ಸರಕಾರಿ ಯೋಜನೆ

Gruha Lakshmi Scheme Camp : ಡಿಸೆಂಬರ್ 27ರಿಂದ 3 ದಿನ ಗ್ರಾಮ ಪಂಚಾಯತಿಗಳಲ್ಲಿ ಗೃಹಲಕ್ಷ್ಮಿ ಕ್ಯಾಂಪ್ | ಪ್ರತಿ ತಿಂಗಳು ಹಣ ಜಮೆಯಾಗಲು ತಪ್ಪದೇ ಭಾಗವಹಿಸಿ

WhatsApp Group Join Now
Telegram Group Join Now

Lakshmi gram Panchayat Level Camp : ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗಲು ತ್ವರಿತ ಕ್ರಮಕ್ಕೆ ಮುಂದಾಗಿರುವ ಸರಕಾರ ಇದೀಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಹಮ್ಮಿಕೊಂಡಿದೆ. 3 ದಿನಗಳ ಕಾಲ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕ್ಯಾಂಪ್ ನಡೆಸಿ ಯೋಜನೆಯ ಅರ್ಹ ಮಹಿಳೆಯರ ಸಮಸ್ಯೆ ಪರಿಹಾರ ಕಲ್ಪಿಸುವಂತೆ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ: ಮಕ್ಕಳ ಮದುವೆ ಮಾಡಲು 50,000 ರೂಪಾಯಿ ಸಹಾಯಧನ | ಮುತ್ತೂಟ್ ವಿವಾಹ ಸನ್ಮಾನಂ ಯೋಜನೆಗೆ ಅರ್ಜಿ ಆಹ್ವಾನ | Muthoot Vivaha Sammanam Project

ಯಾವ ದಿನ ನಡೆಯಲಿದೆ ಕ್ಯಾಂಪ್?

ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ರಂದು ಚಾಲನೆ ನೀಡಲಾಗಿತ್ತು. ಯೋಜನೆ ಜಾರಿಯಾಗಿ ಈ ಡಿಸೆಂಬರ್‌ಗೆ ಭರ್ತಿ 5 ತಿಂಗಳು ಸಂದುತ್ತವೆ. 1.17 ಕೋಟಿ ಫಲಾನುಭವಿಗಳು ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣ ಕೈ ಸೇರಿಲ್ಲ. ಇದಕ್ಕೆ ಹಲವು ತಾಂತ್ರಿಕ ದೋಷಗಳು ಕಾರಣವಾಗಿದ್ದು; ಸರಿಪಡಿಸಲು ಹಲವು ರೀತಿ ಪ್ರಯತ್ನಿಸಿ ಇದೀಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಲಾಗಿದೆ.

ರಾಜ್ಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದೇ ಡಿಸೆಂಬರ್ 27 ರಿಂದ 29ರ ವರೆಗೆ ಮೂರು ದಿನಗಳ ಕಾಲ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತದೆ. ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಣ ಬಾರದ ಫಲಾನುಭವಿ ಮಹಿಳೆಯರು ಈ ಮೂರು ದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ಕ್ಯಾಂಪ್‌ನಲ್ಲಿ ಭಾಗವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸರಕಾರದ ಜಂಟಿ ಸುತ್ತೋಲೆ

ಇದನ್ನೂ ಓದಿ: farmers Loan waiver : ಸಾಲ ಮನ್ನಾ ಬದಲು ರೈತರಿಗೆ ನೇರ ಪರಿಹಾರ | ಸರಕಾರದ ಹೊಸ ಯೋಜನೆ

ಹಣ ಬರದಿರುವುದಕ್ಕೆ ಇದೇ ಕಾರಣ…

ಫಲಾನುಭವಿ ಮಹಿಳೆಯರ ಪೈಕಿ ಸುಮಾರು 2.5 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿಲ್ಲ ಮತ್ತು ಸುಮಾರು 70,000 ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಆಗದೇ ಇರುವುದರಿಂದ ಅರ್ಹ ಮಹಿಳೆಯರ ಖಾತೆಗೆ ನೇರ ನಗದು ಹಣ ವರ್ಗಾವಣೆಗೆ (DBT) ತೊಂದರೆಯಾಗಿದೆ.

