ಸರಕಾರಿ ಯೋಜನೆ

ಮಹಿಳೆಯರು ಪ್ರತಿ ತಿಂಗಳು 2,000 ನೆರವು ಪಡೆಯಲು ಜೂನ್ 20ರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಹೇಗೆ? | Gruhalakshmi Scheme

WhatsApp Group Join Now
Telegram Group Join Now

ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಜೂನ್ 20 ರಿಂದ ಅರ್ಜಿ ಸಲ್ಲಿಸಬಹುದು. ಬಾಪುಜೀ ಕೇಂದ್ರ, ನಾಡ ಕಚೇರಿಯಲ್ಲೂ ಅರ್ಜಿ ಸ್ವೀಕಾರಕ್ಕೆ ಅವಕಾಶವಿದೆ….

ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮುಂದೂಡಲಾಗಿದೆ. ಮುಂದಿನ 4-5 ದಿನಗಳಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು; ಆಗಸ್ಟ್ 17ರ ಬಳಿಕ ಕುಟುಂಬದ ಫಲಾನುಭವಿ ಯಜಮಾನಿ ಪ್ರತೀ ತಿಂಗಳೂ 2,000 ಹಣಕಾಸು ನೆರವು ಪಡೆಯಲಿದ್ದಾಳೆ. ಯೋಜನೆಯ ಹಣ ಮಾಸಿಕ 2,000 ರೂಪಾಯಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತದೆ.

ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈಗ ಅಧಿಕಾರಕ್ಕೆ ಬಂದ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುತ್ತಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವಿತರಿಸುವ ಅಂತ್ಯೋದಯ, BPL ಮತ್ತು APL ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗಲು ಅರ್ಹರಾಗಿರುತ್ತಾರೆ.

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ….

ಜೂನ್ 20ರಿಂದ ಅರ್ಜಿ ಸಲ್ಲಿಕೆ ಆರಂಭ

ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದ ಸಾಧಕ-ಬಾಧಕ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕವೇ ಯೋಜನೆ ಉದ್ದೇಶವಿತ್ತು. ಆದರೆ, ದೊಡ್ಡ ಯೋಜನೆಯಾಗಿರುವುದರಿಂದ ಬಹಳ ಒತ್ತಡ ಬೀಳಬಹುದು ಎಂದು ಸಂಪುಟ ಸಭೆಯಲ್ಲಿ ಚರ್ಚೆಯಾಯಿತು. ಹೀಗಾಗಿ ಬೇರೆ ಇಲಾಖೆಗಳನ್ನು ಒಳಗೊಂಡು ಅನುಷ್ಠಾನ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಗಿದೆ.

ಕೃಷಿ ಯಂತ್ರೋಪಕರಣ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ | ಅರ್ಜಿ ಸಲ್ಲಿಕೆ ಹೇಗೆ?

ನಾಡ ಕಚೇರಿಯಲ್ಲೂ ಅರ್ಜಿ ಸ್ವೀಕಾರಕ್ಕೆ ಅವಕಾಶ 

ಈ ಕುರಿತು ಮಾಧ್ಯಮಗಳೊಂದಿಗೆ ವಿಷಯ ಹಂಚಿಕೊ೦ಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಅರ್ಜಿ ಬಿಡುಗಡೆ ಕಾರ್ಯಕ್ರಮ ನಾಲೈದು ದಿನ ಮುಂದಕ್ಕೆ ಹಾಕಲಾಗಿದೆ. ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಬಾಪೂಜಿ ಕೇಂದ್ರ, ನಾಡ ಕಚೇರಿಯಲ್ಲಿ ಕೂಡ ಅರ್ಜಿ ಸ್ವೀಕಾರಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ.ಒಂದು ಅರ್ಜಿ ತುಂಬಲು 4ರಿಂದ ಏಳು ನಿಮಿಷ ಆಗಲಿದೆ.

ಹೀಗಾಗಿ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಯಾರಿಗಾಗಿ ಅರ್ಜಿ ಸ್ವೀಕಾರ ಸಮಯ ಮುಂದಕ್ಕೆ ಹಾಕಲಾಗಿದೆ. ಇ-ಗೌರ್ನೆನ್ಸ್ನವರು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲು ಎರಡು ದಿನ ಕೇಳಿದ್ದರು, ಮತ್ತೆ ನಾಲ್ಕು ದಿನ ಕೇಳಿದರು ಮತ್ತು ಬಾಪೂಜಿ ಕೇಂದ್ರ, ನಾಡ ಕಚೇರಿ ಸಿಬ್ಬಂದಿಗೆ ತರಬೇತಿ ಕೊಡಬೇಕಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ | ಮಧ್ಯಮಾವಧಿ ಸಾಲ 20 ಲಕ್ಷ | ಈ ವರ್ಷದಿಂದಲೇ ಜಾರಿ… 

ಬೇಕಾಗುವ ದಾಖಲೆಗಳೇನು?

