ಸರಕಾರಿ ಯೋಜನೆ

Gruha Jyothi Scheme: ಗೃಹಜ್ಯೋತಿ ಉಚಿತ ಕರೆಂಟ್‌ಗೆ 1 ಕೋಟಿಗೂ ಹೆಚ್ಚು ಅರ್ಜಿ ನಿಮ್ಮ ಅರ್ಜಿ ಸ್ಥಿತಿ ಏನಾಯ್ತು ಈಗಲೇ ಚೆಕ್ ಮಾಡಿ

WhatsApp Group Join Now
Telegram Group Join Now

ಕೇವಲ 18 ದಿನಗಳಲ್ಲಿ ಗೃಹಜ್ಯೋತಿ ಉಚಿತ ಕರೆಂಟ್ ಯೋಜನಗೆ ಒಂದು ಕೋಟಿಗೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಜೂನ್ 18ರಂದು ನೋಂದಣಿ ಪ್ರಕ್ರಿಯೆ ಆರಂಭಗೊ೦ಡಿದ್ದು; ಜುಲೈ 6ರ ಸಂಜೆಯ ವರೆಗೆ ಬರೋಬ್ಬರಿ 1,01,62,415 ಗ್ರಾಹಕರು ನೋಂದಾಯಿಸಿಕೊ೦ಡಿದ್ದಾರೆ.

ಇನ್ನೂ ನೋಂದಣಿ ಮಾಡದೇ ಇರುವ ಗ್ರಾಹಕರು ಇದೇ ಜುಲೈ 25ರ ಒಳಗೆ ನೋಂದಾಯಿಸಿಕೊ೦ಡವರಿಗೆ ಮುಂದಿನ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಜುಲೈ ತಿಂಗಳು ಬಳಸಿದ ವಿದ್ಯುತ್​ಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಬರಲಿದೆ.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಿಗಲಿದೆ ಸೌರವಿದ್ಯುತ್ ಸೌಲಭ್ಯ | ಫಲಾನುಭವಿ ರೈತರಿಗೆ 3.5 ಲಕ್ಷ ರೂಪಾಯಿ ಸಬ್ಸಿಡಿ

 ಎಲ್ಲೆಲ್ಲಿ ಎಷ್ಟೆಷ್ಟು ನೋಂದಣಿ?

ಬೆಸ್ಕಾ೦ ವ್ಯಾಪ್ತಿಯಲ್ಲಿ 41,74,540, ಸೆಸ್ಕ್ ವ್ಯಾಪ್ತಿಯಲ್ಲಿ 15,54,497, ಗೆಸ್ಕಾಂ ವ್ಯಾಪ್ತಿಯಲ್ಲಿ 10,72,214, ಹೆಸ್ಕಾಂ ವ್ಯಾಪ್ತಿಯಲ್ಲಿ 21,40,220, ಎಚ್‌ಆರ್‌ಇಸಿಎಸ್ ವ್ಯಾಪ್ತಿಯಲ್ಲಿ 51,277 ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ 11,69, 667 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡಿ…

ಅನೇಕರು ಅವಸರದಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆರಂಭದಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದರಿ೦ದ ತಮ್ಮ ಅರ್ಜಿ ಸ್ಥಿತಿ ಏನಾಯ್ತು ಎಂಬ ಗೊಂದಲ ಅನೇಕರಲ್ಲಿದೆ. ಹೀಗಾಗಿ ನಿಮ್ಮ ನೋಂದಣಿ ಯಶಸ್ವಿ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಮೊಬೈಲ್‌ನಲ್ಲೇ ಚೆಕ್ ಮಾಡಬಹುದು.

