ಉದ್ಯೋಗ

ಗ್ರಾಮ ಪಂಚಾಯತಿ 6,406 ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳ ನೇಮಕಾತಿ| Graama Panchayat Secretary, SDAA Recruitment

WhatsApp Group Join Now
Telegram Group Join Now

ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ನೂತನ ಗೆಜೆಟ್‌ನಲ್ಲಿ ಹೊರಡಿಸಲಾದ ನಿಯಮಗಳೇನು? ನೇಮಕ ವಿಧಾನ ಹೇಗೆ? ಸಂಬಳ, ಕನಿಷ್ಟ ಅರ್ಹತೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಸಂಬ೦ಧಿಸಿದ೦ತೆ ವೃಂದ ಮತ್ತು ನೇಮಕಾತಿಯ ಅಂತಿಮ ನಿಯಮಗಳನ್ನು ಸಿದ್ದಪಡಿಸಿ ದಿನಾಂಕ:  01-04-2022ರಂದು ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದೆ. ಹೀಗಾಗಿ ಯಾವ ಸಮಯದಲ್ಲಾದರೂ ಈ ಹುದ್ದೆಗಳ ನೇಮಕಾತಿ ನಡೆಸಲು ಸರಕಾರ ತಯಾರಿ ನಡೆಸಬಹುದು. ಪದವಿಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು; ಈಗಿಂದಲೇ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ತಯಾರಿ ನಡೆಸುವುದು ಉತ್ತಮ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

ಈ ಹುದ್ದೆಗಳಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆ ಕುರಿತು ಸರಕಾರ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಿಲ್ಲ. ಆದರೆ ಕಳೆದ ವರ್ಷ ಇದೇ ಮಾರ್ಚ್ 31ರಂದು ಸದರಿ ನೇಮಕಾತಿ ಕುರಿತು ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದೆ. ಹೀಗಾಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರುವಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಹೊರಡಿಸಲಾದ ಗೆಜೆಟ್‌ನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ಸಂಖ್ಯೆ, ನೇಮಕಾತಿ ವಿಧಾನ, ವಿದ್ಯಾರ್ಹತೆ ಮತ್ತು ವೇತನದ ವಿವರ ಈ ಕೆಳಗಿನಂತಿದೆ….

ಹುದ್ದೆಗಳ ವಿವರ:

  • ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1 ಮತ್ತು 2): 3,827
  • ವೇತನ: 21,400-42,000
  • ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (ಎಸ್‌ಡಿಎ): 2,579
  • ವೇತನ: 21,400-42,000
  • ಒಟ್ಟು ಹುದ್ದೆಗಳು: 6,406

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕನಿಷ್ಟ ಅರ್ಹತೆ:

ಈ ಹುದ್ದೆಗಳ ನೇರ ನೇಮಕಾತಿಗೆ: ಪದವಿ ಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (SDA) ಹುದ್ದೆಗೆ ವಾಣಿಜ್ಯ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಜತೆಗೆ ಕಂಪ್ಯೂಟರ್ ಸಾಕ್ಷರರಾಗಿರಬೇಕು.

ಸೇವೆಯೊಳಗಿನ ನೇರ ನೇಮಕಾತಿಗಾಗಿ: ಪದವಿ ಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು ಅಥವಾ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು ಮತ್ತು ಸಂದರ್ಭನುಸಾರ ಹಿಂದಿನ ಮಂಡಲ ಪಂಚಾಯತ್‌ಗಳಲ್ಲಿ ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ಬಿಲ್ ಕಲೆಕ್ಟರ್‌ಗಳು, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತ ಕಮ್ ಡೇಟಾ ಎಂಟ್ರಿ ಆಪರೇಟರ್‌ಗಳಾಗಿ 6 ವರ್ಷಗಳಿಗಿಂತ ಕಡಿಮೆಯಿಲ್ಲದ ನಿರಂತರ ಸೇವೆಯನ್ನು ಸಲ್ಲಿಸಿರಬೇಕು.

