ಉದ್ಯೋಗಸರಕಾರಿ ಯೋಜನೆ

ನಿರುದ್ಯೋಗ ಶಮನಕ್ಕೆ ಸರಕಾರಿ ಉದ್ಯೋಗ ಮೇಳ ಆಯೋಜನೆ : ಇದು ಸರಕಾರದ ಮತ್ತೊಂದು ಗ್ಯಾರಂಟಿ ಯೋಜನೆ State level Govt job fair 2024-25

WhatsApp Group Join Now
Telegram Group Join Now

ಯುವಜನತೆ ವಿದ್ಯಾರ್ಹತೆ ತಕ್ಕ ಉದ್ಯೋಗ ಕಂಡುಕೊಳ್ಳಲು ಸಹಕಾರಿ ಆಗುವಂತೆ ಸ್ವತಃ ರಾಜ್ಯ ಸರಕಾರವೇ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲು ಮುಂದಾಗಿದೆ. ಈ ಬೃಹತ್ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಹೇಗೆ ನೆರವಾಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ….

State level Govt job fair 2024-25 : ಕರ್ನಾಟಕ ರಾಜ್ಯ ಸರ್ಕಾರವು ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡಲು, ಇದೇ ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರು ಮಹಾನಗರದಲ್ಲಿ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳವನ್ನು (State level job fair) ಆಯೋಜಿಸಲು ನಿರ್ಧರಿಸಿದೆ.

ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸುವ ಸಂಬ೦ಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು; ಉದ್ಯೋಗ ಮೇಳದ ಪರಿಣಾಮಕಾರಿ ಆಯೋಜನೆಗಾಗಿ ಏಳು ಜನ ಸಚಿವರನ್ನು ಒಳಗೊಂಡ ತಂಡ ರಚಿಸಲು ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

‘ನಿರುದ್ಯೋಗ ಶಮನ’ ಭರವಸೆ ಈಡೇರಿಕೆ

ಕಾಂಗ್ರೆಸ್ ಪಕ್ಷವು ಚುನಾವಣೆಗೂ ಮುನ್ನ ನೀಡಿದ ಹಲವು ಭರವಸೆಗಳ ಪೈಕಿ ‘ನಿರುದ್ಯೋಗ ಶಮನ’ (Unemployment Relief) ಕೂಡ ಒಂದಾಗಿತ್ತು. ಪ್ರಣಾಳಿಕೆ ಮೂಲಕ ಲಿಖಿತ ವಾಗ್ದಾನ ಮಾಡಿದ್ದ ಪಕ್ಷವು ಇದೀಗ ನುಡಿದಂತೆ ಹಲವು ಭರವಸೆಗಳನ್ನು ಈಡೇರಿಸಿದೆ. ಸರ್ಕಾರವು ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ (Yuva Nidhi Scheme) ಡಿಸೆಂಬರ್ 26ರಿಂದ ನೋಂದಣಿಗೆ ಚಾಲನೆ ನೀಡಲಾಗಿದೆ. ಇದೇ ಜನವರಿ 12ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಭತ್ಯೆ ನೇರವಾಗಿ ಜಮೆಯಾಗಲಿದೆ. ಇದೀಗ ನಿರುದ್ಯೋಗ ಶಮನಕ್ಕೆ ಪೂರಕವಾಗಿ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳ ಹೊಸ ನೇಮಕಾತಿಗೆ ಅರ್ಜಿ ಅಹ್ವಾನ | Gram Panchayat Recruitment 2024

ಸಚಿವರ ತಂಡ ರಚನೆ

ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ರಾಜ್ಯಮಟ್ಟದ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ನಡೆಸಲು ಸಹಾಯವಾಗುವಂತೆ ವಿವಿಧ ಇಲಾಖೆಯ ಸಚಿವರಾದ ಎಂ ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಡಾ. ಎಂ ಸಿ ಸುಧಾಕರ್, ಸಚಿವ ಬಿ ನಾಗೇಂದ್ರ, ಸಂತೋಷ್ ಲಾಡ್ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಒಳಗೊಂಡ ತಂಡವನ್ನು ರಚಿಸಲು ತೀರ್ಮಾನಿಸಲಾಗಿದೆ.

ಈ ಸಚಿವರ ತಂಡವು ಉದ್ಯೋಗದಾತ ಕಂಪನಿಯವರೊ೦ದಿಗೆ ಸಭೆ ನಡೆಸಿ ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಲಿದೆ. ಜೊತೆಗೆ ಕೈಗಾರಿಕೆಗಳೊಂದಿಗೆ ಚರ್ಚಿಸಿ, ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹಾಗೂ ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸಲು ಶಿಫಾರಸ್ಸು ಮಾಡುವಂತೆ ಮತ್ತು ವಿದೇಶದಲ್ಲಿರುವ ಉದ್ಯೋಗಾವಕಾಶಗಳ (Abroad job opportunity) ಕುರಿತು ಪರಿಶೀಲನೆ ನಡೆಸಲಿದೆ.

ಇದನ್ನೂ ಓದಿ: SSLC, PUC ಪಾಸಾದವರಿಂದ ನ್ಯಾಯಾಲಯದ ಹುದ್ದೆಗಳಿಗೆ ಅರ್ಜಿ ಆಹ್ವಾನ | ಸಂಬಳ ₹52,650 Chikkaballapur district Court recruitment 2024

ಪ್ರತಿಯೊಂದು ಜಿಲ್ಲೆಗಳಲ್ಲೂ ಉದ್ಯೋಗ ಮೇಳ

ಉದ್ಯೋಗ ಮೇಳ ಆಯೋಜನೆ ಸಂಬ೦ಧ ಸಿಎಂ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಇದೇ ಜನವರಿ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ಇದೇ ರೀತಿ ಮುಂಬರುವ ದಿನಗಳಲ್ಲಿ ಪ್ರತಿ ಜಿಲ್ಲಾ ಮತ್ತು ವಲಯವಾರು ಉದ್ಯೋಗ ಮೇಳ ( District and Zone wise Job Fair ) ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗದ ಯುವ ಜನತೆಗೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳನ್ನು ಒದಗಿಸುವುದು ಈ ಬೃಹತ್ ಉದ್ಯೋಗ ಮೇಳದ ಉದ್ದೇಶವಾಗಿದೆ. SSLCಯಿಂದ ಉನ್ನತ ಶಿಕ್ಷಣದ ವರೆಗೂ ಎಲ್ಲ ಹಂತದ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೂ ಇಲ್ಲಿ ಅವಕಾಶ ಸಿಗಲಿದೆ. ರಾಜ್ಯ, ದೇಶ ಮಾತ್ರವಲ್ಲದೇ ವಿದೇಶಗಳ ಉದ್ಯೋಗಾವಕಾಶಗಳು ಕೂಡ ಈ ಮೇಳದಲ್ಲಿ ಆಯೋಜನೆ ಆಗಲಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Karnataka Yuva Nidhi Scheme : ನಿರುದ್ಯೋಗಿಗಳಿಗೆ ‘ಯುವನಿಧಿ’ ಭತ್ಯೆಗೆ ನೋಂದಣಿ ಆರಂಭ | ಪದವೀಧರರಿಗೆ ಪ್ರತಿ ತಿಂಗಳು ₹3000 ಸಹಾಯಧನ | ನೋಂದಣಿ ಹೇಗೆ?

WhatsApp Group Join Now
Telegram Group Join Now

Related Posts

error: Content is protected !!