ತಂತ್ರಜ್ಞಾನ ಸುದ್ದಿಹಣಕಾಸು

Google Pay scam alert : ಮೊಬೈಲ್’ನಲ್ಲಿ ಹಣ ಕಳಿಸುವಾಗ ಮರೆಯದೇ ಈ ಎಚ್ಚರಿಕೆ ಅನುಸರಿಸಿ | ಗೂಗಲ್‌ಪೇ ನೀಡಿದ ಎಚ್ಚರಿಕೆ ಸಂದೇಶಗಳು

WhatsApp Group Join Now
Telegram Group Join Now

Google Pay scam alert : ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳಿ೦ದ ಸುರಕ್ಷಿತವಾಗಿರಲು ಮೊಬೈಲ್’ನಲ್ಲಿ ಹಣ ಕಳಿಸುವಾಗ ಪಾಲಿಸಬೇಕಾದ ಎಚ್ಚರಿಕೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ದೇಶದಲ್ಲಿ ಉಂಟಾದ UPI ಕ್ರಾಂತಿಯ ಬಳಿಕ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಆನ್‌ಲೈನ್ ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್’ಗಳ ಬಳಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಗೂಗಲ್ ಪೇ ಮತ್ತು ಫೋನ್ ಪೇ ಯುಪಿಐ ಆ್ಯಪ್’ಗಳು ಹೆಚ್ಚು ಬಳಕೆಯಾಗುತ್ತಿದೆ. ಇವುಗಳ ಬಳಕೆ ಹೆಚ್ಚಾದಂತೆ ಹಣ ದೋಚುವ ವಂಚನೆಗಾರ ಹಾವಳಿಯೂ ಹೆಚ್ಚಾಗುತ್ತಿದೆ. UPI ಅಪ್ಲಿಕೇಶನ್‌ಗಳ ಸಂಸ್ಥೆಗಳು ಎಷ್ಟೇ ಭದ್ರತೆ ಒದಗಿಸಿದರು ಕೂಡ ಬಳಕೆದಾರರು ಸಣ್ಣ ಸಣ್ಣ ತಪ್ಪುಗಳಿಂದ ಹಣ ಕಳೆದುಕೊಳ್ಳುತ್ತಿದ್ದಾರೆ.

ಯುಪಿಐ ಟಾಪ್ 5 ಕಂಪನಿಗಳಲ್ಲಿ ಒಂದಾದ ಗೂಗಲ್ ಪೇ (Google pay) ಕಂಪನಿಯು ಹೆಚ್ಚುತ್ತಿರುವ ಆನ್‌ಲೈನ್ ಹಣ ವಂಚನೆ ಕುರಿತು ತನ್ನ ಬಳಕೆದಾರರಿಗೆ ಇಂತಹ ವಂಚನೆಗಳಿ೦ದ ಸುರಕ್ಷಿತವಾಗಿರಲು (Safety) ಮತ್ತು ಗೂಗಲ್ ಪೇ ಆ್ಯಪ್ ಅನ್ನು ಬಳಸುವಾಗ ಏನೆಲ್ಲಾ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು (Guidance) ನೀಡಿದೆ.

ಇದನ್ನೂ ಓದಿ: Bescom Solar Rooftop Scheme : ಮನೆಮನೆಗೂ ಸೋಲಾರ್ ವಿದ್ಯುತ್ | ಬೆಸ್ಕಾಂ ಸೂಪರ್ ಸ್ಕೀಮ್ | ಕೂತಲ್ಲೇ ಗಳಿಸಿ ಭರ್ಜರಿ ಆದಾಯ

ಎಚ್ಚರಿಕೆ 1 : ಗೂಗಲ್ ಪೇ ಆ್ಯಪ್ (Google pay App) ಬಳಸುವಾಗ ಯಾವುದೇ ಕಾರಣಕ್ಕೂ ಸ್ಕ್ರೀನ್ ಷೇರಿಂಗ್ ಆ್ಯಪ್’ಗಳನ್ನು ಬಳಸಬೇಡಿ. ಸ್ಕ್ರೀನ್ ಶೇರಿಂಗ್ (Screen sharing) ಆ್ಯಪ್’ಗಳಾದ Any desk app, Team viewer app, Screen recorder app ಮುಂತಾದ ಆ್ಯಪ್’ಗಳನ್ನು ಗೂಗಲ್ ಪೇ ಇಂದ ಹಣ ವರ್ಗಾವಣೆ ಮಾಡುವ ಸಮಯದಲ್ಲಿ ಬಳಸಬೇಡಿ.

