ಉದ್ಯೋಗ

District court Peon recruitment 2023 : SSLC ಪಾಸಾದವರಿಂದ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ | 41 ಹುದ್ದೆಗಳು

WhatsApp Group Join Now
Telegram Group Join Now

ಜಿಲ್ಲಾ ಪ್ರಧಾನ ನ್ಯಾಯಾಲಯಗಳಲ್ಲಿ 10ನೇ ತರಗತಿ ಪಾಸಾದವರಿಗೆ ಜವಾನ ಸೇರಿದಂತೆ ವಿವಿಧ ಅನೇಕ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

District Court peon recruitment 2023 : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಗದಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಜವಾನ್ ಹುದ್ದೆಗಳು ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

District Court peon recruitment 2023 ಸಂಕ್ಷಿಪ್ತ ಮಾಹಿತಿ

 • ನೇಮಕಾತಿ ಸಂಸ್ಥೆ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ
 • ಒಟ್ಟು ಖಾಲಿ ಹುದ್ದೆಗಳು : 49
 • ಅರ್ಜಿ ಸಲ್ಲಿಕೆ : ಆನ್ ಲೈನ್ ಮುಕಾಂತರ
 • ಉದ್ಯೋಗ ಸ್ಥಳ : ಗದಗ ಮತ್ತು ಬಳ್ಳಾರಿ ಜಿಲ್ಲೆ

ಇದನ್ನೂ ಓದಿ: SSLC ಪಾಸಾದವರಿಗೆ ಜೂನಿಯರ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ | CCL Data Entry Operator Recruitment 2023

ಹುದ್ದೆಗಳ ಸಂಪೂರ್ಣ ವಿವರ 
ಸಗದಗ ಜಿಲ್ಲೆಯಲ್ಲಿರುವ ಖಾಲಿ ಹುದ್ದೆಗಳು – 18
ಬಳ್ಳಾರಿ ಜಿಲ್ಲೆಯಲ್ಲಿರುವ ಖಾಲಿ ಹುದ್ದೆಗಳು – 31

ಗದಗ ಜಿಲ್ಲೆಯ ಹುದ್ದೆಗಳ ವಿಂಗಡಣೆ

 • ಶೀಘ್ರ ಲಿಪಿಗಾರರು (Stenographer) – 02
 • ಬೆರಳಚ್ಚುಗಾರರು (Typist) – 03
 • ಬೆರಳಚ್ಚು ನಕಲುಗಾರರು (Typist – Copyist) – 03
 • ಜವಾನ (Peon) – 10

ಬಳ್ಳಾರಿ ಜಿಲ್ಲೆಯ 31 ಜವಾನ ಹುದ್ದೆಗಳ ವಿಂಗಡಣೆ

 • ಸ್ಥಳೀಯ ವೃಂದದ ಹುದ್ದೆಗಳು – 29
 • ಉಳಿಕೆ ವೃಂದದ ಹುದ್ದೆಗಳು – 02

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ವಿದ್ಯಾರ್ಹತೆ Educational Qualification
District Court recruitment 2023 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ವಿದ್ಯಾರ್ಹತೆ ಹೊಂದಿರಬೇಕು:

 • ಶೀಘ್ರ ಲಿಪಿಗಾರರು : ದ್ವಿತೀಯ ಪಿಯುಸಿ ಜೊತೆಗೆ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಮತ್ತು ಬೆರಳಚ್ಚು ಹಿರಿಯ ದರ್ಜೆ (Senior grade) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
 • ಬೆರಳಚ್ಚುಗಾರರು : ಪಿಯುಸಿ ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು.
 • ಬೆರಳಚ್ಚು ನಕಲುಗಾರರು : ಪಿಯುಸಿ ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (Junior Grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 • ಜವಾನ ಮತ್ತು ಚಾಲಕ : ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.

ಮಾಸಿಕ ಸಂಬಳದ ವಿವರ 

 • ಶೀಘ್ರ ಲಿಪಿಗಾರರು : ₹27,650 ರಿಂದ ₹52,650 ರವರೆಗೆ
 • ಬೆರಳಚ್ಚುಗಾರರು : ₹21,400 ರಿಂದ ₹42,000 ವರೆಗೆ
 • ಬೆರಳಚ್ಚು ನಕಲುಗಾರರು : ₹21,400 ರಿಂದ ₹42,000 ವರೆಗೆ
 • ಜವಾನ : ₹17,000 ರಿಂದ ₹28,950 ರವರೆಗೆ

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಚಾಲಕ ಮತ್ತು ಜವಾನ ಹುದ್ದೆಗಳ ನೇಮಕಾತಿ | ಸಂಬಳ ₹52,650 | Raichur district court recruitment 2023

ವಯೋಮಿತಿ ವಿವರ  (Age limit)
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ನೇಮಕಾತಿ ವಿಧಾನ ಹೇಗೆ? (Selection Procedure)
ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಬೆರಳಚ್ಚು ಯಂತ್ರ/ ಕಂಪ್ಯೂಟರ್‌ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಇನ್ನು ಜವಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನ (Interview)ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: SSLC ಪಾಸಾದರಿಂದ ರಕ್ಷಣಾ ವಿಭಾಗದ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 25 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಮಹಿಳೆಯರಿಗೂ ಅವಕಾಶ | SSC GD Constable recruitment 2023

ಅರ್ಜಿ ಶುಲ್ಕ ವಿವರ 

 • ಬಳ್ಳಾರಿ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ 200 ರೂಪಯಿ
 • ಗದಗ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ 100 ರೂಪಾಯಿ
 • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಬಳ್ಳಾರಿ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ 

 • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04-12-2023
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-01-2024
 • ಅಧಿಸೂಚನೆ 1 : Download
 • ಅಧಿಸೂಚನೆ 2 : Download
 • ಅಧಿಕೃತ ಜಾಲತಾಣ : Click here
 • ಸಹಾಯವಾಣಿ : 08392-272155

ಇದನ್ನೂ ಓದಿ: ಕರ್ನಾಟಕ ಆಹಾರ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕ: SSLC, PUC, ಪದವೀಧರರಿಗೆ ಭರ್ಜರಿ ಅವಕಾಶ | Karnataka Food Department Recruitment 2023

ಗದಗ ಜಿಲ್ಲೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ 

 • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 29-11-2023
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-12-2023
 • ಅಧಿಸೂಚನೆ : Download
 • ಅಧಿಕೃತ ಜಾಲತಾಣ : Click here
 • ಸಹಾಯವಾಣಿ : 08372-222077

District court Peon recruitment 2023 | gadag district court recruitment | ballari district court recruitment

Forest guard recruitment 2023 : PUC ಮುಗಿಸಿದವರಿಂದ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 540 ಹುದ್ದೆಗಳಿಗೆ ನೇಮಕಾತಿ |

WhatsApp Group Join Now
Telegram Group Join Now

Related Posts

error: Content is protected !!