ಗೃಹ ಲಕ್ಷ್ಮಿ ಯೋಜನೆಗೆ ಜೂನ್ 20 ರಿಂದ ಸೇವಾ ಸಿಂಧು ಪೋರ್ಟಲ್  ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗಿರುವ ಸ್ಥಳೀಯ ಕಂದಾಯ ಕಚೇರಿಗಳಲ್ಲಿ (ನಾಡ ಕಚೇರಿಗಳು) ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಆಧಾರ್‌ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಂತಹ ದಾಖಲೆಗಳನ್ನು ಒದಗಿಸಬೇಕು.

ರಾಜ್ಯದಲ್ಲಿ ಶೇಕಡಾ 85ರಷ್ಟು ಕುಟುಂಬಗಳಿಗೆ ಈ ಯೋಜನೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಜಿಎಸ್ಟಿ ಮತ್ತು ಆದಾಯ ತೆರಿಗೆ ಸಲ್ಲಿಸದಿರುವ ಎಪಿಎಲ್ ಕಾರ್ಡ್ ಫಲಾನುಭವಿಗಳಿಗೂ ಈ ಸೌಲಭ್ಯ ಸಿಗಲಿದೆ. ಕುಟುಂಬದ ಎಲ್ಲ ಮಹಿಳೆಯರಿಗೂ ಈ ಯೋಜನೆ ಅನ್ವಯ ಆಗಲ್ಲ. ಒಂದೇ ಕುಟುಂಬದಲ್ಲಿ ಒಂದಕ್ಕಿ೦ತ ಹೆಚ್ಚು ಮಹಿಳೆಯರಿದ್ದರೆ ಒಬ್ಬರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಅನ್ವಯವಾಗುತ್ತದೆ.

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೂ ಸೌಲಭ್ಯ?

ಸದ್ಯದ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಕಾರ್ಡ್ಗಾಗಿ ಕಾಯುತ್ತಿರುವವರು ಗೃಹಲಕ್ಷ್ಮೀ ಯೋಜನೆಗೆ ಅರ್ಹರಲ್ಲ. ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದು, ಮುಂದೆ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೂ ಸೌಲಭ್ಯ ಸಿಗಬಹುದು.

ಅಂದಹಾಗೇ, ಯೋಜನೆಯ ಲಾಭ ಪಡೆಯಲು ತಪ್ಪು ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಯೋಜನೆಗೆ ಅರ್ಜಿ ಸಲ್ಲಿಸುವರಿಗೆ ಸ್ವಯಂ ಘೋಷಣೆ ಆಧಾರದ ಮೇಲೆ ಹಣವನ್ನು ಮಂಜೂರು ಮಾಡಲಾಗುತ್ತದೆ. ಅರ್ಜಿಯಲ್ಲಿನ ಅಂಶಗಳ ಬಗ್ಗೆ ಬಳಿಕ ಪರಿಶೀಲಿಸಲಾಗುತ್ತದೆ. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡು ಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿಂದ ವಸೂಲು ಮಾಡಲಾಗುತ್ತದೆ. ಜೊತೆಗೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ:

ಈ ವರ್ಷ ಜುಲೈ ವರೆಗೂ ಮುಂಗಾರು ಮಳೆ ಗ್ಯಾರಂಟಿ ಇಲ್ಲ: ಮಳೆ ನೋಡಿ ಬಿತ್ತನೆ ಮಾಡಿ

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ | ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ… … 

ಕೈ ಕೊಟ್ಟ ಮುಂಗಾರು | ರೈತರಿಗೆ ಮಳೆ ತರಿಸಲು ಮುಂದಾದ ರಾಜ್ಯ ಸರಕಾರ

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ರಾಜ್ಯದಲ್ಲಿ ಈ ವರ್ಷ ಕೈ ಕೊಡಲಿದೆಯಾ ಮಳೆ? | ಎಚ್ಚರಿಕೆ ಕೊಟ್ಟ ವಿಶ್ವ ಹವಾಮಾನ ಸಂಸ್ಥೆ

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!