ಯೋಜನೆಯ ಹಣ ಪ್ರತಿ ತಿಂಗಳು ಸುಗಮವಾಗಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಈ ಸಮಸ್ಯೆಯಿಂದಾಗಿ ಅನೇಕ ಮಹಿಳೆಯರಿಗೆ ಹಣ ಜಮೆಯಾಗುತ್ತಿಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕ್ಯಾಂಪ್’ನಲ್ಲಿ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: ವಸತಿ, ಊಟೋಪಚಾರ ಸಹಿತ ಉಚಿತ ಶಿಕ್ಷಣಕ್ಕಾಗಿ ಆಳ್ವಾಸ್ ಸಂಸ್ಥೆಯಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ | Alvas free education scheme admission application 2023

ಕ್ಯಾಂಪ್‌ಗಳಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ?

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ನೇತೃತ್ವದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಸಂಬAಧಿಸಿದ ಎಲ್ಲ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್‌ಗಳಲ್ಲಿ ಪರಿಹರಿಸಲಾಗುತ್ತದೆ.

ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಕಂಪ್ಯೂಟರ್ ಆಪರೇಟರ್‌ಗಳು, ಅಂಗನವಾಡಿ ಕಾರ್ಯಕರ್ತರು ಮತ್ತು ಇಡಿಸಿಎಸ್ (Electronic Delivery of Citizen Services – EDCS) ತಂಡಗಳು ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪ್ರತಿನಿಧಿಗಳು, ಇತರೆ ಬ್ಯಾಂಕ್’ಗಳ ಪ್ರತಿನಿಧಿಗಳು ಈ ಕ್ಯಾಂಪ್‌ಗಳಲ್ಲಿ ಭಾಗವಹಿಸಲು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Annabhagya DBT: ಅನ್ನಭಾಗ್ಯ ಹಣ ಬಾರದವರಿಗೆ ಇನ್ನು ಗ್ಯಾರಂಟಿ ಹಣ ಜಮಾ | ಹೊಸ ನಿಯಮ ಜಾರಿ

ಕ್ಯಾಂಪ್’ನಲ್ಲಿ ಏನೆಲ್ಲ ನಡೆಲಿದೆ?

  • ಕ್ಯಾಂಪ್‌ಗಳಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತದೆ.
  • ಬ್ಯಾಂಕ್ ಖಾತೆ ಇಲ್ಲದವರಿಗೆ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುತ್ತದೆ.
  • ಬ್ಯಾಂಕ್ ಮತ್ತು ಆಧಾರ್ ಸಂಬಂಧಿತ ಇ-ಕೆವೈಸಿ ಅಪ್‌ಡೇಟ್ ಮಾಡಲಾಗುತ್ತದೆ.
  • ಫಲಾನುಭವಿ ಮಹಿಳೆಯರ ಗೃಹಲಕ್ಷ್ಮಿ ಅರ್ಜಿಯ ಸ್ಥಿತಿಯನ್ನು ಕುಲಂಕೂಶವಾಗಿ ಪರಿಶೀಲಿಸಲಾಗುತ್ತದೆ.
  • ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳನ್ನು ಕ್ಯಾಂಪ್‌ಗಳಲ್ಲಿ ಪರಿಹರಿಸಲಾಗುತ್ತದೆ.

Lakshmi gram Panchayat Level Camp

Pradhan mantri awas yojana : ಇನ್ಮುಂದೆ ಕೇವಲ ಒಂದು ಲಕ್ಷ ರೂಪಾಯಿಗೆ ಸಿಗುತ್ತೆ ಸರಕಾರಿ ಮನೆ : ಸರಕಾರದ ಹೊಸ ನಿರ್ಧಾರ

WhatsApp Group Join Now
Telegram Group Join Now

Related Posts

error: Content is protected !!