ಸರಕಾರಿ ಯೋಜನೆ

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ | Gruha Jyoti Scheme

WhatsApp Group Join Now
Telegram Group Join Now

ಮನೆಯಲ್ಲೇ ಕೂತು ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್ ಮೂಲಕ ಯಾವ ಸಮಯದಲ್ಲಾದರೂ ಗೃಹಜ್ಯೋತಿ ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು…

200 ಯೂನಿಟ್ ಉಚಿತ ಕರೆಂಟ್ ನೀಡುವ ರಾಜ್ಯ ಸರಕಾರದ ‘ಗೃಹಜ್ಯೋತಿ’ ಯೋಜನೆಯಡಿ ನೋಂದಣಿ ವಿಚಾರವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಜೂನ್ 18ರಿಂದ ನೋಂದಣಿ ಆರಂಭವಾಗಿದ್ದು; ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳು ಇನ್ನೂ ಸುಧಾರಿಸಿಲ್ಲ. ಈ ತನಕ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 8,16,631 ಗ್ರಾಹಕರು ನೋಂದಣಿ ಮಾಡಿದ್ದಾರೆ.

ಕಳೆದ ಎರಡು ದಿನಗಳಿಗೆ ಹೋಲಿಸಿದರೆ, ಜೂನ್ 20ರಂದು ನೋಂದಣಿ ಮಾಡಿಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚು. 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಪಡೆಯುವ ರಾಜ್ಯ ಸರ್ಕಾರದ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರು ಭಾರೀ ಉತ್ಸುಕತೆ ತೋರುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಜನ ನೋಂದಣಿಗಾಗಿ ಚಡಪಡಿಸುತ್ತಿದ್ದಾರೆ.

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ನೀವೇ ನೋಂದಾಯಿಸಿಕೊಳ್ಳಿ…

ಮನೆಯಲ್ಲೇ ಕೂತು ನಿಮ್ಮ ಮೊಬೈಲ್​, ಲ್ಯಾಪ್​ಟಾಪ್​ ಅಥವಾ ಕಂಪ್ಯೂಟರ್ ಮೂಲಕ ಯಾವ ಸಮಯದಲ್ಲಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಈಗಾಗಲೇ ಅನೇಕರು ಈ ವಿಧಾನದಲ್ಲಿ ನೋಂದಾಯಿಸಿಕೊಳ್ಳುತ್ತಿದ್ದು; ಸದ್ಯ ಸರ್ವರ್ ಸಮಸ್ಯೆ ಇರುವುದರಿಂದ ಸ್ವಲ್ಪ ತಾಳ್ಮೆಯಿಂದ ಮತ್ತೆ ಮತ್ತೆ ಪ್ರಯತ್ನಿಸಿ, ಈ ಕೆಳಗಿನ ವಿಧಾನ ಅನುಸರಿಸಿ ಸರಳವಾಗಿ ನೊಂದಣಿ ಮಾಡಿಕೊಳ್ಳಬಹುದು.

ಮೊದಲಿಗೆ ಸರ್ಕಾರದ ಸೇವಾಸಿಂಧು ಪೋರ್ಟಲ್‌ಗೆ (https://sevasindhuservices.karnataka.gov.in/) ಭೇಟಿ ನೀಡಬೇಕು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ…

ನಿಮಗೆ ಸೇವಾಸಿಂಧು ಪೋರ್ಟಲ್‌ನ DigiLoker ಪುಟ ತೆರೆಯುತ್ತದೆ. ನೀವು ಹೊಸದಾಗಿ ಸೇವಾಸಿಂಧು ಪೋರ್ಟಲ್‌ಗೆ ಭೇಟಿ ನೀಡುತ್ತಿದ್ದರೆ ಡಿಜಿಲಾಕರ್ ಅಕೌಂಟ್ ಕ್ರಿಯೇಟ್ ಮಾಡಬೇಕಾಗುತ್ತದೆ. ಹೀಗಾಗಿ ಇಲ್ಲಿ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬೇಕು.

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ನಂತರ  ನೀವು ವಿದ್ಯುತ್ ಬಿಲ್​ ಹಾಗೂ ಆಧಾರ್ ಕಾರ್ಡ್​ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಯನ್ನು ನಿಮ್ಮ ಬಳಿ ಇಟ್ಟುಕೊಂಡು ನಿಮ್ಮ ಮೊಬೈಲ್‌ನಲ್ಲಿ ಈ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ. https://sevasindhugs.karnataka.gov.in/

ಆಗ ಇಲ್ಲಿ ನಿಮಗೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಆಯ್ಕೆಗಳು ಕಾಣುತ್ತವೆ. ಇಲ್ಲಿ ನೀವು ‘ಗೃಹಜ್ಯೋತಿ’ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಕೆ ಮಾಡಲು ನಿಮಗೆ ಎರಡು ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳಲ್ಲಿ ನೀವು ನಿಮಗೆ ಇಷ್ಟ ಇರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕನ್ನಡವನ್ನು ಆಯ್ಕೆ ಮಾಡಿಕೊಂಡರೆ 8 ಕಾಲಂಗಳಲ್ಲಿ ಮಾಹಿತಿಯನ್ನು ತುಂಬಾ ಬೇಕಾಗುತ್ತದೆ.

