ಪಂಚಾಯತಿ ಸುದ್ದಿಸರಕಾರಿ ಯೋಜನೆ

ಸರಿಯಾಗಿ ಆಫೀಸ್‌ಗೆ ಬಾರದ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಬಂತು ಕುತ್ತು | ಇ-ಹಾಜರಾತಿ ವ್ಯವಸ್ಥೆ ಕಡ್ಡಾಯ ಜಾರಿ Gram Panchayat e-Attendance New Rules

WhatsApp Group Join Now
Telegram Group Join Now

Gram Panchayat e-Attendance New Rules

ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಾರ್ಯಾಲಯಗಳಲ್ಲಿ ಸಮಯಕ್ಕೆ ಅನುಗುಣವಾಗಿ ಹಾಜರಾತಿ ನೀಡದೆ, ಕರ್ತವ್ಯವನ್ನು ಸರಿಯಾಗಿ ಪಾಲಿಸದಿರುವ ಪಿಡಿಒ ಮತ್ತು ಇತರೆ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆಗೊಳಿಸಲು ಮುಂದಾಗಿದೆ. ಇದರ ಅನ್ವಯ ಎಲ್ಲಾ ಕಚೇರಿಗಳಲ್ಲಿಯು ಕಂಪ್ಯೂಟರ್ ಆಧರಿತ ಇ-ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಆದೇಶ ಹೊರಡಿಸಿದೆ.

ಕಂಪ್ಯೂಟರ್ ಆಧಾರಿತ ಹಾಜರಾತಿಯ ಆಧಾರದ ಮೇಲೆ ಸಿಬ್ಬಂದಿಗಳಿಗೆ ತಿಂಗಳ ಸಂಬಳ ಪಾವತಿ ಮಾಡಲಾಗುತ್ತದೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದಿಂದ ಕಛೇರಿಯಲ್ಲಿ ಜನರ ಸೇವೆ ನೀಡುವ ಸಮಯದಲ್ಲಿ, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಬೇರೆ ಕಡೆ ಸಮಯ ಹಾಳು ಮಾಡುತ್ತಿರುವ ಸಿಬ್ಬಂದಿಗಳ ಬೇಜವಾಬ್ದಾರಿತನವನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಹೊಸ ವರ್ಷದ ಮೊದಲ ದಿನದಿಂದಲೇ ಈ ಒಂದು ನಿಯಮವನ್ನು ಜಾರಿಗೆಗೊಳಿಸಿದೆ.

ಇದನ್ನೂ ಓದಿ: Pension Schemes New Rules : ಇನ್ಮುಂದೆ ಇವರಿಗೆ ವೃದ್ದಾಪ್ಯ ವೇತನ ಸೇರಿ ಎಲ್ಲ ಪಿಂಚಣಿ ಬಂದ್ | ಹೊಸ ರೂಲ್ಸ್

ಹಾಜರಾತಿ ಆಧಾರದ ಮೇಲೆ ತಿಂಗಳ ಸಂಬಳ

ಗ್ರಾಮ ಪಂಚಾಯತಿ ಪಿಡಿಒ ಹಾಗೂ ಇತರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಕಡಿವಾಣ ಹಾಕಲು ಈ ಹೊಸ ಕಂಪ್ಯೂಟರ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆಗೊಳಿಸಲಾಗಿದೆ. ಇನ್ನು ಇವರ ತಿಂಗಳ ಹಾಜರಾತಿಯ ಆಧಾರದ ಮೇಲೆ ಪ್ರತಿ ತಿಂಗಳ ವೇತನವನ್ನು ಲೆಕ್ಕಾಚಾರ ಮಾಡಿ ಪಾವತಿಸಲಾಗುತ್ತದೆ.

ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕಸಹಾಯಕರು ಮತ್ತು ಗ್ರಾಪಂ ಸಿಬ್ಬಂದಿಗಳು ಪ್ರತಿದಿನವು ಕರ್ತವ್ಯದ ಸಮಯದಲ್ಲಿ ಸರಿಯಾದ ಸಮಯಕ್ಕೆ ಹಾಜರಾತಿ ಹಾಕಲು ಪಂಚತ೦ತ್ರ 2.0 ತಂತ್ರಾ೦ಶದಲ್ಲಿಯೇ ಇ-ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯ ಪ್ರತಿ ತಿಂಗಳ ಸಂಬಳವನ್ನು ಪಂಚತ೦ತ್ರ 2.0 ತಂತ್ರಾ೦ಶದ ಮೂಲಕವೇ ಆನ್‌ಲೈನ್‌ನಲ್ಲಿ ಮುಖಾಂತರ ಪಾವತಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Indian post office Staff Car Drivers Recruitment 2023 | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅಂಚೆ ಇಲಾಖೆ ಸ್ಟಾಫ್‌ಕಾರ್ ಡ್ರೈವರ್ ಹುದ್ದೆಗಳು

ಮೊದಲಿನ ವ್ಯವಸ್ಥೆಗೆ ಭಂಗ

ಕೊರೊನಾ ಬರುವುದಕ್ಕಿಂತ ಮುಂಚೆಯೇ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದ್ದರೂ ಕೂಡ ಅಷ್ಟೊಂದು ಪರಿಣಾಮಕಾರಿ ಆಗಿರಲಿಲ್ಲ. ಈ ವ್ಯವಸ್ಥೆಯನ್ನು ಜಾರಿಗೆಗೊಳಿಸಿದ ಆರಂಭದಲ್ಲಿ ಅನೇಕ ಸಿಬ್ಬಂದಿಗಳ ತಂಬ್ ಒತ್ತುವುದರ ಮೂಲಕ ಹಾಜರಾತಿಯನ್ನು ಹಾಕುತ್ತಿದ್ದರು. ಆದರೆ ಸಮಯ ಕಳೆದಂತೆ ಸರಿಯಾದ ಸಮಯಕ್ಕೆ ಹಾಜರಾತಿ ಹಾಕಲಾಗದೆ ಈ ಯಂತ್ರವನ್ನು ಕಿತ್ತೆಸೆಯಲು ಆರಂಭಿಸಿದರು.

ತದನ೦ತರ ಇಲ್ಲಿಯ ವರೆಗೂ ಕೂಡ ಬಹುತೇಕ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಬಯೋಮೆಟ್ರಿಕ್ ಇ-ಹಾಜರಾತಿ ಇಲ್ಲದರಿಂದ ಅನೇಕ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವುದರಲ್ಲಿ ನಿರ್ಲಕ್ಷ ತೋರಿಸುತ್ತ ಬಂದಿದ್ದಾರೆ. ಇದೀಗ ಹೊಸ ವರ್ಷದ ಮೊದಲ ದಿನದಿಂದಲೇ ಪುನಃ ಇ-ಹಾಜರಾತಿ ವ್ಯವಸ್ಥೆಯನ್ನು ಆರಂಭಿಸಿ ಕೆಲಸಗಳ್ಳ ಸಿಬ್ಬಂದಿಗಳಿಗೆ ಚಳಿ ಮುಟ್ಟಿಸಿದೆ.

ಇದನ್ನೂ ಓದಿ: Bara Parihara : ರೈತರಿಗೆ ಬರ ಪರಿಹಾರ ಜಮೆ ಮುಂದೂಡಿಕೆ : ಎಲ್ಲ ರೈತರಿಗೂ ಹಣ ಸಿಗೋದು ಕಷ್ಟ!

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಈ ವ್ಯವಸ್ಥೆ ಜಾರಿ?

