ಕೃಷಿಸರಕಾರಿ ಯೋಜನೆ

Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಅವಧಿ ಮತ್ತಷ್ಟು ವಿಸ್ತರಣೆ | ಒಂದೊಂದು ಜಿಲ್ಲೆಗೆ ಒಂದೊಂದು ದಿನಾಂಕ ನಿಗಧಿ

WhatsApp Group Join Now
Telegram Group Join Now

ಆಹಾರ ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಮತ್ತಷ್ಟು ದಿನ ಕಾಲಾವಕಾಶ ನೀಡಿದೆ. ತಿದ್ದುಪಡಿಗೆ ಯಾವ ಜಿಲ್ಲೆಯ ಫಲಾನುಭವಿಗಳಿಗೆ ಯಾವ್ಯಾವ ದಿನಾಂಕ ನಿಗಧಿಪಡಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ…

ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆಯ ಕಾಲಾವಧಿಯನ್ನು ಆಹಾರ ಇಲಾಖೆ ಮತ್ತೆ ನಾಲ್ಕು ದಿನ ಎಕ್ಸಟ್ರಾ ವಿಸ್ತರಸಿದೆ. ಕಳೆದ ಆಗಸ್ಟ್ 18ರಿಂದ 21ರ ವರೆಗೆ ಮಧ್ಯಾಹ್ನ 12ರಿಂದ ಸಂಜೆ 4ರ ತನಕ ಕೇವಲ ನಾಲ್ಕು ದಿನಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವ ನೀಡಲಾಗಿತ್ತು. ಆನಂತರ ಆಗಸ್ಟ್ 23ರಂದು ಒಂದು ದಿನ ಪುನಃ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಆಗಸ್ಟ್ ತಿಂಗಳಿನ 2ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಸಂದಾಯ: ನಿಮ್ಮ ಜಮಾ ವಿವರ ಇಲ್ಲಿ ಚೆಕ್ ಮಾಡಿ…

ಸೆಪ್ಟೆಂಬರ್ 14ರ ವರೆಗೂ ಕಾಲಾವಕಾಶ 

ಈ ಹಿಂದೆ ನಾಲ್ಕು ದಿನಗಳ ಜತೆಗೆ ಮತ್ತೊಂದು ದಿನ ಅವಕಾಶ ಕಲ್ಪಿಸಿದರೂ ಕೂಡ ಹಲವೆಡೆ ಸರ್ವಸ್ ಸಮಸ್ಯೆಯ ಕಾರಣದಿಂದ ತುಂಬಾ ಜನರು ತಿದ್ದುಪಡಿ ಅರ್ಜಿ ಸಲ್ಲಿಕೆ ಮಾಡಲಾಗದೆ ಬರಿಗೈಯಲ್ಲಿ ಮನೆಗೆ ಮರಳಿದ್ದರು. ಇದರಿಂದ ಸಾಕಷ್ಟು ಜನಾಕ್ರೋಶ ವ್ಯಕ್ತವಾಗಿತ್ತು. ಆಹಾರ ಇಲಾಖೆಯ ನಡೆಯಿಂದ ಅನೇಕರು ಬೇಸರ ವ್ಯಕ್ತಪಡಿಸಿದ್ದರು.

ಹೀಗಾಗಿ, ಗ್ರಾಹಕರ ಒತ್ತಾಯದ ಮೇರೆಗೆ ತಿದ್ದುಪಡಿ, ಸೇರ್ಪಡೆ ಅವಧಿಯನ್ನು ಸೆಪ್ಟೆಂಬರ್ 1ರಿಂದ 10ರ ವರೆಗೆ ಬೆಳಗ್ಗೆ 10ರಿಂದ 6 ಗಂಟೆಯ ವರೆಗೆ ತಿದ್ದುಪಡಿಗೆ ಸಮಯ ನೀಡಲಾಗಿತ್ತು. ಆದರೆ ಈಗಲೂ ಸರ್ವರ್ ಸಮಸ್ಯೆಯಿಂದಾಗಿ ರೇಷನ್ ಕಾರ್ಡ್’ನಲ್ಲಿನ ಹೆಸರು ಸೇರ್ಪಡೆ, ತಿದ್ದುಪಡಿ ಸುಸೂತ್ರ ಸಾಧ್ಯವಾಗಿಲ್ಲ. ಹೀಗಾಗಿ ಜನರ ಆಗ್ರಹದ ಹಿನ್ನಲೆಯಲ್ಲಿ ಸೆಪ್ಟೆಂಬರ್ 14ರ ವರೆಗೆ ಕಾಲಾವಕಾಶ ವಿಸ್ತರಿಸಿದೆ.

