ಪಂಚಾಯತಿ ಸುದ್ದಿಸರಕಾರಿ ಯೋಜನೆ

GramaOne franchise application : 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಅಹ್ವಾನ | ಯಾವ್ಯಾವ ಜಿಲ್ಲೆ? ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಮ ಒನ್ ಫ್ರ‍್ಯಾಂಚೈಸ್ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನನಿಸಲಾಗಿದೆ. ಯಾವ್ಯಾವ ಜಿಲ್ಲೆಗಳು? ಫ್ರ‍್ಯಾಂಚೈಸ್ ಪಡೆಯಲು ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

GramaOne franchise application : ‘ಗ್ರಾಮ ಒನ್’ ಕೇಂದ್ರಗಳು ಸರಕಾರದ ಎಲ್ಲಾ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ಜನರಿಗೆ ತಮ್ಮದೇ ಗ್ರಾಮದಲ್ಲಿ ನೀಡುವ ಸರಕಾರಿ ಪ್ರಾಯೋಜಿತ ಸೇವಾ ಕೇಂದ್ರಗಳಾಗಿವೆ. ಪ್ರಸ್ತುತ ಸೇವಾ ಸಿಂಧು ಪೋರ್ಟಲ್‌ನಲ್ಲಿರುವ 80 ಇಲಾಖೆಗಳ 798 ಸೇವೆಗಳನ್ನು ಗ್ರಾಮ ಒನ್ ಕೇಂದ್ರಗಳು ಗ್ರಾಮೀಣ ಪಲಾನುಭವಿಗಳಿಗೆ ಒದಗಿಸಿ ಕೊಡುತ್ತಿದೆ.

ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಂತ ಗ್ರಾಮದಲ್ಲಿಯೇ ‘ಸ್ವಯಂ ಉದ್ಯೋಗ’ ಆರಂಭಿಸಲು ಇದು ಉತ್ತಮ ಅವಕಾಶವಾಗಿದ್ದು, ಗ್ರಾಮ ಒನ್ ಫ್ರ‍್ಯಾಂಚೈಸ್ ಪಡೆಯುವುದು ಹೇಗೆ? ಅರ್ಹತೆಗಳೇನು? ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ಯಾವ ಯಾವ ಜಿಲ್ಲೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಗ್ರಾಮ ಒನ್ ಫ್ರ‍್ಯಾಂಚೈಸ್‌ಗೆ ರಾಜ್ಯದ ಮೈಸೂರು ಮತ್ತು ಕಲಬುರಗಿ ಕಂದಾಯ ವಿಭಾಗದಲ್ಲಿ ಬರುವ 15 ಜಿಲ್ಲೆಗಳ ವಿವಿಧ ನೂರಾರು ಗ್ರಾಮಗಳಲ್ಲಿ ‘ಗ್ರಾಮ ಒನ್’ ಸೇವಾ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ವಿಭಾಗವಾರು ಜಿಲ್ಲೆಗಳ ವಿವರ ಈ ಕೆಳಗಿನಂತಿದೆ:

ಮೈಸೂರು ವಿಭಾಗದ ಜಿಲ್ಲೆಗಳು :

 1. ಚಾಮರಾಜನಗರ
 2. ಚಿಕ್ಕಮಗಳೂರು
 3. ದಕ್ಷಿಣ ಕನ್ನಡ
 4. ಹಾಸನ
 5. ಕೊಡಗು
 6. ಮಂಡ್ಯ
 7. ಉಡುಪಿ
 8. ಮೈಸೂರು

ಇದನ್ನೂ ಓದಿ: Karnataka State Police Recruitment : 4,547 ಕಾನ್‌ಸ್ಟೇಬಲ್ ಮತ್ತು ಪಿಎಸ್‌ಐ ಹುದ್ದೆಗಳಿಗೆ ಪಿಯುಸಿ, ಪದವಿಧರರ ನೇಮಕ | ರಾಜ್ಯ ಪೊಲೀಸ್ ಇಲಾಖೆಯಲ್ಲಿ 17,828 ಹುದ್ದೆಗಳು ಖಾಲಿ

ಕಲಬುರಗಿ ವಿಭಾಗದ ಜಿಲ್ಲೆಗಳು :

 1. ಬಳ್ಳಾರಿ
 2. ಬೀದರ್
 3. ಗುಲ್ಬರ್ಗ
 4. ಕೊಪ್ಪಳ
 5. ರಾಯಚೂರು
 6. ಯಾದಗಿರಿ
 7. ವಿಜಯನಗರ

ಗ್ರಾಮ ಒನ್ ಫ್ರ‍್ಯಾಂಚೈಸ್ ಪಡೆಯಲು ಅರ್ಹತೆಗಳು? (Gram one franchise eligibilities)