ಇದನ್ನೂ ಓದಿ: 10th, 12th ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕಲಬುರಗಿಯಲ್ಲಿ ಕೆಲಸ

ಗಮನಾರ್ಹವೆಂದರೆ, ನಿಗದಿತ ಅರ್ಹತೆಯಾದ ಪದವಿ ಪೂರ್ವ ಶಿಕ್ಷಣದಲ್ಲಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕೆನ್ನುವುದು ದಿನಾಂಕ: 02-01-2014ರಂದು ಜಾರಿಗೆ ಬಂದ ಕರ್ನಾಟಕ ನಾಗರಿಕ ಸೇವೆಗಳ (ಲಿಪಿಕ ಹುದ್ದೆಗಳಿಗೆ ನೇಮಕಾತಿ) (ತಿದ್ದುಪಡಿ)ರ ನಿಯಮಗಳು, 2013 ಪ್ರಾರಂಭದ ದಿನಾಂಕದ೦ದು ಹಿಂದಿನ ಮಂಡಲ್ ಪಂಚಾಯಿತಿಗಳು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಸೇವೆಯಲ್ಲಿರುವ, SSLC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಬಿಲ್ ಕಲೆಕ್ಟರ್‌ಗಳು, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತ ಕಮ್ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಅನ್ವಯಿಸುವುದಿಲ್ಲ.

ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 1 ಮತ್ತು ಗ್ರೇಡ್ 2) ಹುದ್ದೆಗಳ ನೇಮಕಾತಿ ವಿಧಾನ:

ಶೇಕಡಾ 25ರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021ರ ಅನ್ವಯ ನೇರ ನೇಮಕಾತಿಯ ಮೂಲಕ ಮತ್ತು ಶೇಕಡಾ 75ರಷ್ಟು ನೇಮಕಾತಿ ಪ್ರಾಧಿಕಾರದಿಂದ ನಿರಂತರವಾಗಿ 6 ವರ್ಷಗಳ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್‌ಗಳು ಮತ್ತು ಲೆಕ್ಕಿಗರು, ಗುಮಾಸ್ತರು,  ಬೆರಳಚ್ಚುಗಾರರು, ಗುಮಾಸ್ತ ಕಂ ಡಾಟಾ ಎಂಟ್ರಿ ಆಪರೇಟರ್‌ಗಳ ವೃಂದದಿ೦ದ ಜೇಷ್ಠತೆ ಆಧಾರದ ಮೇಲೆ 3:2ರ ಅನುಪಾತದಲ್ಲಿ ನೇರ ನೇಮಕಾತಿ ಮೂಲಕ ಅಂದರೆ- ಮೊದಲ ಮೂರು ಖಾಲಿ ಹುದ್ದೆಗಳು ಬಿಲ್ ಕಲೆಕ್ಟರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ನಂತರದ ಎರಡು ಖಾಲಿ ಹುದ್ದೆಗಳನ್ನು ಹಿಂದಿನ ಮಂಡಲ ಪಂಚಾಯತ್‌ಗಳಲ್ಲಿ ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತರು ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ನೇಮಕಾತಿ ಪ್ರಾಧಿಕಾರವು ನೇಮಕ ಮಾಡುತ್ತದೆ.

ಇದನ್ನೂ ಓದಿ:  ಡಿಸಿಸಿ ಬ್ಯಾಂಕ್ ನೇರ ನೇಮಕಾತಿ | SSLC, ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಸಂಬಳ 23,500-67,000 ರೂಪಾಯಿ

ದ್ವಿತೀಯ ದರ್ಜೆ ಲೆಕ್ಕ ಸಹಾಯಕರು (ಎಸ್‌ಡಿಎ) ಹುದ್ದೆಗಳ ನೇಮಕಾತಿ ವಿಧಾನ:

ಶೇಕಡಾ 50ರಷ್ಟು ಹುದ್ದೆಗಳನ್ನು ಕರ್ನಾಟಕ ಸಿವಿಲ್ ಸೇವೆಗಳು (ನೇರ ನೇಮಕಾತಿ) (ಸಾಮಾನ) ನಿಯಮಗಳು, 2021ರ ಅನ್ವಯ ನೇರ ನೇಮಕಾತಿಯ ಮೂಲಕ ಮತ್ತು ಶೇಕಡಾ 50ರಷ್ಟು ಹುದ್ದೆಗಳನ್ನು ನೇಮಕಾತಿ ಪ್ರಾಧಿಕಾರದಿಂದ ಸೇವೆಯಲ್ಲಿರುವ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡುವ ಮೂಲಕ 1:1 ಅನುಪಾತದಲ್ಲಿ ಬಿಲ್ ಕಲೆಕ್ಟರ್‌ಗಳು, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತ ಕಮ್ ಡೇಟಾ ಎಂಟ್ರಿ ಆಪರೇಟರ್‌ಗಳ ವೃಂದದಿ೦ದ ಜೇಷ್ಠತೆ ಆಧಾರದ ಮೇಲೆ, ಅಂದರೆ- ಮೊದಲ ಒಂದು ಖಾಲಿ ಹುದ್ದೆಯನ್ನು ಬಿಲ್ ಕಲೆಕ್ಟರ್‌ಗಳಾಗಿ ಕೆಲಸ ಮಾಡುವ ಅಭ್ಯರ್ಥಿಗಳಿಂದ ಮತ್ತು ನಂತರದ ಒಂದು ಖಾಲಿ ಹುದ್ದೆಯನ್ನು ಹಿಂದಿನ ಮಂಡಲ ಪಂಚಾಯತ್‌ಗಳಲ್ಲಿ ಅಥವಾ ಗ್ರಾಮ ಪಂಚಾಯತ್‌ಗಳಲ್ಲಿ ನಿರಂತರವಾಗಿ ಆರು ವರ್ಷಗಳಿಗಿಂತ ಹೆಚ್ಚು ಕಾಲ ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತರು ಕಮ್ ಡಾಟಾ ಎಂಟ್ರಿ ಆವರೇಟರ್‌ಗಳಾಗಿ ಕಲಸ ಅಭ್ಯರ್ಥಿಗಳಿಂದ ಪ್ರಾಧಿಕಾರವು ನೇಮಕಾತಿ ಮಾಡುತ್ತದೆ.

ಇದನ್ನೂ ಓದಿ: 3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಎರಡೂ ಹುದ್ದೆಗಳ ನೇಮಕಾತಿಗೆ ಅನುಸರಿಸಬೇಕಾದ ವಿಧಾನ:

ನೇಮಕಾತಿ ಪ್ರಾಧಿಕಾರವು ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: RDP 8 ZPT 87, ದಿನಾಂಕ: 07-05-1988ರಲ್ಲಿನ ಸೂಚನೆಯನುಸಾರ ಹಿಂದಿನ ಗ್ರಾಮ ಪಂಚಾಯತ್‌ಗಳು ಅಥವಾ ಮಂಡಲ ಪಂಚಾಯತ್‌ಗಳು ನೇಮಕಾತಿ ಮಾಡಿರುವ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 112 ಮತ್ತು 113ರಡಿ ಗ್ರಾಮ ಪಂಚಾಯತಿಗಳು ನೇಮಕ ಮಾಡಿರುವ ಬಿಲ್ ಕಲೆಕ್ಟರ್‌ಗಳು ನಿರಂತರವಾಗಿ ಆರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಬಿಲ್ ಕಲೆಕ್ಟರ್ ವೃಂದದಲ್ಲಿ ಸೇವೆ ಸಲ್ಲಿಸಿದವರನ್ನು ಅವರು ಸೇವೆಗೆ ಸೇರಿದ ದಿನಾಂಕ ಆಧಾರದ ಮೇರೆಗೆ ಜಿಲ್ಲಾವಾರು ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸುವುದು ಹಾಗೂ ಪ್ರಕಟಿಸತಕ್ಕದ್ದು.

ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತ ಕಂ ಡಾಟಾ ಎಂಟ್ರಿ ಆಪರೇಟರ್‌ಗಳು ನಿರಂತರವಾಗಿ ಆರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿದವರನ್ನು, ಅವರು ಸೇವೆಗೆ ಸೇರಿದ ದಿನಾಂಕ ಆಧಾರದ ಮೇರೆಗೆ ಜಿಲ್ಲಾವಾರು ಮತ್ತೊಂದು ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸತಕ್ಕದ್ದು ಹಾಗೂ ಸಿದ್ಧಪಡಿಸುವುದು. ನೇಮಕಾತಿ ಪ್ರಾಧಿಕಾರವು ಪ್ರತಿ ವರ್ಷ ಜನವರಿ 1ನೇ ತಾರೀಖಿನಂದು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸತಕ್ಕದ್ದು.

ಇದನ್ನೂ ಓದಿ:  ರೈತರಿಗೆ ಪೋಸ್ಟ್ ಆಫೀಸ್‌ನಲ್ಲೇ ಸಾಲ ಸೌಲಭ್ಯ: ಯಾವುದಕ್ಕೆಲ್ಲ ಸಿಗಲಿದೆ ಈ ಸಾಲ

ಸರ್ಕಾರದಿಂದ ಕಾಲ ಕಾಲಕ್ಕೆ ನಿಗದಿಪಡಿಸಿರುವ ಮೀಸಲಾತಿಗೆ ಒಳಪಟ್ಟು, ಅಭ್ಯರ್ಥಿಗಳ ಎರಡು ಆಯ್ಕೆ ಪಟ್ಟಿಯನ್ನು ಒಂದು ಬಿಲ್ ಕಲೆಕ್ಟರ್‌ಗಳಿಗೆ ಸೇರಿದ್ದು, ಮತ್ತೊಂದು ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು, ಗುಮಾಸ್ತ ಕಂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸಂಬAಧಿಸಿದAತೆ ನೇಮಕಾತಿ ಪ್ರಾಧಿಕಾರವು ಸೇವೆಯಲ್ಲಿ ನೇರ ನೇಮಕಾತಿಗಾಗಿ ಪ್ರಕರಣ (ಎ)ರ ಅಡಿಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆಗೆ ಸಮಾನವಾಗಿ ಸಿದ್ಧಪಡಿಸಬೇಕು.

ನೇಮಕಾತಿ ಪ್ರಾಧಿಕಾರವು ಆಯ್ಕೆ ಪಟ್ಟಿಯಲ್ಲಿ ಹೆಸರುಗಳನ್ನು ಒಳಗೊಂಡಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಪಟ್ಟಿಯಲ್ಲಿ ಅವರ ಹೆಸರುಗಳು ಕಾಣಿಸಿಕೊಳ್ಳುವ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳು ಅಂತಹ ನೇಮಕಾತಿಗಾಗಿ ಎಲ್ಲಾ ರೀತಿಯಲ್ಲೂ ಅರ್ಹರು ಎನ್ನುವುದನ್ನು ಅಂತಹ ವಿಚಾರಣೆಗಳ ಮೂಲಕ ಖಾತರಿಪಡಿಸಿಕೊಂಡು ನೇಮಕ ಮಾಡತಕ್ಕದ್ದು.

ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್ 1 ಮತ್ತು ಗ್ರೇಡ್ 2) ಹಾಗೂ ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಸಂಬAಧಿಸಿದAತೆ ವೃಂದ ಮತ್ತು ನೇಮಕಾತಿಯ ಅಂತಿಮ ನಿಯಮಗಳನ್ನು ಸಿದ್ದಪಡಿಸಿ 01-04-2022ರಂದು ಹೊರಡಿಸಲಾದ ರಾಜ್ಯಪತ್ರ (ಗೆಜೆಟ್)ದ ಪೂರ್ಣ ಓದಿಗೆ ಇಲ್ಲಿ ಕ್ಲಿಕ್ ಮಾಡಿ…

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

Agriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!