ನಿರ್ಮಾಣ ಕೆಲಸ ಮಾಡುವ ಗೌಂಡಿ (ಗಾರೆ) ಕೆಲಸಗಾರರು
 • ಕ್ಷೌರಿಕ ವೃತ್ತಿ ಮಾಡುವ ಕ್ಷೌರಿಕರು (ಹಡಪದರು)

ಇದನ್ನೂ ಓದಿ: ದುಡ್ಡು ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್ | Kisan Vikas Patra (KVP) Post Office Savings Scheme

ಈ ಯೋಜನೆಗಳು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಿರುತ್ತವೆ. ಹೊಲಿಗೆಯಂತ್ರಗಳನ್ನು ಪಡೆಯುವ ಸಾಮಾನ್ಯ ಮತ್ತು ಇತರ ಅಭ್ಯರ್ಥಿಯು ಕನಿಷ್ಟ 18 ರಿಂದ ಗರಿಷ್ಠ 38 ವರ್ಷದ ವರೆಗೆ ವಯೋಮಿತಿ ಹೊಂದಿರಬೇಕು. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಾಗಿದ್ದರೆ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ಮೀರಿರಬಾರದು.

ಈ ಹಿಂದೆ ಈ ಯೋಜನೆಯಡಿ ಹೊಲಿಗೆಯಂತ್ರ / ಸುಧಾರಿತ ಸಲಕರಣೆಗಳನ್ನು ಪಡೆದಿದ್ದರೆ ಕುಶಲಕರ್ಮಿಗಳು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಅರ್ಜಿದಾರರ ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ (ಪ.ಜಾ/ ಪ.ಪಂ /ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಮಾತ್ರ), ಆಯಾ ಗ್ರಾಮ ಪಂಚಾಯತಿ ಪಿಡಿಒ ಅವರಿಂದ ವೃತ್ತಿಪರ ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪತ್ರ, ಅಭ್ಯರ್ಥಿ ವಿಕಲಚೇತನ ಆಗಿದ್ದಲ್ಲಿ UDID Card, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಪ್ರತಿ ಜಿಲ್ಲೆಗೂ ಇಂತಿಷ್ಟು ಹೊಲಿಗೆ ಯಂತ್ರ ಮತ್ತು ಸುಧಾರಿತ ಸಲಕರಣೆಗಳ ಗುರಿ ನಿಗದಿಪಡಿಸಲಾಗಿದೆ. ಹಾಗೊಂದು ವೇಳೆ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಅರ್ಜಿಗಳು ಬಂದಲ್ಲಿ ಲಾಟರಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ | Gruhalakshmi, Annabhagya Pension Money Deposit Date fix

 • ಬಾಗಲಕೋಟೆ ಜಿಲ್ಲೆ : 06-12-2023
 • ಚಾಮರಾಜನಗರ ಜಿಲ್ಲೆ : 30-11-2023
 • ಹಾಸನ ಜಿಲ್ಲೆ : 15-11-2023
 • ಗದಗ ಜಿಲ್ಲೆ : 20-11-2023
 • ಕೋಲಾರ ಜಿಲ್ಲೆ : 15-11-2023
 • ಬಾಗಲಕೋಟೆ ಜಿಲ್ಲೆ: ಇಲ್ಲಿ ಕ್ಲಿಕ್ ಮಾಡಿ
  ಜಿಲ್ಲೆಯ ಅರ್ಹ ಫಲಾನುಭವಿಗಳು ಕಚೇರಿಯ ದೂರವಾಣಿ ಸಂಖ್ಯೆ: 08354-223744 ಅಥವಾ ಸಂಬ೦ಧಪಟ್ಟ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿ ಬಾಗಲಕೋಟೆ, ಇಳಕಲ್ ಮತ್ತು ಹುನಗುಂದ (83174 37475), ಜಮಖಂಡಿ, ರಬಕವಿ-ಬನಹಟ್ಟಿ, ಗುಳೇದಗುಡ್ಡ ಮತ್ತು ಬಾದಾಮಿ (77600 07080) ಬೀಳಗಿ ಮತ್ತು ಮುಧೋಳ (96207 21729) ಸಂಪರ್ಕಿಸಬೇಕು. ಜಿಲ್ಲಾಡಳಿತ ಭವನದ 3ನೇ ಮಹ ಡಿಯ ಕೊಠಡಿ ಸಂಖ್ಯೆ 239ರಲ್ಲಿರುವ ಜಿ.ಪಂ ಕೈಗಾರಿಕಾ ವಿಭಾಗ ಸಂಪ‍ರ್ಕಿಸಬಹುದು.
 • ಚಾಮರಾಜನಗರ ಜಿಲ್ಲೆ : ಇಲ್ಲಿ ಕ್ಲಿಕ್ ಮಾಡಿ
 • ಹಾಸನ ಜಿಲ್ಲೆ : ಇಲ್ಲಿ ಕ್ಲಿಕ್ ಮಾಡಿ
 • ಗದಗ ಜಿಲ್ಲೆ : ಇಲ್ಲಿ ಕ್ಲಿಕ್ ಮಾಡಿ
 • ಕೋಲಾರ ಜಿಲ್ಲೆ : ಇಲ್ಲಿ ಕ್ಲಿಕ್ ಮಾಡಿ

ಹೊಲಿಗೆ ಯಂತ್ರ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಸುಧಾರಿತ ಉಪಕರಣಗಳ ಅರ್ಜಿ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೂರು ತಿಂಗಳ ಗೃಹಲಕ್ಷ್ಮೀ ಹಣ ಒಟ್ಟಿಗೆ ಜಮಾ : 15 ದಿನಗಳೊಳಗೆ ಹಣ ಸಂದಾಯ

ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ 2023-24ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಹೊಲಿಗೆಯಂತ್ರ, ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆಗಳ ಸರಬರಾಜು ಯೋಜನೆಯಡಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮ್ಮ ಗ್ರಾಮ ಪಂಚಾಯ್ತಿಗಳಲ್ಲಿ ಈ ಬಗ್ಗೆ ವಿಚಾರಿಸಿ, ಯೋಜನೆಯ ಅನುದಾನ ಲಭ್ಯವಿದ್ದರೆ, ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಾಗಿ ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

WhatsApp Group Join Now
Telegram Group Join Now

Related Posts

error: Content is protected !!