ಜೂನ್ 30ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

ಕಾಲಂ 1: ಎಸ್ಕಾಂ ಹೆಸರು

ಮೊದಲ ಆಯ್ಕೆಯಲ್ಲಿ ನೀವು ನಿಮ್ಮ ಎಸ್ಕಾಂ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿ ನಿಮಗೆ ಬೆವಿಕಂ, ಚಾವಿಸನಿನಿ, ಜೆಸ್ಕಾಂ, ಹೆಸ್ಕಾಂ, ಹುಕ್ಕೇರಿ ಸೊಸೈಟಿ ಎಂಬ 6 ಆಯ್ಕೆಗಳನ್ನು ನೀಡಲಾಗಿದೆ. ನಿಮಗೆ ನಿಮ್ಮ ಎಸ್ಕಾಂ ಹೆಸರು ಗೊತ್ತಿಲ್ಲ ಎಂದರೇ, ನಿಮ್ಮ ವಿದ್ಯುತ್ ಬಿಲ್​​ನಲ್ಲಿ ನೋಡಿ ತಿಳಿದುಕೊಳ್ಳಬಹುದು.

ಕಾಲಂ 2: ಅಕೌಂಟ್ ನಂಬರ್

ನೀವು ಈ ಕಲಂನಲ್ಲಿ ನಿಮ್ಮ ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಆದರೆ ಇದು ಆರ್​ಆರ್ ಸಂಖ್ಯೆ ಅಲ್ಲ, ಹಲವು ಖಾತೆ ಸಂಖ್ಯೆ ಬಳಿ ಆರ್​ಆರ್ ನಂಬರ್​ ದಾಖಲು ಮಾಡಿರುತ್ತಾರೆ ಎನ್ನಲಾಗಿದ್ದು, ಇದು ಸಂಪರ್ಕ ಸಂಖ್ಯೆ ಅಂದರೆ ನಿಮ್ಮ ವಿದ್ಯುತ್​​ ಬಿಲ್​ನ ಆರ್​ಆರ್ ನಂಬರ್ ಕೆಳಗಡೆ ಖಾತೆ ಸಂಖ್ಯೆ ಅಥವಾ Acc ID ಇರುತ್ತೆ. ಈ ಸಂಖ್ಯೆಯನ್ನು ಇಲ್ಲಿ ನೀವು ಟೈಪ್​ ಮಾಡಬೇಕು.

ಕಾಲಂ 3: ಖಾತೆದಾರರ ಹೆಸರು, ವಿಳಾಸ (ಬಿಲ್‌ನಲ್ಲಿ ಇರುವಂತೆ)

ವಿದ್ಯುತ್ ಬಿಲ್​​ನಲ್ಲಿ ಇರುವಂತೆ ಖಾತೆದಾರರ ಹೆಸರನ್ನು ಯಥಾವತ್ ಟೈಪ್ ಮಾಡಬೇಕು. ಎರಡೆರಡು ಬಾರಿ ಇಲ್ಲಿ ಪರೀಕ್ಷೆ ಮಾಡಿಕೊಂಡು ಹೆಸರು ನಮೂದಿಸುವುದು ಉತ್ತಮ. ನಂತರ ವಿದ್ಯುತ್ ಬಿಲ್‌ನಲ್ಲಿ ಇರುವಂತೆಯೇ ಖಾತೆದಾರರ ವಿಳಾಸವನ್ನು ಭರ್ತಿ ಮಾಡಬೇಕು. ಈ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ವಿದ್ಯುತ್ ಬಿಲ್ ಹಾಗೂ ಆಧಾರ್​ ಕಾರ್ಡ್​ನಲ್ಲಿರುವ ಮಾಹಿತಿ ಒಂದೇ ವಿಳಾಸ ಇರಬೇಕು.

ಇದೋ ರೈತರು ಮೊಬೈಲ್‌ನಲ್ಲೇ ಬೆಳೆವಿಮೆ ಚೆಕ್ ಮಾಡುವ ಸರಳ ವಿಧಾನ

ಕಾಲಂ 4: ನಿವಾಸಿ ವಿಧ

ಇಲ್ಲಿ ನಿಮಗೆ ಮಾಲೀಕ ಮತ್ತು ಬಾಡಿಗೆದಾರ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದ್ದು, ನೀವು ಮನೆ ಮಾಲೀಕರಾಗಿದ್ದಾರೆ ಮಾಲೀಕ ಎಂಬ ಆಯ್ಕೆ ಅಥವಾ ನೀವು ಬಾಡಿಗೆದಾರರಾಗಿದ್ದರೆ ಬಾಡಿಗೆದಾರ ಅಂತ ಆಯ್ಕೆ ಮಾಡಿಕೊಳ್ಳಬೇಕು.