 • ಅರ್ಜಿ ಸಲ್ಲಿಸುವ ಅರ್ಜಿದಾರನು ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದ ನಿವಾಸಿಯಾಗಿರಬೇಕು.
 • ಅರ್ಜಿದಾರನ ಕನಿಷ್ಠ 10ನೇ ತರಗತಿ ಪಾಸಾಗಿರಬೇಕು ಮತ್ತು ತಾಂತ್ರಿಕ ವಿಷಯದ (ಕಂಪ್ಯೂಟರ್) ಜ್ಞಾನ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
 • ಅರ್ಜಿದಾರನಿಗೆ ಕನ್ನಡ ಭಾಷೆಯನ್ನು ಮಾತನಾಡಲು ಬರೆಯಲು ಮತ್ತು ಓದಲು ಬರಬೇಕು. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು.
 • ಅರ್ಜಿದಾರನ ಮೇಲೆ ಯಾವುದೇ ಸಾಮಾಜಿಕ ಮತ್ತು ಕ್ರಿಮಿನಲ್ ಅಪರಾಧವಿರಬಾರದು ಹಾಗೂ ಇದಕ್ಕೆ ಸಾಕ್ಷಿಯಾಗಿ ಪೋಲಿಸ್ ದೃಢೀಕರಣ ಪತ್ರವನ್ನು ಹೊಂದಿರಬೇಕು.
 • ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅಗತ್ಯವಿರುವ ಜಾಗ ಹೊಂದಿರಬೇಕು. ಹಾಗೂ ಐಟಿ ಮತ್ತು ಐಟಿಯೇತರ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡಲು ಸಿದ್ದರಿರಬೇಕು.
 • ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅಗತ್ಯ ಇಂಟೆರ್‌ನೆಟ್ ಸೌಲಭ್ಯ, ರಸ್ತೆ, ವಿದ್ಯುತ್ ಮತ್ತು ಇತರೆ ಉಪಯುಕ್ತತೆಗಳೊಂದಿಗೆ ಪ್ರಮುಖ ಸ್ಥಳ ಹೊಂದಿರಬೇಕು.

ಇದನ್ನೂ ಓದಿ: Bhu Odetana Yojane : ಈ ಯೋಜನೆಯಡಿ ಜಮೀನು ಖರೀದಿಗೆ ರಾಜ್ಯ ಸರಕಾರವೇ ಕೊಡುತ್ತೆ ಸಹಾಯಧನ ಮತ್ತು ಸಾಲ | ಡಿಸೆಂಬರ್ 15ರೊಳಗೆ ಅರ್ಜಿ ಹಾಕಿ

ಗ್ರಾಮ ಒನ್ ಕೇಂದ್ರಕ್ಕೆ ಈ ಕೆಳಗಿನ ವಸ್ತುಗಳು ಇರಬೇಕು

 • ಕಂಪ್ಯೂಟರ್ / ಲ್ಯಾಪ್ ಟಾಪ್ (Computer / Laptop)
 • ಪ್ರಿಂಟರ್ (Multi Function Printer)
 • ಫಿಂಗರ್ ಪ್ರಿಂಟ್ ಸ್ಕ್ಯಾನರ್ (Biometric Scanner)
 • ವೆಬ್ ಕ್ಯಾಮೆರಾ (Web camera)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು 

 • ಪಾನ್ ಕಾರ್ಡ್ (Pan card)
 • ಆಧಾರ್ ಕಾರ್ಡ್ (Adhar card)
 • ಮೊಬೈಲ್ ನಂಬರ್ (Mobile number)
 • ಇಮೇಲ್ (E mail)
 • ಬ್ಯಾಂಕ್ ಪಾಸ್ ಬುಕ್
 • ವಿದ್ಯಾರ್ಹತೆಯ ಪ್ರಮಾಣಪತ್ರ

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಅರ್ಜಿ ಸಲಿಕೆ ಶುಲ್ಕ : ಗ್ರಾಮ ಒನ್ ಫ್ರ‍್ಯಾಂಚೈಸ್ ಪಡೆಯಲಿಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವಾಗಿ 100 ರೂಪಾಯಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆಯ ದಿನಾಂಕ : ಅರ್ಜಿಯನ್ನು 15ನೇ ಡಿಸೆಂಬರ್ 2023, ಸಾಯಂಕಾಲ 6 ಗಂಟೆಯ ಒಳಗಾಗಿ ನಿಖರ ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಕೇಳಲಾಗುವ ಅಭ್ಯರ್ಥಿಯ ಹೆಸರು, ನಿಮ್ಮ ಜಿಲ್ಲೆ, ತಾಲೂಕು ಗ್ರಾಮ ಪಂಚಾಯಿತಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ…

ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಸಹಾಯವಾಣಿ : +91 91487 12473

GramaOne franchise application

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

Bagarhukum land : ಈ ರೈತರಿಗೆ 8 ತಿಂಗಳೊಳಗೇ ಸರಕಾರಿ ಜಮೀನು ಮಂಜೂರು | ಅಧಿಕಾರಿಗಳಿಗೆ ಕಂದಾಯ ಸಚಿವರ ಗಡುವು | ಯಾರಿಗೆಲ್ಲ ಸಿಗಲಿದೆ ಹಕ್ಕುಪತ್ರ?

WhatsApp Group Join Now
Telegram Group Join Now

Related Posts

error: Content is protected !!