ಇದನ್ನೂ ಓದಿ: 10ನೇ ತರಗತಿ ಪಾಸ್: ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾವ ಜಿಲ್ಲೆಯವರಿಗೆ ಯಾವಾಗ ಅವಕಾಶ?

ಸೆಪ್ಟೆಂಬರ್ 6ರ ನಾಳೆಯಿಂದ ಸೆಪ್ಟೆಂಬರ್ 8ರ ವರೆಗೆ ಚಿತ್ರದುರ್ಗ, ಕೋಲಾರ, ದಾವಣೆಗೆರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಮನಗರ, ತುಮಕೂರು, ಯಾದಗಿರಿ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಯ ಪಡಿತರ ಚೀಟಿ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸೋದಕ್ಕೆ ಅವಕಾಶ ನೀಡಲಾಗಿದೆ.

ಇನ್ನೂ ಸೆಪ್ಟೆಂಬರ್ 9ರಿಂದ ಸೆಪ್ಟೆಂಬರ್ 11ರ ವರೆಗೆ ಕೇವಲ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್’ನಲ್ಲಿನ ಹೆಸರು ತಿದ್ದುಪಡಿ, ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸೆಪ್ಟೆಂಬರ್ 12ರಿಂದ 14ರ ವರೆಗೆ ಬೆಳಗಾವಿ, ಹಾವೇರಿ, ಬಾಗಲಕೋಟೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಾಮರಾಜನಗರ, ಗದಗ, ಮಂಡ್ಯ, ಉತ್ತರ ಕನ್ನಡ, ವಿಜಯಪುರ, ಮೈಸೂರು, ಕೊಡಗು, ಹಾವೇರಿ ಹಾಗೂ ಹಾಸನ ಜಿಲ್ಲೆಯ ಪಡಿತರ ಫಲಾನುಭವಿಗಳು, ತಮ್ಮ ಕಾರ್ಡ್ ನಲ್ಲಿ ತಪ್ಪುಗಳನ್ನು ಸರಿ ಪಡಿಸಿಕೊಳ್ಳೋದಕ್ಕೆ, ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಯಾವೆಲ್ಲ ಕಾರಣಕ್ಕೆ ಬೆಳೆಹಾನಿಯಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಏನೆಲ್ಲ ತಿದ್ದುಪಡಿ ಮಾಡಿಸಬಹುದು?

ಮೇಲ್ಕಾಣಿಸಿದ ದಿನಾಂಕಗಳ೦ದು ಆಯಾಯ ಜಿಲ್ಲೆಯ ರೇಷನ್ ಕಾರ್ಡ್’ದಾರರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಫಲಾನುಭವಿಗಳು ಈ ಕೆಳಕಂಡ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

  • ಫಲಾನುಭವಿ ಹೆಸರು ಬದಲಾವಣೆ
  • ರೇಷನ್ ಅಂಗಡಿ ಬದಲಾವಣೆ
  • ಕಾರ್ಡ್ ಸದಸ್ಯರ ಹೆಸರು ತೆಗೆದು ಹಾಕುವುದು, ಸೇರ್ಪಡೆ ಮಾಡುವುದು
  • ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ
  • ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆ
  • ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯ ಸ್ಥಾನ ಬದಲಾವಣೆ

ಇದನ್ನೂ ಓದಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮೇವು ಕತ್ತರಿಸುವ ಯಂತ್ರಗಳ ವಿತರಣೆಗೆ ರೈತರಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!