ರಾಜ್ಯದ ಗ್ರಾಮ ಪಂಚಾಯಿತಿ ಕಾರ್ಯಾಲಯ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಗಳಲ್ಲಿಯೂ ಸಹ ಈ ವ್ಯವಸ್ಥೆಯನ್ನು ಜಾರಿಗೆಗೊಳಿಸಲು ಸರ್ಕಾರವು ಸಿದ್ಧತೆ ನಡೆಸಿದೆ. ಎಲ್ಲಾ ಇಲಾಖೆಗಳಲ್ಲಿಯೂ ಇ-ಹಾಜರಾತಿ ಜಾರಿ ಮಾಡುವುದರ ಮೂಲಕ ಪ್ರತಿ ತಿಂಗಳ ಸಂಬಳವನ್ನು ಹಾಜರಾತಿಯ ಆಧಾರದ ಮೇಲೆ ಪಾವತಿ ಮಾಡುವುದರ ನಿಯಮವನ್ನು ಜಾರಿಗೆ ಮಾಡುವುದು ಅನೇಕ ಪ್ರಜ್ಞಾವಂತರ ಮನವಿ ಆಗಿದೆ.

ಸರಿಯಾದ ಹಾಜರಾತಿ ವ್ಯವಸ್ಥೆ ಇಲ್ಲದಿರುವುದರಿಂದ ಅನೇಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಕಚೇರಿಯ ಸಮಯವನ್ನೇ ಮರೆತು ಹೋಗಿದ್ದು ಬೆಳಗ್ಗೆ ಬಂದು ಬಾಗಿಲು ತೆಗೆದು ಹೋದವರು ಪುನಃ ಮಧ್ಯಾಹ್ನ ಬಂದು ಸಣ್ಣ ಪುಟ್ಟ ಕೆಲಸವನ್ನು ಮಾಡಿ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ಮೂರು ಹೊತ್ತು ಹಾಜರಾತಿ ಕಡ್ಡಾಯ

ಹಾಗಂತ ಈಗಿನ ವ್ಯವಸ್ಥೆಯಲ್ಲಿ ಬೆಳಗ್ಗೆ ಬಂದು ಇ-ಹಾಜರಾತಿ ಹಾಕಿ ಪೇರಿ ಕೀಳಲು ಅವಕಾಶವೂ ಇಲ್ಲ. ಏಕೆಂದರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಸಿಬ್ಬಂದಿಗಳು ಪ್ರತಿನಿತ್ಯ ಕರ್ತವ್ಯದ ದಿನಗಳ ವೇಳೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಮೂರೂ ಹೊತ್ತು ಇ-ಹಾಜರಾತಿ ಹಾಕುವುದನ್ನು ಕಡ್ಡಾಯಗೊಳಿಸಲಾಗುತ್ತದೆ.

ಒಂದು ಹೊತ್ತಿನ ಹಾಜರಾತಿ ತಪ್ಪಿದರೂ ಸಂಬಳಕ್ಕೆ ಕುತ್ತು ಬರಲಿದೆ. ಸದಾ ಕಚೇರಿಯಲ್ಲಿದ್ದು; ಮೂರು ಹೊತ್ತು ಹಾಜರಾತಿ ಹಾಕುವ ಮೂಲಕ ಇಡೀ ದಿನ ಕರ್ತವ್ಯ ನಿರ್ವಹಿಸಬೇಕಿದೆ. ಈ ಒಂದು ವ್ಯವಸ್ಥೆಯಿಂದ ಜನರಿಗೆ ಸಿಗಬೇಕಾದ ಯೋಜನೆಗಳು, ಸರ್ಕಾರಿ ಸೇವೆಗಳು ಸರಿಯಾದ ಸಮಯದಲ್ಲಿ ಒದಗಲಿವೆ. ನಾಳೆ ನಾಳೆ ಎಂದು ನೆಪ ಹೇಳುವ ಕಳ್ಳಾಟಕ್ಕೂ ಕಡಿವಾಣ ಬೀಳಲಿದೆ!

Mojini Service Fees Reduced : ರೈತರ ಜಮೀನು ಪೋಡಿ, 11E ನಕ್ಷೆ, ಹದ್ದುಬಸ್ತು ಶುಲ್ಕ ಸಖತ್ ಇಳಿಕೆ | ಯಾವುದಕ್ಕೆ ಎಷ್ಟು ಶುಲ್ಕ? ಇಲ್ಲಿದೆ ಮಾಹಿತಿ…

WhatsApp Group Join Now
Telegram Group Join Now

Related Posts

error: Content is protected !!