ಎಚ್ಚರಿಕೆ 2 : ಅನಾಮಿಕ ವ್ಯಕ್ತಿಯೊಂದಿಗೆ, ದೂರದ ಸ್ನೇಹಿತರೊಂದಿಗೆ ಅಥವಾ ಇತರೆ ಅಪರಿಚಿತರೊಂದಿಗೆ ವಾಟ್ಸಾಪ್ ವಿಡಿಯೋ ಕಾಲಿಂಗ್ (WhatsApp video calling) ಮಾಡುವಾಗ ಇತ್ತೀಚಿಗೆ ಬಿಡುಗಡೆಯಾದ ಹೊಸ ಫ್ಯೂಚರ್ ವಾಟ್ಸಾಪ್ ಸ್ಕ್ರೀನ್ ಶೇರಿಂಗ್ ಆಯ್ಕೆಯನ್ನು ಯಾವುದೇ ಕಾರಣಕ್ಕೂ ಮಾಡಬೇಡಿ. ಏಕೆಂದರೆ ವಂಚಕರು ನೀವು ಸ್ಕ್ರೀನ್ ಶೇರ್ ಮಾಡಿದಾಗ ನಿಮ್ಮ ನಂಬರ್’ಗೆ ಬರುವ ಓಟಿಪಿ ಅಥವಾ ಇತರೆ ನಿಮ್ಮ ಪಾಸ್’ವರ್ಡ್’ಗಳನ್ನು ಕದ್ದು ಸುಲಭವಾಗಿ ನಿಮಗೆ ಮೋಸ ಮಾಡಬಹುದಾಗಿದೆ.

ಇದನ್ನೂ ಓದಿ: PhonePe, GooglePay, Paytm ಬಳಸುವವರಿಗೆ ತಿಳಿದಿರಲೇ ಬೇಕಾದ ಮಹತ್ವದ ಮಾಹಿತಿ… | ಈ ಕ್ರಮ ಅನುಸರಿಸಿದರೆ ಫುಲ್‌ಸೇಪ್ How can I block UPI accounts when my mobile is lost?

ಎಚ್ಚರಿಕೆ 3 : ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೂ ಕೂಡಾ ಗೂಗಲ್ ಪೇ ಸಂಸ್ಥೆಯು ಕೆಲವು ಎಚ್ಚರಿಕೆ ಸಂದೇಶಗಳನ್ನು ನೀಡಿದೆ. ಆಫೀಸ್ ಸಮಯದಲ್ಲಿ ಏನಾದರು ತೊಂದರೆಯಾದಾಗ ಕಂಪನಿಯು ರಿಮೋಟ್ ಕಂಟ್ರೋಲ್ (Remote control) ತೆಗೆದುಕೊಳ್ಳಲು ಸ್ಕ್ರೀನ್ ಹಂಚಿಕೆಯ ಅಪ್ಲಿಕೇಶನ್’ಗಳನ್ನು ಬಳಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಗೂಗಲ್ ಪೇ ಅಥವಾ ಇತರೆ ಯುಪಿಐ ಆ್ಯಪ್’ಗಳನ್ನು ಬಳಸಬಾರದು. ಏಕೆಂದರೆ ಹಲವು ಕಂಪನಿಗಳು ಲಾಭವನ್ನು ಪಡೆದುಕೊಂಡು ಮೋಸ ಮಾಡುವ ಸಾಧ್ಯತೆ ಹೆಚ್ಚಿವೆ.