ಅನ್ನಭಾಗ್ಯ ಉಚಿತ ಅಕ್ಕಿ ಪಡೆಯಲು ಮೊಬೈಲ್‌ನಲ್ಲೇ ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡಿ… 

 

ಅದಕ್ಕಾಗಿ ಸೇವಾಸಿಂಧು ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.  ಆಗ ನಿಮ್ಮ ಮೊಬೈಲ್‌ನಲ್ಲಿ ಸೇವಾಸಿಂಧು ಪೋರ್ಟಲ್‌ ಪುಟ ತೆರೆಯುತ್ತದೆ. ಎಡಬದಿಯ ಮೂರು ಅಡ್ಡ ಗೆರೆಗಳ ಮೇಲೆ ಒತ್ತಿದರೆ ವಿವಿಧ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ನಾಲ್ಕನೇ ಆಯ್ಕೆ ‘ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ’ (Track Your Application Status) ಒತ್ತಿ.

ಆಗ ಮತ್ತೊಂದು ಪುಟ ತೆರೆಯಲಿದ್ದು; ಅದರಲ್ಲಿ ನಿಮ್ಮ ವಿದ್ಯುತ್ ಕಂಪನಿ ಹೆಸರು (Escom) ಸೆಲೆಕ್ಟ್ ಮಾಡಿ. ನಂತರ ನಿಮ್ಮ ವಿದ್ಯುತ್ ಖಾತೆ ಐಡಿ (Account ID) ನಮೂದಿಸಿ Check Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸ್ಥಿತಿ ತಿಳಿಯುತ್ತದೆ.

PDO Recruitment 2023: 150 ಪಿಡಿಒ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಇಲ್ಲಿದೆ…

ನೀವು ನೋಂದಣಿ ಮಾಡಿದ ದಿನಾಂಕದ ಜೊತೆಗೆ ನಿಮ್ಮ ನೋಂದಣಿ ಸ್ಥಿನಾಗಿದೆ ಎಂಬುವುದು ತಿಳಿಯುತ್ತದೆ. ‘ಗೃಹಜ್ಯೋತಿ ಯೋಜನೆಗಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ ಮತ್ತು ಪ್ರಕ್ರಿಯೆಗಾಗಿ Escomಗೆ ಕಳುಹಿಸಲಾಗಿದೆ’ ಎಂಬ ಸಂದೇಶ ಬರುತ್ತದೆ. ಈ ಸಂದೇಶ ಬರದಿದ್ದರೆ ಮತ್ತೆ ನೋಂದಣಿ ಮಾಡುವುದು ಕ್ಷೇಮಕರ.

ಹೆಚ್ಚಿನ ಮಾಹಿತಿಗೆ

ಗೃಹಜ್ಯೋತಿ ಯೋಜನೆಯ ಕುರಿತ ಮಾಹಿತಿಗಾಗಿ ಗ್ರಾಹಕರು ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್ https://energy.karnataka.gov.in ಗೆ ಭೇಟಿ ನೀಡಬಹುದು ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೊಂದಣಿಗೆ ಹೆಚ್ಚುವರಿ ಹಣಕ್ಕೆ ಯಾರಾದರೂ ಬೇಡಿಕೆಯಿಟ್ಟಲ್ಲಿ ಗ್ರಾಹಕರು 24ಘಿ7 ಸಹಾಯವಾಣಿ 1912ಕ್ಕೆ ಕರೆ ಮಾಡಿ ತಿಳಿಸಬಹುದು…

ಇದನ್ನೂ ಓದಿ:

ಗೃಹಜ್ಯೋತಿ ಉಚಿತ ಕರೆಂಟ್‌ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸುವ ಸರಳ ವಿಧಾನ

ಆಗಸ್ಟ್ 18ರೊಳಗೆ ಮಹಿಳೆಯರ ಖಾತೆಗೆ 2,000 ರೂಪಾಯಿ ಜಮಾ

ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಟೊಮೆಟೊ ಬೆಳೆ ಹೆಕ್ಟೇರಿಗೆ 1,41,500 ವಿಮಾ ಪರಿಹಾರ | ವಿಮಾ ನೋಂದಣಿಗೆ ಜೂನ್ 30 ಕೊನೆ ದಿನ

ರೈತರಿಗಾಗಿ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಸಿದ್ಧವಾದ ರಾಣಿಬೆನ್ನೂರು ಶಾಸಕ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!