ಸರಕಾರಿ ಯೋಜನೆ

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ | 1.4 ಲಕ್ಷ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿ | Free tablet scheme

WhatsApp Group Join Now
Telegram Group Join Now

2022-23ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರ ಉಚಿತ ಟ್ಯಾಬ್ ಯೋಜನೆ ಅನುಷ್ಠಾನಗೊಳಿಸಿದ್ದು; ಯಾರೆಲ್ಲ ಈ ಸೌಲಭ್ಯ ಪಡೆಯಲು ಅರ್ಹರು? ಟ್ಯಾಬ್ ವಿತರಣೆಯಿಂದ ವಿದ್ಯಾರ್ಥಿಗಳಿಗಾಗುವ ಅನುಕೂಲಗಳೇನು? ಕಾಲೇಜು ಶಿಕ್ಷಣ ಇಲಾಖೆ ಪ್ರಸ್ತಾವನೆಯಲ್ಲೇನಿದೆ? ಸಂಪೂರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ…

ಕಳೆದ ವರ್ಷದಿಂದ ರಾಜ್ಯ ಸರಕಾರ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ 2022-23ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಟಾಬ್ ಇನ್ನೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಕಾಲೇಜು ಶಿಕ್ಷಣ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು; ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನಲಾಗುತ್ತಿದೆ. ಇಷ್ಟರಲ್ಲಿಯೇ ಟ್ಯಾಬ್ ವಿತರಣೆಗೆ ಸರಕಾರ ಮುಂದಾಗಲಿದ್ದು; ಸರಕಾರ ಅನುಮತಿ ನೀಡಿದ ತಕ್ಷಣ ಕಾಲೇಜುಗಳಲ್ಲಿಯೇ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್ ಅವರು ಭರವಸೆ ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಟ್ಯಾಬ್ ಪಡೆಯುವ ಕಾತುರ ಹೆಚ್ಚಾಗಿದೆ.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಏನಿದು ಉಚಿತ ಟ್ಯಾಬ್ ಯೋಜನೆ?

ಕರ್ನಾಟಕ ಸರ್ಕಾರವು ಶಿಕ್ಷಣದ ಗುಣಮಟ್ಟ ಕಾಪಾಡಲು, ಉನ್ನತ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ಪೈಕಿ ಉಚಿತ ಟ್ಯಾಬ್ ಯೋಜನೆಯು ಸಹ ಒಂದು. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ನೀಡುವ ಯೋಜನೆಯನ್ನು ಸರಕಾರ ಕಳೆದ ವರ್ಷದಿಂದ ಆರಂಭಿಸಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪದವಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ಸರ್ಕಾರ ಉಚಿತ ಟ್ಯಾಬ್ ವಿತರಣೆ ಮಾಡುತ್ತಿದೆ. ಆದರೆ ಈ ವರ್ಷ ಸಕಾಲಕ್ಕೆ ಟ್ಯಾಬ್ ವಿತರಣೆಯಾಗಿಲ್ಲವೆಂಬ ಕೊರಗು ವಿದ್ಯಾರ್ಥಿಗಳಲ್ಲಿದೆ.

ಇದನ್ನೂ ಓದಿ: SSLC ಪಾಸಾದವರಿಂದ ರೈಲ್ವೇ ಇಲಾಖೆಯ 4,103 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ನೂ ಯಾಕೆ ಉಚಿತ ಟ್ಯಾಬ್ ವಿತರಣೆಯಾಗಿಲ್ಲ?

ಹಾಗೆ ನೋಡಿದರೆ, 2022-23ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ಪದವಿ ವಿದ್ಯಾರ್ಥಿಗಳಿಗೆ ಈಗಾಗಲೇ ಟ್ಯಾಬ್ ವಿರಣೆಯಾಗಬೇಕಿತ್ತು. ಏಕೆಂದರೆ  ಡಿಸೆಂಬರ್ 31, 2022ಕ್ಕೆ ಮೊದಲ ಸೆಮಿಸ್ಟರ್‌ನ ಬೋಧನಾ ಅವಧಿ ಮುಕ್ತಾಯವಾಗಿದೆ. 2023 ಜನವರಿ 2ನೇ ವಾರ ಮೊದಲ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಿವೆ. ಆದರೂ ಈವರೆಗೆ ಸರ್ಕಾರ ಟ್ಯಾಬ್ ವಿತರಣೆ ಮಾಡಿಲ್ಲವಾದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಈಡಾಗಿದ್ದಾರೆ.

ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಸರ್ಕಾರವು ಆರಂಭದಲ್ಲಿ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿತ್ತು. ಆರ್ಥಿಕ ಹೊರೆ ಕಾರಣಕ್ಕೋ ಏನೋ ಕಳೆದ ವರ್ಷದಿಂದ ಲ್ಯಾಪ್‌ಟಾಪ್ ಬದಲು ಟ್ಯಾಬ್ ವಿತರಿಸುತ್ತಿದೆ. ಆದರೆ ಈ ವರ್ಷ ಮಾತ್ರ ಇನ್ನೂ ಟ್ಯಾಬ್ ವಿತರಣೆಯಾಗಿಲ್ಲ. ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾಥಿಗಳು ಸರಕಾರ ನೀಡುವ ಟ್ಯಾಬ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಸ್ವಯಂ ಉದ್ಯೋಗಕ್ಕೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ | ಜನವರಿ 17ರ ಒಳಗೆ ಅರ್ಜಿ ಸಲ್ಲಿಸಿ

ಅನಿವಾರ್ಯವಾದ ಟ್ಯಾಬ್

ಮೊದಲೆಲ್ಲ ಯಾವುದೇ ಆಧುನಿಕ ಪರಿಕರಣಗಳ ಅಗತ್ಯವಿಲ್ಲದೇ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸುತ್ತಿದ್ದರು. ಈಗ ಶಿಕ್ಷಣ ಸ್ಮಾರ್ಟ್ ಆಗುತ್ತಿದೆ. ರಾಷ್ಟೀಯ ಶಿಕ್ಷಣ ನೀತಿ-2020 (NEP) ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಕಾಲೇಜಿನ 8,500 ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಅಭಿವೃದ್ದಿಪಡಿಸುತ್ತಿದ್ದು; ಈಗಾಗಲೇ 3,500 ಕೊಠಡಿಗಳು ಸಂಪೂರ್ಣ ಸ್ಮಾರ್ಟ್ ಆಗಿವೆ.

ಸಕಾಲಕ್ಕೆ ಟ್ಯಾಬ್ ವಿತರಣೆಯಾದರೆ ವಿದ್ಯಾರ್ಥಿಗಳಿಗೆ ತರಗತಿಯಲ್ಲಿನ ಬೋಧನೆ ಅರ್ಥವಾಗದೆ ಇರುವ ಸಂದರ್ಭದಲ್ಲಿ, ರಾಜ್ಯದ ಇತರೆ ಕಾಲೇಜುಗಳಲ್ಲಿ ಪ್ರಧ್ಯಾಪಕರು ಬೋಧನೆ ಮಾಡುವುದನ್ನು ಕೇಳಲು ಉಪಯೋಗವಾಗುವುದು. ಇಂದಿನ ಸ್ಮಾರ್ಟ್ ಶಿಕ್ಷಣ ಪದ್ಧತಿಯಲ್ಲಿ ತಮಗೆ ಅರ್ಥವಾಗದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಟ್ಯಾಬ್‌ನಂತಹ ಆಧುನಿಕ ಪರಿಕರಗಳು ಬಹಳ ಅಗತ್ಯವಿದೆ. ಅದರಲ್ಲೂ NEP ಬಂದ ಬಳಿಕ ಶಿಕ್ಷಣ ವ್ಯವಸ್ಥೆ ತುಂಬಾ ಬದಲಾಗಿದ್ದು; ವಿದ್ಯಾರ್ಥಿಗಳ ಆಧುನಿಕ ಶಿಕ್ಷಣ ಪದ್ಧತಿಗೆ ಟ್ಯಾಬ್, ಲ್ಯಾಪ್‌ಟಾಪ್ ಬಹು ಮುಖ್ಯವಾಗಿವೆ.

ಇದನ್ನೂ ಓದಿ: ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಟ್ಯಾಬ್ ಪಡೆಯಲು ಯಾರೆಲ್ಲ ಅರ್ಹರು?

ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಕಲಾ, ವಾಣಿಜ್ಯ, ವಿಜ್ಞಾನ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸರಕಾರದ ಉಚಿತ ಟ್ಯಾಬ್ ಪಡೆಯಲು ಅರ್ಹರಾಗಿರುತ್ತಾರೆ. 2022-23ನೇ ಸಾಲಿನಲ್ಲಿ ಒಟ್ಟಾರೆ ಅಂದಾಜು 1.4 ಲಕ್ಷ ವಿದ್ಯಾರ್ಥಿಗಳು ಯೋಜನೆಯ ಉಪಯೋಗ ಪಡೆಯಲು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: SSLC ಪಾಸಾದವರಿಂದ HAL ಫೈಯರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ತುಮಕೂರಿನಲ್ಲಿ ಕೆಲಸ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!