ಸಾಲ ಯೋಜನೆ

Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

ಸಣ್ಣ ವ್ಯಾಪಾರಿಗಳಿಗೆ ತುರ್ತು ಸಮಯದಲ್ಲಿ ಸಹಾಯವಾಗಲೆಂದು ಗೂಗಲ್ ಪೇ ತನ್ನ ಗ್ರಾಹಕರಿಗೆ 15,000 ರೂಪಾಯಿಯಿಂದ 1 ಲಕ್ಷದ ವರೆಗೆ ಸಾಲ ನೀಡುತ್ತಿದೆ. ಈ ಸೌಲಭ್ಯವನ್ನು ಪಡೆಯಲು ಬೇಕಾಗಿರುವ ಸಂಪೂರ್ಣ ಮಾಹಿತಿ ಮತ್ತು ಲೋನ್‌ಗೆ ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಈ ಕೆಳಗಿನ ಇಲ್ಲಿದೆ…

Google pay loan upto one lakh : ಆನ್‌ಲೈನ್ ಬ್ಯಾಂಕಿ೦ಗ್‌ನಲ್ಲಿ ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಗೂಗಲ್ ಕಂಪನಿಯ ಸಹಭಾಗಿತ್ವದ ಕಂಪನಿಯಾದ ‘ಗೂಗಲ್ ಪೇ’ (Google Pay) ತನ್ನ ಎಲ್ಲಾ ಅರ್ಹರಿರುವ ಗ್ರಾಹಕರಿಗೆ 15,000 ದಿಂದ 1 ಲಕ್ಷ ರೂಪಾಯಿ ವರೆಗೆ ತ್ವರಿತ ಸಾಲ ನೀಡುತ್ತಿದೆ. ನೀವು ಗೂಗಲ್ ಪೇ ಉಪಯೋಗಿಸುತ್ತಿದ್ದರೆ, ನಿಮ್ಮ ದಿನನಿತ್ಯದ ಹಣಕಾಸಿನ ವಹಿವಾಟುಗಳಿಗೆ ಈ ಸಾಲದ ಪ್ರಯೋಜನ ಪಡೆಯಬಹುದು. ಈ ಸಾಲವು ಮುಖ್ಯವಾಗಿ ಸಣ್ಣ ವ್ಯಾಪಾರಿಗಳಿಗೆ ಅತ್ಯಂತ ಅವಶ್ಯಕತೆಯಾಗಿದ್ದು, ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ ನಿಮ್ಮ ಎಲ್ಲಾ ಗೆಳೆಯರಿಗೂ ಈ ಮಾಹಿತಿಯನ್ನು ಶೇರ್ ಮಾಡಿ…

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಗೂಗಲ್ ಪೇ ಸಾಲವನ್ನು (Google pay instant loan) ಹೇಗೆ ನೀಡುತ್ತದೆ?

ಗೂಗಲ್ ಪೇ ತನ್ನ ಗ್ರಾಹಕರಿಗೆ ಅವರ ಅರ್ಹತೆಗೆ ಅನುಗುಣವಾಗಿ ಯಾವುದೇ ಭೌತಿಕ ದಾಖಲೆಗಳಿಲ್ಲದೆ (Physical documents) ಸಾಲವನ್ನು ಒದಗಿಸುತ್ತಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆAದರೆ ಗೂಗಲ್ ಪೇ (Google Pay) ಗ್ರಾಹಕರಿಗೆ ಸಾಲವನ್ನು ಸ್ವತಃ ನೀಡುವುದಿಲ್ಲ. ಬದಲಾಗಿ ಅದು Axis bank, IDFC ಬ್ಯಾಂಕ್ ಮತ್ತು ಇತರೆ ಬೇರೆ ಬೇರೆ ಸಾಲದಾಯಿ ಹಣಕಾಸು ಕಂಪನಿಗಳ ಮೂಲಕ (Money lenders) ಗ್ರಾಹಕರಿಗೆ ಒದಗಿಸುತ್ತದೆ. ಹಾಗಂತ ಈ ಸಾಲವನ್ನು ಪಡೆಯಲು ನೀವು ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಅವಶ್ಯಕತೆ ಇರುವುದಿಲ್ಲ.

