ಪಶುಪಾಲನೆ

Free Training: ರೈತರಿಗೆ ಉಚಿತ ಕುರಿ-ಮೇಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ತರಬೇತಿ

WhatsApp Group Join Now
Telegram Group Join Now

ಕೃಷಿ ಜೊತೆಗೆ ಪಶುಪಾಲನೆ ಕೈಗೊಳ್ಳುವ ಮೂಲಕ ಸುಸ್ಥಿರ ಆದಾಯ ಗಳಿಕೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯು ರೈತರು ಮತ್ತು ರೈತ ಮಹಿಳೆಯರಿಗಾಗಿ ವಿವಿಧ ಪಶುಪಾಲನಾ ತರಬೇತಿಗಳನ್ನು ನೀಡುತ್ತ ಬರುತ್ತಿದೆ.

ಇಲಾಖೆಯ ವತಿಯಿಂದ ರಾಜ್ಯದ ಆಯಾಯ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ತರಬೇತಿಗಳು ನಡೆಯುತ್ತಿದ್ದು; ಆಸಕ್ತ ರೈತರು ಇದರ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.

3 ತಿಂಗಳಲ್ಲಿ ಹಿಂಬಾಕಿ ಪಾವತಿಸದಿದ್ದರೆ ‘ಗೃಹಜ್ಯೋತಿ’ ಉಚಿತ ಕರೆಂಟ್ ಬಂದ್ | ಹಿ೦ಬಾಕಿ ಪಾವತಿಗೆ ಸೆಪ್ಟೆಂಬರ್ 30 ಕೊನೆಯ ದಿನ

ಉಚಿತ ತರಬೇತಿ 

ಅಂತೆಯೇ ತುಮಕೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ವಿವಿಧ ಕುರಿ ಹಾಗೂ ಮೇಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ತರಬೇತಿ ಕುರಿತು ಆಸಕ್ತ 25 ಜನ ರೈತರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.

ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಜುಲೈ 6 ಮತ್ತು 7ರಂದು, ಹೈನುಗಾರಿಕೆ ತರಬೇತಿಯನ್ನು ಜುಲೈ 10 ಮತ್ತು 11ರಂದು ಹಾಗೂ ಕೋಳಿ ಸಾಕಾಣಿಕೆ ತರಬೇತಿಯನ್ನು ಜುಲೈ 13 ಮತ್ತು 14ರಂದು ಹಮ್ಮಿಕೊಳ್ಳಲಾಗಿದೆ. ನಿಗಧಿಪಡಿಸಿದ ದಿನಾಂಕದAದು ಬೆಳಿಗ್ಗೆ 10 ಗಂಟೆಗೆ ತರಬೇತಿಗೆ ಹಾಜರಾಗಬಹುದಾಗಿದೆ.

ಜುಲೈ 1ರಿಂದ ಗೃಹಜ್ಯೋತಿ ಉಚಿತ ವಿದ್ಯುತ್: ಈಗಲೇ ನಿಮ್ಮ ಮೊಬೈಲ್‌ನಲ್ಲಿ ನೋಂದಣಿ ಮಾಡಿ

ಬೇಕಾಗುವ ದಾಖಲೆಗಳೆನು?

ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್‌ಪೋರ್ಚ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರವನ್ನು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ) ಕಡ್ಡಾಯವಾಗಿ ತರಬೇಕು.

ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ಸಂಸ್ಥೆ/ದೂರವಾಣಿ: 0816-2251214 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಹೊಸ APL, BPL ರೇಷನ್ ಕಾರ್ಡ್ ಅರ್ಜಿ ಸ್ಥಗಿತ | New Ration Card Application Stop

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!