ಎಚ್ಚರಿಕೆ 4 : ಆನ್‌ಲೈನ್ ಮೂಲಕ ಹಣ ವರ್ಗಾವಣೆ (online money transaction) ಮಾಡುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಇತರೆ ಥರ್ಡ್ ಪಾರ್ಟಿ ಆ್ಯಪ್’ಗಳನ್ನು ಡೌನ್ಲೋಡ್ ಮಾಡಿಕೊಳಬೇಡಿ. ಈಗಾಗಲೇ ಇಂತಹ ಆ್ಯಪ್’ಗಳನ್ನು ಡೌನ್ಲೋಡ್ ಅಥವಾ ಇನ್‌ಸ್ಟಾಲ್ ಮಾಡಿಕೊಂಡಿದ್ದರೆ, ಗೂಗಲ್ ಪೇ ಆ್ಯಪ್ ಅಥವಾ ಇತರೆ ಯುಪಿಐ ಆ್ಯಪ್’ಗಳನ್ನು ಬಳಸುವಾಗ ಸ್ಕ್ರೀನ್ ಶೇರಿಂಗ್ ಕ್ಲೋಸ್ (off) ಆಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಂಡು ನಂತರ ಹಣ ವರ್ಗಾವಣೆ ಮಾಡಿ. ನಿಮಗೆ ಸ್ಕ್ರೀನ್ ಶೇರಿಂಗ್ ಆ್ಯಪ್’ಗಳು ಉಪಯೋಗವಿಲ್ಲದಿದ್ದರೆ ತಡ ಮಾಡದೆ ಅವುಗಳನ್ನು ನಿಮ್ಮ ಮೊಬೈಲ್’ನಿಂದ ಡಿಲೀಟ್ ಮಾಡಲು ಗೂಗಲ್ ಪೇ ಸೂಚಿಸಿದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಎಚ್ಚರಿಕೆ 5 : ಇವುಗಳನ್ನು ಹೊರತುಪಡಿಸಿ ನಿಮ್ಮ ವಾಟ್ಸಪ್ ನಂಬರ್’ಗೆ ಯಾರಾದರೂ ಆಫರ್, ಸ್ಕ್ರಾಚ್ ಕಾರ್ಡ್ ಅಥವಾ ಇತರೆ ಉಡುಗೊರೆಗಳಿಗಾಗಿ ಲಿಂಕ್ ಕಳಿಸಿದರೆ ಯಾವುದೇ ಕಾರಣಕ್ಕೂ ಅಂತಹ ಲಿಂಕ್’ಗಳ ಮೇಲೆ ಕ್ಲಿಕ್ ಮಾಡಬೇಡಿ. ತಕ್ಷಣವೇ ಅಂತಹ ನಂಬರ್’ಗಳನ್ನು ಬ್ಲಾಕ್ ಮಾಡಿ. ಏಕೆಂದರೆ ಇವುಗಳು ಸ್ಕ್ಯಾಮರ್ಸ್’ಗಳ (Scammers / Hackers / Frauds) ಹಣ ದೋಚುವ ಮಾರ್ಗಗಳಾಗಿರುತ್ತವೆ.

ಗೂಗಲ್ ಪೇ ಆ್ಯಪ್ ಕೃತಕ ಬುದ್ಧಿ ಮತ್ತೆ (artificial intelligence) ಉಪಯೋಗಿಸಿ ಗೂಗಲ್ ಪೇ ಬಳಕೆದಾರರಿಗೆ ಹಲವಾರು ಭದ್ರತೆಗಳನ್ನು ಒದಿಸುತ್ತಿದೆ. ಆದರೆ ಬಳಕೆದಾರರು ಸಣ್ಣ ಸಣ್ಣ ತಪ್ಪುಗಳಿಂದ ಅಥವಾ ಅಲಕ್ಷö್ಯದಿಂದ ಮೋಸ ಹೋಗುತ್ತಿದ್ದಾರೆ. ಹೀಗಾಗಿ ಈ ಮೇಲಿನ ಸಲಹೆಗಳನ್ನು ತಿಳಿದುಕೊಂಡು ಗೂಗಲ್ ಪೇ ಅಪ್ಲಿಕೇಶನ್ ಬಳಸುವಾಗ ಎಚ್ಚರದಿಂದ ಇದ್ದರೆ ಮೋಸಗಾರರಿಂದ ಅಥವಾ ವಂಚನೆಯಿ೦ದ ತಪ್ಪಿಸಿಕೊಳ್ಳಬಹುದು ಮತ್ತು ಸುರಕ್ಷಿತವಾಗಿರಬಹುದು.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

Bagar Hukum land : ಈ ರೈತರ ಬಗರ್ ಹುಕುಂ ಜಮೀನು ಸರಕಾರದ ಸ್ವಾಧೀನ | ಸುತ್ತೋಲೆ ಹೊರಡಿಸಿದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ

WhatsApp Group Join Now
Telegram Group Join Now

Related Posts

error: Content is protected !!