ಕಾಲಂ 5: ಆಧಾರ್ ಸಂಖ್ಯೆ

ಈ ಕಾಲಂ ನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಆಧಾರ್ ಸಂಖ್ಯೆ ನಮೂದಿಸುವ ಸಂದರ್ಭದಲ್ಲಿ ಎರಡೆರಡು ಬಾರಿ ಪರಿಶೀಲನೆ ನಡೆಸಿ ನಿಮ್ಮ ನಂಬರ್​​ ಅನ್ನು ಸರಿಯಾಗಿ ದಾಖಲಿಸಿ.

ಕಾಲಂ 6: ಅರ್ಜಿದಾರರ ಹೆಸರು

ಇಲ್ಲಿ ವಿದ್ಯುತ್ ಮೀಟರ್ ನಿಮ್ಮ ಹೆಸರಿನಲ್ಲಿದ್ದರೆ ನಿಮ್ಮ ಹೆಸರನ್ನು ನಮೂದಿಸಿ. ನೀವು ಬಾಡಿಗೆದಾರರಾಗಿದ್ದರೆ ವಿದ್ಯುತ್ ಮೀಟರ್ ಮಾಲೀಕರ ಹೆಸರಿನಲ್ಲಿ ಇರುವುದರಿಂದ ಅವರ ಪರವಾಗಿ ನೀವು ಅರ್ಜಿ ಸಲ್ಲಿಕೆ ಮಾಡುತ್ತಿದ್ದರೆ ಮೊಬೈಲ್ ನಂಬರ್ ಸಹಿತ ಅವರ ಹೆಸರನ್ನು ಸರಿಯಾಗಿ ನಮೂದಿಸಿ. ಮುಂದಿನ ಸಂವಹನಕ್ಕಾಗಿ ಅಥವಾ ಒಟಿಪಿಗಾಗಿ ಇಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕಿದೆ.

ಮಹಿಳೆಯರು ಪ್ರತಿ ತಿಂಗಳು 2,000 ನೆರವು ಪಡೆಯಲು ಜೂನ್ 20ರಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಹೇಗೆ? | Gruhalakshmi Scheme… 

ಅಂತಿಮವಾಗಿ…

ಕೊನೆಯಲ್ಲಿ ನೀವು ಘೋಷಣೆ ಮಾಡಬೇಕಾಗುತ್ತದೆ. ‘ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನನಗೆ ತಿಳಿದಿದೆ ಮತ್ತು ನಾನು ಈಗಾಗಲೇ ಪಡೆದಿರುವ ಪ್ರಯೋಜನಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಸಿದ್ಧನಿದ್ದೇನೆ. ನಾನು ಮೇಲೆ ಒದಗಿಸಿರುವ ಎಲ್ಲಾ ವಿವರಗಳು ನನಗೆ ತಿಳಿದಿರುವಂತೆ ಸರಿಯಾಗಿದೆ ಎಂದು ಈ ಮೂಲಕ ಧೃಢೀಕರಿಸುತ್ತೇನೆ’ ಎಂಬ ಘೋಷವಾಕ್ಯದ ಕೆಳಗೆ ‘ನಾನು ಒಪ್ಪಿದ್ದೇನೆ’ (I Agree) ಎಂಬ ಟಿಕ್ ಮಾರ್ಕ್ ಇರುತ್ತದೆ. ಅದನ್ನು ನೀವು ಟಿಕ್​ ಮಾಡುವುದು ಕಡ್ಡಾಯವಾಗಿದೆ.

ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ನಿಮಗೆ ಕೆಳಭಾಗದಲ್ಲಿ Word verification ಪೂರ್ಣಗೊಳಿಸಬೇಕಾಗುತ್ತದೆ. ಬಾಕ್ಸ್ನಲ್ಲಿ ಕಾಣುವ ಸಂಖ್ಯೆಯನ್ನು ನಮೂದಿಸಿ Submit ಕೊಟ್ಟರೆ ನೀವು ಗೃಹಜ್ಯೋತಿ ಯೋಜನೆಗೆ ಸಲ್ಲಿಸುವ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ನಿಮ್ಮ ನೋಂದಣಿ ಸ್ವೀಕೃತವಾದರೆ ನಿಮಗೆ ಅರ್ಜಿ ಸ್ವೀಕೃತ ಸ್ಲಿಪ್​ ಸಿಗಲಿದೆ. ಈ ಸ್ಲಿಪ್​​ನಲ್ಲಿ ನಿಮ್ಮ ಅರ್ಜಿಯ ಸಂಖ್ಯೆ, ನೀವು ಅರ್ಜಿ ಸಲ್ಲಿಕೆ ಮಾಡಿದ ದಿನಾಂಕ ಸೇರಿದಂತೆ ಇತರೇ ಮಾಹಿತಿ ಇರಲಿದೆ.

ಸೂಚನೆ: ಈಗ ಬಹಳಷ್ಟು ಜನ ಏಕಕಾಲಕ್ಕೆ ಅರ್ಜಿ ಹಾಕುತ್ತಿದ್ದಾರೆ. ಹೀಗಾಗಿ ತಾಂತ್ರಿಕ ದೋಷದಿಂದ ನಾವು ನೀಡಿದ ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್ ತಕ್ಷಣ ಓಪನ್ ಆಗದೇ ಇರಬಹುದು. ಹಾಗೇನಾದರೂ ಆದರೆ ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!