ಗೂಗಲ್ ಪೇ ಸಾಲ ಪಡೆಯಲು ಯಾರು ಅರ್ಹರು? (Google pay loan eligibility)

ಮುಖ್ಯವಾಗಿ ನೀವು ಯಾವುದೇ ಸಾಲ ಪಡೆಯಬೇಕೆಂದರೂ ನಿಮ್ಮ ಕ್ರೆಡಿಟ್ ಸ್ಕೋರ್ (Credit score or Cibil score) ಉತ್ತಮವಾಗಿರಬೇಕು. ಅಂದರೆ ಕನಿಷ್ಠ 750ರ ಮೇಲಿರಬೇಕು. ಅದೇ ರೀತಿ ಬೇರೆ ಯಾವುದೇ ಬ್ಯಾಂಕ್‌ಗಳಲ್ಲಿ ಅಥವಾ ಕಂಪನಿಗಳಲ್ಲಿ ಸಾಲ ಕಟ್‌ಬಾಕಿ ಆಗಿರಬಾರದು. ಈ ಎಲ್ಲಾ ಅರ್ಹತೆಯನ್ನು ಹೊಂದಿದ್ದರೆ ಈಗಲೇ ನೀವು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ 3 ಲಕ್ಷ ರೂಪಾಯಿ ಸಾಲ ಗ್ಯಾರಂಟಿ | Kisan Credit Card Loan Scheme

ಸಾಲ ಮರುಪಾವತಿಸುವ ವಿಧಾನ (Google pay Loan repayment method)

ಭಾರತದಲ್ಲಿನ ಅನೇಕ ಸಣ್ಣ ವ್ಯಾಪಾರಿಗಳಿಗೆ ತುರ್ತು ಸಮಯದಲ್ಲಿ ಹಣ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಇವರು ಈ ಗೂಗಲ್ ಪೇ ಸಹಾಯ ಪಡೆಯಬಹುದೆಂದು ಗೂಗಲ್ ಇಂಡಿಯಾ ಹೇಳಿಕೊಂಡಿದೆ. ಸಾಲ ಪಡೆದ ನಂತರ ಗ್ರಾಹಕರು ಮರುಪಾವತಿ ಮಾಡಲು ಅನೇಕ ಆಯ್ಕೆಗಳಿವೆ. ಅದರಲ್ಲಿ ಕನಿಷ್ಠ 15,000 ರೂಪಾಯಿ ಸಾಲಕ್ಕೆ ಮರುಪಾವತಿ ಮಾಡಬೇಕಾದ ಕನಿಷ್ಠ ಮೊತ್ತವು 111 ರೂಪಾಯಿ ಆಗಿರುತ್ತದೆ. ಈ ಮೊತ್ತವನ್ನು ನೀವು ಏಳು ದಿನಗಳಿಂದ 12 ತಿಂಗಳ ಅವಧಿಯೊಳಗೆ ಮರುಪಾವತಿ ಮಾಡಲು ಅವಕಾಶವಿದೆ.

ಗೂಗಲ್ ಪೇ ಸಾಲವನ್ನು ಪಡೆಯುವುದು ಹೇಗೆ? (How to get Google pay loan)

ಗೂಗಲ್ ಪೇ ಸಾಲ ಪಡೆಯಲು ಮುಖ್ಯವಾಗಿ ನಿಮ್ಮ ಮೊಬೈಲ್‌ನಲ್ಲಿ Google pay for business app ಅನ್ನು ಹೊಂದಿರಬೇಕು ಮತ್ತು ಈ ಆ್ಯಪ್’ನ ಡೈರೆಕ್ಟ್ ಲಿಂಕ್ ಈ ಲೇಖನದ ಕೊನೆಯ ಭಾಗದಲ್ಲಿದೆ. ನಂತರ ಅಲ್ಲಿ ಕಾಣುವ ಲೋನ್ಸ್ (Loans) ವಿಭಾಗದ ಮೇಲೆ ಆಯ್ಕೆ ಮಾಡಿಕೊಂಡು, ಆಫರ್ಸ್ (offers) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ನಿಮಗೆ ಎಷ್ಟು ಸಾಲದ ಅವಶ್ಯಕತೆ ಇದೆಯೋ, ಅಷ್ಟು ಮೊತ್ತವನ್ನು ಅಲ್ಲಿ ಆಯ್ಕೆ ಮಾಡಿಕೊಂಡು ಗೆಟ್ ಸ್ಟಾರ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ಸಾಲ ನೀಡುವ ಪಾಲುದಾರರ ವೆಬ್‌ಸೈಟ್‌ಗೆ ಡೈರೆಕ್ಟ್ ಮಾಡಲಾಗುವುದು. ಬಳಿಕ ನಿಮ್ಮ ಗೂಗಲ್ ಅಕೌಂಟ್’ನ ಮಾಹಿತಿಯನ್ನು ಭರ್ತಿ ಮಾಡಿ, ವೈಯಕ್ತಿಕ ವಿವರಗಳನ್ನು ನೀಡಿ ಸಾಲದ ಮೊತ್ತ ಮತ್ತು ಅವಧಿಯ ಮಾಹಿತಿಯನ್ನು ಸರಿಯಾಗಿ ನಿರ್ಧರಿಸಿ ತುಂಬಿ.

ಮು೦ದೆ ನಿಮ್ಮ ಅಂತಿಮ ಸಾಲದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಲೋನ್ ಅಗ್ರಿಮೆಂಟ್‌ಗೆ ಇ-ಸೈನ್ (E-sign) ಮಾಡಿ, KYC ಸಂಪೂರ್ಣಗೊಳಿಸಬೇಕು. ನಂತರ EMI ಪಾವತಿಗಾಗಿ Setup eMandate ಅಥವಾ Setup NACH ಅನ್ನು ಆಯ್ಕೆ ಮಾಡಿಕೊಂಡು ಸಾಲದ ಅರ್ಜಿಯನ್ನು ಸಂಪೂರ್ಣಗೊಳಿಸಿ. ಅರ್ಜಿ ಸಲ್ಲಿಸಿದ ನಂತರ ನಿಮ್ಮ ಲೋನ್ ಅಪ್ರೂವ್ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು My loan ವಿಭಾಗದಲ್ಲಿ ಸ್ಥಿತಿಯನ್ನು ನೀವು ಟ್ರ‍್ಯಾಕ್ ಮಾಡಿ ನೋಡಬಹುದು.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

ಪ್ರಮುಖ ಮಾಹಿತಿ: ಡಿಜಿಟಲ್ ಸಾಲ ಸೌಲಭ್ಯವನ್ನು ಅತ್ಯಂತ ತುರ್ತು ಸಮಯದಲ್ಲಿ ಮಾತ್ರ ಪಡೆದುಕೊಳ್ಳಿ. ಏಕೆಂದರೆ ನೀವು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡದಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗಿ ಮುಂದಿನ ದಿನಗಳಲ್ಲಿ ಸಾಲ ಪಡೆಯಲು ತೊಂದರೆಯಾಗುತ್ತದೆ.

Google pay for business app ಡೈರೆಕ್ಟ್ ಲಿಂಕ್ : ಡೌನ್‌ಲೋಡ್

kswdc karnataka Schemes : 2023-24ನೇ ಸಾಲಿನ ಮಹಿಳಾ ನಿಗಮದ ಬಂಪರ್ ಯೋಜನೆಗಳು : ಮಹಿಳೆಯರಿಗೆ ₹3 ಲಕ್ಷ ಬಡ್ಡಿ ಇಲ್ಲದ ಸಾಲ ಅರ್ಜಿ ಆಹ್ವಾನ @kswdc.karnataka.gov.in

WhatsApp Group Join Now
Telegram Group Join Now

Related Posts

error: Content is protected !!